Vydyaloka

ಮಕ್ಕಳ ನೆಗಡಿ ನಿರ್ಲಕ್ಷಿಸಬೇಡಿ

ಮಕ್ಕಳ ನೆಗಡಿ ನಿರ್ಲಕ್ಷಿಸಬೇಡಿ.ಸಾಮಾನ್ಯ ನೆಗಡಿಯು ಹೆಚ್ಚಾಗಿ ರೈನೋವೈರಸ್‍ನ ಸೋಂಕಿನಿಂದ ಉಂಟಾಗುತ್ತದೆ.

ಸಾಮಾನ್ಯ ನೆಗಡಿಯು ಹೆಚ್ಚಾಗಿ ರೈನೋವೈರಸ್‍ನ ಸೋಂಕಿನಿಂದ ಉಂಟಾಗುತ್ತದೆ. ಇದು ಒಂದು ವಿಧದ ಪಿಕೋರ್ನಾ ವೈರಸ್. ರೈನೋವೈರಸ್‍ನಲ್ಲಿ 100ಕ್ಕೂ ಹೆಚ್ಚು ಪ್ರಬೇಧಗಳಿವೆ. ನೆಗಡಿಯನ್ನು ಉಂಟು ಮಾಡುವ ವೈರಸ್‍ಗಳಲ್ಲಿ ಪ್ಯಾರಾ ಇನ್‍ಫ್ಲುಯೆಂಜಾ ವೈರಸ್, ಉಸಿರಾಟದ ಸಿನ್ಷಿಯಲ್ ವೈರಸ್, ಆಡೆನೋವೈರಸ್, ಎಂಟೆರೋವೈರಸ್ ಮತ್ತು ರಿಯೋ ವೈರಸ್‍ಗಳು ಸೇರಿವೆ. ಅಪರೂಪಕ್ಕೊಮ್ಮೆ ಸಿಟಾಸಿ ಮತ್ತು ಕ್ಯಾಕ್ಸಿಯೆಲ್ಲಾ ಬರ್ನೆಟಿ ಎಂಬ ವೈರಸ್‍ಗಳು ಸಾಮಾನ್ಯ ನೆಗಡಿ ರೋಗಲಕ್ಷಣವನ್ನು ಉಂಟು ಮಾಡಬಹುದು.

ಹೀಗೆ ಸೋಂಕಿಗೆ ಕಾರಣವಾಗುವ ವೈರಸ್‍ಗಳ ಶ್ರೇಣಿಯೇ ಇರುವುದರಿಂದ ಸಾಮಾನ್ಯ ನೆಗಡಿಯನ್ನು ನಿರ್ಲಕ್ಷಿಸದೇ ಸಂಪೂರ್ಣ ರಕ್ಷಣೆ ಪಡೆಯುವ ಅಗತ್ಯವಿದೆ. ನ್ಯಾಸೋಫ್ಯಾರಿಂಕ್ಸ್ ಅಂದರೆ ಮೂಗು ಮತ್ತು ಗಂಟಲು ಸೇರುವ ಜಾಗದ ಸ್ವಯಂ ಮಿತಿಯ ಸೋಂಕನ್ನೇ ಸಾಮಾನ್ಯ ನೆಗಡಿ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಸರಾಸರಿ ಆರೇಳು ಬಾರಿ ಮಕ್ಕಳು ಸಾಮಾನ್ಯ ನೆಗಡಿಯಿಂದ ನರಳುತ್ತಾರೆ. ಬಹುತೇಕ ಮಕ್ಕಳಿಗೆ ನೆಗಡಿ ಪ್ರತಿಬಂಧಕ ಔಷಧಿಗಳನ್ನೇ ಶಿಫಾರಸು ಮಾಡಿದರೂ ಹಲವು ಮಕ್ಕಳು ಕೌಂಟರ್ ಡ್ರಗ್ಸ್‍ಗಳಿಗೆ ಬಲಿಪಶುಗಳಾಗುವ ಸಾಧ್ಯತೆಗಳಿವೆ.

ಸೋಂಕು ಹರಡುವಿಕೆ:

ಈ ಕೆಳಗೆ ತಿಳಿಸಲಾಗಿರುವ ಎರಡು ವಿಧಾನಗಳಲ್ಲಿ ಒಂದರಲ್ಲಿ ಸಾಮಾನ್ಯ ನೆಗಡಿಯ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
1.ಕೆಮ್ಮುವಿಕೆ ಮತ್ತು ಸೀನುವಿಕೆಯಿಂದ ಗಾಳಿಯಲ್ಲಿ ಪಸರಿಸುತ್ತದೆ.
2.ಸೋಂಕು ತಗುಲಿದ ವ್ಯಕ್ತಿಯ ಮೂಗಿನ ಒಸರುವಿಕೆಯನ್ನು ನೇರವಾಗಿ ಅಥವಾ ಮಲಿನಗೊಂಡ ಮೇಲ್ಮೈನಿಂದ ಉಂಟಾದ ಸಂಪರ್ಕದಿಂದ ಸೋಂಕು ತಗಲುತ್ತದೆ.

ರೋಗ ಉತ್ಪತ್ತಿ:

ಶರೀರವನ್ನು ಪ್ರವೇಶಿಸಿದ ವೈರಸ್‍ಗಳು ನ್ಯಾಸೋಫ್ಯಾರಿಂಕ್ಸ್‍ನ (ಮೂಗು ಮತ್ತು ಗಂಟಲು ಸೇರುವ ಸ್ಥಳ) ಹೊರಪದರದ ಕೋಶಗಳಲ್ಲಿ ಅತಿ ಮುಖ್ಯವಾಗಿ ವೃದ್ಧಿಗೊಳ್ಳುತ್ತದೆ. ಆರಂಭಿಕ ಸೋಂಕು ತಗುಲಿದ ನಂತರ 8 ರಿಂದ 12 ಗಂಟೆಗಳ ಒಳಗಾಗಿ ವೈರಸ್‍ನ ಈ ವೃದ್ಧಿಗೊಳ್ಳುವ ಚಕ್ರ ಪ್ರಾರಂಭವಾಗುತ್ತದೆ. ವೈರಸ್‍ಗಳ ಹೊರಪದರದ ಕೋಶಗಳಲ್ಲಿ ಪ್ರವೇಶಿಸಿದ ಕಾರಣದಿಂದಾಗಿ ಉರಿಯೂತ ಉಂಟು ಮಾಡುವ ಮಧ್ಯವರ್ತಿಗಳು ಬಿಡುಗಡೆಗೊಳ್ಳುತ್ತವೆ. ಇದರಿಂದ ಊತ ಕಂಡ ಪ್ರದೇಶದಲ್ಲಿ ನೀರು ತುಂಬಿಕೊಳ್ಳುವಿಕೆ ಮತ್ತು ಮೂಗಿನ ಸೆಡವುಗೊಳ್ಳುವಿಕೆ ಕಂಡುಬರುತ್ತದೆ. ಸಿಂಬಳದ ಕೆರೆತ  ಕೆಮ್ಮಿಗೆ ಕಾರಣವಾಗುತ್ತದೆ. ಕೋಶಗಳಿಗೆ ಉಂಟಾದ ಹಾನಿಯಿಂದಾಗಿ ಗಂಟಲು ಕೆರೆತ ಆರಂಭವಾಗುತ್ತದೆ.

ವೈದ್ಯಕೀಯ ಕುರುಹುಗಳು:

ಸೋಂಕು ತಗುಲಿದ 2 ರಿಂದ 5 ದಿನಗಳೊಳಗೆ ನೆಗಡಿಯ ಕುರುಹುಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಇದು ಸೋಂಕು ತಗುಲಿದ ಕೇವಲ 10 ಗಂಟೆಯೊಳಗೇ ಗೋಚರಿಸಬಹುದು. ಗರಗರ ಎಂದು ಸದ್ದು ಮಾಡುವ ಅಥವಾ ಕೀರಲು ಧ್ವನಿಯ ಗಂಟಲು ಇದರ ಮೊದಲ ಸೂಚನೆ ನೀಡುತ್ತದೆ. ಇದರ ಇತರೆ ಲಕ್ಷಣಗಳೆಂದರೆ ಸುರಿಯುತ್ತಿರುವ ಮೂಗು, ಮೂಗು ಕಟ್ಟುವಿಕೆ, ಸೀನುವುದು ಮತ್ತು ಕೆಮ್ಮುವುದು. ಇದರೊಂದಿಗೆ ಸ್ನಾಯು ಸೆಳೆತ, ಇರಿಸು-ಮುರಿಸು, ತಲೆನೋವು, ನಿಶ್ಯಕ್ತಿ ಅಥವಾ ಹಸಿವಾಗದಿರುವಿಕೆ-ಇವೇ ಮೊದಲಾದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಇತರ ವೈರಸ್ ಸೋಂಕುಗಳಿಗೆ ಹೋಲಿಸಿದಾಗ ಇನ್‍ಫ್ಲುಯೆಂಜಾದಲ್ಲಿ ಜ್ವರ ಹಾಗೂ ವಿಪರೀತ ಸುಸ್ತು ಕಂಡುಬರುವುದು ಸಾಮಾನ್ಯ. ಮಕ್ಕಳು ಇದರಿಂದ ತುಂಬಾ ಕಿರಿಕಿರಿ ಅನುಭವಿಸುತ್ತಾರೆ. ಅಲ್ಲದೇ, ತುಂಬಾ ಆಯಾಸಗೊಳ್ಳುತ್ತಾರೆ.

ನಾವು ಶಂಕಿಸಲೇಬೇಕಾದುದು:

1.ಕಿವಿ ನೋವು, ಜ್ವರ ಅಥವಾ ಕಿರಿಕಿರಿ ಕಂಡುಬಂದಲ್ಲಿ ಕಿವಿಯ ಊರಿಯೂತ ಎನ್ನಬಹುದು.
2. ಏಕಮುಖವಾಗಿ ಮೂಗಿನಿಂದ ಸಿಂಬಳ ಸುರಿಯುತ್ತಿದ್ದರೆ ಹೊರ ವಸ್ತುವಿನಿಂದ ನೆಗಡಿ ಉಂಟಾಗಿದೆ ಎನ್ನಬಹುದು.
3.ಕೆರೆತ ಮತ್ತು ನೀರು ತುಂಬಿದ ಕಣ್ಣುಗಳು, ಮೂಗಿನ ಅಲರ್ಜಿ ಇದ್ದಲ್ಲಿ ಅಲರ್ಜಿಕ್ ರೈನಿಟಿಸ್ ಎಂದರ್ಥ.
4. ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಜನರಿಗೆ ಸೋಂಕು ತಗುಲಿದಾಗ ಅಥವಾ ಒಂದಕ್ಕಿಂತ ಹೆಚ್ಚು ಲೋಳೆಯ ಒಳಪೊರೆ ಸೋಂಕಿಗೆ ಕಾರಣವಾಗಿದ್ದಾಗ ವೈರಸ್ ಸೋಂಕು ಸಾಮಾನ್ಯ.

ನಾವು ಗಮನಿಸಬೇಕಾದುದು:

ಮೂಗು : ಕಟ್ಟುವಿಕೆ, ಸಿಂಬಳ ಸುರಿಯುವುದು (ನೀರು ನೀರಾಗಿರುವುದು/ಕಫ ಹೊರಬರುವುದು)
ಕಣ್ಣು : ಕಟ್ಟಿರುವಿಕೆ, ನೀರು ಸೋರುವುದು.
ಎದೆ : ಟ್ಯಾಕಿಪ್ನಿಯಾದಂಥ ತೊಂದರೆಗಳು, ಒಳಗೆ ಎಳೆದುಕೊಳ್ಳುವಿಕೆ ಅಥವಾ ದಮ್ಮು ಇತ್ಯಾದಿಯನ್ನು ಗಮನಿಸಬೇಕು. ಸಮಸ್ಯೆ ಹೆಚ್ಚಾಗುತ್ತಿದೆಯೇ ಎಂಬುದರ ಕುರಿತು ಗಮನವಿರಿಸಿ ನೋಡಿಕೊಳ್ಳುವುದು ಒಳಿತು. ಅಲರ್ಜಿಕ್ ರೈನಿಟಿಸ್ ಅಥವಾ ಪೆರ್ಟುಸಿಸ್‍ನಂಥ ಸಮಸ್ಯೆ ಕಂಡುಬಂದಲ್ಲಿ ಪ್ರಯೋಗಾಲಯದಲ್ಲಿ ನಡೆಸಲಾಗುವ ಪರೀಕ್ಷೆಗಳ ಅಗತ್ಯ ಇರುವುದಿಲ್ಲ.

ಚಿಕಿತ್ಸೆ:

ನೀಡಲಾಗುವ ಔಷಧಿಗಳು ಕೇವಲ ಪರಿಹಾರ ಕೊಡುವಂತೆ ತೋರುತ್ತದೆಯೇ ಹೊರತು ರೋಗಕ್ಕೆ ಸಮರ್ಥವಾದ ತಡೆಯನ್ನು ಒಡ್ಡಲಾರವು. ಪ್ಯಾರಸಿಟಮಲ್ ಅಥವಾ ಐಬ್ರುಪ್ರೊಫೇನ್‍ನಂತಹ ನೋವು ನಿವಾರಕಗಳು ಆ ಕ್ಷಣ ಕೈ ಗೋಚರಿಸುವ ಕಾಯಿಲೆಯ ಸೂಚನೆಗಳನ್ನು ನಿವಾರಿಸುವಲ್ಲಿ ನೆರವಾಗುತ್ತದೆ. ನಾರ್ಮಲ್ ಸೈಲೆನ್ಸ್ ಡ್ರಾಪ್ಸ್‍ನನ್ನು ಮೂಗಿಗೆ ಹಾಕುವುದರಿಂದ ಕಟ್ಟಿರುವ ಮೂಗು ನಿವಾರಣೆಯಾಗುತ್ತದೆ.

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
Ph:080-28413384/82/83. Mob:9945000037
 www.vims.ac.in

Share this: