ಮುಖ ಕವಚದಿಂದ ಕನ್ನಡಕ ಮಸುಕಾಗುವ ಸಮಸ್ಯೆ ಕಿರಿಕಿರಿಯುಂಟುಮಾಡುತ್ತದೆ.ಮಾಸ್ಕ್ ಹಾಕಿಕೊಳ್ಳುವುದೇ ಸಮಸ್ಯೆ ಅಂತ ಕೆಲವರಿದ್ರೆ ಕನ್ನಡಕಧಾರಿಗಳಿಗೆ ಈ ಮಾಸ್ಕ್ ಇನ್ನೊಂದು ಸಮಸ್ಯೆ ತಂದೊಡ್ಡಿದೆ.
ಇದು ನಿಜವಾಗಿಯೂ ಕಿರಿಕಿರಿಯುಂಟುಮಾಡುತ್ತದೆ. ವಿಶೇಷವಾಗಿ ನೀವು ಬಿಸಿ ಬೀದಿಯಿಂದ ಹವಾನಿಯಂತ್ರಿತ ಅಂಗಡಿಗೆ ಕಾಲಿಟ್ಟರೆ, ಇದ್ದಕ್ಕಿದ್ದಂತೆ ಏನನ್ನೂ ನೋಡಲಾಗುವುದಿಲ್ಲ. ಇದಕ್ಕೆ ಕಾರಣ ನಿಮ್ಮ ಉಸಿರಾಟ. ಆ ನಿಮ್ಮ ಉಸಿರಾಟದಿಂದ ಬೆಚ್ಚಗಿನ ಆವಿಯು ಕನ್ನಡಕದ ಮಸೂರದ ತಂಪಾದ ಮೇಲ್ಮೈಯನ್ನು ಸಂಪರ್ಕಿಸುತ್ತದೆ. ಆ ನೀರಿನ ಅಣುಗಳ ನಡುವಿನ ಮೇಲ್ಮೈ ಒತ್ತಡದಿಂದಾಗಿ ಮಂಜು ರೂಪುಗೊಳ್ಳುತ್ತದೆ. ಆ ಮಂಜು ನಿಮ್ಮ ಕನ್ನಡಕದಲ್ಲಿ ಕೂತು ನಿಮ್ಮ ದೃಷ್ಟಿಯನ್ನು ಮಂಜಾಗಿಸುತ್ತದೆ.
ಕನ್ನಡಕದ ಮಂಜು ದೂರವಿರಲು ಸಹಾಯ ಮಾಡುವ ಸುಲಭ ಸಂಗತಿಗಳು
2. ಕನ್ನಡಕದಲ್ಲಿರಲಿ ಸ್ವಲ್ಪ ಸೋಪ್ ಅಂಶ: ಇಂಗ್ಲೆಂಡ್‍ನ ‘ರಾಯಲ್ ಕಾಲೇಜ್ ಆಫ್ ಸರ್ಜನ್ಸ್’ನ ಜರ್ನಲ್‍ನಲ್ಲಿ ಪ್ರಕಟವಾದ ಒಂದು ತುಣುಕು ಲೇಖನದ ಪ್ರಕಾರ ನಿಮ್ಮ ಕಣ್ಣಡಕವನ್ನು ಸಾಬೂನು ನೀರಿನಿಂದ ಒರೆಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದಂತೆ. ಅಂದರೆ ಸೋಪು ನೀರನ್ನು ಕಣ್ಣಡಕದ ಗಾಜುಗಳಿಗೆ ಚಿಮುಕಿಸಿ ಅದನ್ನು ಗಾಳಿಯಲ್ಲಿ ಒಣಗಳು ಬಿಡಬೇಕು. ನಂತರ ಅದನ್ನು ಟಿಶ್ಯೂ ಪೇಪರ್ ಅಥವಾ ಮೃದುವಾದ ಬಟ್ಟೆಯಿಂದ ಒರೆಸಬೇಕು. ಸೋಪಿನಲ್ಲಿರುವ ರಾಸಾಯನಿಕ ಪದರವು ತೇವಾಂಶದ ಅಣುಗಳ ಮೇಲ್ಮೈ ಒತ್ತಡವನ್ನು ಕಡಿಮೆ ಮಾಡುತ್ತದೆ. ಬಹಳಷ್ಟು ವೃತ್ತಿಪರ ಈಜುಗಾರರು ಸಹಾ ಇದೇ ತಂತ್ರವನ್ನು ಬಳಸುತ್ತಾರಂತೆ! ನೀರಿನ ಒಳಗೆ ಇರುವಾಗ ಕನ್ನಡಕದ ಮಸುಕನ್ನು ತಡೆಯಲು ಅದರ ಒಳಗೆ ಸ್ವಲ್ಪ ಬೇಬಿ ಶಾಂಪೂ ಬಳಸುತ್ತಾರೆ.
4. ಉತ್ತಮ ಗುಣಮಟ್ಟದ ಆಂಟಿ-ಫಾಗಿಂಗ್ ಉತ್ಪನ್ನವನ್ನು ಖರೀದಿಸಿ: ಹಲವಾರು ಆಂಟಿ-ಫಾಗಿಂಗ್ ಸ್ಪ್ರೇಗಳು ಮತ್ತು ಒರೆಸುವ ಬಟ್ಟೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ಎಲ್ಲವೂ ಎಲ್ಲರಿಗೂ ಪರಿಣಾಮಕಾರಿ ಎಂದು ದೃಢಪಡಿಸುವುದು ಕಷ್ಟವಾಗಿದ್ದರೂ. ಉತ್ತಮ ಗುಣಮಟ್ಟ ಹಾಗೂ ತಜ್ಞ ವೈದ್ಯರ ಸಲಹೆಯ ಮೇಲೆಗೆ ಅವಶ್ಯವಾಗಿ ಬಳಸಬಹುದು.