ನಿದ್ರಾ ಹೀನತೆ ಸಾಮಾನ್ಯ ಆರೋಗ್ಯ ಸಮಸ್ಯೆಯಲ್ಲೊಂದು. ಎಲ್ಲರು ಈಗಿನ ಶರವೇಗದಿ ಓಡುತ್ತಿರುವ ಜೀವನದಲ್ಲಿ ಕೇಳಿರುವ ಅಥವ ಅನುಭವಿಸಿರುವ ಸಮಸ್ಯೆ ನಿದ್ರಾ ಹೀನತೆ. ಅದರ ಕಾರಣ ಹಾಗೂ ನಿವಾರಣೆ ಬಗ್ಗೆ ತಿಳಿದುಕೊಳ್ಳುವ ಮೊದಲು ನಿದ್ರೆಯ ಮಹತ್ವ ತಿಳಿದುಕೊಳ್ಳೊಣ.
ನಿದ್ರೆ ಆವರಿಸಲು ಮನಸ್ಸಿನ ಆರೋಗ್ಯ ಮುಖ್ಯ:
ನಿದ್ರೆಯನ್ನು ನಮ್ಮ ಶಾಸ್ತ್ರದಲ್ಲಿ ತ್ರಯ ಉಪಸ್ತಂಭಗಳಲ್ಲಿ ಒಂದನ್ನಾಗಿ ತಿಳಿಸಿದ್ದಾರೆ, ಅಂದರೇ ಆಹಾರ ಹಾಗು ಬ್ರಹ್ಮಚರ್ಯದ ಜೊತೆ ನಿದ್ರೆ ಕೂಡ ದೇಹದ ಆಧಾರವಾಗಿಯು, ಹಾಗು ಒಬ್ಬ ಮನುಷ್ಯನ ಸುಖ-ದುಃಖಗಳ ಭಾವಕ್ಕೆ, ಶರೀರ ಪುಷ್ಟಿ – ಕಾರ್ಷ್ಯಕ್ಕೆ, ಬಲ-ಅಬಲಗಳಿಗೆ, ಜ್ಞಾನ -ಅಜ್ಞಾನಗಳಿಗೆ, ಶರೀರದ ಅಳಿಕೆ-ಉಳಿಕೆಗೆ ಕಾರಣವಾಗಿರುತ್ತದೆ. ಸಕಲ ಆಯಾಸವನ್ನು ಹರಿಸಿ ಪೋಷಿಸುವವಳು ನಿದ್ರಾ ದೇವಿಯಾದರೆ, ದುಃಖಗಳಿಗೆ ನಮ್ಮನ್ನು ಒಡ್ದಿ ತನು-ಮನಗಳ ಲಯಕ್ಕೆ ಕಾರಣವಗುವ ನಿದ್ರಾ ಹೀನತೆ ಒಂದು ಭೂತವೇ ಸರಿ.
ಈಗ ಈ ಭೂತದ ಬಗ್ಗೆ ತಿಳಿದುಕೊಂಡರೆ; ಅದನ್ನು ಮಣಿಸಿ ದಿಗ್ಭಬಂಧಿಸಿ, ನಿದ್ರಾ ದೇವಿಯ ಕೃಪಕಟಾಕ್ಷ ಸಾಧ್ಯ ನಿದ್ರೆ ಆವರಿಸಲು ಮನಸ್ಸಿನ ಆರೋಗ್ಯ ಬಹಳ ಮುಖ್ಯ. ಮನಸ್ಸು ತಮೋ ಗುಣದಿಂದ ಆವೃತವಾಗಿ ತನ್ನ ವೃತ್ತಿಯಿಂದ ನಿವೃತ್ತಿ ಹೊಂದಿದರೆ ನಾವು ಆ ಸ್ವಪ್ನ ಸುಂದರಿಯ ಪರಿಚಯಿಸುವ, ದೇವಿಯ ಮಡಿಲು ಸೇರಿದ ಹಾಗೆ. ಆದರೆ ಅದೇ ಮನಸ್ಸು ದುಗುಡ-ದುಮ್ಮಾನ ಗೂಡಾದರೆ, ಚಿಂತೆ ಎಂಬ ಚಿತೆಯಲ್ಲಿ ಪರಿತಪಿಸುತ್ತಿದಾಗ ಭೂತದ ಆಗಮನವಾಗುತ್ತದೆ.
ಆಯುರ್ವೇದದಲ್ಲಿ ವಾತ, ಪಿತ್ತ, ಕಫ ಎಂಬ ದೋಷಗಳು ಮನುಷ್ಯನ ಆರೋಗ್ಯ-ಅನಾರೋಗ್ಯದ ದಿಶೆಯನ್ನು ನಿರ್ಧರಿಸುವುದು. ಕಫ ದೋಷ ನಿದ್ರೆ ಬರಲು ಕಾರಣವಾದರೆ; ವಾತ-ಪಿತ್ತ ದೋಷಗಳು ನಿದ್ರೆಯ ಪರಮ ಶತ್ರುಗಳು. ಶೋಧನ, ಭಯ, ಕ್ರೋಧ, ಉದ್ವೇಗಾದಿ ಮನೋಭಾವಗಳು, ಅತಿಯಾದ ಧೂಮಪಾನ, ಉಪವಾಸಾದಿ ಕ್ರಿಯೆಗಳು ವಾತ-ಪಿತ್ತ ದೋಷಗಳನ್ನು ವೃದ್ದಿಮಾಡಿ ನಿದ್ರಾ ಹೀನತೆಗೆ ನಾಂದಿ ಹಾಡುತ್ತವೆ. ಇನ್ನು ಕೆಲವರಲ್ಲಿ ಪ್ರಾಕೃತವಾಗಿಯೆ ನಿದ್ರೆಯ ಪ್ರಮಾಣ ಕಮ್ಮಿ.
ನಿದ್ರಾ ಹೀನತೆ ಪರಿಹಾರ:
ಸರಿ, ಈ ಹೀನತೆಯ ಪರಿಹಾರವೇನು ಎಂದಿರ?? ಈಗ ಕಾರಣ ತಿಳಿದ ಮೇಲೆ ಲಕ್ಷಣ ತಿಳಿಯುವ ಸಮಯ; ತಲೆ ನೋವು, ಯಾವುದೇ ಕೆಲಸ ಮಾಡಲು ಹುಮ್ಮಸ್ಸು ಇಲ್ಲದಿರುವಿಕೆ, ಅಂಗಾಂಗಗಳಲ್ಲಿ ನೋವು, ನಿತ್ಯ ಆಕಳಿಕೆ ನಿದ್ರಾ ಹೀನತೆಯ ಸರ್ವೇ ಸಾಮಾನ್ಯ ಲಕ್ಷಣಗಳು.
2. ವಾತ ಪಿತ್ತಗಳ ಸಮತೋಲನೆಗೆ ಸಂಪೂರ್ಣ ದೇಹಕ್ಕೆ ಎಣ್ಣಿ ಹಚ್ಚಿ ಸ್ನಾನ ಮಾಡುವುದು; ನಿಯಮಿತವಾಗಿ ತಲೆಗೆ ಎಣ್ಣಿ ಹಚ್ಚುವುದು, ಮಲಗುವ ಮುಂಚೆ ಪಾದಗಳಿಗೆ ಎಣ್ಣಿ ಹಚ್ಚುವುದು.
3. ಊಟದಲ್ಲಿ ಮಧುರ-ಸ್ನಿಗ್ದ ಅಂಶವಿರುವ ಹಾಲು, ಮಾಂಸ ರಸ, ತುಪ್ಪ, ಗೋಧಿಯಿಂದ ಮಾಡಿದ ಖಾದ್ಯಗಳ ಬಳಕೆ ಲಾಭದಾಯಕ.
4. ಇನ್ನು ಮಲಗುವ ಮುಂಚೆ ಮನಸ್ಸಿಗೆ ಅನುಕೂಲವೆನಿಸುವ ಕಥೆ ಕೇಳುವುದು, ಪುಸ್ತಕ ಒದುವ ಅಭ್ಯಸ ಲಾಭದಾಯಕ.
ಇವೆಲ್ಲದರ ನಡುವೆ ಅವಶ್ಯ ಎನ್ನುವ ಸಂದರ್ಭದಲ್ಲಿ ವೈದ್ಯರ ಭೇಟಿಮಾಡಲು ಮರೆಯದಿರಿ.
ಸರ್ವೆ ಜನಃ ಸುಖ್ಹಿನೋ ಭವಂತು, ಸರ್ವೆ ಸಂತು ನಿರಾಮಯ.
Also Read: ಹಗಲು ನಿದ್ರೆ – ಆರೋಗ್ಯಕ್ಕೆ ಉತ್ತಮವಲ್ಲ
ಡಾ || ಅಶ್ವಿನಿ . ಎನ್
ಆದಿಚುಂಚನಗಿರಿ ಆಯುರ್ವೇದ ವೈದ್ಯಕೀಯ ಕಾಲೇಜು
ನಾಗರೂರು, ನೆಲಮಂಗಲ,, ಬೆಂಗಳೂರು ಉತ್ತರ- 562123
Ph: 7026362663