Vydyaloka

ಮೂಲವ್ಯಾಧಿಯಲ್ಲಿಆಹಾರ ಪದ್ಧತಿ /ಪಾಲನೆ

ಮೂಲವ್ಯಾಧಿಯಲ್ಲಿ ಆಹಾರ ಪದ್ಧತಿ /ಪಾಲನೆ ಬಹಳ ಮುಖ್ಯ. ಪಾಲನೆ ಮಾಡಬಹುದಾದ ಆಹಾರ ವಿಹಾರಗಳು ಮತ್ತು ಪಾಲನೆ ಮಾಡಬಾರದಾದ ಆಹಾರ ವಿಹಾರ ಪದ್ದತಿಗಳ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಪಾಲನೆ ಮಾಡಬಹುದಾದ ಆಹಾರ ವಿಹಾರಗಳು

 ಬೆಣ್ಣೆ ತೆಗೆದು ತಾಜಾ ಮಜ್ಜಿಗೆ ದಿನನಿತ್ಯ ಬಳಕೆ.
 ದಿನನಿತ್ಯ ಬೆಳಿಗ್ಗೆ 1 ರಿಂದ 2 ಲೀಟರ್‍ನಷ್ಟು. ಸ್ವಲ್ಪ ಬಿಸಿ / ಅಲ್ಪ ಬಿಸಿ / ಉಗುರು ಬೆಚ್ಚಗಿರುವ ನೀರನ್ನು ಕುಡಿಯಬೇಕು.
 ಅಜೀರ್ಣ, ಅಪಚನ, ಮಲಬದ್ಧತೆಯಾಗದಂತೆ ನೋಡಿಕೊಳ್ಳಬೇಕು.
 ಹಳೆಯ ಅಕ್ಕಿ, ಗೋಧಿ, ಜೋಳ ಇತ್ಯಾದಿಗಳನ್ನು ಬಳಕೆ ಮಾಡಬೇಕು. ನೆಲ್ಲಿಕಾಯಿ, ಒಣ ದ್ರಾಕ್ಷಿ, ದಾಳಿಂಬೆ, ಮೊಸಂಬಿ, ಪಕ್ವವಾದ ಬಾಳೆಹಣ್ಣು ಇತ್ಯಾದಿಗಳ ಸೇವನೆ ಮಾಡಬೇಕು.
 ಎಲ್ಲ ರೀತಿಯ ಸೊಪ್ಪು ತರಕಾರಿಗಳನ್ನು ಕುದಿಸಿ ತಿನ್ನಬೇಕು.
 ನಾರಿನಾಂಸ ಇರುವ ಸೊಪ್ಪು ಪಲ್ಯಗಳನ್ನು ಸೇವಿಸಬೇಕು. ಮೂಲಂಗಿ, ಸೌತೆಕಾಯಿ, ಹಾಗಲಕಾಯಿ, ಗಜ್ಜರಿ, ಮೆಂತೆಪಲ್ಯ, ಸಬ್ಬಸಗಿಪಲ್ಯ, ಪುಂಡಿಪಲ್ಯ, ರಾಜಗೀರಿಪಲ್ಯ, ಬೆಂಡೆಕಾಯಿ, ಕಾರ್ಚಿಕಾಯಿ, ಪಡವಲಕಾಯಿ ಮುಂತಾದವುಗಳು ಸೇವಿಸಬೇಕು.
 ಒಂದು ಅಗಲವಾದ ವೃತ್ತಾಕಾರವಾದ/ಚೌಕಾದ ಬುಟ್ಟಿಯನ್ನು ತೆಗೆದುಕೊಂಡು ಅದರಲ್ಲಿ ಬಿಸಿನೀರನ್ನು ಹಾಕಿ ದಿನಕ್ಕೆ 2 ಬಾರಿ ಅದರಲ್ಲಿ ಕುಳಿತುಕೊಳ್ಳಬೇಕು. ಇದಕ್ಕೆ ಕಟಿಮಜ್ಜನ ಎಂದು ಕರೆಯುತ್ತಾರೆ.
 ಅವಶ್ಯಕತೆಗೆ ತಕ್ಕಂತೆ ಹಿತವಾದ ವ್ಯಾಯಾಮ, ಪವನ ಮುಕ್ತಾಸನ ಮತ್ತು ವಾಕಿಂಗಗಳ ಅಭ್ಯಾಸ ಉತ್ತಮವಾಗಿರುತ್ತದೆ ಮತ್ತು ಪ್ರಾಣಾಯಾಮ ಸಹ ಮಾಡಬಹುದು.

Also Read: ಮಲಬದ್ಧತೆ : ಆಹಾರ ಕ್ರಮದಲ್ಲಿನ ಅಬದ್ಧತೆ

ಪಾಲನೆ ಮಾಡಬಾರದಾದ ಆಹಾರ ವಿಹಾರ ಪದ್ದತಿಗಳು:

 ಹೊಟ್ಟೆ ಹಸಿಯದೆ ಊಟ ಮಾಡುವುದು.
 ಅತಿ ಹೆಚ್ಚು ಕಫಕರ ಮತ್ತು ಪಚನಕ್ಕೆ ಜಡವಾದ ಆಹಾರ ಸೇವನೆ ಮಾಡುವುದು.
 ಆಹಾರದಲ್ಲಿ ಅಧಿಕ ಮಾಂಸ, ಮೀನು, ಮಸಾಲೆ ಪದಾರ್ಥ ಮತ್ತು ಮೊಸರು, ಎಳ್ಳು ಬೆಲ್ಲ, ಗೆಣಸು ಸೇವನೆ ಮಾಡಬಾರದು.
 ಸರಿಯಾಗಿ ಬೆಯಿಸದ ತಿಂಡಿ ತಿನಿಸುಗಳ ಸೇವನೆ.
 ದಿನವೆಲ್ಲ ಸದಾ ವಿಶ್ರಾಂತಿ ಮತ್ತು ಹಗಲು ನಿದ್ರಿಸುವುದು.
 ಕೆಲವು ವ್ಯಾಯಾಮ ಮತ್ತು ಧೂಮಪಾನ.
 ಮಲಬದ್ಧತೆ : ಪ್ರತಿದಿನ ಮಲವಿಸರ್ಜನೆ ಮಾಡದಿರುವುದು.
 ಮಲ ವಿಸರ್ಜನೆ ಮಾಡದೆ ಆಹಾರ ಸೇವನೆ ಮಾಡುವುದು.
 ಗುಧ ಪ್ರದೇಶವನ್ನು ಮೇಲಿಂದ ಮೇಲೆ ತುರಿಸುವುದು ಬಟ್ಟೆಯಿಂದ ತಿಕ್ಕುವುದು.
 ಶಕ್ತಿಯನ್ನು ಮೀರಿ ಅಧಿಕವಾಗಿ ಭಾರ ಎತ್ತುವುದು.
 ಕಚ್ಚಾ ರಸ್ತೆಯಲ್ಲಿ ದ್ವಿಚಕ್ರ ವಾಹನ, ಸೈಕಲ್, ಮೋಟರ ಸೈಕಲ್ ಬಳಕೆ

watch our video: ಮೂಲವ್ಯಾಧಿ /ಪೈಲ್ಸ್ ಎಂದರೇನು? ಮೂಲವ್ಯಾಧಿಗೆ ಪರಿಹಾರವೇನು?

ಡಾ. ಶ್ರೀಧರ ಬ. ವಡ್ಡರ
ಸಹಾಯಕ ಉಪನ್ಯಾಸಕರು 
ಶಲ್ಯತಂತ್ರ ವಿಭಾಗ , ಎಸ್.ಡಿ.ಎಮ್. ಟ್ರಸ್ಟ್,
ಎ.ಎಮ್.ಸಿ. ತೇರದಾಳ, ಮೊ: 98453 54220


Share this: