Vydyaloka

ಹೈಪರ್‌ಟೆನ್ಷನ್‌

ಹೃದಯ ಮಾಂಸಖಂಡಗಳ ಕುಗ್ಗುವುದರಿಂದ ಅಧಿಕ ರಕ್ತದೊತ್ತಡ ಕಂಡುಬರುತ್ತದೆ. ರಕ್ತ ನಾಳಗಳ ಪ್ರತಿರೋಧದಿಂದಲೂ ಹೈಪರ್‌ಟೆನ್ಷನ್‌ ಉಂಟಾಗುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ವೇಳೆ ಹೃದಯದ ಸಂಕೋಚನವು ಆರ್ಟರಿಗಳ ವಿಸ್ತರಣೆಗೆ ಒತ್ತಡ ಹಾಕುತ್ತದೆ. ಹೃದಯವು ಸಂಕುಚಿತಗೊಂಡಾಗ ಒತ್ತಡ ಹೆಚ್ಚಾಗುತ್ತದೆ ಹಾಗೂ ಅದು ವಿಶ್ರಾಂತಿಯಲ್ಲಿದ್ದಾಗ ಒತ್ತಡವು ಕಡಿಮೆಯಾಗುತ್ತದೆ.

ಅಧಿಕ ರಕ್ತದೊತ್ತಡ ಅಥವಾ ಹೈಪರ್‌ಟೆನ್ಷನ್‌ ಒಂದು ವಿಭಿನ್ನ ರೋಗ. ಅಧಿಕ ಬಿಪಿ ಹೊಂದಿರುವ ಬಹುತೇಕ ಮಂದಿಗೆ ಹಲವಾರು ವರ್ಷಗಳ ತನಕ ಯಾವುದೇ ರೋಗ ಲಕ್ಷಣಗಳು ಅಥವಾ ಚಿಹ್ನೆಗಳು ಕಂಡುಬರುವುದಿಲ್ಲ. ಆದರೆ ಇದು ಕಾಲಕ್ರಮೇಣ ಹೃದಯ, ಮೆದುಳು ಮತ್ತು ಮೂತ್ರಪಿಂಡಗಳಂಥ ಬಹುಮುಖ್ಯ ಅಂಗಗಳಿಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಆದಷ್ಟೂ ಮುಂಚಿತವಾಗಿ ಹೈಪರ್‍ಟೆನ್ಷನ್‍ನನ್ನು ಗುರುತಿಸಿ ಚಿಕಿತ್ಸೆ ನೀಡುವುದು ತುಂಬಾ ಅಗತ್ಯವಾಗಿರುತ್ತದೆ. ಆ ಮೂಲಕ ಇಂಥ ಅಮೂಲ್ಯ ಅಂಗಗಳು ಹಾನಿಗೀಡಾಗುವುದನ್ನು ತಪ್ಪಿಸಬಹುದು. ಈಗಾಗಲೇ ಹೇಳಿರುವಂತೆ ರೋಗಿಗಳಿಗೆ ಅಧಿಕ ರಕ್ತದೊತ್ತಡದ ಯಾವುದೇ ನಿರ್ದಿಷ್ಟ ಚಿಹ್ನೆ ಮತ್ತು ಲಕ್ಷಣಗಳು ಗೋಚರಿಸದೇ ಇರುವುದರಿಂದ, ಯಾವುದೇ ಸಣ್ಣ ಅನಾರೋಗ್ಯಕ್ಕಾಗಿ ವೈದ್ಯರ ಬಳಿ ಹೋದಾಗ ಹೈಪರ್‌ಟೆನ್ಷನ್‌ ಪತ್ತೆಯಾಗುತ್ತದೆ.

ರಕ್ತದೊತ್ತಡ ಎಂದರೇನು ?

ರಕ್ತದೊತ್ತಡ ಎಂದರೆ ರಕ್ತನಾಳ ಗೋಡೆಗಳಿಗೆ ವಿರುದ್ದವಾಗಿ ರಕ್ತ ಪ್ರವಹಿಸುವಿಕೆ ಎಂದರ್ಥ. ಅಪಧಮನಿಗಳು ರಕ್ತನಾಳಗಳಾಗಿದ್ದು ಹೃದಯದಿಂದ ದೇಹಕ್ಕೆ ರಕ್ತವನ್ನು ಪೂರೈಸುತ್ತವೆ. ಇಡೀ ದಿನ ರಕ್ತದೊತ್ತಡದಲ್ಲಿ ಏರಿಳಿತ ಕಂಡು ಬರುತ್ತದೆ. ಆದರೆ ಸಾಮಾನ್ಯ ರಕ್ತದೊತ್ತಡವು 120ಎಂಎಂಎಚ್‍ಜಿ ಸಿಸ್ಟೋಲಿಕ್ (ಸಿಸ್ಟೋಲಿಕ್ ರಕ್ತದೊತ್ತಡ ಅಂದರೆ ಹೃದಯ ಸಂಕುಚಿತವಾದಾಗ ರಕ್ತನಾಳಗಳ ಮೇಲೆ ಬೀಳುವ ಒತ್ತಡ) ಹಾಗೂ 80ಎಂಎಂಎಚ್‍ಜಿ ಡಿಸ್ಟೋಲಿಕ್ ರಕ್ತದೊತ್ತಡ (ಡಿಸ್ಟೋಲಿಕ್ ರಕ್ತದೊತ್ತಡ ಅಂದರೆ ಹೃದಯ ಬಡಿತದ ನಡುವೆ ಹೃದಯ ವಿಶ್ರಮಿಸಿದಾಗ ಉಂಟಾಗುವ ಒತ್ತಡ ಎಂದರ್ಥ)

ಅಧಿಕ ರಕ್ತದೊತ್ತಡ ಎಂದರೇನು ?

ರಕ್ತದ ಒತ್ತಡದಲ್ಲಿ ಹೆಚ್ಚಾದಾಗ ಇದನ್ನು ಅಧಿಕ ರಕ್ತದೊತ್ತಡ ಅಥವಾ ಹೈಪರ್‍ಟೆನ್ಷನ್ ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡವು ಕಾರ್ಡಿಯೋವ್ಯಾಸ್ಕುಲರ್ ರೋಗಗಳು, ಮೂತ್ರಪಿಂಡ ರೋಗಗಳು ಮತ್ತು ಪಾಶ್ರ್ವವಾಯು ಗಂಡಾಂತರವನ್ನು ಹೆಚ್ಚಿಸುತ್ತದೆ.

ಅಧಿಕ ರಕ್ತದೊತ್ತಡದ ಚಿಹ್ನೆಗಳು ಮತ್ತು ಲಕ್ಷಣಗಳೇನು ?

ಅಧಿಕ ರಕ್ತದೊತ್ತಡ ಯಾವುದೇ ಚಿಹ್ನೆಗಳು ಅಥವಾ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಸಾಂದರ್ಭಿಕವಾಗಿ ತಲೆನೋವು ಉಂಟು ಮಾಡುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಅಥವಾ ಮೌನ ಹಂತಕ ಎಂದು ಕರೆಯಲಾಗುತ್ತದೆ. ಯಾವುದೇ ಚಿಹ್ನೆ ಅಥವಾ ಲಕ್ಷಣಗಳು ಇಲ್ಲದೇ ಹೃದಯ, ರಕ್ತನಾಳಗಳು, ಮೂತ್ರಪಿಂಡ ಹಾಗೂ ದೇಹದ ಇತರ ಭಾಗಗಳಿಗೆ ಇದು ಹಾನಿಯನ್ನು ಮುಂದುವರೆಸುವುದರಿಂದ ಹೀಗೆ ಬಣ್ಣಿಲಾಗಿದೆ. ಬಹುತೇಕ ರಕ್ತದೊತ್ತಡದ ಪ್ರಕರಣಗಳಲ್ಲಿ ರಕ್ತದೊತ್ತಡ ಇರುವುದೇ ತಿಳಿಯದ ಕಾರಣ ಅಗಾಗ ರಕ್ತದೊತ್ತಡವನ್ನು ತಪಾಸಣೆಗೆ ಒಳಪಡಿಸುವುದು ತುಂಬಾ ಮುಖ್ಯವಾಗಿರುತ್ತದೆ.

ಅಧಿಕ ರಕ್ತದೊತ್ತಡ ಹೊಂದುವ ಗಂಡಾಂತರ ನಿಮಗಿದೆಯೇ?
ಯಾವುದೇ ಚಿಕಿತ್ಸೆಯನ್ನು ಪಡೆಯಲು ವಿಫಲವಾದರೆ ಏನು ತೊಡಕುಗಳು ಉಂಟಾಗುತ್ತವೆ ?
ಅಧಿಕ ರಕ್ತದೊತ್ತಡವನ್ನು ತಡೆಗಟ್ಟುವುದು ಹೇಗೆ ?

ರಕ್ತದ ಒತ್ತಡವನ್ನು ಸಾಮಾನ್ಯ ಮಟ್ಟದಲ್ಲಿ ಇರಿಸಲು ಯಾವುದೇ ವಯೋಮಾನದ ಮಂದಿ ಪ್ರತಿ ದಿನ ಕ್ರಮ ಕೈಗೊಳ್ಳಬಹುದು. ಆರೋಗ್ಯಕರ ಜೀವನಶೈಲಿ ಅಧಿಕ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಕಾರಿ.

ಜೀವನಶೈಲಿ ಕ್ರಮಗಳು

ಅರೋಗ್ಯಕರ ಆಹಾರ ಸೇವನೆ : ಸಾಕಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಇವುಗಳಲ್ಲಿ ಪೋಟ್ಯಾಷಿಯಂ ಮತ್ತು ಫೈಬರ್ ಸಮೃದ್ದವಾಗಿರುತ್ತವೆ. ಸ್ಯಾಚುರೇಟೆಡ್ ಫ್ಯಾಟ್ ಮತ್ತು ಕೊಲೆಸ್ಟೆರಾಲ್ ಕಡಿಮೆ ಇರುವ ಅಹಾರಗಳನ್ನು ತಿನ್ನಿ. ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಸೋಡಿಯಂನನ್ನು ನಿಯಂತ್ರಿಸಿ. ಅನೇಕ ಸಂಸ್ಕರಿತ ಆಹಾರಗಳು ಮತ್ತು ರೆಸ್ಟೋರೆಂಟ್ ಉಪಹಾರ-ಊಟಗಳಲ್ಲಿ ಸೋಡಿಯಂ ಸಾರಾಂಶ ಅಧಿಕವಾಗಿರುತ್ತದೆ.
ಆರೋಗ್ಯಕರ ತೂಕ ನಿರ್ವಹಣೆ : ಅತಿಯಾದ ತೂಕ ಹೊಂದುವುದರಿಂದ ಅಧಿಕ ರಕ್ತದೊತ್ತಡದ ಗಂಡಾಂತರಗಳು ಹೆಚ್ಚಾಗುತ್ತವೆ. ಆದ್ದರಿಂದ ತೂಕವನ್ನು ಕಡಿಮೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ತಡೆಗಟ್ಟಬಹುದು.
ದೈಹಿಕ ಚಟುವಟಿಕೆ : ದೈಹಿಕವಾಗಿ ಚಟುವಟಿಕೆಯಿಂದ ಇದ್ದರೆ ಅಧಿಕ ರಕ್ತದೊತ್ತಡವನ್ನು ತಡೆಗಟ್ಟಬಹುದು.
ಧೂಮಪಾನ ಮಾಡಬೇಡಿ.
ಆಲ್ಕೋಹಾಲ್ ಸೇವನೆಯನ್ನು ಇತಿಮಿತಿಗೊಳಿಸಿ.

ಚಿಕಿತ್ಸೆ ಆಯ್ಕೆಗಳು ಯಾವುವು ?
ಹೈಪರ್‍ಟೆನ್ಷನ್‍ನನ್ನು ಅರ್ಥ ಮಾಡಿಕೊಳ್ಳಿ

ಹೈಪರ್‍ಟೆನ್ಷನ್ ಚಿಹ್ನೆ ಮತ್ತು ಲಕ್ಷಣಗಳು
ಕೆಲವು ಮಂದಿಯಲ್ಲಿ ತಲೆನೋವು, ಮಂಪರು, ಸುಸ್ತು ಅಥವಾ ಮೈಕೈ ನೋವು, ತಲೆ ಸುತ್ತುವಿಕೆ, ವಾಂತಿ ಕಂಡುಬರಬಹುದು.
ಇವರಲ್ಲಿ ಕೆಲವರಿಗೆ ಕಾಲಕ್ರಮೇಣ ಎದೆಯಲ್ಲಿ ನೋವು ಕಾಣಿಸಿಕೊಂಡು ಉಸಿರಾಟಕ್ಕೆ ಕಷ್ಟವಾಗಬಹುದು.
ಹೃದಯದಲ್ಲಿ ನೋವು. ದೀರ್ಘಕಾಲದ ಅನಿಯಂತ್ರಿತ ಅಧಿಕ ರಕ್ತದೊತ್ತಡವು ಹೃದಯದ ಮೇಲೆ ಪರಿಣಾಮ ಉಂಟು ಮಾಡಿ ಹೃದಯಾಘಾತಕ್ಕೂ ಎಡೆ ಮಾಡಿಕೊಡಬಹುದು ಹಾಗೂ ನಂತರ ಹೃದಯದ ಸಮರ್ಪಕ ಕಾರ್ಯನಿರ್ವಹಣೆಗೆ ಅಡಚಣೆ ಉಂಟು ಮಾಡಬಹುದು.
ಇದು ಮೆದುಳಿನ ಮೇಲೆ ಪರಿಣಾಮ ಬೀರಿ ಪಾಶ್ರ್ವವಾಯುವಿಗೂ ಕಾರಣವಾಗಬಹುದು.
ಇದೇ ರೀತಿ ಮೂತ್ರಪಿಂಡಗಳು ಸಹ ಹಾನಿಗೀಡಾಗಿ, ಅವುಗಳ ಕಾರ್ಯನಿರ್ವಹಣೆಗೂ ತೊಂದೆರೆಯಾಗಬಹುದು.
ರಕ್ತನಾಳಗಳಿಗೂ ಸಹ ಇದರಿಂದ ದುಷ್ಪರಿಣಾಮ ಉಂಟಾಗುತ್ತದೆ.
ದೃಷ್ಟಿ ಮಂದವಾಗುವುದರೊಂದಿಗೆ ಕಣ್ಣುಗಳ ಮೇಲೂ ಇದು ಪರಿಣಾಮ ಬೀರುತ್ತದೆ.
ಆದ್ದರಿಂದ ಸಾಧ್ಯವಾದಷ್ಟೂ ಮುನ್ನವೇ ಅಧಿಕ ರಕ್ತದೊತ್ತಡವನ್ನು ಪತ್ತೆ ಮಾಡಿ, ಅದನ್ನು ನಿರ್ಲಕ್ಷಿಸದೇ, ಸೂಕ್ತ ಚಿಕಿತ್ಸೆ ಆರಂಭಿಸುವುದು ಅತ್ಯಗತ್ಯ.

ಹೈಪರ್‍ಟೆನ್ಷನ್‍ಗೆ ಕಾರಣಗಳು

ಬಹುತೇಕ ಮಂದಿಯಲ್ಲಿ ಅಧಿಕ ರಕ್ತದೊತ್ತಡಕ್ಕೆ ನಿಖರವಾದ ಕಾರಣ ತಿಳಿದು ಬರುವುದಿಲ್ಲ. ಹೆಚ್ಚು ನೆತ್ತರೊತ್ತಡ ಇರುವ ಸಣ್ಣ ಸಂಖ್ಯೆಯ ಜನರಲ್ಲಿ ಇದಕ್ಕೆ ನಿರ್ದಿಷ್ಟ ಕಾರಣಗಳನ್ನು ಪತ್ತೆ ಮಾಡಬಹುದು. ಅಧಿಕ ರಕ್ತದೊತ್ತಡಕ್ಕೆ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಅದನ್ನು ನಿಯಂತ್ರಣದಲ್ಲಿಡಬಹುದಾದ ಕಾರಣ ಹೈಪರ್‍ಟೆನ್ಷನ್‍ಗೆ ಕಾರಣವಾಗುವ ಅಂಶಗಳನ್ನು ಗುರುತಿಸುವುದು ಮುಖ್ಯ.

ನಿಮಗೆ ಹೈಪರ್‍ಟೆನ್ಷನ್ ಬರುವ ಸಂಭವಾಂಶ ಇದೆಯೇ ?

ಕೆಲವು ಆರೋಗ್ಯ ಸ್ಥಿತಿಗಳು ಹಾಗೂ ಜೀವನಶೈಲಿ ಮತ್ತು ವಂಶವಾಹಿ ಅಂಶಗಳು ಅಧಿಕ ರಕ್ತದೊತ್ತಡ ಉಂಟಾಗಲು ತನ್ನ ಕೊಡುಗೆಯನ್ನು ನೀಡುತ್ತದೆ. ಹೈಪರ್‍ಟೆನ್ಷನ್‍ನ ಗಂಡಾಂತರ ಅಂಶಗಳೆಂದರೆ :
ವೃದ್ದಾಪ್ಯ : ವಯೋಮಾನ ಹೆಚ್ಚಾದಂತೆಲ್ಲ ರಕ್ತದೊತ್ತಡ ಹೆಚ್ಚಾಗುತ್ತದೆ. 45 ವರ್ಷಗಳಿಗೆ ಮೇಲ್ಪಟ್ಟ ಪುರುಷರು ಮತ್ತು 55 ವರ್ಷಗಳಿಗೆ ಮೇಲ್ಪಟ್ಟ ಮಹಿಳೆಯರಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿರುತ್ತದೆ.
ಅತಿಯಾದ ತೂಕ ಮತ್ತು ಸ್ಥೂಲಕಾಯ : ಸಾಮಾನ್ಯಕ್ಕಿಂತ ಹೆಚ್ಚಿನ ತೂಕ ಹೊಂದಿರುವವರು ಹಾಗೂ ಸ್ಥೂಲಕಾಯರಲ್ಲಿ ಹೈಪರ್‍ಟೆನ್ಷನ್ ಸಂಭವಾಂಶ ಅಧಿಕವಾಗಿರುತ್ತದೆ.
ಲಿಂಗ : ಯುವತಿಯರಿಗಿಂತ ಯುವಕರಲ್ಲಿ ಅಧಿಕ ರಕ್ತದೊತ್ತಡದ ಸಂಭವಾಂಶ ಹೆಚ್ಚಾಗಿರುತ್ತದೆ. ಆದರೆ ಪುರುಷರಿಗಿಂತ ಮಹಿಳೆಯರು ಹೆಚ್ಚು ಹೈಪರ್‍ಟೆನ್ಷನ್‍ಗೆ ಒಳಗಾಗುತ್ತಾರೆ. 60 ವರ್ಷಗಳ ತರುವಾಯ ಪುರುಷರು ಮತ್ತು ಮಹಿಳೆಯರಿಬ್ಬರಲ್ಲೂ ಅಧಿಕ ರಕ್ತದೊತ್ತಡ ಸಾಧ್ಯತೆ ಅಧಿಕವಾಗಿರುತ್ತದೆ.
ಅನಾರೋಗ್ಯಕರ ಜೀವನಶೈಲಿ : ಆಲ್ಕೋಹಾಲ್ ಸೇವನೆ, ಧೂಮಪಾನ, ಸಾಕಷ್ಟು ದೈಹಿಕ ಚಟುವಟಿಕೆ ಇಲ್ಲದಿರುವಿಕೆ, ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಸಿಯಂ ಸೇವಿಸದಿರುವಿಕೆ.
ಹೈಪರ್‍ಟೆನ್ಷನ್‍ನ ಕೌಟುಂಬಿಕ ಇತಿಹಾಸ : ಮಧ್ಯ ವಯಸ್ಸಿನಲ್ಲಿ ಕಂಡುಬರುವ ಅಧಿಕ ರಕ್ತದೊತ್ತಡಕ್ಕೆ ಅನುವಂಶೀಯತೆ ಕಾರಣವಾಗುತ್ತದೆ. ತಂದೆ ತಾಯಿ ಇಬ್ಬರಿಗೂ ಅಧಿಕ ರಕ್ತದೊತ್ತಡ ಇದ್ದರೆ ಅವರ ಮಕ್ಕಳಿಗೂ ಹೈಪರ್‍ಟೆನ್ಷನ್ ಬರುವ ಸಾಧ್ಯತೆ ಶೇಕಡ 25ರಷ್ಟು ಹೆಚ್ಚಾಗಿರುತ್ತದೆ.
ದೀರ್ಘಕಾಲದ ಒತ್ತಡ : ಮಾನಸಿಕ ಒತ್ತಡ, ಭಾವನಾತ್ಮಕ ಗೊಂದಲಗಳು, ಉದ್ವೇಗ ಇವೆಲ್ಲವೂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಮಂದಿ ಅಗಾಗ ಕಿರಿಕಿರಿಗೆ ಒಳಗಾಗುತ್ತಾರೆ, ಕ್ಷುಲ್ಲಕ ಕಾರಣಗಳಿಗಾಗಿ ಕೋಪಗೊಳ್ಳುತ್ತಾರೆ. ಸುಲಭವಾಗಿ ಭಾವನಾತ್ಮಕತೆಗೆ ಗುರಿಯಾಗುತ್ತಾರೆ ಹಾಗೂ ಕಟ್ಟುನಿಟ್ಟಿನ ಶಿಸ್ತು ಅಳವಡಿಸಿಕೊಳ್ಳಲು ಯತ್ನಿಸುತ್ತಾರೆ.
ವಿಪರೀತ ಸೋಡಿಯಂ (ಉಪ್ಪು) ಸೇವನೆ : ಉಪಾಹಾರ ಮತ್ತು ಊಟಗಳಲ್ಲಿ ಯಾರು ಅಧಿಕ ಪ್ರಮಾಣದ ಉಪ್ಪು ಸೇವಿಸುತ್ತಾರೋ ಅವರಿಗೆ ಅಧಿಕ ರಕ್ತದೊತ್ತಡ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಉಪ್ಪು ರಕ್ತ ನಾಳಗಳಲ್ಲಿ ಕ್ರೋಢೀಕರಣಗೊಂಡು ಧಮನಿಗಳು ಕುಗ್ಗುವಿಕೆಗೆ ಎಡೆ ಮಾಡಿಕೊಡುವುದರಿಂದ ಹೈಪರ್‍ಟೆನ್ಷನ್‍ಗೆ ಕಾರಣವಾಗುತ್ತದೆ. ಆದ್ದರಿಂದ ರಕ್ತದ ಏರೋತ್ತಡ ಹೊಂದಿರುವವರು ತಮ್ಮ ಆಹಾರ ಕ್ರಮದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಉಪ್ಪು ಸೇವನೆಯನ್ನು ಕಡಿಮೆಗೊಳಿಸಬೇಕು.
ಇತರೆ ರೋಗಗಳು : ಮೂತ್ರಪಿಂಡ ರೋಗಗಳು, ರೆನಲ್ ಆರ್ಟರಿ ಸ್ಟೆನೊಸಿಸ್, ಆಯೋರ್ಟಾ ಕೋಆರ್ಕ್‍ಟೇಷನ್, ಎಂಡೋಕ್ರೈನ್ ಗ್ರಂಥಿಗಳ ರೋಗ ಮತ್ತು ಕೆಲವು ನರ ದೋಷಗಳು ಅಧಿಕ ರಕ್ತದೊತ್ತಡಕ್ಕೆ ಎಡೆ ಮಾಡಿಕೊಡುತ್ತದೆ.
ಕೆಲವು ಪ್ರಕರಣಗಳಲ್ಲಿ ದೀರ್ಘಕಾಲದ ಮೌಖಿಕ ಗರ್ಭನಿರೋಧಕ ಮಾತ್ರೆಗಳ ಸೇವನೆಯಿಂದಲೂ ಅಧಿಕ ರಕ್ತದೊತ್ತಡ ಕಂಡು ಬರಬಹುದು.

ಚಿಕಿತ್ಸೆ ಪಡೆಯಲು ವಿಫಲವಾದರೆ ಉಂಟಾಗುವ ತೊಡಕುಗಳು

ಹೈಪರ್‍ಟೆನ್ಷನ್‍ಗೆ ಚಿಕಿತ್ಸೆ ಪಡೆಯದಿದ್ದರೆ, ಅದು ಬಹು ತೊಡಕುಗಳಿಗೆ ಎಡೆ ಮಾಡಿಕೊಡುತ್ತದೆ. ಅವುಗಳೆಂದರೆ :

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Share this: