Vydyaloka

ರಸ್ತೆ ಸುರಕ್ಷತೆ – ಪ್ರಥಮ ಚಿಕಿತ್ಸೆ

ರಸ್ತೆ ಸುರಕ್ಷತೆ ನಿಯಮಗಳನ್ನು ಗಾಳಿಗೆ ತೂರಿದಲ್ಲಿ  ಮತ್ತಷ್ಟು ಸಾವು ನೋವು ಮತ್ತು ಹಾನಿ ಉಂಟಾಗಿ ದೇಶದ ಪ್ರಗತಿಗೆ ಮಾರಕವಾಗ ಬಹುದು. ಭಯದಲ್ಲಿ ನಾವು ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸಬಾರದು. ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಹೆಲ್ಮೆಟ್‍ಗಳನ್ನು ದ್ವಿಚಕ್ರ ವಾಹನ ಓಡಿಸುವವರು ಕಡ್ಡಾಯವಾಗಿ ಧರಿಸಿದಲ್ಲಿ ಶೇಕಡಾ 80% ರಷ್ಟು ಪ್ರಾಣಅಪಾಯವನ್ನು ಕಡಿಮೆ ಮಾಡಬಹುದು. ಅದೇ ರೀತಿ ಕಾರು ಮತ್ತು ನಾಲ್ಕು ಚಕ್ರ ವಾಹನಗಳನ್ನು ಓಡಿಸುವವರು ಸೀಟು ಬೆಲ್ಟ್ ಧರಿಸಿದಲ್ಲಿ ಸುಮಾರು 75% ರಷ್ಟು ಬಾಯಿ, ಮುಖ ಮತ್ತು ದವಡೆಗಳ ಅಪಘಾತ ಮತ್ತು ತಲೆಯ ಮೇಲಾಗುವ ಮಾರಣಾಂತಿಕ ಅಫಘಾತಗಳನ್ನು ತಡೆಯಬಹುದಾಗಿದೆ.

Raste-surakshate ರಸ್ತೆ ಸುರಕ್ಷತೆ - ಪ್ರಥಮ ಚಿಕಿತ್ಸೆ

1. ನೀವು ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ.

2. ಸಂಚಾರಿ ನಿಯಮಗಳನ್ನು ಉಲ್ಲಂಘಿಸಬೇಡಿ.

3. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ.

4. ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್ ಉಪಯೋಗಿಸಿ.

5. ಅನಗತ್ಯವಾಗಿ ಹಾರ್ನ್ ಮಾಡಬೇಡಿ.

6. ವಾಹನಗಳ ನಡುವೆ ಅಂತರವಿರಲಿ.

7. ಕಣ್ಣು ಕೋರೈಸುವ ಬೆಳಕನ್ನು ಬಳಸಬೇಡಿ.

8. ಸಂಚಾರಿ ನಿಯಮಗಳನ್ನು ಗೌರವಿಸಿ.

9. ಸುರಕ್ಷತೆ ದೃಷ್ಟಿಯಿಂದ ವೇಗವನ್ನು ನಿಯಂತ್ರಿಸಿ.

10. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ.

Also Read: Road Traffic Accidents in India: Observational analysis 

ಅಪಘಾತದ ವೇಳೆ ನಾಗರೀಕರ ಕರ್ತವ್ಯಗಳು:

1. ಅಪಘಾತ ವಾಹನಗಳ ನೋಂದಣೆ ಸಂಖ್ಯೆಗಳನ್ನು ಬರೆದಿಟ್ಟುಕೊಳ್ಳಿ.

2. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಲಭಿಸಿದರೆ, ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ.

3. ಅಪಘಾತದ ಬಗ್ಗೆ ತಕ್ಷಣ ಸ್ಥಳೀಯ ಪೊಲೀಸ್ ಕಂಟ್ರೋಲ್ ರೂಮ್ ಅಥವಾ ಸಂಚಾರ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ (ದೂರವಾಣಿ ಸಂಖ್ಯೆ 100 ಅಥವಾ 103).

4. ಗಾಯಗೊಂಡವರನ್ನು ಲಭ್ಯವಿರುವ ಸಾರಿಗೆ ವ್ಯವಸ್ಥೆ ಮೂಲಕ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿ. ಪೊಲೀಸರಿಗೆ ಅಗತ್ಯವಾದ ನೆರವು ನೀಡಿ. ಹಿಟ್ ಅಂಡ್ ರನ್’ ಪ್ರಕರಣವಿದ್ದಾಗ, ಪೊಲೀಸರಿಗೆ ಲಭ್ಯವಿರುವ ಮಾಹಿತಿ ಒದಗಿಸಿ.

Also read: ಅಫಘಾತದ ತೀವ್ರತೆ ತಡೆಯಲು ರಸ್ತೆ ಸುರಕ್ಷತಾ ನಿಯಮ ಪಾಲಿಸಿ 

Share this: