Vydyaloka

ಮನೆಯಲ್ಲಿ ಹಿರಿಯರಿದ್ದರೆ ಕೊರೋನ ಸಮಯದಲ್ಲಿ ಹೀಗೆ ಮಾಡಿ

ಮನೆಯಲ್ಲಿ ಹಿರಿಯರಿದ್ದರೆ ಕೊರೋನ ಸಮಯದಲ್ಲಿ ಹೀಗೆ ಮಾಡಿ ಅವರನ್ನು ಉಲ್ಲಾಸಿತರನ್ನಾಗಿ ಇಡಿ. ಕೋವಿಡ್-19  ಮಕ್ಕಳು ಮತ್ತು ಯುವಕರಲ್ಲಿ ಅಷ್ಟೇನೂ ಮಾನಸಿಕವಾಗಿ ಪರಿಣಾಮ ಬೀರದಿದ್ದರೂ ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆಯನ್ನು ಹುಟ್ಟು ಹಾಕಿದೆ.ಯಾವುದೇ ಕಾರಣಕ್ಕೂ ಅವರನ್ನು ಏಕಾಂಗಿಯಾಗಿರಲು ಬಿಡಬಾರದು.ನಿರಂತರವಾಗಿ ಅವರ ಮೇಲೆ ನಿಗಾ ಇದ್ದು, ನಿರ್ಲಕ್ಷ್ಯತೆಗೊಳಗಾಗದಂತೆ ನೋಡಿಕೊಳ್ಳಬೇಕು. 

1. ಅವರೊಟ್ಟಿಗೆ ಊಟ ಮಾಡಿ.

2. ಅವರೊಂದಿಗೆ ಒಟ್ಟಿಗೆ ಒಂದು ಕಾರ್ಯಕ್ರಮವನ್ನು ದೂರದರ್ಶನದಲ್ಲಿ ನೋಡಿ. ( ರಸ ಪ್ರಶ್ನೆ ಕಾರ್ಯಕ್ರಮ)

3. ಅವರೊಂದಿಗೆ ಆಟವನ್ನು ಆಡಿ .(ಪ್ರಬಂಧ, ಕೇರಂ, ಚೌಕ ಬಾರ)

4. ಅವರ ಜೀವನದ ಪ್ರಮುಖ ಸಂದರ್ಭಗಳನ್ನು ನೆನೆಯಲು ಅದರ ಬಗ್ಗೆ ಮಾತನಾಡಿ (ಸಾಧ್ಯವಾದರೆ ಹಳೆಯ ಫೋಟೋಗಳನ್ನು ಒಟ್ಟಿಗೆ ನೋಡಿ).

5. ಅವರಲ್ಲಿ ಯಾವುದಾದರೂ ಹವ್ಯಾಸವಿದ್ದರೆ ಅದನ್ನು ಪ್ರೋತ್ಸಾಹಿಸಿ ಅಥವಾ ಹವ್ಯಾಸವನ್ನು  ಹಚ್ಚಿ. ( ಓದುವುದು, ಬರೆಯುವುದು, ಹಾಡುವುದು, ಪದಬಂಧ ಬಿಡಿಸುವುದು)

6. ಸಾಧ್ಯವಾದಷ್ಟು ದೈಹಿಕವಾಗಿ ಕ್ರಿಯಾಶೀಲರಾಗಿರಲು ಪ್ರೋತ್ಸಾಹಿಸಿ. ಮನೆಯಲ್ಲೇ ಓಡಾಡಲು ಹುರಿದುಂಬಿಸಿ.

7. ಅವರೊಟ್ಟಿಗೆ ಏನನ್ನಾದರೂ ಓದಿ ( ದಿನಪತ್ರಿಕೆ, ವಾರಪತ್ರಿಕೆ).

8. ಮನೆಯಲ್ಲಿ ಮಕ್ಕಳಿದ್ದರೆ ಅವರೊಂದಿಗೆ ಆಟವಾಡಲು ಪ್ರೇರೇಪಿಸಿ.

Also Read: ಕೋವಿಡ್-19 ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆ

 

ಡಾ. ಧರಣೀಶ್ ಪ್ರಸಾದ್
ಡಿಪಾರ್ಟ್ಮೆಂಟ್ ಆಫ್ ಕಮ್ಯೂನಿಟಿ ಮೆಡಿಸಿನ್
ಶ್ರಿ ಸಿದ್ದಾರ್ಥ ಇನ್ಸ್ಟಿಟ್ಯೂಟೆಡ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ ಸೆಂಟರ್
ಟಿ ಬೇಗೂರು, ನೆಲಮಂಗಲ, ಬೆಂಗಳೂರು-562123
ಮೊ:9481604483

Share this: