Vydyaloka

ಪಿಸಿಒಎಸ್ – ಪಾಲಿಸಿಸ್ಟಕ್ ಒವರಿಯನ್ ಸಿಂಡ್ರೋಮ್

ಪಿಸಿಒಎಸ್ (ಪಾಲಿಸಿಸ್ಟಕ್ ಒವರಿಯನ್ ಸಿಂಡ್ರೋಮ್) ಮಹಿಳೆಯರಲ್ಲಿ ಕಂಡುಬರುವ ತೀರಾ ಸಾಮಾನ್ಯವಾದ ಸಂತಾನೋತ್ಪತ್ತಿ ಮತ್ತು ಚಯಾಪಚಯಾ ದೋಷವಾಗಿದೆ. ಮಹಿಳೆಯರ ಋತುಚಕ್ರ, ಫಲವತ್ತತೆ, ಹಾರ್ಮೋನುಗಳು ಮತ್ತು ಅವರ ಚಹರೆ ಮೇಲೆ ಪರಿಣಾಮ ಬೀರುವ ಸ್ಥಿತಿಯನ್ನು ಪಿಸಿಒಎಸ್ ಎನ್ನುವರು. ಪ್ರತಿ 100 ಮಹಿಳೆಯರಲ್ಲಿ ಇಬ್ಬರಿಂದ 26 ಮಹಿಳೆಯರು ಪಿಸಿಒಎಸ್‍ನಿಂದ ನರಳುತ್ತಾರೆ.

ಪಾಲಿಸಿಸ್ಟಿಕ್ ಓವರೀಸ್ (ಬಹುದ್ರವ ಚೀಲಗಳು) ಅಂಡಾಶಯಗಳು ಸಾಮಾನ್ಯ ಅಂಡಾಶಯಗಳಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ ಹಾಗೂ ಕಿರುಚೀಲಗ¼ (ಅಂಡಗಳು, ಬೀಜಾಣುಗಳು ಉತ್ಪಾದನೆಯಾದಾಗ ತತ್ತಿಗಳನ್ನು ಬಡುಗಡೆ ಮಾಡುವ ದ್ರವ ತುಂಬಿದ ಸ್ಥಳಗಳು) ಸಂಖ್ಯೆ ಎರಡರಷ್ಟಿರುತ್ತದೆ. ಪಾಲಿಸಿಸ್ಟಿಕ್ ಓವರೀಸ್‍ಗಳನ್ನು ಹೊಂದಿರುವುದು ನೀವು ಪಿಸಿಒಡಿ ಹೊಂದಿದ್ದೀರಿ ಎಂದರ್ಥವಲ್ಲ. ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರ ಆ ದೋಷದ ಲಕ್ಷಣಗಳು ಮತ್ತು ಚಿಹ್ನೆಗಳೊಂದಿಗೆ ಬಹುದ್ರವ ಚೀಲಗಳನ್ನೂ ಹೊಂದಿರುತ್ತಾರೆ.

ಚಿಹ್ನೆಗಳು ಮತ್ತು ಲಕ್ಷಣಗಳು

• ಸ್ಥೂಲಕಾಯ, ಬೊಜ್ಜು- ತೂಕದಲ್ಲಿ ಕ್ಷಿಪ್ರ ಹೆಚ್ಚಳ ಅಥವಾ ತೂಕ ಇಳಿಸುವುದು ಕಷ್ಟವಾಗುವಿಕೆ
• ರಕ್ತದಲ್ಲಿ ಕೊಲೆಸ್ಟರಾಲ್ ಮಟ್ಟ ಹೆಚ್ಚಳ
• ಇನ್ಸುಲಿನ್ ಪ್ರತಿರೋಧಕ ಮತ್ತು ಟೈಪ್ 2 ಡಯಾಬಿಟಿಸ್
• ಪೂರ್ವಾವಧಿ ಋತುಸ್ರಾವ
• ಬಂಜೆತನ
• ಅಸಾಧಾರಣ ಗರ್ಭಧಾರಣೆಗಳು (ಗರ್ಭಧಾರಣೆ ಧರಿಸಲು ಕಷ್ಟವಾಗುವಿಕೆ)
• ಅಸಮರ್ಪಕ ಋತುಸ್ರಾವ ಅಥವಾ ಋತುಚಕ್ರ ಇಲ್ಲದಿರುವಿಕೆ
• ಮುಖ ಅಥವಾ ದೇಹದ ಇತರ ಭಾಗಗಳಲ್ಲಿ ಕೂದಲು ಹೆಚ್ಚಾಗಿರುವಿಕೆ (ಹಿಸುಟಿಸಂ)
• ಕೂದಲು ಉದುರುವಿಕೆ
• ಮೊಡವೆ, ಗುಳ್ಳೆಗಳು,
• ಖಿನ್ನತೆ, ಹತಾಶೆ ಮತ್ತು ಮಾನಸಿಕ ಸಮಸ್ಯೆಗಳು

ಪಿಸಿಓಎಸ್ ಇದ್ದರೆ ಡಯಾಬಿಟಿಸ್‍, ಜೆಸ್ಟೆಷನಲ್ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಹೃದ್ರೋಗ ಸಮಸ್ಯೆಗಳು, ಖಿನ್ನತೆ, ಹತಾಶೆ ಮತ್ತು ಬಾವನೆಗಳ ತೊಯ್ಡಾಟದಂಥ ಇತರ ಸಮಸ್ಯೆಗಳೂ ಕಂಡುಬರುವ ಸಾಧ್ಯತೆ ಇರುತ್ತದೆ.

ತಡೆಗಟ್ಟುವ ಕ್ರಮಗಳು:

ದೀರ್ಘಕಾಲದ ಅನಾರೋಗ್ಯ ಕಡಿಮೆ ಮಾಡಲು ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಿ,. ದೀರ್ಘ ಕಾಲದ ಅನಾರೋಗ್ಯ ಸಮಸ್ಯೆಗಳ ಒಟ್ಟಾರೆ ಸಂಭವಾಂಶವನ್ನು ಕಡಿಮೆ ಮಾಡಲು ಇರುವ ಮುಖ್ಯ ಮಾರ್ಗೋಪಾಯಗಳೆಂದರೆ :

• ಇಡೀ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳು, ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿರುವಂಥ ಫೈಬರ್ಯುಕ್ತ ಆಹಾರವನ್ನು ಸೇವಿಸಬೇಕು.
• ಸಾಕಷ್ಟು ನೀರು ಹಾಗೂ ಎಳನೀರಿನಂಥ ನೈಸರ್ಗಿಕ ಹಣ್ಣಿನ ರಸಗಳನ್ನು ಕುಡಿಯಬೇಕು.
• ಋತುಸ್ರಾವವನ್ನು ಕ್ರಮಬದ್ದಗೊಳಿಸಲು ನೈಸರ್ಗಿಕ ಆಹಾರ ಸೇವಿಸಿ.
• ವಾಕಿಂಗ್, ರನ್ನಿಂಗ್, ಸ್ವಿಮ್ಮಿಂಗ್, ಜಾಗಿಂಗ್ ಮತ್ತು ಯೋಗದಂತಹ ದೈಹಿಕ ವ್ಯಾಯಾಮಗಳನ್ನು ನಿಯತವಾಗಿ ಮಾಡಬೇಕು.
• ರೋಗ ನಿರ್ಧಾರ ಪರೀಕ್ಷೆ ಮಾಡಿಸಿ ಹಾರ್ಮೋನ್ ಮಟ್ಟವನ್ನು ಸರಿಪಡಿಸಬೇಕು
• ಆರೋಗ್ಯಕರ ಸಂತುಲಿತ ಆಹಾರ ಸೇವಿಸಿ.
• ಆಹಾರವನ್ನು ನಿಯತವಾಗಿ ಸೇವಿಸಿ, ಬೆಳಗಿನ ಉಪಾಹಾರ ತಪ್ಪಿಸಬೇಡಿ.
• ನಿಮ್ಮ ತೂಕ ಸಾಮಾನ್ಯ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಪಿಸಿಓಎಸ್ ಗೆ ಆಯುರ್ವೇದ ಚಿಕಿತ್ಸೆ

ಪಿಸಿಓಎಸ್ ಇರುವ ಮಹಿಳೆಯರಿಗೆ ಆಯುರ್ವೇದ ಚಿಕಿತ್ಸೆಯು ಅತ್ಯಂತ ಉಪಯುಕ್ತ.  ಆಯುರ್ವೇದದಲ್ಲಿ ಪಿಸಿಓಎಸ್/ಪಿಸಿಓಡಿಗಾಗಿ ಪಂಚಕರ್ಮ ಥೆರಪಿ ಮೂಲಕ ಫಲವತ್ತತೆಯನ್ನು ಸುಧಾರಿಸಲು ಚಿಕಿತ್ಸೆ ನೀಡಲಾಗುತ್ತದೆ .

ಹಾರ್ಮೋನ್ಗಳನ್ನು ಸಮತೋಲನಗೊಳಿಸಲು ವ್ಯಾಯಾಮ ಅಥವಾ ಯೋಗ: ನಿಯಮಿತ ವ್ಯಾಯಾಮ ಅಥವಾ ಯೋಗವು ದೇಹ ಮತ್ತು ಮನಸ್ಸನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ. ಇದು ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಗರ್ಭಧರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಸ್ವೇದನಂ: ಸ್ವೇದನಂ ಎನ್ನುವುದು ಬೆವರುವಿಕೆಯನ್ನು ಪ್ರಚೋದಿಸಲು ಮತ್ತು ದೇಹದಿಂದ ವಿಷವನ್ನು ಹೊರಹಾಕಲು ನಡೆಸುವ ಒಂದು ವಿಧಾನವಾಗಿದೆ.
ವಾಮನಂ: ಇದು ನಿರ್ವಿಶೀಕರಣ ಚಿಕಿತ್ಸೆಯಾಗಿದ್ದು, ದೇಹವು ಜೀರ್ಣವಾಗದ ಆಹಾರವನ್ನು ವಾಂತಿ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ.
ಫಲ ಘೃತಂ: ಈ ಆಯುರ್ವೇದ ತಯಾರಿಕೆಯು ಗಿಡಮೂಲಿಕೆಯ ತುಪ್ಪವನ್ನು ಅದರ ಮೂಲವಾಗಿ ಒಳಗೊಂಡಿರುತ್ತದೆ ಮತ್ತು ಇಲ್ಲಿ ಹಾಲಿನೊಂದಿಗೆ ಬೆರೆಸಿದ ದ್ರವೀಕೃತ ಬೆಣ್ಣೆಯನ್ನು ನೀಡಲಾಗುತ್ತದೆ.
ಶಿರೋಧರ: ಶಿರೋಧರ ಚಿಕಿತ್ಸೆಯಲ್ಲಿ, ಔಷಧೀಯ ಎಣ್ಣೆಯನ್ನು ಹಣೆಯ ಮೇಲೆ ಒಂದು ನಿರ್ದಿಷ್ಟ ಬಿಂದುವಿನಲ್ಲಿ ಸುರಿಯಲಾಗುತ್ತದೆ. ಈ ಚಿಕಿತ್ಸೆಯನ್ನು ನಿರ್ದಿಷ್ಟ ಲಯಬದ್ಧ ಚಲನೆಗಳ ಮೂಲಕ ಮಾಡಲಾಗುತ್ತದೆ, ಹೀಗಾಗಿ ಮನಸ್ಸನ್ನು ಸಮತೋಲಿತ ಸ್ಥಿತಿಗೆ ತರುತ್ತದೆ.
ಶೋಧನಾ: ಇದು ಅತ್ಯಗತ್ಯ ಪಂಚಕರ್ಮ ಚಿಕಿತ್ಸಾ ಚಿಕಿತ್ಸೆಯಾಗಿದ್ದು ಅದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಡಾ.ಆಶಾಕಿರಣ್ ಮತ್ತು ಡಾ-ಮಾನಸ-ಭಟ್
ತಕ್ಷಣ ಆಯುರ್ವೇದ
2 ನೇ ಕ್ರಾಸ್, ಮಾರಪ್ಪನಪಾಳ್ಯ, B/W ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮತ್ತು ಗೋವರ್ಧನ್ ಬಸ್-ಸ್ಟಾಪ್
ಯಶವಂತಪುರ, ಬೆಂಗಳೂರು – 560022
ಫೋ : 77605 75333 / 87220 34900

Share this: