Vydyaloka

ಇಮ್ಯುನಿಟಿ ಬೂಸ್ಟರ್ ಆಹಾರಗಳು ಯಾವುವು?

ಇಮ್ಯುನಿಟಿ ಬೂಸ್ಟರ್ ಆಹಾರಗಳು ಯಾವುವು? ಆರೋಗ್ಯಕರವಾಗಿರಲು ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವುದರ ಮೇಲೆ ಲೇಖನ ಬೆಳಕು ಚೆಲ್ಲುತ್ತದೆ. ಮಕ್ಕಳು ಮತ್ತು ವಯಸ್ಕರಿಗೆ ಸಮಾನವಾದ ಕೆಲವು ಅತ್ಯುತ್ತಮ ರೋಗನಿರೋಧಕ ಆಹಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ.

ಸೂಕ್ಷ್ಮಜೀವಿಗಳ ಹಾನಿಕಾರಕ ಪರಿಣಾಮಗಳನ್ನು ತಡೆದುಕೊಳ್ಳುವ ನಮ್ಮ ದೇಹದ ಸಾಮಥ್ರ್ಯವನ್ನೇ ರೋಗನಿರೋಧಕ ಶಕ್ತಿ ಅಥವಾ ಇಮ್ಯೂನಿಟಿ ಪವರ್ ಎನ್ನುತ್ತಾರೆ. ಸಹಜವಾದ ರೋಗನಿರೋಧಕ ಶಕ್ತಿ ಎಂದರೆ ದೇಹದ ಮೇಲಿನ ಸೂಕ್ಷ್ಮ ಜೀವಿಗಳ ದಾಳಿಯನ್ನು ತಡೆದುಕೊಳ್ಳುವ ದೇಹದ ನೈಸರ್ಗಿಕ ಸಾಮಥ್ರ್ಯ. ದೇಹದ ಮೇಲೆ ರೋಗಾಣುಗಳ ದಾಳಿಯನ್ನು ತಡೆಯಲು ದೃಢವಾದ ರೋಗನಿರೋಧಕ ಶಕ್ತಿಯನ್ನು ಸಹ ನಾವುಗಳು ಕಾಪಾಡಿಕೊಳ್ಳಬೇಕು. ಆಹಾರಗಳು ಅಂತಹ ನೈಸರ್ಗಿಕ ರೋಗನಿರೋಧಕ ವರ್ಧಕಗಳಾಗಿವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಮೃದ್ಧವಾದ ಆಹಾರವನ್ನು ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಆರೋಗ್ಯವಾಗಿರಲು ನಮಗೆ ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳು

  1. ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಜನರ ನೆಗಡಿ ಮತ್ತು ಜ್ವರವನ್ನು ಗುಣಪಡಿಸಲು ಇದು ಸಹಕಾರಿ. ವಿಟಮಿನ್ ಸಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ದ್ರಾಕ್ಷಿಹಣ್ಣು, ಕಿತ್ತಳೆ, ಮೂಸಂಬಿ ಮತ್ತು ನಿಂಬೆ ಈ ಪ್ರಕಾರವಾಗಿ ನಿಯಮಿತವಾಗಿ ಸೇವಿಸುವ ಕೆಲವು ಹಣ್ಣುಗಳಾಗಿವೆ. ನಮ್ಮ ದೇಹವು ಈ ವಿಟಮಿನ್‍ಗಳನ್ನು ನೈಸರ್ಗಿಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ, ವೈದ್ಯರು ಪ್ರತಿದಿನ ಯಾವುದೇ ರೂಪದಲ್ಲಿ ಈ ರೀತಿಯ ವಿಟಮಿನ್‍ಗಳ ನಿಯಮಿತ ಸೇವನೆಗೆ ಸಲಹೆ ನೀಡುತ್ತಾರೆ.
  2. ಪಪ್ಪಾಯಿಯಲ್ಲಿ ವಿಟಮಿನ್ ಸಿ ಮತ್ತು ಜೀರ್ಣಕಾರಿ ಕಿಣ್ವಗಳು ಸಮೃದ್ಧವಾಗಿವೆ. ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಕರುಳು ಪ್ರಮುಖವಾಗಿದೆ. ಆದ್ದರಿಂದ, ಪಪ್ಪಾಯವನ್ನು ಸೇವಿಸುವುದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇನ್ನೊಂದು ಮಾರ್ಗವಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ತರಕಾರಿಗಳು

  1. ಬ್ರೊಕೊಲಿಯಲ್ಲಿ ವಿಟಮಿನ್ , ಸಿ, ಮತ್ತು ಕೆ, ಮತ್ತು ಆಂಟಿ,ಆಕ್ಸಿಡೆಂಟ್ಗಳಿವೆ (ಉತ್ಕರ್ಷಣ ನಿರೋಧಕಗಳಾಗಿವೆ). ಇದರಲ್ಲಿ ಫೈಬರ್ ಸಮೃದ್ಧವಾಗಿರುವ ಕಾರಣ ಜೀಣಾರ್ಂಗ ವ್ಯವಸ್ಥೆಗೆ ಸಹ ಪ್ರಯೋಜನಕಾರಿಯಾಗಿದೆ. ಈ ಹಸಿರು ತರಕಾರಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿ.
  2. ನುಗ್ಗೆಕಾಯಿ: ಮೊರಿಂಗಾ ಅಥವಾ ಸಾಮಾನ್ಯವಾಗಿ ಡ್ರಮ್ ಸ್ಟಿಕ್ ಎಂದು ಕರೆಯಲ್ಪಡುವ ಇದು ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದ ಅದ್ಭುತ ತರಕಾರಿ. ಅದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಸಕ್ರಿಯ ಮತ್ತು ಆರೋಗ್ಯಕರವಾಗಿರಿಸುತ್ತದೆ. ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನುಗ್ಗೆಯಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದು. ನುಗ್ಗೆಕಾಯಿಯ ಬೀಜಗಳು, ಎಲೆಗಳು, ಅಪಕ್ವವಾದ ಬೀಜಕೋಶಗಳು, ಬೇರುಗಳು ಮತ್ತು ತೊಗಟೆ (ಪುಡಿ ರೂಪ) ಗಳನ್ನು ಬಳಸಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಸಾಲೆಗಳು

  1. ಮನೆಗಳಲ್ಲಿ ಬೆಳ್ಳುಳ್ಳಿ ಸಾಮಾನ್ಯವಾಗಿ ಕಂಡುಬರುವ ಮಸಾಲೆ. ನೆಗಡಿಯನ್ನು ಗುಣಪಡಿಸಲು ಇದು ಅತ್ಯಂತ ಜನಪ್ರಿಯ ಮನೆ ಮದ್ದುಗಳಲ್ಲಿ ಒಂದಾಗಿದೆ. ಇದು ವಿಶಿಷ್ಟವಾದ ಸುವಾಸನೆ ಮತ್ತು ಪರಿಮಳವನ್ನು ನೀಡುತ್ತದೆ, ಇದು ಆಹಾರವನ್ನು ರುಚಿಕರವಾಗಿಸುತ್ತದೆ.
  2. ಅರಿಶಿನವು ಅದ್ಭುತವಾದ ಮಸಾಲೆ, ಇದು ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ.. ಅರಿಶಿನಶುಂಠಿಯ ಚಹಾ ಜ್ವರವನ್ನು ಗುಣಪಡಿಸುವ ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ. ಅರಿಶಿನದ ಮುಖ್ಯ ಅಂಶ – ಕಕ್ರ್ಯುಮಿನ್, ದೇಹದ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಬಲವರ್ಧನೆಗೆ ಸಹಾಯವಾಗುತ್ತದೆ. ನೀವು ಅರಿಶಿನವನ್ನು ಬೆಚ್ಚಗಿನ ಹಾಲಿನೊಂದಿಗೆ ಸೇವಿಸಬಹುದು, ಅದನ್ನು ನೀರಿನಿಂದ ಕುದಿಸಬಹುದು, ಅಥವಾ ನೀವು ಮೇಲೋಗರಗಳನ್ನು ತಯಾರಿಸುವಾಗ ಸಣ್ಣ ಪ್ರಮಾಣದಲ್ಲಿ ಬಳಸಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇನ್ನಿತರ ಆಹಾರಗಳು

ಪ್ರಾಚೀನ ಆರೋಗ್ಯ ಗ್ರಂಥವು ಸದೃಢವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಮುಖವಾದ ಅಂಶಗಳನ್ನು ಶಿಫಾರಸು ಮಾಡುತ್ತದೆ. ಅಂತಹ 3 ಸಂಪೂರ್ಣ-ಕೆಲವು ಆಹಾರ ಅಥವಾ ಉಲ್ಲೇಖಿತವಾದ ಅಂಶಗಳು –

  1. ತುಪ್ಪ ಪ್ರತಿದಿನ ಸಾಕಷ್ಟು ಪ್ರಮಾಣದ ತುಪ್ಪವನ್ನು ಸೇವಿಸುವುದು ಸೂಕ್ಷ್ಮಜೀವಿಗಳಿಂದ ಸುರಕ್ಷಿತವಾಗಿರಿಸುವುದಲ್ಲದೆ ನಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ತುಪ್ಪ ಒಮೆಗಾ -3, ಕೊಬ್ಬು ಕರಗಬಲ್ಲ ಜೀವಸತ್ವಗಳು ಎ, ಡಿ, ಇ ಮತ್ತು ಕೆ’ಗಳ ಸಮೃದ್ಧ ಮೂಲವಾಗಿದೆ. ಹೀಗಾಗಿ ಇದು ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಅತ್ಯಗತ್ಯ ಅಂಶವಾಗಿದೆ.
  2. ತುಳಸಿ– ಆಯುರ್ವೇದ ಗ್ರಂಥಗಳಲ್ಲಿ ಸಮಗ್ರ ಉಲ್ಲೇಖವನ್ನು ಕಂಡುಕೊಳ್ಳುವ ಮತ್ತೊಂದು ಅಂಶವೆಂದರೆ ತುಳಸಿ. ಇದು ವಿಟಮಿನ್ ಸಿ ಮತ್ತು ಸತುವುಗಳ ಪ್ರಾಥಮಿಕ ಮೂಲಗಳಲ್ಲಿ ಒಂದಾಗಿದೆ. ಬ್ಯಾಕ್ಟೀರಿಯಾ ವಿರೋಧಿ, ಆಂಟಿ-ವೈರಲ್ ಮತ್ತು ಶಿಲೀಂಧ್ರ-ವಿರೋಧಿ ಗುಣಲಕ್ಷಣಗಳೊಂದಿಗೆ, ಇದು ನೈಸರ್ಗಿಕ ರೋಗ ನಿರೋಧಕ ವರ್ಧಕಗಳಲ್ಲಿ ಒಂದಾಗಿದೆ. ತುಳಸಿ ಎಲೆಗಳನ್ನು ಹಾಗೆಯೇ ಸೇವಿಸಬಹುದು ಅಥವಾ ಶುಂಠಿ, ತುಳಸಿ ಮತ್ತು ಅರಿಶಿನ ಹಾಕಿ ಚಹಾವನ್ನು ಕೂಡಾ ತಯಾರಿಸಿ ಸೇವಿಸಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರಗಳನ್ನಷ್ಟೇ ಇಲ್ಲಿ ಹೇಳಲಾಗಿದೆ. ಇದರಲ್ಲಿ ಉಲ್ಲೇಖಿಸಬೇಕಾದ ಇನ್ನೂ ಕೆಲವು ಆಹಾರಗಳು – ಮೊಸರು, ಬಾದಾಮಿ, ಮೆಣಸು, ತೆಂಗಿನ ಎಣ್ಣೆ, ಶುಂಠಿ, ರಾತ್ರಿಯಿಡೀ ನೆನೆಸಿದ ಅಕ್ಕಿ, ಕೋಳಿ (ಮಾಂಸಾಹಾರಿಗಳಿಗೆ), ಅಣಬೆಗಳು ಇತ್ಯಾದಿಗಳು.ವೈದೇಹಿ ಆಯುರ್ವೇದ ಸೆಂಟರ್ಗೆ ಭೇಟಿ ನೀಡುವ ಮೂಲಕ ವಿಸ್ತ್ರತವಾದ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ತಜ್ಞ ವೈದ್ಯರುಗಳಿಂದ ಪಡೆದುಕೊಳ್ಳಬಹುದು. ಆ ಮೂಲಕ ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ರೀತಿ ಬದುಕಲು ಸಹಾಯವಾಗುತ್ತದೆ.

ಡಾ ನಿಬಿನ್ ಜಾನ್
ವೈದೇಹಿ ಆಯುರ್ವೇದ ಸೆಂಟರ್(ವಾಯು) ವೈದೇಹಿ
ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಸಂಶೋಧನಾ ಕೇಂದ್ರ
82 ಇಪಿಐಪಿ ಪ್ರದೇಶ, ವೈಟ್‌ಫೀಲ್ಡ್ ಬೆಂಗಳೂರು – 560066.
ಫೋನ್: 080-4906 9000 Extn: 1147/1366
ಮೊ: 98458 54015
ಇಮೇಲ್:nibin_vayu01@vimsmail.com
http://vydehiayurveda.com/

 

Share this: