ಮಕ್ಕಳನ್ನು ಕಾಡುವ ಡಯಾಬಿಟಿಸ್ ಈಗ ಆತಂಕ ಸೃಷ್ಟಿಸಿದೆ. ಮಾನಸಿಕ ಒತ್ತಡವೇ ಇದಕ್ಕೆ ಮೂಲ ಕಾರಣ ಎನ್ನಬಹುದು.ಜೀವನಶೈಲಿಯ ಬದಲಾವಣೆಯು ಮಧುಮೇಹ ಹೊಂದಿರುವ ಮಕ್ಕಳಿಗೆ ಬಹಳ ಮುಖ್ಯ.
ಮಾನಸಿಕ ಒತ್ತಡವೇ ಮೂಲ ಕಾರಣ:
ಮಕ್ಕಳಲ್ಲಿ ಚಿಕ್ಕವಯಸ್ಸಿನ ಮೇಲೆ ಉಂಟಾಗುವ ಮಾನಸಿಕ ಒತ್ತಡವೇ ಇದಕ್ಕೆ ಮೂಲ ಕಾರಣ ಎನ್ನಬಹುದು. ಓದುವ ಒತ್ತಡ, ಶಿಕ್ಷಕರ ಭಯ, ಪರೀಕ್ಷೆಯ ಭೀತಿ, ಸ್ಪರ್ಧಾ ಪ್ರಪಂಚದ ಆತಂಕವಿರಬಹುದು ಅಥವಾ ಇತರ ಕಾರಣಗಳಿಂದಾಗಿ ಇಂದಿನ ಮಕ್ಕಳು ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಮಕ್ಕಳಲ್ಲಿ ಮಧುಮೇಹ ಕಾಣಿಸಿಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಈ ಮೇಲಿನ ಕಾರಣಗಳನ್ನು ಹೊರತುಪಡಿಸಿದೆ, ಕುರುಕಲು ತಿಂಡಿ, ಜಂಕ್ ಫುಡ್, ಫಾಸ್ಟ್ ಫುಡ್, ಜೀವನ ಶೈಲಿಯ ಕ್ರಮ ಬದಲಾವಣೆ, ಟೆಲಿವಿಷನ್ ವೀಕ್ಷಣೆ, ದೈಹಿಕ ಚಟುವಟಿಕೆ ಕಡಿಮೆಯಾಗುವಿಕೆ, ಆಹಾರ ಪದ್ಧತಿಯಲ್ಲಿ ಪರಿವರ್ತನೆ, ಅತಿ ಹೆಚ್ಚು ದೇಹಭಾರ, ಸ್ಥೂಲಕಾಯ ಸಹ ಇದಕ್ಕೆ ಕಾರಣವಿರಬಹುದು. ನವಜಾತ ಶಿಶುವಿನ ತೂಕವು 4 ಕೆ.ಜಿ.ಗಿಂತ ಹೆಚ್ಚಾಗಿದ್ದರೆ ಅಂತಹ ಮಕ್ಕಳಲ್ಲಿಯೂ ಮಧುಮೇಹ ಸಂಭವ ಇರುತ್ತದೆ.
ಈಗ ಭಾರತವು ಮಧುಮೇಹ ರೋಗಿಗಳ ರಾಜಧಾನಿ:
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯಕರ ಜೀವನವನ್ನು ನಡೆಸುವ ಮಾರ್ಗಗಳಿವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವುದು, ಇನ್ಸುಲಿನ್ ಹೊಂದಿಸುವುದು, ಸರಿಯಾದ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ಮಾಡುವುದು ಕಡ್ಡಾಯವಾಗಿದೆ. ಟೈಪ್ 1 ಡಯಾಬಿಟಿಸ್ ಚಿಕಿತ್ಸೆಯಲ್ಲಿ ವ್ಯಾಯಾಮ ಪ್ರಮುಖ ಪಾತ್ರ ವಹಿಸುತ್ತದೆ. ಇನ್ಸುಲಿನ್ ಪ್ರಮಾಣವನ್ನು ಸಮತೋಲನಗೊಳಿಸುವುದು ಮತ್ತು ಮನೆಯ ಸುತ್ತಲಿನ ದೈನಂದಿನ ಕಾರ್ಯಗಳು ಸೇರಿದಂತೆ ಸರಳ ದೈಹಿಕ ಚಟುವಟಿಕೆಗಳೊಂದಿಗೆ ಆಹಾರವನ್ನು ಸೇವಿಸುವುದು ಸಹ ಮುಖ್ಯವಾಗಿದೆ. ಅಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟವು ತುಂಬಾ ಕಡಿಮೆಯಾಗುತ್ತಿದೆಯೇ ಎಂದು ಪರೀಕ್ಷಿಸಬೇಕು ಮತ್ತು ಅದನ್ನು ತಪ್ಪಿಸಬೇಕು.
ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : +91-80-4906 9000 Extn:1147/1366 ಮೊ.: 97422 74849
www.vims.ac.in