ನೃತ್ಯ – ಆರೋಗ್ಯಕ್ಕೆ ಇದೊಂದು ಚಿಕಿತ್ಸಾ ವಿಧಾನ. ಮಾನವನ ಸಂತಸ ಜೀವನಕ್ಕೆ ಆತ ಶಾರೀರಿಕವಾಗಿ ಆರೋಗ್ಯ ಹೊಂದಿರಬೇಕು. ಹಾಗೆಯೇ ಆರೋಗ್ಯ ಕಾಯಲು ನೃತ್ಯ ಒಂದು ಮಾರ್ಗ.
ಮಾನವನ ಸಂತಸ ಜೀವನಕ್ಕೆ ಆತ ಶಾರೀರಿಕವಾಗಿ ಆರೋಗ್ಯ ಹೊಂದಿರಬೇಕು. ಹಾಗೆಯೇ ಆರೋಗ್ಯ ಕಾಯಲು ನೃತ್ಯ ಒಂದು ಮಾರ್ಗ. ಮಾನವ ಜನಾಂಗದ ಅಭಿವೃದ್ಧಿ ಪಥದಲ್ಲಿ ನೃತ್ಯ ಭಾವನೆಗಳನ್ನು ಹಾಗೂ ವಿಚಾರಗಳನ್ನು ವ್ಯಕ್ತಪಡಿಸುವ ಒಂದು ವಿಧಾನವಾಗಿತ್ತು. ಬರವಣಿಗೆ ಬರುವವರೆಗೆ ಸಂವಹನದ ಒಂದು ಮುಖ್ಯ ಭಾಗವಾಗಿತ್ತು.ವಿಶ್ವದಾದ್ಯಂತ ನೃತ್ಯವು ಒಂದು ದೃಶ್ಯ ಕಲೆ. ಲಿಂಗ, ವಯಸ್ಸು ಮೀರಿ ಇದೊಂದು ಹವ್ಯಾಸವಾಗಿದೆ. ಇದು ಸಾಂಸ್ಕತಿಕ, ಭಾವನಾತ್ಮಕ ಹಾಗೂ ದೈಹಿಕ ಅಭಿವ್ಯಕ್ತತೆ. ಇದರಿಂದ ನರ್ತಿಸುವವರು ಹಾಗೂ ಪ್ರೇಕ್ಷಕರು ಇಬ್ಬರೂ ಆನಂದಾನುಭವ ಹೊಂದುತ್ತಾರೆ. ವಿಶ್ವ ಸಂಸ್ಥೆಯ, ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕತಿಕ ಸಂಘದ, ಪಾಲುದಾರ ಸ್ವಯಂ ಸೇವಾ ಸಂಘವಾದ, ಅಂತರ್‍ರಾಷ್ಟ್ರೀಯ ನೃತ್ಯ ಪರಿಷತ್ತು, 1982ರಿಂದ ಪ್ರತೀ ವರ್ಷ ಏಪ್ರಿಲ್ 29ರಂದು ವಿಶ್ವ ನೃತ್ಯ ದಿನಾಚರಣೆ ಆಚರಿಸುತ್ತಿದೆ.
ಆರೋಗ್ಯಕ್ಕೆ ಇದೊಂದು ನೃತ್ಯ ಚಿಕಿತ್ಸಾ ವಿಧಾನ:
ನನಗೆ 10 ವರ್ಷವಿದ್ದಾಗ, ರಮಾವಿಲಾಸ ರಸ್ತೆಯಲ್ಲಿ, ನನ್ನ ತಂಗಿ ವೀಣಾಳನ್ನು ನೃತ್ಯ ಶಿಕ್ಷಣಕ್ಕೆ ಕರೆದೊಯ್ಯತ್ತಿದ್ದಾಗ, ಆಕೆಯ ಗುರುಗಳು ಹೇಳಿ ಕೊಡುತ್ತಿದ್ದ, ಸುಪ್ರಭಾತ, ಅಲರಿಪು, ಪೂಜಾ ನೃತ್ಯಗಳ ನೆನಪು, ನನಗಿನ್ನೂ ಹಸಿರಾಗಿದೆ. ಎಲ್ಲ ಪೂರಕ ಕಲೆಗಳನ್ನೂ ಸೇರಿಸಿಕೊಂಡು, ನೃತ್ಯಕಲೆಯ ಸಮಗ್ರ ಪ್ರದರ್ಶನವಾಗಬೇಕು. ಒಂದು ಶತಮಾನದ ಹಿಂದೆ, ಖ್ಯಾತ ರಶಿಯಾ ಸಂಘಟಕ, ಸೆರ್ಜಿ ಡಯಾಘಿಲಾವ್, ಬ್ಯಾಲೇ ನೃತ್ಯದಲ್ಲಿ ಒಂದು ಕ್ರಾಂತಿ ಮಾಡಿದ. ತನ್ನ ಕಾಲದ ಅತ್ಯಂತ ಪ್ರತಿಭಾನ್ವಿತ ಚಿತ್ರಕಾರರು, ಸಂಗೀರಗಾರರನ್ನು ಆಹ್ವಾನಿಸಿ, ಒಟ್ಟೂ ಪ್ರದರ್ಶನ ಮಾಡಿದ, ಇಂದಿನ ನೃತ್ಯಸಂಯೋಜಕರು ಇತರ ಕಲೆಗಳನ್ನು ಅಲಕ್ಷಿಸುತ್ತಿದ್ದಾರೆ. ಚಿತ್ರಕಲೆ, ಶಿಲ್ಪಕಲೆ, ನಾಟಕ, ಸಂಗೀತ, ಕಾವ್ಯ, ವಾಸ್ತುಶಿಲ್ಪ, ಛಾಯಾಗ್ರಹಣ, ಚಲನಚಿತ್ರ ಬಹುಮಾಧ್ಯಮ, ಬೆಳಕು, ಶಬ್ದ, ಇವೆಲ್ಲವುಗಳನ್ನು ನೃತ್ಯದಲ್ಲಿ ಅಳವಡಿಸಿದರೆ, ಅಧ್ಬುತ ಪ್ರಯೋಗ ಆಗುತ್ತದೆ. ಕಥೆ ಹೇಳುವುದು, ಯುದ್ಧದ ಕಲೆಗಳು, ಇವುಗಳೊಂದಿಗೆ ಮಾನವ ಶಾಸ್ತ್ರಗಳಾದ ಇತಿಹಾಸ, ಸಾಹಿತ್ಯ, ತತ್ವಶಾಸ್ತ್ರ ಹಾಗೂ ಭಾಷಾ ಶಾಸ್ತ್ರಗಳನ್ನು ಸಂಯೋಜಿಸಿದರೆ, ನೃತ್ಯ ಅಮೋಘವಾಗಬಲ್ಲದು. ಹಿಂದೆ ಗ್ರೀಕರು ಇವೆಲ್ಲವನ್ನೂ ಅಳವಡಿಸಿ, ರಂಗಪ್ರವೇಶ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ, ನಮ್ಮ ದೇಶದ ವಿವಿಧ ಕಲೆಗಳು, ಒಂದಕ್ಕೊಂದು ಪೂರಕವಾಗಿದ್ದನ್ನು, ಹಿಂದಿನಿಂದ ಕಂಡಿದ್ದೇವೆ. ಶಾಸ್ತ್ರೀಯ ಸಂಗೀತ, ದೇವರನಾಮ, ವಚನಗಳು, ಲಘು ಜಾನಪದ, ಸಂಗೀತ, ಇವುಗಳೊಂದಿಗೆ ನೃತ್ಯ ಸಾಹಿತ್ಯ ಭಾವ, ರಸ ಒಂದಾಗಿವೆ. ಹಿಂದಿನಿಂದ ರಾಜರ ಆಶ್ರಯದಲ್ಲಿ, ಸಂಸ್ಥಾನಗಳಲ್ಲಿ, ಕಲಾವಿದರ ಗಾಯನ, ವಾದ್ಯವಾದನಗಳಿಗೆ ನೃತ್ಯಗಾಗಾರರು ಹೆಜ್ಜೆ ಹಾಕುತ್ತಿದ್ದಾರೆ. ತ.ರಾ.ಸು ಅವರ ಹಂಸಗೀತೆ ಕಾದಂಬರಿಯಲ್ಲಿ, ಅ.ನ.ಕೃ ಅವರ ಅನೇಕ ಕಾದಂಬರಿಗಳಲ್ಲಿ, ನೃತ್ಯ, ಸಂಗೀತ ಹಾಸು ಹೊಕ್ಕಾಗಿವೆ.
ನೃತ್ಯ ಕಲಾವಿದರಲ್ಲಿ, ಚಲನಚಿತ್ರ ಕಲಾವಿದ- ನೃತ್ಯಗಾರರಾದ, ಗೋಪೀಕೃಷ್ಣ, ಸಂಧ್ಯಾ, ಶ್ರೀಧರ, ದಂಪತಿಗಳು, ಸಂಜಯ, ಕಮಲಾ ಲಕ್ಷಣ, ಪದ್ಮಿನಿ- ರಾಗಿಣಿ ಸೋದರಿಯರು, ವೈಜಯಂತಿಮಾಲಾ, ಕೆಲವು ಹೆಸರುಗಳು. ಮೈಸೂರಿನ ವೆಂಕಟಲಕ್ಷ್ಮಮ್ಮ, ವಸುಂಧರಾ ದೊರೈಸ್ವಾಮಿ, ನಂದಿನಿ ಈಶ್ವರ್, ವಿಜಯಅಶ್ವಥ್, ನೃತ್ಯಗಾತಿ ಹಾಗೂ ಶಿಕ್ಷಕರಾಗಿ, ನೃತ್ಯ ಪರಂಪರೆ ಬೆಳಸಿದವರು. ಕೃಷ್ಣಮೂರ್ತಿ ಪೌರಾಣಿಕ ಅವರ ಸನಾದಿ ಅಪ್ಪಣ್ಣ ಕಾದಂಬರಿ ಹಾಗೂ ಇದನ್ನಾಧರಿಸಿದ ಚಿತ್ರದಲ್ಲಿ, ಡಾ. ರಾಜ್ ಹಾಗೂ ಜಯಪ್ರದಾ ಅಭಿನಯದಲ್ಲಿ, ಶಹನಾಯಿ ಹಾಗೂ ನೃತ್ಯದ, ಕರೆದರೂ ಕೇಳದೇ ಹಾಡು ಮರೆಯಲಾದೀತೇ? ತಮಿಳಿನ ತಿಲ್ಲಾನ ಮೋಹನಾಂಬಾಳ್ ಚಿತ್ರದಲ್ಲಿ, ನಾದಸ್ವರ ಹಾಗೂ ನೃತ್ಯದ ಕಲಾಕಾರ ಜೋಡಿಯಾಗಿ, ಶಿವಾಜಿ ಗಣೇಶನ್- ಪದ್ಮಿನಿ ಅಭಿನಯಿಸಿದ್ದರು. ಬಹು ಹಿಂದೆ ಮೊಘಲ್ ಏ ಆಜಂ ಚಿತ್ರದಲ್ಲಿ, ಮಧುಬಾಲಾ – ಅನಾರ್‍ಕಲಿಯಾಗಿ, ಶೀಶ ಮಹಲಿನಲ್ಲಿ ನರ್ತಿಸಿದ ದೃಶ್ಯ ಅಮೋಘ. ಸಾವಿರಾರು ಪುಟ್ಟ ಕನ್ನಡಿಗಳಲ್ಲಿ ಸ್ವಷ್ಟ ಚಿತ್ರಣವಾಗಲು, ಪರಿಪೂರ್ಣ ದೃಶ್ಯವಾಗಲು, ನಿರ್ದೇಶಕರು, ಛಾಯಾಗ್ರಾಹಕರು, ಆಗ ಮಾಡಿದ ಪ್ರಯತ್ನ ಒಂದು ಸಾಧನೆಯಾಗಿದೆ.
ಏಕಾಂಗಿತನ ಓಡಿಸಲು, ಕಾಯುವಿಕೆ, ನೋವು ನಿವಾರಿಸಲು, ಬೆಳಕು ಕೊಡಲು, ಹೆದರಿಕೆ ಓಡಿಸಲು ಮತ್ತೆ ಮತ್ತೆ ಕುಣಿಯಿರಿ. ಎಲ್ಲ ಕಾಲಕ್ಕೆ ಉಳಿದಿರುವ ಇದೊಂದು ವಿಶ್ವ ಜ್ಞಾನ. ಶ್ರೀಮಂತ ಹಾಗೂ ವಿಭಿನ್ನ ಸಂಪ್ರದಾಯಗಳಲ್ಲಿಯ ಬಹಳಷ್ಟು ಸಾಮ್ಯಗಳನ್ನು ಒಗ್ಗೂಡಿಸಲು ಜನರ ನಡುವಿನ ಒಕ್ಕೂಟ ಇಲ್ಲಿವೆ. ನೃತ್ಯ ಜೀವನದ ಕಲೆ, ಕವಿತೆ, ಭರವಸೆ. ಕುಣಿತದ ಮೊದಲ ಅಭಿವ್ಯಕ್ತಿ ಪ್ರಾರ್ಥನೆ. ಪ್ರಾರ್ಥನೆಯ ಚಲನೆ ಹಾಗೂ ಭಂಗಿಗಳು ಆಧ್ಯಾತ್ಮಿಕ ನೃತ್ಯವಾದವು. ಆಧುನಿಕ ಕಾಲ ಹಾಗೂ ವಿದೇಶಿಯರ ಆಗಮನದಿಂದ ಶಾಸ್ತ್ರೀಯ ಬ್ಯಾಲೆ, ಸಮಕಾಲೀನ ನೃತ್ಯ ಪದ್ಧತಿಗಳು ಬಂದವು. ಸಾಧಾರಣ ಗ್ರಾಮೀಣ ಆಚರಣೆಗಳಿಂದ ವೃತ್ತಿಪರತೆ ಹಾಗೂ ರಂಗಭೂಮಿಗೆ ನೃತ್ಯ ಬಂದವು. ನೃತ್ಯ ಕೇವಲ ಭಾವನೆಗಳ ಅಭಿವ್ಯಕ್ತತೆಯಲ್ಲ, ಆಚರಣೆಯಲ್ಲ, ಮನರಂಜನೆಯಲ್ಲ. ನಾವೆಲ್ಲ ಒಂದು ಎಂದು, ಮಾತಿಗಿಂತ ನಿರರ್ಗಳವಾಗಿ ವ್ಯಕ್ತಪಡಿಸುವ ಹೇಳಿಕೆಯೇ ನೃತ್ಯ.
ಸಹನೆ, ತಾಳ್ಮೆ ಹಾಗೂ ಪರಸ್ಪರ ಅರಿಯಲು ಸಮಕಾಲೀನ ನೃತ್ಯ ವಿನಿಮಯ, ಅನುವು ಮಾಡಿಕೊಡಲಿದೆ. ನೃತ್ಯದ ಎಲ್ಲ ವಸ್ತುಗಳು ಸೇರಿ ನಿರೂಪಣೆ ಸೃಷ್ಟಿಯಾಗುತ್ತದೆ. ನೃತ್ಯ ನಿರೂಪಣೆ, ಗಾತ್ರ, ಸೊಬಗು, ಸ್ಫೋಟಕ ಶಕ್ತಿಯ ಬಳಕೆ, ಚಲನೆಯ ಸಂಶೋಧನೆ, ಸಂಘಟನೆ ಹಾಗೂ ರಚನೆ, ನಮ್ಮತ್ತ ನಾವೇ ನಗುವುದು, ಕ್ರಿಯಾಶೀಲತೆ ಹೆಚ್ಚು ಹಾಗೂ ಕಡಿಮೆ ಹೇಳಿಕೆ, ಖುಷಿ ಹಾಗೂ ಪ್ರಯತ್ನ, ಪ್ರತಿ ನೃತ್ಯಕಾರನ ಹುಚ್ಚುತನ ಭಾವೋದ್ವೇಗ, ಕಲ್ಪನಾಶಕ್ತಿ ಎಲ್ಲ ಸೇರಿ, ನೃತ್ಯ ಸ್ಪಷ್ಟವಾದ ಒಂದು ರೂಪ ಪಡೆಯುತ್ತದೆ. ನರ್ತಿಸುವವರು ಚರ್ಮ ದಾಟ ಇನ್ನೊಬ್ಬರನ್ನು ಸ್ಪರ್ಶಿಸುತ್ತದೆ. ನೃತ್ಯ ಅವರ ತೂಕ ಹಾಗೂ ವಾಸನೆ ಮುಟ್ಟುತ್ತದೆ. ಸ್ಪರ್ಶಜ್ಞಾನದ ಪರದೆ ಸೋಲಿಸಿ, ದೇಹಗಳು ಹಾಗೂ ದೇಶಗಳ ನಡುವಿನ ಸೀಮೆ ಅಳಿಸುತ್ತದೆ. .
ಎನ್.ವ್ಹಿ ರಮೇಶ್, ಮೈಸೂರು
ಮೊ: 9845565238