Vydyaloka

ಕರುಳಿನ ಅಲ್ಸರ್ ಗೆ ಮನೆಮದ್ದು

ಕರುಳಿನ ಅಲ್ಸರ್ ಗೆ  ಮುಖ್ಯ ಕಾರಣ ಹೊಟ್ಟೆಯಲ್ಲಿನ ಆಮ್ಲಿಯತೆ. ನೀರು, ಹಣ್ಣಿನ ಜ್ಯೂಸುಗಳನ್ನು, ತರಕಾರಿಯ ಜ್ಯೂಸುಗಳು, ಏಳನೀರು, ಮಜ್ಜಿಗೆ ಇತ್ಯಾದಿ ದ್ರವ ರೂಪದ ಆಹಾರವನ್ನು ಸೇವಿಸಬೇಕು.

ನಾವು ಹೆಚ್ಚು ಕಠೋರವಾದಂತಹ [ಕರುಳಿಗೆ ಕಠೋರವಾದಂತಹ] ಆಹಾರವನ್ನು ತೆಗೆದುಕೊಳ್ಳುವುದರಿಂದ ಅದು ಅಲ್ಲಿ ಇನ್ನಷ್ಟು ಗಾಯವಾಗುತ್ತದೆ, ಇದರಿಂದಾಗಿ ಅಲ್ಸರ್ (Duodenal ulcer) ದೊಡ್ಡದಾಗುತ್ತದೆ. ಹಾಗಾಗಿ ದ್ರವ ರೂಪದ ಆಹಾರವನ್ನು ತೆಗೆದುಕೊಳ್ಳುವುದು ಉತ್ತಮ. ಇದು ಕರುಳಿನಲ್ಲಿ ಸುಲಭವಾಗಿ ಜಾರಿ ಹೋಗುತ್ತದೆ. ಹಾಗಾಗಿ ನೀರು, ಹಣ್ಣಿನ ಜ್ಯೂಸುಗಳನ್ನು, ತರಕಾರಿಯ ಜ್ಯೂಸುಗಳು, ಏಳನೀರು, ಮಜ್ಜಿಗೆ ಇತ್ಯಾದಿ ದ್ರವ ರೂಪದ ಆಹಾರವನ್ನು ಸೇವಿಸಬೇಕು. ಇದರಿಂದಾಗಿ ಕರುಳಿಗೆ ವಿಶ್ರಾಂತಿ ದೊರೆಯುತ್ತದೆ. ಅಲ್ಸರ್ ಗುಣವಾಗಲು ಸಹಾಯವಾಗುತ್ತದೆ.

 ಅಲ್ಸರ್ ಗೆ ಮುಖ್ಯ ಕಾರಣ ಹೊಟ್ಟೆಯಲ್ಲಿನ ಆಮ್ಲಿಯತೆ. ಈ ಆಮ್ಲೀಯತೆಯನ್ನು ಕಡಿಮೆ ಮಾಡಲು ಹೆಚ್ಚು ನೀರನ್ನು ಕುಡಿಯಬೇಕು
 ಬೂದಗುಂಬಳ ಜ್ಯೂಸ, ದಾಳಿಂಬೆ ಜ್ಯೂಸ ಸಹ ಸಹಾಯಕಾರಿಯಾಗಿದೆ.
 ಹೊಟ್ಟೆಗೆ ಕೋಲ್ಡ ಅಬ್ಡೊಮಿನಲ್ ಪ್ಯಾಕ್ (Abdomenal Pack)  ಮಣ್ಣನ್ನು ಹಚ್ಚುವುದು ಉತ್ತಮ.
 ನಿಸರ್ಗ ಚಿಕಿತ್ಸೆಗಳಾದ ಪೂರ್ಣ ತೊಟ್ಟಿಸ್ನಾನ, ಕಟಿಸ್ನಾನ ಪರಿಣಾಮಕಾರಿ.
 ಅಲ್ಸರ್ ಗಳು ಗುಣವಾಗಲು ಅದಕ್ಕೆ ವಿಶ್ರಾಂತಿಯ ಅಗತ್ಯ ಇರುತ್ತದೆ. ಆದ್ದರಿಂದ ದ್ರವ ಆಹಾರ ಬಳ್ಳೆಯದು.

ಡಾ. ಶ್ರೀಧರ ಬ. ವಡ್ಡರ
ಸಹಾಯಕ ಉಪನ್ಯಾಸಕರು 
ಶಲ್ಯತಂತ್ರ ವಿಭಾಗ , ಎಸ್.ಡಿ.ಎಮ್. ಟ್ರಸ್ಟ್,
ಎ.ಎಮ್.ಸಿ. ತೇರದಾಳ, ಮೊ: 98453 54220

Share this: