Vydyaloka

ಮಲಬದ್ಧತೆ : ಆಹಾರ ಕ್ರಮದಲ್ಲಿನ ಅಬದ್ಧತೆ

ಮಲಬದ್ಧತೆ ಇತ್ತೀಚಿನ ದೀನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲರನ್ನೂ ಕಾಡುತ್ತಿರುವ ಅಸ್ವಾಭಾವಿಕ ಮತ್ತು ಸರ್ವೇಸಾಮಾನ್ಯ ಕಾಯಿಲೆಯಾಗಿದೆ. ಮಲಬದ್ಧತೆಯ ನಿರ್ಲಕ್ಷ್ಯ ಮೂಲವ್ಯಾಧಿ, ಹೃದಯರೋಗ, ಗ್ಯಾಸ್ಟ್ರಿಕ್ ಮತ್ತು ಗುದದಲ್ಲಿ ಬಿರುಕುದಂತ ಅನೇಕ ಇತರೆ ಧೀರ್ಘಕಾಲದ ರೋಗಗಳಿಗೆ ಆಮಂತ್ರಣ ಕೊಡುತ್ತದೆ. 

‘ಜೀವನ ಶೈಲಿಯ ಬದ್ಧತೆಯು ಆರೋಗ್ಯದ ದಿಕ್ಸುಚಿಯಾಗಿದೆ’. ಯಾಕೆಂದರೆ ಮನುಷ್ಯನ ಅರೋಗ್ಯವು ಅವನ ಜೀವನ ಶೈಲಿಯ ಬದ್ಧತೆ ಮೇಲೆ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ ಅಶಿಸ್ತು ಜೀವನ ಶೈಲಿಯು ಸರ್ವರೋಗಗಳಿಗೆ ಮೂಲ ಕಾರಣವಾಗಿದೆ. ವಿಶೇಷವಾಗಿ ಆಹಾರ ಕ್ರಮದಲ್ಲಿನ ಅಬದ್ಧತೆಯೂ ಮಲಬದ್ಧತೆಯನ್ನು ಉಂಟುಮಾಡುತ್ತದೆ. ವೈದ್ಯಕೀಯ ಭಾಷೆಯಲ್ಲಿ ಮಲಬದ್ಧತೆಯೆಂದರೆ (constipation) ಕರುಳಿನ ಚಟುವಟಿಕೆಯಲ್ಲಿ ಏರುಪೇರಾಗುವುದರಿಂದ ಮಲವಿಸರ್ಜನೆಯು ಸರಾಗವಾಗಿ ಆಗದೆ ಒತ್ತಡ ಮತ್ತು ಕಷ್ಟದಿಂದ ಆಗುವುದು ಎಂದರ್ಥ ಅಥವಾ ವಾರದಲ್ಲಿ 3 ಕ್ಕಿಂತ ಕಡಿಮೆ ಸಲ ಮಲವಿಸರ್ಜನೆ ಆಗುವುದು ಮತ್ತು ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಪ್ರಸ್ತುತ ಒಟ್ಟು ಜನಸಂಖ್ಯೆಯ ಪ್ರತೀಶತ 20-30% ಜನರು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಇತ್ತೀಚಿನ ದೀನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲರನ್ನೂ ಕಾಡುತ್ತಿರುವ ಅಸ್ವಾಭಾವಿಕ ಮತ್ತು ಸರ್ವೇಸಾಮಾನ್ಯ ಕಾಯಿಲೆಯಾಗಿದೆ. ಮಹಿಳೆಯರಲ್ಲಿ ಮಲಬದ್ಧತೆಯ ಸಂಭವ ಪುರುಷರಿಗಿಂತ 2-3 ಪಟ್ಟು ಅಧಿಕವಾಗಿದೆ. ಮಲಬದ್ಧತೆಯ ನಿರ್ಲಕ್ಷ್ಯ ಮೂಲವ್ಯಾಧಿ, ಹೃದಯರೋಗ, ಗ್ಯಾಸ್ಟ್ರಿಕ್,ಮತ್ತು ಗುದದಲ್ಲಿ ಬಿರುಕುದಂತ ಅನೇಕ ಇತರೆ ಧೀರ್ಘಕಾಲದ ರೋಗಗಳಿಗೆ ಆಮಂತ್ರಣ ಕೊಡುತ್ತದೆ. ಮತ್ತು ಇದನ್ನು ಹೋಗಲಾಡಿಸುವ ತಂತ್ರಗಾರಿಕೆಯು ನಮ್ಮ ಆಹಾರ ಮತ್ತು ಜೀವನ ಶೈಲಿಯ ಬದ್ಧತೆಯಲ್ಲಿಯೇ ಅಡಗಿದೆ.

ಮಲಬದ್ಧತೆಯ ಲಕ್ಷಣಗಳು:

ಮಲವಿಸರ್ಜನೆಯ ಬಳಿಕವು ಎಲ್ಲವೂ ಹೊರಹೋಗಲಿಲ್ಲ ಅನ್ನಿಸುವುದು, ಕಷ್ಟದಿಂದ ಮಲವಿಸರ್ಜನೆ ಆಗುವುದು, ಗಟ್ಟಿ ಮತ್ತು ಶುಷ್ಕ ಮಲವಿಸರ್ಜನೆ, ಹೊಟ್ಟೆನೋವು ಮತ್ತು ಹೊಟ್ಟೆ ಉಬ್ಬುವುದು (ಕೇಳಹೊಟ್ಟೆ), ಹೊಟ್ಟೆಯಲ್ಲಿ ಗ್ಯಾಸ್ ಆಗುವುದು, ಕೆಟ್ಟವಾಸನೆಯ ಗ್ಯಾಸ್ ಹೊರಬಿಡುವುದು, ಬಾಯಿಯ ದುರ್ವಾಸನೆ, ತಲೆನೋವು, ದೇಹದಲ್ಲಿ ಆಯಾಸ, ಕೆಲಸದಲ್ಲಿ ನಿರಾಸಕ್ತಿ, ನಿದ್ದೆಯಲ್ಲಿ ತೊಡಕು, ಮಾನಸಿಕ ಚಡಪಡಿಕೆ ಮತ್ತು ಹಸಿವು ಆಗದಿರುವಿಕೆ ಲಕ್ಷಣಗಳು ಕಂಡುಬರುತ್ತವೆ.

Also Read: ಮೂಲವ್ಯಾಧಿ ಅಥವಾ ಪೈಲ್ಸ್ ಇದೆಯೇ? ಭಯಪಡಬೇಡಿ

ಆಹಾರ ಕ್ರಮದಲ್ಲಿನ ಬದ್ಧತೆ:

ಆಹಾರ ಕ್ರಮದಲ್ಲಿನ ಬದ್ಧತೆ ಮತ್ತು ಅಬದ್ದತೆಯೂ ನಾವು ಹೇಗೆ ಮತ್ತು ಏನು ತಿನ್ನಬೇಕು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆಯುರ್ವೇದದಲ್ಲಿ ಹೇಳಿರುವಹಾಗೆ,

1. ಏಕಾಗ್ರ ಮನಸ್ಸಿನಿಂದ ಉತ್ತಮ ಗುಣಯುಕ್ತ ಪಧಾರ್ಥಗಳಿಂದ ತಯಾರಿಸಿದ ಆಹಾರವನ್ನು ಸೇವಿಸುವುದು,

2. ಉತ್ತಮ ವಿಧಿವಿಧಾನಗಳಿಂದ ತಯಾರಿಸಿದ ಆಹಾರವನ್ನು ಅವಶಕ ಪ್ರಮಾಣದಲ್ಲಿ ಸೇವಿಸುವುದು,

3. ಆಹಾರವನ್ನು ಸರಿಯಾಗಿ ಅಗಿದು ತಿನ್ನುವುದು,

4. ಊಟದ ಮಧ್ಯೆ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುವುದು,

5. ಮುಂಚೆ ತಗೆದುಕೊಂಡ ಆಹಾರವು ಪಚನ ಆದಮೇಲೆ ಆಹಾರವನ್ನು ಸೇವಿಸುವುದು,

6. ಊಟದ ನಂತರ ಸ್ವಲ್ಪ ಸಮಯ ನಡಿಯುದನ್ನು ರೂಡಿಸಿಕೊಳ್ಳುವುದು ಮತ್ತು

7. ಎಡ ಪಾರ್ಶ್ವದಲ್ಲಿ ಮಲಗಿಕೊಳ್ಳುವುದು

ಮಲಬದ್ಧತೆಯ ಜೊತೆಗೆ ಆರೋಗ್ಯಕರ ಜೀವನಕ್ಕೆ ತುಂಬಾ ಮುಖ್ಯವಾಗಿದೆ.

ಡಾ! ಮಹ್ಮದ ಯುನುಸ.ಶ.ನಬೂಜಿ
ಸಹ ಪ್ರಾಧ್ಯಪಕರು
ಶ್ರೀ.ಜೆ.ಜಿ.ಸಿ.ಹೆಚ್.ಎಸ್.ಆಯುರ್ವೇದಿಕ್ ಮೆಡಿಕಲ್ ಕಾಲೇಜು ಘಟಪ್ರಭಾ.
ಮೊಬೈಲ್: 9448456450
ಇಮೇಲ್:drmahamadyunus@gmail.com

Share this: