Vydyaloka

ರೋಗ ನಿರೋಧಕ ಶಕ್ತಿ ಎಂದರೆನು?

ರೋಗ ನಿರೋಧಕ ಶಕ್ತಿ ದೇಹದ ರಕ್ಷಣಾ ವ್ಯವಸ್ಥೆ. ಸೂರ್ಯರಶ್ಮಿ ವಿಟಮಿನ್ ಡಿಯ ಜೊತೆ ಉಲ್ಲಾಸ ನೀಡಿದರೆ, ಒತ್ತಡ ರಹಿತ ದೇಹದಲ್ಲಿ ರಾಸಾಯನಿಕ ಕ್ರಿಯಗಳು ಬೇಗ ಬೇಗ ನಡೆದು ಸೊಂಕನ್ನು ಮಟ್ಟ ಹಾಕಲು ಸಹಾಯವಾಗುತ್ತದೆ.ಸೊಂಕು ಅಥವಾ ಕಾಯಿಲೆಯ ಸಮಯದಲ್ಲಿ ” ಪ್ರೋಟಿನ್ ಯುಕ್ತ ಆಹಾರ ಅಗತ್ಯ.

ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ವಿಸಿಕೊಳ್ಳುವದಕ್ಕಾಗಿ ಇದನ್ನು ಕುಡಿಯಿರಿ ….
ಈ ತರಹ ಮಾಡಿ ….
ಈ ಕಷಾಯ ಕುಡಿಯಿರಿ ….
ಎನ್ನುವ ಜಾಹಿರಾತುಗಳನ್ನು ನಾವು ದಿನವೂ ನೋಡುತ್ತೆವೆ , ಓದುತ್ತೆವೆ , ಕೇಳುತ್ತೇವೆ …
ಮದಲು ರೋಗ ನಿರೋಧಕ ಶಕ್ತಿ ಎಂದರೆನು? ತಿಳಿದುಕೊಳ್ಳೋಣ .

ಆಂತರಿಕ ರೋಗ ನಿರೋಧಕ ಶಕ್ತಿ, ದೇಹದ ರಕ್ಷಣಾ ವ್ಯವಸ್ಥೆ. ದೇಹದಲ್ಲಿ ಸೊಂಕುಕಾರಕ ಸೂಕ್ಷ್ಮಾಣುಗಳನ್ನು ಸಾಯಿಸಲು ರಕ್ತದಲ್ಲಿ ತಯಾರಾಗುವ ಪ್ರತಿಕಣಗಳ ಕ್ರಿಯೆಯನ್ನು ರೋಗನಿರೋಧಕ ಶಕ್ತಿ ಎನ್ನುತ್ತೆವೆ. ಇದು ಆಂತರಿಕ ವ್ಯವಸ್ಥೆಯಾದರೆ ಕೆಮ್ಮುವುದು, ಸೀನುವುದು ಕೂಡ ರಕ್ಷಣಾವ್ಯವಸ್ಥೆಯ ಭಾಗವೆ, ರೋಗಕಾರಕ ಅಥವಾ ಹಾನಿಕಾರಕ ವಸ್ತಗಳನ್ನು ದೇಹ ಸೇರದಂತೆ ನೋಡಿಕೊಳ್ಳುವುದು.

ಒಂದು ಸೂಕ್ಷಣುಜೀವಿ ದೇಹದಲ್ಲಿ ಪ್ರವೇಶಿಸಿದಾಗ ಏನಾಗುತ್ತದೆ ?

ಸೋಂಕುಕಾರಕ ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಅಂದರೆ ಶಿಲಿಂಧ್ರಗಳು ದೇಹ ಪ್ರವೇಶಿಸಿದಾಗ ಸೊಂಕು ಉಂಟಾಗುತ್ತದೆ. ಪ್ರವೇಶ ದ್ವಾರಗಳು, ಮೂಗು, ಬಾಯಿ, ಕಣ್ಣು, ಹಾಗೂ ಇತರೆ ” ನವರಂದ್ರಗಳು ” ತುಂಬ ಸಾಮಾನ್ಯ ಪ್ರವೇಶ ದ್ವಾರ.  ಗಾಯಗಳೂ ಸೊಂಕು ಪ್ರವೇಶಿಸುವ ದಾರಿ. ಪ್ರಸ್ತುದಲ್ಲಿ ಉಸಿರಾಟ ನಳಿಕೆಯೆ ಸೊಂಕಿನ ಮುಖ್ಯದಾರಿ. ಸೂಕ್ಷಣು ಜೀವಿ ಒಳಗೆ ಹೋಗಿ ಸೊಂಕು ಉಂಟುಮಾಡಿದ ನಂತರ ಉಂಟಾಗುವ ರಾಸಾಯನಿಕ ಕ್ರಿಯೆಗಳಿಂದ ಬಿಡುಗಡೆಯಾದ ರಾಸಾಯನಿಕಗಳು ಹಲವಾರು ಪ್ರಕ್ರಿಯೆಗಳಿಗೆ ನಾಂದಿಯಾಗುತ್ತದೆ. ರಕ್ತದಲ್ಲಿನ ಕೆಲ ವಿಶೇಷ ಕಣಗಳು ಸೊಂಕುಕಾರಕ ಜೀವಿಯ ಬಾಹ್ಯಸ್ವರೂಪ ಅಭ್ಯಸಿಸಿ ವೈರಸ್ನ ಬಾಹ್ಯಕವಚದ ಪಡಿಯಚ್ಚನ್ನು ನಿರ್ಮಿಸಿ ಅದನ್ನು ಅಸ್ಥಿಮಜ್ಜೆಗೆ ಒಪ್ಪಿಸುತ್ತವೆ.

ನಂತರ ಅಸ್ಥಿಮಜ್ಜೆ ಅದಕ್ಕೆ ತಕ್ಕಂತಹ ಪ್ರತಿಕಣಗಳನ್ನು ಸ್ಪಷ್ಟಿಸಿ ,ಮುಖ್ಯ ಪರಿಚಲನೆಯಲ್ಲಿ ಬಿಟ್ಟಾಗ ” ಪ್ರತಿಕಣಗಳು ದೇಹದಲ್ಲಿ ಹರಿಯಲಾರಂಭಿಸಿ ” ಎದುರು ಬಂದ ಸೂಕ್ಷಜೀವಿಗಳನ್ನು ಭಕ್ಷಿಸಿ ತಾವೂ ಜೀರ್ಣವಾಗುತ್ತವೆ, ಇದೊಂದು ಆತ್ಮಹತ್ಯಾ ದಾಳಿ ಇದ್ದಂತೆ. ಇದರಲ್ಲಿ ಮುಖ್ಯವಾಗಿ ” ವೈರಿಯ ಬಾಹ್ಯಸ್ವರೂಪದ ಸರಿಯಾದ ಅಧ್ಯಯನ. ಅದನ್ನು ಅರ್ಪಿಸುವ ” ಅಂಟಿಜನ್ ಪ್ರೆಸೆಂಟಿಂಗ್ ಸೆಲ್ಸ ” . ಈ ” ಆ್ಯಂಟಿಜನ್ ಪ್ರಸೆಂಟಿಂಗ್ ಸೆಲ್ಸ ” ಅಂದರೆ ಇವರು ದೇಹದ ಗೂಢಚಾರಿಗಳು, ದೇಹದೊಳಗೆ ನುಸುಳಿದ ವೈರಿಯ ಸ್ವರೂಪದ ಸುಳಿವು ಅಸ್ಥಿಮಜ್ಜಗೆ ಕೊಟ್ಟು ,ಸೂಕ್ತ ಸೈನಿಕರ ಹುಟ್ಟು, ತರಬೇತಿಗೆ ನೇರವಾಗುತ್ತವೆ.

ಪ್ರೋಟಿನ್ ಯುಕ್ತ ಆಹಾರ ಅಗತ್ಯ:

ಅಸ್ಥಿಮಜ್ಜೆಯಿಂದ ಹೊರಬಂದ ಪ್ರತಿಕಣಗಳು ಅಥವಾ ಅಂಟಿಬಾಡೀಸ್” ಸೈನಿಕರು”. ಈ ಸೈನಿಕರು ತಮಗೆ ತರಬೇತಿ‌ ನೀಡಲಾದ “ಬಾಹ್ಯ ಸ್ವರೂಪದ” ವೈರಿಯನ್ನು ಮಾತ್ರ ಸಾಯಿಸುತ್ತವೆ, ವೈರಿಯ ಬಾಹ್ಯ ಸ್ವರೂಪ‌ ಬದಲಾದರೆ ದಾಳಿ ನಿಂತುಹೋಗುತ್ತದೆ. ರಾಸಾಯನಿಕ ರಚನೆ ನೋಡಿದರೆ ಪ್ರತಿಕಣಗಳು( ಅ್ಯಂಟಿಬಾಡಿ)  “ಪ್ರೋಟಿನ್” ನಿಂದಾಗಿ ಮಾಡಲ್ಪಟ್ಟಿರುತ್ತವೆ. ಹಾಗಾಗಿ ಸೊಂಕು ಅಥವಾ ಕಾಯಿಲೆಯ ಸಮಯದಲ್ಲಿ ” ಪ್ರೋಟಿನ್ ಯುಕ್ತ ಆಹಾರ ಅಗತ್ಯ.

ಅದರ ಜೊತೆ ರಾಸಾಯನಿಕ ಕ್ರಿಯೆಗಳ ವೇಗ ಹೆಚ್ಚಲು ” ವಿಟಾಮಿನ್ಗಳು “ಕ್ಯಾಟಾಲಿಸ್ಟ ” ಅಥವಾ ವೇಗಪರಿವರ್ತಕದಂತೆ ಕೇಲಸಮಾಡುತ್ತವೆ. ಉಳಿದ ಕಚ್ಚಾ ಮಾಲಿಗಾಗಿ ” ಕೊಬ್ಬು , ಶರ್ಕರಪಿಷ್ಟಾದಿಗಳು ಕಡಿಮೆ ಪ್ರಮಾಣದಲ್ಲಿ ಬೇಕು. ಹಾಗಾಗಿ  ಉತ್ತಮ ಪ್ರೋಟಿನ್ ಭರಿತ ಆಹಾರ ಈ ಸಂದರ್ಭದಲ್ಲಿ ಅಗತ್ಯ . ಗೋಧಿಯಿಂದಾದ ಪದಾರ್ಥಗಳು ,ದ್ವೀದಳ ಧಾನ್ಯ ,ಹಾಗೂ ಸಿರಿಧಾನ್ಯಗಳು ಹಾಗೂ ಪ್ರಾಣಿಜನ್ಯ ಪ್ರೋಟಿನ್ ಅಂದರೆ ಮಾಂಸಾಹಾರ. ಸೂರ್ಯರಶ್ಮಿ ವಿಟಮಿನ್ ಡಿಯ ಜೊತೆ ಉಲ್ಲಾಸ ನೀಡಿದರೆ, ಒತ್ತಡ ರಹಿತ ದೇಹದಲ್ಲಿ ರಾಸಾಯನಿಕ ಕ್ರಿಯಗಳು ಬೇಗ ಬೇಗ ನಡೆದು ಸೊಂಕನ್ನು ಮಟ್ಟ ಹಾಕಲು ಸಹಾಯವಾಗುತ್ತದೆ.

ಖಿನ್ನತೆಯೂ ಸೊಂಕು ಉಲ್ಬಣವಾಗಲು ಸಹಾಯವಾಗುತ್ತದೆ. ಲವಲವಿಕೆಯ ದೇಹ, ಮನಸ್ಸು, ಪೌಷ್ಟಿಕ ಆಹಾರ ನಿಮ್ಮನ್ನು ಖಂಡಿತ ಕಾಪಾಡುತ್ತದೆ. ಒಟ್ಟಿನಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ವಿಸಿಕೊಳ್ಳಲು ಸೊಂಕು ಅಗತ್ಯ ಪ್ರತಿಕಣಗಳು ” ಅಂಟಿಬಾಡಿಗಳ ” ತಯಾರಾಗುವಿಕೆಗೆ  ಪ್ರೋಟಿನ್ಅಗತ್ಯ. ದೇಹದಲ್ಲಿ ಪ್ರೋಟಿನ್ ದಾಸ್ತಾನು ಲಾಭಕಾರಿ. ಸದ್ಯದಲ್ಲಿ ಯಾವುದೆ ಔಷಧಿ ,ಪೌಡರು,ವಿಟಾಗಳು ದೇಹದ ರೋಗನಿರೋಧಕ ಶಕ್ತಿ ಹೇಚ್ಚಿಸುವದಿಲ್ಲ.  ಪ್ರೋಟಿನ್ ಭರಿತ ಆಹಾರ, ಸೂರ್ಯರಶ್ಮಿ, ವ್ಯಾಯಾಮ, ಉಲ್ಲಸಿತ ಮನಸ್ಸು ನಮ್ಮ ದೇಹವನ್ನು ಸುಸಜ್ಜಿತ ವಾಗಿಸುತ್ತದೆ.

-ಅಬುಯಹ್ಯಾ

ಡಾ. ಸಲೀಮ್ ನದಾಫ್ – ಸಮುದಾಯ ಆರೋಗ್ಯ ತಜ್ಞ
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this: