ORS ದ್ರಾವಣ ಅನಾಯಾಸವಾಗಿ ದೇಹದಲ್ಲಿ ನೀರು ಮತ್ತು ಲವಣಗಳನ್ನು ತುಂಬಿ, ರೋಗಿಗಳು ಆರಾಮಾಗಲು ಸಹಕಾರಿಯಾಗಿದೆ.ಶುಚಿತ್ವ ಮತ್ತು ನೈರ್ಮಲ್ಯ ಇಲ್ಲದಿದ್ದಾಗ ಅತಿಸಾರ ಬೇಧಿಯಾಗುತ್ತದೆ.ಪ್ರತಿ ವರ್ಷ ಜುಲೈ 29 ರಂದು ಜಾಗತಿಕ ORS ದಿನವನ್ನಾಗಿ ಆಚರಿಸಲಾಗುತ್ತದೆ.
ಹೀಗಿರಲು ಒಂದು ದಿನ ಬೆಳಿಗ್ಗೆ ಮಗುವಿಗೆ ಬೇಧಿಯಾಯಿತು. ಮದ್ಯಾಹ್ನದೊಳಗೆ ಇನ್ನು ನಾಲ್ಕೈದು ಬಾರಿ ಬೇಧಿಯಾಯಿತು. ನೋಡ ನೋಡುತ್ತಲೇ ಆಟವಾಡಿಕೊಂಡು ಲವಲವಿಕೆಯಿಂದಿದ್ದ ಮಗು ಮಂಕಾಗಿ ಹೋಯಿತು. ಎಲ್ಲರಿಗೂ ಇದನ್ನು ನೋಡಿ ತುಂಬಾ ಹೆದರಿಕೆಯಾಗಿ ಪ್ರಾಣವೇ ಹೋದಂತಾಯಿತು. ತಕ್ಷಣವೇ ಮಗುವನ್ನು ಎತ್ತುಕೊಂಡು ಎಲ್ಲರೂ ಅವರ ಊರ ಪಕ್ಕದಲ್ಲೇ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರು. ಎಲ್ಲರನ್ನು ನೋಡಿದ ವೈದ್ಯರು ಕುಳಿತಿರಳು ಹೇಳಿ ತಾಯಿಯನ್ನು ಕರೆದು ಮಗುವನ್ನು ಪರೀಕ್ಷಿಸಿದರು.
ಮಗುವಿಗೆ ORS ದ್ರಾವಣ:
ವೈದ್ಯರಿಗೆ ಮಗುವಿಗೆ ಬೇಧಿಯಾಗಿ, ದೇಹದಲ್ಲಿ ಕೊಂಚ ನೀರಿನ ಪ್ರಮಾಣ ಕಮ್ಮಿಯಾಗು ಮಗು ನಿಶಕ್ತವಾಗಿದೆ ಎಂದು ತಿಳಿಯಿತು. ತಾಯಿಗೆ ಸಮಾಧಾನ ಹೇಳಿ, ಬೇಧಿಯಾಗಿರುವುದರಿಂದ ಮಗುವಿನ ದೇಹದಲ್ಲಿ ನೀರಿನ ಅಂಶ ಕಮ್ಮಿಯಾಗಿ ಮಗು ನಿಶಕ್ತವಾಗಿದೆ. ಮಗುವಿಗೆ ಕುಡಿಯಲು ORS ದ್ರಾವಣವನ್ನು ನೀಡಬೇಕೆಂದು , ಇದರಿಂದ ಮಗುವಿನ ದೇಹದಲ್ಲಿ ನೀರಿನ ಪ್ರಮಾಣ ಸರಿ ಹೋಗಿ ಮಗು ಆರಾಮಾಗುವುದೆಂದು ಹೇಳಿ ಬೇರೆ ರೋಗಿಗಳನ್ನು ನೋಡಲು ಹೋದರು. ಆಗ ಬಂದ ವರಲಕ್ಷ್ಮಿ ಸಿಸ್ಟರ್ ಒಂದು ORS ಪ್ಯಾಕೆಟ್ ತಂದು ಒಂದು ಲೀಟರ್ ನೀರಿನಲ್ಲಿ ಅದನ್ನು ಹಾಕಿ , ಕದಡಿ ಸಮಾಧಾನವಾಗಿ ಮತ್ತು ಸಾವಧಾನವಾಗಿ ಮಗುವಿಗೆ ORS ದ್ರಾವಣವನ್ನು ನೀಡುತ್ತಿರಲು ತಿಳಿ ಹೇಳಿದರು.
ಅತಿಸಾರ ಭೇದಿಯ ನಿಯಂತ್ರಣ ಮತ್ತು ORS ದ್ರಾವಣದ ಪ್ರಾಮುಖ್ಯತೆ:
ಪ್ರತಿ ವರ್ಷ ಜುಲೈ 29 ರಂದು ಜಾಗತಿಕ ORS ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಮಕ್ಕಳಲ್ಲಿ ಆಗುವ ಅತಿಸಾರ ಭೇದಿಯ ನಿಯಂತ್ರಣ ಮತ್ತು ORS ದ್ರಾವಣದ ಪ್ರಾಮುಖ್ಯತೆಯನ್ನು ಹೇಳಲಾಗುತ್ತದೆ. ಅತಿಸಾರ ಬೇಧಿ ಮತ್ತು ಅದರಿಂದ ದೇಹದಿಂದ ನೀರಿನ ಪ್ರಮಾಣ ಕಮ್ಮಿಯಾಗುವುದು. ತೀರ ಸಾಮಾನ್ಯವಾಗಿ ಐದು ವರ್ಷ ಕೆಳಗಿನ ಮಕ್ಕಳಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ತುಂಬಾ ಬೇಧಿಯಾಗಿ ಅತಿಯಾಗಿ ದೇಹದ ನಿರ್ಜಲೀಕರಣವಾದರೆ ಮೂತ್ರ ಪಿಂಡಗಳ ಸಾಮಸ್ಯೆಯಾಗಿ ಸಾವು ಕೂಡ ಸಂಭವಿಸಬಹುದು.
ಈ ಸಮಸ್ಯೆಯಿಂದ ಅಭಿವೃದ್ದಿ ಹೊಂದದ ಮತ್ತು ಅಭಿವೃದ್ದಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಐದು ವರ್ಷದ ಕೆಳಗಿನ ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿದೆ. ಶುಚಿತ್ವ ಮತ್ತು ನೈರ್ಮಲ್ಯ ಇಲ್ಲದಿದ್ದಾಗ ಅತಿಸಾರ ಬೇಧಿಯಾಗುತ್ತದೆ. ಚಿಕಿತ್ಸೆ ಸಿಗದಿದ್ದ ಪಕ್ಷದಲ್ಲಿ ದೇಹದಲ್ಲಿರುವ ನೀರೆಲ್ಲ ಕಡಿಮೆಯಾಗಿ ಸಮಸ್ಯೆಗಳನ್ನು ಮಾಡುತ್ತದೆ. ಬೇಧಿಯಾದಾಗ ದೇಹದಿಂದ ನೀರು ಮತ್ತು ಲವಣದ ಅಂಶಗಳು ದೇಹದಿಂದ ಹೊರ ಹೋಗುತ್ತವೆ. ಆದ ಕಾರಣ ಚಿಕಿತ್ಸೆ ಯಾಗಿ ನೀರು ಮತ್ತು ಲವಣ ಗಳನ್ನು ನೀಡಬೇಕು.
ORS ದ್ರಾವಣ ಮನೆಯಲ್ಲಿಯೇ ಮಾಡಿಕೊಳ್ಳಬಹುದು:
ಇತ್ತೀಚಿನ ಸಂಶೋಧನೆಯ ಪ್ರಕಾರ ORS ದ್ರಾವಣದ ಜೊತೆಗೆ Zinc ನೀಡುವುದರಿಂದ ಅತಿಸರಾದ ಪ್ರಮಾಣ ಮತ್ತು ತೀವ್ರತೆಯನ್ನು ಕಡಿಮೆ ಮಾಡಬಹುದಾಗಿದೆ. ತೀರ ಸರಳವಾದ ಈ ಔಷದವು ಬಹಳಷ್ಟು ಸಾವು ನೋವು ಗಳನ್ನು ತಡೆದಿದೆ. ಈ ORS ಅನ್ನು ನಾವೆಲ್ಲರೂ ಸರಿಯಾದ ರೀತಿಯಲ್ಲಿ ಬಳಸಿದರೆ ಖಂಡಿತವಾಗಿಯೂ ನಮ್ಮ ದೇಶದಲ್ಲಿ ಅತಿಸಾರದಿಂದಾಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ.
Also Read: ‘ಝಿಂಕ್’- ದೇಹದೊಳಗಿನ ಕೋವಿಡ್ ವಾರಿಯರ್
ಡಾ. ಧರಣೀಶ್ ಪ್ರಸಾದ್
ಅಸೋಸಿಯೇಟ್ ಪ್ರೊಫೆಸರ್
ಡಿಪಾರ್ಟ್ಮೆಂಟ್ ಆಫ್ ಕಮ್ಯೂನಿಟಿ ಮೆಡಿಸಿನ್
ಶ್ರಿ ಸಿದ್ದಾರ್ಥ ಇನ್ಸ್ಟಿಟ್ಯೂಟೆಡ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ ಸೆಂಟರ್
ಟಿ ಬೇಗೂರು, ನೆಲಮಂಗಲ, ಬೆಂಗಳೂರು-562123
ಮೊ:9481604483