![]() |
ಎನ್.ವ್ಹಿ ರಮೇಶ್ ಕಾರ್ಯಕ್ರಮ ಸಂಯೋಜಕರು, ಆರೋಗ್ಯ ನಂದನ ಯೋಜನೆ. ಮೊ: 98455-65238 |
ಮಳೆಗಾಲದಲ್ಲಿ ನಿಮ್ಮ ರಕ್ಷಣೆಗಾಗಿ ಆರೋಗ್ಯ ಸೂತ್ರಗಳು:-
1. ಆರೋಗ್ಯಕರ ಆಹಾರ ಸೇವಿಸಿ:- ಈ ಕಾಲದಲ್ಲಿ ಬರುವ ರೋಗಗಳು ಹೆಚ್ಚಾಗಿ ನೀರಿನಿಂದ ಬರುತ್ತವೆ. ಅದಕ್ಕೆ ಕುಡಿಯುವ ನೀರನ್ನು ಕುದಿಸಿ, ಆರಿಸಿ, ಸೋಸಿ ಕುಡಿಯಿರಿ. ರಸ್ತೆಯಲ್ಲಿಯ ಕುಲ್ಫಿ, ಗೋಲಾ, ಪಾನೀಪುರಿ, ಬೇಲ್‍ಪುರಿ, ದಹಿಪುರಿ, ಮಸಾಲೆಪುರಿ, ಗೋಬಿ ಮಂಚೂರಿ, ಮುಂತಾದ ನಿಮ್ಮ ಮೆಚ್ಚಿನ ರಸ್ತೆ ಆಹಾರ ತ್ಯಜಿಸಿ.
2. ನಿಮ್ಮ ಚಟುವಟಿಕೆ ಏನೇ ಇದ್ದರೂ ಸಾಕಷ್ಟು ನೀರು ಕುಡಿಯಿರಿ:- ಹೆಚ್ಚು ನೀರು ಕುಡಿಯಿರಿ. ಮಾನ್ಸೂನಿನಲ್ಲಿ ಬಂದ ಬೆವರು ಬೇಗ ಆವಿಯಾಗಿ ಹೋಗುವುದಿಲ್ಲ. ಹವೆಯ ಆದ್ರ್ರತೆ ಮಟ್ಟ ಹೆಚ್ಚಿದ್ದು, ಇದು ವ್ಯಕ್ತಿಯ ದೇಹದ ಉಷ್ಣಾಂಶ ಹೊರ ಹಾಕುವುದನ್ನು ತಡೆಯುತ್ತದೆ. ಪ್ರತಿ ಬಾರಿ ನೀರಿನ ಬಾಟಲಿ ಜೊತೆಗೆ ಒಯ್ಯಿರಿ. ಕೃತಕ ಇಂಗಾಲದ ಆಮ್ಲ ಇರುವ ಪೇಯಗಳು, ಕೆಫಿನ್ ಇರುವ ಕಾಫಿ ಹಾಗೂ ಟೀ, ಮದ್ಯಪಾನ ಮುಂತಾದ ದ್ರವಗಳಲ್ಲಿ, ಮೂತ್ರವರ್ಧಕಗಳಿವೆ. ಇಂಥ ಪದಾರ್ಥಗಳಲ್ಲಿ ಬಳಸಿರುವ ರಕ್ಷಣಾ ವಸ್ತುಗಳು ಹಾಗೂ ಸಕ್ಕರೆಯಲ್ಲಿ ಇರುವ ಸೂಕ್ಷ್ಮಾಣು ಜೀವಿಗಳ ವಿರುದ್ಧದ ಗುಣಧರ್ಮ ಇರುವ ಗಿಡ ಮೂಲಿಕೆ ಚಹಾ ಬಹಳ ಉತ್ತಮ.
3. ಮಳೆಯಲ್ಲಿ ಓಡಾಡುವುದನ್ನು ಬಿಟ್ಟು ಬಿಡಿ:- ಎಷ್ಟೇ ಸೆಳೆದರೂ, ಮಳೆಯಲ್ಲಿ ನಡೆದರೆ, ವೈರಲ್ ಕಾಯಿಲೆಗಳು, ಲೆಪ್ಟೋಸ್ಪಿರೋಸಿಸ್ ಎಂಬ ನಾಯಿಗಳು ಮತ್ತಿತರ ಸಸ್ತನಿಗಳಿಗೆ ಬರುವ ರೋಗ ಬರಬಹುದು. ಸಕ್ಕರೆ ರೋಗಿಗಳು ಹೆಚ್ಚಿನ ಕಾಳಜಿ ವಹಿಸಿ. ಬರೀ ಕಾಲಿನಿಂದ ನಡೆಯಬೇಡಿ. ಅಗ ನೆಲವು, ಎಲ್ಲ ರೀತಿಯ ಕ್ರಿಮಿಗಳಿಂದ ತುಂಬಿ ತುಳುಕುತ್ತದೆ. ಕಾಲು ಹಾಗೂ ಉಗುರುಗಳಲ್ಲಿ ಶಿಲೀಂದ್ರ ಸೋಂಕು ಆಗಬಹುದು. ನಿಮ್ಮ ಪಾದಗಳು ನೆನೆದರೆ ಅವುಗಳನ್ನು ತಕ್ಷಣ ಒಣಗಿಸಿ. ಒದ್ದೆ ಕಾಲು ಚೀಲ ಹಾಗೂ ಬೂಟುಗಳನ್ನೇ ಹಾಕಿಕೊಂಡಿರಬೇಡಿ. ಪಾದ ಒದ್ದೆಯಾದರೆ ತಕ್ಷಣ ಒಣಗಿಸಿ. ನಿಮ್ಮ ಬಟ್ಟೆಗಳು ಒದ್ದೆಯಾದರೆ, ಹವಾನಿಯಂತ್ರಿತ ವಾತಾವರಣದಲ್ಲಿ ಕೂರಬೇಡಿ. ಹವಾನಿಯಂತ್ರಿತ ಕೋಣೆಯಲ್ಲಿ ಒದ್ದೆ ತಲೆ ಕೂದಲು ಹಾಗೂ ಬಟ್ಟೆಗಳೊಂದಿಗೆ ಹೋಗಬೇಡಿ. ತಕ್ಷಣದ ಹವಾಮಾನ ಬದಲಾವಣೆ ತಪ್ಪಿಸಿ. ಇದರಿಂದ ನೆಗಡಿ ಹಾಗೂ ಕೆಮ್ಮು ಬರುತ್ತದೆ. ನೀವು ಬೆವರಿದ್ದರೆ ತಕ್ಷಣ ಸ್ನಾನ ಮಾಡಬೇಡಿ. 5-10 ನಿಮಿಷ ವಿಶ್ರಾಂತಿ ನಂತರ ಸ್ನಾನ ಮಾಡಿ. ಒದ್ದೆ ಬಟ್ಟೆಗಳನ್ನು ಬೇಗ ಬದಲಿಸಬೇಕು. ಕಚೇರಿಯಲ್ಲೂ ಒಂದು ಜೊತೆ ಬಟ್ಟೆ ಹಾಗೂ ಪಾದರಕ್ಷೆ ಇಟ್ಟಿರುವುದು ಒಳ್ಳೆಯದು.
4. ಮನೆಯ ಒಳಗೆ ತೇವವಿರಬಾರದು:- ಮನೆಯ ಒಳಗೆ ತೇವವಿರುವ ಗೋಡೆಗಳು ಇರಬಾರದು. ತೇವವಿರುವ ಗೋಡೆಗಳು ಶಿಲೀಂದ್ರ ಬೆಳೆಯಲು ಮನೆಯಾಗುತ್ತವೆ. ನೀವು ಅಸ್ತಮಾ ಅಥವಾ ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದರೆ, ಇದು ಹೆಚ್ಚಿನ ತೊಂದರೆ ಕೊಡುತ್ತದೆ.
5. ಮನೆಯಲ್ಲಿ ಸೊಳ್ಳೆ ನಿವಾರಕ ಇಡಿ:- ತುಂಬಿಟ್ಟ ನೀರು ಮಲೇರಿಯಾ ಹರಡುವ ಸೊಳ್ಳೆಗಳು ಹಾಗೂ ಕ್ರಿಮಿಗಳಿಗೆ ಹಬ್ಬವಿದ್ದಂತೆ. ಯಾವಾಗಲೂ ಸೊಳ್ಳೆ ನಿವಾರಕ ಧರಿಸಿ ಅಥವಾ ಜೊತೆಯಲ್ಲೇ ಒಯ್ಯಿರಿ.
6. ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ:- ಸಂಜೆ ಕಛೇರಿಯಿಂದ ಮನೆಗೆ ಬಂದೊಡನೆ ಮತ್ತೊಮ್ಮೆ ಸ್ನಾನ ಮಾಡಿ. ಇದರಿಂದ ಹವಾಮಾನದ ಆದ್ರ್ರತೆಯಿಂದ, ನಿಮ್ಮ ಮೈಯಲ್ಲಿರುವ ಕೊಳೆ ಹಾಗೂ ಬೆವರಿನಿಂದ ಬರಬಹುದಾದ ಸೋಂಕುಗಳಿಂದ, ರಕ್ಷಣೆ ಸಿಗುತ್ತದೆ.
7. ನಿಮ್ಮ ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ:- ಕಣ್ಣಿನ ಸೋಂಕುಗಳಾದ, ಕೆಂಗಣ್ಣು ಬೇನೆ, ಒಣಕಣ್ಣು, ಪಾರದರ್ಶಕದ ಪಟಲದ ಹುಣ್ಣು, ಈ ಕಾಲದಲ್ಲಿ ಸಾಮಾನ್ಯ. ಅಲಕ್ಷಿಸಿದರೆ ಅಂಧತ್ವದತ್ತ ಸಾಗಿಸುತ್ತವೆ. ಕೊಳೆ ಕೈಗಳಿಂದ ಕಣ್ಣುಗಳನ್ನು ಮುಟ್ಟಬೇಡಿ. ಟಿ.ವಿ ಹಾಗೂ ಕಂಪ್ಯೂಟರ್ ಪರದೆ ಮುಂದೆ ಹೆಚ್ಚು ಕಾಲ ಕಳೆಯುವವರು, ಕಣ್ಣು ಕೆಂಪಗಾಗುವುದು, ತುರಿಕೆ ಅಥವಾ ಕೆರಳಿಕೆ ಅನುಭವಿಸಬಹುದು. ಆಗ ತಕ್ಷಣ ಕಣ್ಣಿನ ತಜ್ಞರ ಬಳಿ ಧಾವಿಸಿ.
8. ಸೂಕ್ಷ್ಮಾಣು ಜೀವಿಗಳ ದಾಳಿ:- ಈ ಕಾಲದಲ್ಲಿ ನೀರಿನಲ್ಲಿಯ ಸೂಕ್ಷ್ಮಾಣು ಜೀವಿಗಳು ನಮ್ಮ ಮೇಲೆ ದಾಳಿ ಮಾಡಬಹುದು ಅಥವಾ ನಮ್ಮ ದೇಹದ ಪ್ರತಿರೋಧಕ ಶಕ್ತಿ ಕಡಿಮೆಯಾಗಬಹುದು.
9. ಛತ್ರಿ:- ಹೊರಗೆ ಹೋಗುವಾಗ ಮರೆಯುವುದೇ ಛತ್ರಿ. ಮಳೆಕೋಟು ಜೊತೆಗೆ ಒಯ್ಯಿರಿ.
10. ಮಕ್ಕಳ ಕಾಳಜಿ:- ಮಕ್ಕಳನ್ನು ಮಳೆ ಹಾಗೂ ಮಳೆ ನೀರಿನಲ್ಲಿ ಆಡದಂತೆ ನೋಡಿಕೊಳ್ಳಿ.
11. ನೀರು ಹಾರೀತು ಎಚ್ಚರಿಕೆ!:- ರಸ್ತೆಯಲ್ಲಿ ಮಳೆ ನೀರು ನಿಂತಿರುವ ಜಾಗದ ಬಳಿ ನಡೆಯಬೇಡಿ. ಸಂಚಾರದಲ್ಲಿರುವ ಜನ ಹಾಗೂ ವಾಹನಗಳಿಂದ ಆ ನೀರು ನಿಮ್ಮ ಮೇಲೆ ಎರಚಬಹುದು.
12. ನಿಮ್ಮ ದೇಹವನ್ನು ಬಿಸಿ ಹಾಗೂ ಒಣವಾಗಿರಿಸಿ:- ನೆಗಡಿ ಹಾಗೂ ಕೆಮ್ಮು ಬಾರದಂತೆ ಎಚ್ಚರವಹಿಸಿ.
13. ಕೊಚ್ಚೆ ಗುಂಡಿಯಲ್ಲಿ ಇಳಿಯಬೇಡಿ:- ಅದು ಅನಿವಾರ್ಯವಾದರೆ ತಕ್ಷಣ ನಿಮ್ಮ ಕಾಲುಗಳನ್ನು ಮೃದು ಹಾಗೂ ಒಣ ಟವೆಲ್‍ನಿಂದ ಒರೆಸಿಕೊಳ್ಳಿ. ಕ್ರೀಡಾಪಟುಗಳ ಪಾದಗಳ ಶಿಲೀಂದ್ರ ಸೋಂಕುಗಳಾಗುತ್ತವೆ. ತೇವವು ಮಧುಮೇಹಿಗಳ ಕಾಲು ಬೆರಳುಗಳನ್ನು ಹಾಳು ಮಾಡುತ್ತದೆ.
14. ಹಿರಿಯರು ಹಾಗೂ ಮಕ್ಕಳ ಕಾಳಜಿ ಮಾಡಿ.
15. ಸಡಿಲವಾದ ಹತ್ತಿಯ ಬಟ್ಟೆ ಧರಿಸಿ. ಮನೆಯನ್ನು ಸ್ವಚ್ಛವಾಗಿರಿಸಿ.
16. ನೀಲಗಿರಿ ಎಣ್ಣೆ:- ನೀಲಗಿರಿ ಎಣ್ಣೆಯ ಸುವಾಸನೆ, ಉಸಿರಾಟ ಸುಲಭ ಮಾಡಿ, ಇಡೀ ದೇಹವನ್ನು ಹಗುರಗೊಳಿಸುತ್ತದೆ. ನಿಮ್ಮ ಮೂಗು ಕಟ್ಟಿದಾಗ, ಫ್ಲೂ ಬಂದಾಗ, ಇತರ ರೋಗಗಳಿಂದ ಬಳಲಿದಾಗ, ನೀಲಗಿರಿ ಎಣ್ಣೆ ನಿಮ್ಮ ಉತ್ತಮ ಮಿತ್ರ. ನೀರು ಬೆರಸಿ ಇದನ್ನು ಮೃದು ಮಾಡಿ, ನಂತರ ಒಂದು ಪಾತ್ರೆಯಲ್ಲಿ ಬಿಸಿ ನೀರಲ್ಲಿ ಇದನ್ನು ಹಾಕಿ, ಇಡೀ ಮುಖಕ್ಕೆ ಟವೆಲ್ ಮುಚ್ಚಿ, ಬರುವ ಉಗಿಯನ್ನು ನಿಮ್ಮ ಮೂಗಿನಿಂದ ಎಳೆದುಕೊಳ್ಳಿ. ಎಲ್ಲೇ ಹೋದರೂ, ನಿಮ್ಮ ಕರವಸ್ತ್ರದಲ್ಲಿ ನೀಲಗಿರಿ ತೈಲದ ಕೆಲವು ಹನಿಗಳನ್ನು ಹಾಕಿ, ನಿಮ್ಮ ಜೊತೆಗೇ ಇಟ್ಟುಕೊಳ್ಳಿ. ನಿಮ್ಮ ಕತ್ತು ಹಾಗೂ ತಲೆ ಮೇಲೆ ಇದನ್ನು ಹಚ್ಚಿಕೊಳ್ಳಿ.
17. ಮಳೆಗಾಲದಲ್ಲಿ ಮನೆ ಔಷಧಿ:- ಚಿಕ್ಕಂದಿನಿಂದ ನನ್ನ ತಾಯಿ ಮಾಡುತ್ತಿದ್ದ, ಮುಂದೆ ನಾನು ಕಳೆದ 60 ವರ್ಷಗಳಿಂದ ಮನೆಯಲ್ಲೇ ಬಿಸಿ ಬಿಸಿಯಾಗಿ, ತಾಜಾ ಆಗಿ ಮಾಡಿ ಕುಡಿಯುವ ಕಷಾಯ ಮಾಡುವ ಬಗ್ಗೆ, ನಿಮ್ಮೊಂದಿಗೆ ಈಗ ಹಂಚಿಕೊಳ್ಳುವೆ. ಬೇಕಾದ ಪದಾರ್ಥಗಳು:- ಕೊತ್ತಂಬರಿ ಬೀಜ, ಮೆಣಸು, ಜೀರಿಗೆ, ಹಸಿ ಅಥವಾ ಒಣ ಶುಂಠಿ, ಅರಿಶಿನಪುಡಿ, ಏಲಕ್ಕಿ, ತುಳಸಿ, (ಸಿಕ್ಕರೆ, ಗೌಟಿ ಚಾ ಎಂಬ ಪೊದೆಯಲ್ಲಿ ಬೆಳೆಯುವ ಎಲೆ) ಬೆಲ್ಲ ಹಾಗೂ ಹಾಲು.
ಮಾಡುವ ವಿಧಾನ:- ನೀರನ್ನು ಚೆನ್ನಾಗಿ ಕಾಯಿಸಿ. 1 ಹಿಡಿ ಕೊತ್ತಂಬರಿ ಬೀಜ, 8-10 ಮೆಣಸು ಹಾಕಿ. ಇದನ್ನು ಇಡಿಯಾಗಿ ಅಥವಾ ಸ್ವಲ್ಪ, ಪುಡಿಯಾಗಿ ಸಹ ಹಾಕಬಹುದು. ¼ ಚಮಚ ಅರಿಸಿನಪುಡಿ, ಜಜ್ಜಿದ ಶುಂಠಿ ಚೂರು ಅಥವಾ ಪುಡಿ ಹಾಕಿ. 5-6 ಏಲಕ್ಕಿ ಕುಟ್ಟಿ ಅದರ ಪುಡಿ ಹಾಕಿ. ಜೊತೆಗೆ ಸುವಾಸನೆಗಾಗಿ ಸಿಪ್ಪೆಗಳನ್ನು ಹಾಕಿ. ನಿಮಗೆ ಕುಡಿಯಲು ಹಿಡಿಸುವಷ್ಟು ಬೆಲ್ಲ ಹಾಕಿ. ಕೆಲವರಿಗೆ ಬಹಳ ಘಾಟು ಘಾಟಾಗಿ ಖಾರ ಬೇಕು. ಬೇರೆಯವರಿಗೆ ಇದು ಕುಡಿಯಲು ಬಹಳ ಸ್ಟ್ರಾಂಗ್ ಆಗುತ್ತೆ. ಕೆಲವರಿಗೆ ಅರ್ಧ ಸಿಹಿ ಇಷ್ಟವಾಗುತ್ತೆ. ಎಲ್ಲಾ ಒಟ್ಟಾಗಿ ಹಾಕಿ ಚೆನ್ನಾಗಿ ಕುದಿಸಿ. 15-20 ನಿಮಿಷ ಜೋರಾಗಿ ಕುದಿದ ಮೇಲೆ, 10 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿ ಕೆಳಗಿಡಿ. ಹಾಲನ್ನು ಬಿಸಿ ಮಾಡಿ. ಕುದಿಯುವ ಸಮಯದಲ್ಲಿ ಇನ್ನೊಂದು ಲೋಟಾ ಅಥವಾ ಪಾತ್ರೆಗೆ ಕುದಿಸಿದ ಕಷಾಯವನ್ನು ಬೇಕಾದ ಪ್ರಮಾಣದಲ್ಲಿ ಹಾಕಿ, ನಿಮಗೆ ಬೇಕಾದಷ್ಟು ಹಾಲು ಬೆರಸಿ. ಈ ಕಷಾಯವನ್ನು ಬಿಸಿಬಸಿಯಾಗಿ ಕುಡಿಯಿರಿ. ಉಳಿದ ಕಷಾಯ ಬೇರೆ ಇಟ್ಟು, ಬೇಕಾದಾಗ ಮತ್ತೆ ಬಿಸಿ ಮಾಡಿ, ಕುಡಿಯುವಾಗ ಮಾತ್ರ, ಹಾಲು ಬೆರಸಿ. ಒಟ್ಟೂ ಕಷಾಯಕ್ಕೆ ಹಾಲು ಬೆರಸಬೇಡಿ. ಹಾಲು ಹಾಕಿ ಕುದಿಸಿದರೆ, ಬೆಲ್ಲ ಇರುವುದರಿಂದ, ಇದು ಒಡೆದು ಹೋಗುತ್ತದೆ. ಗಂಟಲು ಕೆರೆತ:- ಗಂಟಲು ಕೆರೆತ ತಡೆದುಕೊಳ್ಳುವುದು ಸುಲಭವಲ್ಲ. ಇದು ಸೂಕ್ಷ್ಮಾಣುಜೀವಿಗಳು ಉಂಟುಮಾಡುವ ಸೋಂಕಿನಿಂದ, ಫ್ಲೂ ತರಹದ ಲಕ್ಷಣಗಳಾದ ಜ್ವರ, ಚಳಿ ಹಾಗೂ ನೋವು ಕಂಡುಬರುತ್ತದೆ. ತಿನ್ನಲು, ನುಂಗಲು ಬಹಳ ಕಷ್ಟವಾದ್ದರಿಂದ, ತಿನ್ನುವುದೇ ಬೇಡ ಅನ್ನಿಸುತ್ತದೆ. ಆದರೆ ಪೌಷ್ಠಿಕ ಆಹಾರವೇ ನಿಮ್ಮ ದೇಹಕ್ಕೆ ಶಕ್ತಿ ಕೊಡುವ ಇಂಧನ. ಇದರಿಂದ ಬೇಗ ಚೇತರಿಸಿಕೊಳ್ಳಲು ಸಾಧ್ಯ. ಈ ಮುಂದೆ ಹೇಳಲಾಗಿರುವ 10 ಆಹಾರಗಳು ಕಾಯಿಲೆಗಳನ್ನು ಹೊಡೆದೋಡಿಸಲು, ಗಂಟಲು ಕೆರೆತದೊಂದಿಗೆ ಹೋರಾಡಲು ಸಹಾಯ ಮಾಡುತ್ತವೆ. ಬಾಳೆಹಣ್ಣು:- ಆಮ್ಲರಹಿತ ಮೃದು ಹಣ್ಣು, ನಿಮ್ಮ ಗಂಟಲಲ್ಲಿ ಮೆತ್ತಗೆ ಇಳಿಯುವುದರಿಂದ ನುಂಗಲು ಸುಲಭ. ಗ್ಲೈಸಿಮಿಕ್ ಇಂಡಕ್ಸ್ ಕಡಿಮೆ ಇರುವ, ಅದರೆ ಜೀವಸತ್ವಗಳಾದ ಬಿ6, ಪೊಟ್ಯಾಷಿಯಂ ಹಾಗೂ ವಿಟಮಿನ್ ಸಿ ಇರುವ, ಬಾಳೆಹಣ್ಣು ಉತ್ತಮ. ಚಿಕನ್ ಸೂಪ್:- ಗಂಟಲು ಕೆರೆತಕ್ಕೆ ಬಹು ಹಿಂದಿನ ಕಾಲದ ಪರಿಹಾರ. ಬಿಸಿ ಬಿಸಿ ಚಿಕನ್ ಸೂಪ್ ಮೃದುವಾದ, ಉರಿಯೂತ ವಿರುದ್ಧದ ಗುಣಗಳನ್ನು ಹೊಂದಿದ್ದು, ಪ್ರತಿ ಜೀವಕಗಳನ್ನು ಹೊಡೆದೋಡಿಸುತ್ತದೆ. ದಟ್ಟಣಿಯಿಂದ ಪಾರು ಮಾಡುತ್ತದೆ. ಲೋಳೆ ಪೊರೆಗಳ ಸಂಪರ್ಕದಲ್ಲಿ ಬರುವ ವೈರಸ್‍ಗಳು, ಹಾಗೂ ಸೂಕ್ಷ್ಮಾಣು ಜೀವಿಗಳ ಕ್ರಿಯೆಯನ್ನು ಇದು ಮಿತಿಗೊಳಿಸುತ್ತದೆ. ಗಜ್ಜರಿ, ಈರುಳ್ಳಿ, ಅಜವಾನ ಗೆಡ್ಡೆಕೋಸು, ಗೆಣಸು ಹಾಗೂ ಬೆಳ್ಳುಳ್ಳಿಗಳನ್ನು ಹೆಚ್ಚು ಬಳಸಿರಿ. ಇವುಗಳ ಪೌಷ್ಠಿಕ ಲಾಭಗಳು ಹಾಗೂ ಗುಣಪಡಿಸುವ ಶಕ್ತಿಗಳನ್ನು, ಬಲ್ಲವರೇ ಬಲ್ಲರು. ನಿಂಬೆ ರಸ ಹಾಗೂ ಜೇನುತುಪ್ಪಗಳ ಮಿಶ್ರಣ:- ಗಂಟಲು ಸರಿಪಡಿಸುವ ಅತ್ಯುತ್ತಮ ವಿಧಾನ. ನಿಂಬೆ ರಸ ಹಾಗೂ ಜೇನುತುಪ್ಪ ಮಿಶ್ರಣ, ಉರಿಯೂತದ ಗಂಟಲಿಗೆ ಒಂದು ಉತ್ತಮ ವಿಧಾನ. ಉರಿಯೂತ ಕಡಿಮೆಯಾಗಿ ಗಂಟಲಿಗೆ ಆರಾಮವಾಗುತ್ತದೆ. ಉಲ್ಬಣವಾಗಿದ್ದ ಗಂಟಲಿಗೆ ತಂಪು ನೀಡಿ ಯವುದೇ ದಟ್ಟಣಿ ತಡೆ ಇದ್ದರೆ, ಅದನ್ನು ತೆಳ್ಳಗಾಗಿಸುತ್ತದೆ. ಸಿಕ್ಕಾಪಟ್ಟೆ ಮಿಶ್ರಣ ಮೊಟ್ಟೆ:- ಸಿಕ್ಕಾಪಟ್ಟೆ ಮಿಶ್ರಣ ಮೊಟ್ಟೆ ಹಾಗೂ ಮೊಟ್ಟೆಯ ಬಿಳಿಯ ಭಾಗದಿಂದ ಮಾಡಿದ ಮೃದು ಸಸಾರಜನಕವನ್ನು ಜೀರ್ಣಿಸಿಕೊಳ್ಳುವುದು ಸುಲಭ. ಇದರ ಬಳಕೆಯಿಂದ ಉರಿಯೂತ ಹಾಗೂ ಗಂಟಲು ಕೆರೆತದ ನೋವು ಕಡಿಮೆಯಾಗುತ್ತದೆ. ಆದರೆ ಇದಕ್ಕೆ, ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವಿಸಿದರೆ, ಅದು ನೋವು ಹೆಚ್ಚಿಸಬಹುದು. ಶುಂಠಿ ಹಾಗೂ ಜೇನುತುಪ್ಪದ ಚಹಾ:- ಕಿರಿಕಿರಿ ಹಾಗೂ ಕೆರೆಯುವ ಗಂಟಲನ್ನು ಶಾಂತಗೊಳಿಸಲು, ಒಂದು ಕಪ್ ಬಿಸಿ ಟೀ. ಶುಂಠಿ ಹಾಗೂ ಜೇನುತುಪ್ಪಗಳಿಂದ ತಯಾರಿಸಿ. ಕುಡಿದಾಗ ಇದು ಗಂಟಲಿಗೆ ಹಿತವಾಗಿ ಸಹಾಯ ಮಾಡುತ್ತದೆ. ಟೀ ಸವಿಯುವಾಗ, ಅದರ ಉಗಿಯನ್ನು ಉಸಿರಲ್ಲಿ ಎಳೆದುಕೊಂಡಾಗ, ಅದು ದಟ್ಟಣಿ ತೆಳುಮಾಡಿ, ಎದೆಯ ಬಿಗಿತ ಹಗುರ ಮಾಡುತ್ತದೆ. ಜೇನುತುಪ್ಪ ಗಂಟಲನ್ನು ಆವರಿಸಿ, ಕೆರಳಿಕೆ ತಡೆಯುತ್ತದೆ. ಕೆಮ್ಮು ನಿಂತು ಸಮಾಧಾನ ದೊರೆಯುತ್ತದೆ. ಓಟ್‍ಮೀಲ್:- ಕರಗುವ ಉತ್ತಮ ನಾರು ಪದಾರ್ಥವಾಗಿರುವ ಓಟ್ಸ್. ಕೆಟ್ಟ ಎಲ್.ಡಿ.ಎಲ್ ಕೊಬ್ಬಿನ ಮಟ್ಟ ಇಳಿಸುತ್ತದೆ. ಸಸಾರಜನಕದ ಅಂಶ ಹೆಚ್ಚಿರುವ ಇದು, ನಿಮ್ಮನ್ನು ಹೆಚ್ಚಿನ ಕಾಲದವರೆಗೆ ತೃಪ್ತರನ್ನಾಗಿರಿಸುತ್ತದೆ. ಇದಕ್ಕೆ ಬಾಳೆಹಣ್ಣು ಅಥವಾ ಜೇನುತುಪ್ಪ ಸೇರಿಸಿ ಸೇವಿಸಿದರೆ ಗಂಟಲನ್ನು ಹಿತಗೊಳಿಸುತ್ತದೆ. ಈ ಆಹಾರದ ಗ್ಲೈಸಿಮಿಕ್ ಇಂಡೆಕ್ಸ್ ಕಡಿಮೆ. ತಿಂಡಿಗಿಂತ ಮೊದಲಿನ ಆದರ್ಶ ಆಹಾರ. ಪ್ರತಿನಿತ್ಯದ ತಾಲೀಮಿಗೆ ಇದು ತೊಂದರೆ ಮಾಡುವುದಿಲ್ಲ. ಋಷಿ ಎಲೆಗಳು:- ಇದೊಂದು ಔಷಧಿಯ ಗಿಡಮೂಲಿಕೆ. ಹಿಂದಿನಿಂದ ಇದು ಗುಣಪಡಿಸುವ ಗುಣಧರ್ಮ ಹೊಂದಿದೆ. ಇದರಲ್ಲಿ ಆಮ್ಲಜನಕ ನಿರ್ವಹಣೆ ಮಾಡುವ ಕಿಣ್ವಗಳಿದ್ದು, ಸಸ್ಯ ರಸಾಯನಿಕಗಳು, ಫೆನಾಲಿಕ್ ಆಮ್ಲ ಇವೆ. ಟೀ ಅಥವಾ ಸೂಪ್‍ಗಳಿಗೆ, ಆಹಾರ ಪದಾರ್ಥಗಳಿಗೆ ಇದನ್ನು ಸೇರಿಸಿದರೆ, ಅತ್ಯುತ್ತಮ ರುಚಿ ಹಾಗೂ ಸುವಾಸನೆ ಬರುತ್ತದೆ. ಇಡಿ ಗೋಧಿ ಪಾಸ್ತಾ:- ಮೃದುವಾದ ಗೋಧಿಹಿಟ್ಟಿನಿಂದ ಮಾಡಿದ ಇಟಾಲಿಯನ್ ತಿಂಡಿ ಪಾಸ್ತಾ, ಬಹಳಷ್ಟು ಪೌಷ್ಠಿಕ ದ್ರವ್ಯಗಳನ್ನು ಹೊಂದಿದ್ದು, ಗಂಟಲು ಕೆರೆತಕ್ಕೆ ಒಳ್ಳೆಯದು. ಬಿಸಿ ಪಾಸ್ತಾವನ್ನು ಕಡಿಮೆ ಕೊಬ್ಬಿನ ಗೊಜ್ಜಿನೊಂದಿಗೆ ತಿಂದರೆ ಹಿತ. ನಾರು, ಕಬ್ಬಿಣ, ಸತುವು, B1, B2, B3 ಹಾಗೂ E ಜೀವಸತ್ವಗಳು ಇದರಲ್ಲಿವೆ. ಕುದಿಸಿದ ಗಜ್ಜರಿಗಳು:- ಕಾಯಿಲೆ ಬಂದಾಗ ಗಜ್ಜರಿಗಳಿಂದ ಉತ್ತಮ ಪರಿಹಾರ ಸಿಗುತ್ತದೆ. ಆದರೆ ಅವುಗಳನ್ನು ಚೆನ್ನಾಗಿ ಕುದಿಸಬೇಕು. ಅಥವಾ ಹಬೆಯಲ್ಲಿ ಹಾಯಿಸಬೇಕು. ಹಸಿ ಗಜ್ಜರಿಗಳು ನಿಮ್ಮ ಗಂಟಲು ಕೆರೆತಕ್ಕೆ ಅಪಾಯಕಾರಿ. ಅವು ನಿಮ್ಮ ನೋವನ್ನು ಹೆಚ್ಚಿಸಬಹುದು. ಪೋಷಕಾಂಶಗಳಿಂದ ತುಂಬಿರುವ ಗಜ್ಜರಿಗಳಲ್ಲಿ, ಜೀವಸತ್ವಗಳಾದ A, C, K, ನಾರು ಹಾಗೂ ಪೊಟ್ಯಾಶಿಯಂ ಇವೆ.