Vydyaloka

ಹುಣಸೆ ಹಣ್ಣು : ಭಾರತದ ಖರ್ಜೂರ

ಹುಣಸೆ ಹಣ್ಣು ಭಾರತದ ಖರ್ಜೂರವೆಂತಲೂ ಕರೆಯಲ್ಪಡುತ್ತಿದ್ದು,  ಅಡುಗೆಗಳಲ್ಲಿ ಹುಣಸೇಹಣ್ಣಿನ ರಸ ಬಹಳ ಪ್ರಮುಖ ಪದಾರ್ಥ ಎಂದೆನಿಸಿದೆ. ಹುಣಸೆ ಹಣ್ಣು ಅತಿಸಾರ ಮತ್ತು ತೀವ್ರ ಮಲಬದ್ಧತೆಗೆ ಪ್ರಭಾವಿ ಔಷಧಿಯ ರೂಪದಲ್ಲೂ ಕಾರ್ಯನಿರ್ವಹಿಸುತ್ತದೆ.

ಹುಣಸೆಹಣ್ಣು (ಟ್ಯಾಮರಿಂಡಸ್ ಇಂಡಿಕಾ) ಭಾರತದ ಖರ್ಜೂರವೆಂತಲೂ ಕರೆಯಲ್ಪಡುತ್ತಿದ್ದು, ಇದು ದೊಡ್ಡದಾದ, ಅಗಲ ಕೊಂಬೆಗಳಿರುವ ಉಷ್ಣವಲಯದಲ್ಲಿ ಬೆಳೆಯುವ ಮರದಲ್ಲಿ ಬೆಳೆಯುತ್ತದೆ. ಭಾರತದ ಹಲವಾರು ಅಡುಗೆಗಳಲ್ಲಿ ಹುಣಸೇಹಣ್ಣಿನ ರಸ ಬಹಳ ಪ್ರಮುಖ ಪದಾರ್ಥ ಎಂದೆನಿಸಿದೆ. ಇದನ್ನು ಚಟ್ನಿ, ಜಾಮ್, ಸಕ್ಕರೆ ಪಾನೀಯ, ಶರಬತ್ತು, ಐಸ್‍ಕ್ರೀಮ್ ಮತ್ತು ಇತರೆ ತಿಂಡಿಗಳಲ್ಲೂ ಬಳಸಲಾಗುತ್ತದೆ.

ಹುಣಸೆಹಣ್ಣನ್ನು ಭಾರತದಲ್ಲೇ ಹೇರಳವಾಗಿ ಬೆಳೆಯಲಾಗುತ್ತಿದ್ದರೂ, ಆಫ್ರಿಕಾದ ಉಷ್ಣವಲಯ ಪ್ರದೇಶದಲ್ಲಿ ಅದು ಪ್ರಮುಖ ಮತ್ತು ಸ್ಥಳೀಯ ಬೆಳೆ ಎಂದೆನಿಸಿಕೊಂಡಿದೆ. ಇದನ್ನು ಇಂಡೋನೇಷಿಯಾ, ಮಲೇಷಿಯಾ, ಶ್ರೀಲಂಕಾ, ಫಿಲಿಫೈನ್ಸ್, ಕೆರೇಬಿಯನ್ ಮತ್ತು ಫೆಸಿಫಿಕ್ ದ್ವೀಪಗಳಲ್ಲೂ ಬೆಳೆಯಲಾಗುತ್ತದೆ. ಅರೇಬಿಯಾದಲ್ಲಿ ಸಮುದ್ರಕ್ಕೆ ಮುಖಮಾಡಿದ ಇಳಿಜಾರುಗಳಲ್ಲಿ ಬೆಳೆದಿರುವ ಹುಣಸೆ ಮರಗಳನ್ನು ನೋಡುವುದೇ ಮನಸ್ಸಿಗೆ ಒಂದು ಅವಿಸ್ಮರಣೀಯ ನೋಟ. ಸಾವಿರಾರು ವರ್ಷಗಳ ಹಿಂದೆಯೇ ಇದು ದಕ್ಷಿಣ ಏಷ್ಯಾಗೆ ಕಾಲಿರಿಸಿದೆ ಎಂದು ನಂಬಲಾಗಿದೆ. ಇಂದು ಹುಣಸೇಹಣ್ಣಿನ ಉತ್ಪಾದನೆಯಲ್ಲಿ ಭಾರತವು ಪ್ರಮುಖ ಸ್ಥಾನವನ್ನು ಪಡೆದಿದೆ.

ಹುಣಸೆಯು ಫಬಾಷಿಯ ಜಾತಿಗೆ ಸೇರಿದ ದ್ವಿದಳ ಮರವಾಗಿದ್ದು ಇದರ ಇನ್ನೊಂದು ಹೆಸರು ಟಾಮರಿಂಡಸ್ ಇಂಡಿಕಾ. ಟ್ಯಾಮರಿಂಡ್ ಹೆಸರನ್ನು ಅರೆಬಿಕ್‍ನಿಂದ ಪಡೆಯಲಾಗಿದ್ದು, ಟಮರ್ ಇಂಡಿ ಅಥವಾ ಭಾರತದ ಕರ್ಜೂರ ಎಂದೇ ಹೆಸರುವಾಸಿಯಾಗಿದೆ. ಮಧ್ಯಯುಗದ ಮೂಲಿಕೆ ವ್ಯಾಪಾರಿಗಳು ಮತ್ತು ವೈದ್ಯರು ಇದನ್ನು ಟಮರ್ ಇಂಡಿ ಅಂತಲೂ ಮಧ್ಯಯುಗದ ಲ್ಯಾಟಿನ್‍ನಲ್ಲಿ ಟಮರಿಂಡಸ್ ಅಂತಲೂ, ಲುಸೋಸ್‍ಪಿಯರ್ ಇದನ್ನು ಟಮರಿನ್ ಮತ್ತು ಕೆರೇಬಿಯನ್‍ಗಳು ಟಮನ್ ಎಂದು ಕರೆಯುತ್ತಾರೆ.

ಗಟ್ಟಿಯಾದ, ಕಂದು ಬಣ್ಣದ ಹುಣಸೆಕಾಯಿ ಪೂರ್ಣವಾಗಿ ಬಲಿತಾಗ 12 ರಿಂದ 15 ಸೆ.ಮಿ. ಗಳಷ್ಟು ಉದ್ದವಿದ್ದು ರುಚಿಯಲ್ಲಿ ತುಂಬಾ ಹುಳಿಯಲ್ಲಷ್ಟೇ ಅಲ್ಲದೆ ಅಲ್ಪಪ್ರಮಾಣದ ಸಿಹಿಯನ್ನೂ ಹೊಂದಿರುತ್ತದೆ. ಒಂದು ಸಮೃದ್ಧ ಹುಣಸೇಮರವು ವರ್ಷಕ್ಕೆ 175 ಕೆ.ಜಿಯಷ್ಟು ಹುಣಸೇಹಣ್ಣನ್ನು ನೀಡುತ್ತದೆ. ಹುಣಸೇಹಣ್ಣಿನಲ್ಲಿ ಟಾರ್‍ಟಾರಿಕ್ ಆಮ್ಲ, ಸಕ್ಕರೆ, ವಿಟಮಿನ್-ಬಿ, ಮತ್ತು ಕ್ಯಾಲ್ಸಿಯಂ ಇರುತ್ತದೆ. ಇದರ ಎಲೆಗಳು ಗರಿಷ್ಟ ಪ್ರಮಾಣದಲ್ಲಿ ಒತ್ತೊತ್ತಾಗಿದ್ದು ರಾತ್ರಿಯಲ್ಲಿ ಮುಚ್ಚಿಕೊಂಡಿರುತ್ತದೆ. ಮರವು ಬಲಿತ ರೆಂಬೆಗಳು ಮರದ ಏಕಮಾತ್ರ ಮುಖ್ಯ ಕಾಂಡದಿಂದ ಬಾಗಿರುತ್ತವೆ.

ಅಡುಗೆಯಲ್ಲಿ ಬಳಕೆಗಳು

ಹುಣಸೆಹಣ್ಣನ್ನು ನೆನೆಸಿ, ಸೋಸಿ ತೆಗೆಯಲಾದ ರುಚಿಕರ ಮಿಶ್ರಣವು ಭಾರತೀಯ ಅಡುಗೆಗಳ ಪ್ರಮುಖ ಮಿಶ್ರಣಪದಾರ್ಥ ಎಂದೆನಿಸಿಕೊಂಡಿದೆ. ಇದನ್ನು ಸಾಮಾನ್ಯವಾಗಿ ಪುಳಿಯೋಗರೆ ಅಥವಾ ಹುಣಸೆ ಅನ್ನ, ಹುಣಸೆ ಚಟ್ನಿ, ಹುಣಸೆ ಉಪ್ಪಿನಕಾಯಿ, ಹುಣಸೆ ರಸಂ ಮತ್ತು ಮಲ್ಯವರ್ಧಿತ ಉತ್ಪನ್ನಗಳಾದ ಮಿಠಾಯಿ, ಜಾಮ್, ಸಾಸ್ ಮತ್ತು ವಿವಿಧ ಭಕ್ಷ್ಯಗಳಲ್ಲೂ ಕೂಡಾ ಬಳಸಲಾಗುತ್ತದೆ. ಅದೇರೀತಿ ಪ್ರಸಿದ್ದ ಭಾರತೀಯ ಅಡುಗೆಗಳಾದ ರಸಂ, ಸಂಬಾರ್, ಮೀನು ಅಡುಗೆ ಮಾತ್ರವಲ್ಲದೇ ರಸ್ತೆಬದಿ ತಿಂಡಿ-ತಿನಿಸುಗಳಾದ ಪಾನಿಪುರಿ ಮತ್ತು ಇಮ್ಲಿ ಕಾ ಕುಲ್ಫಿಗಳನ್ನು ಹುಣಸೆಹಣ್ಣು ಇಲ್ಲದೆ ತಯಾರಿಸಲು ಸಾಧ್ಯವೇ ಇಲ್ಲ.  ತಮಿಳುನಾಡಿನ ಸಾಂಪ್ರದಾಯಿಕ ಆಹಾರಪದಾರ್ಥ ಎಂದೆನಿಸಿರುವ ಪುಳಿಯೋಗರೆಯಲ್ಲಿ ಹುಣಸೆಹಣ್ಣಿನ ರಸವೇ ಪ್ರಮುಖ ಪದಾರ್ಥ.

ಹುಣಸೆಹಣ್ಣನ್ನು ಹೊರತುಪಡಿಸಿ, ಅದರ ಎಲೆಗಳು ಮತ್ತು ಮರದ ಕಡ್ಡಿಗಳು ಕೂಡಾ ಉಪಯುಕ್ತವಾಗಿವೆ. ಹುಣಸೆಹಣ್ಣಿನ ವೈದ್ಯಕೀಯ ಅಳವಡಿಕೆಗಳು ಭಾರತಾದ್ಯಂತ ಪ್ರಖ್ಯಾತಿಯನ್ನೂ ಹೊಂದಿದೆ. ಪಾಶ್ಚಾತ್ಯ ಅಡುಗೆಗಲ್ಲೂ ಇದು ತನ್ನ ಸ್ಥಾನವನ್ನೂ ಪಡೆದಿದೆ. ವೋರ್ಚೆಸ್ಟರ್‍ಶೈರ್ ಮತ್ತು ಹೆಚ್.ಪಿ.ಗಳಂತಹ ಸಾಸ್‍ಗಳಲ್ಲೂ ಹುಣಸೇ ತಿರುಳನ್ನು ಬಳಸಲಾಗುತ್ತದೆ. ಮಧ್ಯ-ಪ್ರಾಚ್ಯ ರಾಷ್ಟ್ರಗಳಲ್ಲಿ ಇದನ್ನು ಸಿಹಿಯಲ್ಲದ ಖಾದ್ಯಗಳಲ್ಲೂ ಬಳಸಲಾಗುತ್ತದೆ. ವಿಶೇಷವಾಗಿ ಮಾಂಸದ ಸ್ಟೀವ್‍ಗಳಲ್ಲೂ ಹುಣಸೇ ಹಣ್ಣನ್ನು ಬಳಸಲಾಗುತ್ತದೆ. ಫಿಲಿಪೈನ್ಸ್‍ನ ಸಾಂಪ್ರದಾಯಿಕ ಅಡುಗೆಯಾದ ಸಿನಿಗಾಂಗ್‍ನಲ್ಲಿ ಇಡೀ ಹುಣಸೇಹಣ್ಣನ್ನು ಬಳಸಲಾಗುತ್ತದೆ.

ಆರೋಗ್ಯದ ಲಾಭಗಳು

ಹುಣಸೆಯು ವೈದ್ಯಕೀಯವಾಗಿ ಉದರ ಸಮಸ್ಯೆ, ಜೀರ್ಣಕ್ರಿಯೆ ಹೆಚ್ಚಿಸುವ, ಭೇದೌಷಧ, ಸಾಂಕ್ರಾಮಿಕ ರೋಗಗಳ ವಿರುದ್ಧವಾಗಿ, ಮಲಬದ್ಧತೆಯ ಪರಿಹಾರ/ತಡೆಗಟ್ಟುವಿಕೆಗಾಗಿ, ಚರ್ಮಸಂರಕ್ಷಣೆಗಾಗಿ, ಕ್ಯಾನ್ಸರ್ ವಿರುದ್ಧ ಹೋರಾಡಲು, ರಕ್ತದಲ್ಲಿನ ಕೊಬ್ಬು ಕರಗಿಸಲು, ದೇಹದ ತೂಕ ಕರಗಿಸಲು, ಪ್ರತಿರೋಧಕ ಶಕ್ತಿ ವೃದ್ಧಿಸಲು, ನರಮಂಡಲ ವ್ಯವಸ್ಥೆಯನ್ನು ಬಲಪಡಿಸಲು, ಮುಂತಾದ ಸಮಸ್ಯೆಗಳಿಗೆ ಪರಿಹಾರವಾಗುವ ದೈತ್ಯಶಕ್ತಿಯನ್ನು ಹೊಂದಿದೆ. ಹುಣಸೆಯನ್ನು ಜ್ವರ, ಗಂಟಲುಕೆರೆತ, ಸಂಧಿವಾತ, ಉರಿಯೂತ, ಮತ್ತು ಸೂರ್ಯ ಶಾಖಾಘಾತವನ್ನು ತಡೆಗಟ್ಟಲು ಕೂಡಾ ಬಳಸಲಾಗುತ್ತದೆ.

ಹುಣಸೇಹಣ್ಣಿನಲ್ಲಿ ವಿಟಮಿನ್ ಸಿ, ಇ, ಬಿ, ಕ್ಯಾಲ್ಸಿಯಂ, ಕಬ್ಬಿಣ, ಫಾಸ್‍ಫರಸ್, ಪೊಟಾಶಿಯಂ, ಮ್ಯಾಂಗನೀಸ್ ಮತ್ತು ನಾರಿನಾಂಶ ಹೇರಳವಾಗಿದೆ. ಆಹಾರದ-ನಾರಿನಾಂಶ, ಮಾಲಿಕ್ ಆಮ್ಲ, ಟಾರ್‍ಟಾರಿಕ್ ಆಮ್ಲ ಮತ್ತು ಪೊಟಾಶಿಯಂ ಬೈಟಾರ್ಟೆರೆಟ್‍ಗಳು ಹುಣಸೇ ಹಣ್ಣಿನಲ್ಲಿ ಇರುವುದರಿಂದ ಹುಣಸೇಹಣ್ಣು ಅತಿಸಾರ ಮತ್ತು ತೀವ್ರ ಮಲಬದ್ಧತೆಗೆ ಪ್ರಭಾವಿ ಔಷಧಿಯ ರೂಪದಲ್ಲೂ ಕಾರ್ಯನಿರ್ವಹಿಸುತ್ತದೆ. ಆಗ್ನೇಯ ಏಷ್ಯಾದೆಲ್ಲೆಡೆ ಈ ಹಣ್ಣನ್ನು ಬಿಸಿಪಟ್ಟಿಯನ್ನಾಗಿ ಬಳಸಲಾಗುತ್ತದೆ.

ಹುಣಸೇಹಣ್ಣಿನ ಸೇವನೆಯಿಂದ ನಮ್ಮ ದೇಹದ ರಕ್ತ ಸಂಚಾರ ವೃದ್ಧಿಸುತ್ತದೆ. ನರ ಚಟುವಟಿಕೆಗಳಯ ಕ್ರಿಯಾಶೀಲವಾಗುತ್ತವೆ. ತೂಕ ಕಡಿಮೆಗೊಳಿಸಲು ಇದು ಸಹಾಯಕ. ಸಕ್ಕರೆ ಕಾಯಿಲೆಯನ್ನು ಹುಣಸೇಹಣ್ಣು ನಿಯಂತ್ರಿಸುತ್ತದೆಯಲ್ಲದೆ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಹುಣಸೇಬೀಜದ ಸಾರದಿಂದ ತಯಾರಿಸಲಾದ ಸಸ್ಯಜನ್ಯ ತೈಲಗಳು ಆಚಿಟಿ ಸುಡುಹು ಗುಣಗಳ ಸಾಮಥ್ರ್ಯ ಹೊಂದಿದೆ. ಹುಣಸೇಹಣ್ಣು ರಕ್ತದೊತ್ತಡವನ್ನು ನಿಯಂತ್ರಿಸುವುದರಿಂದ ರಕ್ತತಿಳಿ ಮಾಡುವ ಕಾರ್ಯವೂ ನೆರವೇರುತ್ತದೆ. ಆದರೆ ಇದರ ಅತಿಯಾದ ಸೇವನೆ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು.

ಹುಣಸೆಹಣ್ಣಿನ ಸವಿಭಕ್ಷ್ಯಗಳು

ಹುಣಸೆ ಅನ್ನ (ಪುಳಿಯೋಗರೆ)

ಹುಣಸೆ ಚಟ್ನಿ

ಹುಣಸೆಹಣ್ಣನ್ನು ರಾತ್ರಿ ಪೂರಾ 2 ಕಪ್ ನೀರಿನಲ್ಲಿ ನೆನೆಸಿ. ಒಲೆ ಮೆಲೆ 5 ನಿಮಿಷಗಳ ಕಾಲ ಬಿಸಿ ಮಾಡಿ. ಆರಿದ ನಂತರ ಹಿಂಡಿ ರಸ ತೆಗೆದು ಸೋಸಿಕೊಳ್ಳಿ.
ಒಂದು ಕಪ್ ನೀರು ಮತ್ತು ಸಕ್ಕರೆ ಬೆರೆಸಿ ಸಕ್ಕರೆ ಕರಗುವವರೆಗೂ ಬೇಯಿಸಿ. ನಂತರೆ ಕಪ್ಪು ಉಪ್ಪು, ಸಾದಾ ಉಪ್ಪು, ಕೆಂಪು ಮೆಣಸಿನ ಪುಡಿ ಬೆರೆಸಿ ಮಿಶ್ರಣ ಮಾಡಿ. ಇದು ಕುದಿಯುವವರೆಗೂ ಬೇಯಿಸಿ. ನಂತರ ಒಣದ್ರಾಕ್ಷಿ ಮತ್ತು ಗರಂ ಮಸಾಲ ಪುಡಿ ಬೆರೆಸಿ. ಚಟ್ನಿ ಗಟ್ಟಿಯಾಗಲು ಬಿಡಿ.
ಒಣ ಖರ್ಜೂರ ಬೆರೆಸಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಏಲಕ್ಕಿ ಪುಡಿ ಬೆರೆಸಿ ಒಲೆ ಆರಿಸಿ. ಫ್ರಿಡ್ಜ್‍ನಲ್ಲಿ ಇಟ್ಟ ಪಕ್ಷದಲ್ಲಿ 6 ತಿಂಗಳುಗಳವರೆಗೂ ಬಳಸಬಹುದು.

ಹುಣಸೆ ಉಪ್ಪಿನಕಾಯಿ

ಬೇಜ ತೆಗೆದ ಹಸಿರು ಹುಣಸೆಯನ್ನು ರುಬ್ಬಿಕೊಳ್ಳಿ. ಬೆಳ್ಳುಳ್ಳಿ ಸೇರಿಸಿ ನಂತರ ಅರಿಶಿಣ, ಉಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ತರಿತರಿಯಾಗಿ ರುಬ್ಬಿಕೊಂಡ ಕೆಂಪು ಮೆಣಸಿನಕಾಯಿ ಮತ್ತು ಕರಿಬೇವುಸೊಪ್ಪನ್ನು ಸೇರಿಸಿ.
ಪ್ಯಾನ್‍ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆಎಣ್ಣೆ ಹಾಕಿ ನಂತರ ಸಾಸಿವೆ, ಜೀರಿಗೆ, ಇಂಗು, ಕರಿಬೇವು ಸೊಪ್ಪು, ಕಡಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ. ಬೇಳೆಗಳು ಕಂದು ಬಣ್ಣ ಬರುವವರೆಗೂ ಸಣ್ಣ ಉರಿಯಲ್ಲಿ ಹುರಿಯಿರಿ.
ಒಲೆ ಆರಿಸಿ ಇದನ್ನು ರುಬ್ಬಿದ ಹುಣಸೆ ಮಿಶ್ರಣಕ್ಕೆ ಸೇರಿಸಿ. ಈಗ ಹುಣಸೆ ಉಪ್ಪಿನಕಾಯಿ ಸಿದ್ಧ.

ಹುಣಸೆ ರಸಂ

ಒಂದು ಪ್ಯಾನ್‍ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ ಅವುಗಳು ಸಿಡಿಯಲು ಬಿಡಿ. ನಂತರ ಜೀರಿಗೆ ಹಾಕಿ ಕಂದು ಬಣ್ಣ ಬರುವವರೆಗೂ ಹುರಿಯಿರಿ.
ನಂತರ ಕರಿಬೇವು, ಇಂಗು, ಕೆಂಪು ಮೆಣಸಿನಕಾಯಿ ಹಾಕಿ ಕೆಲ ಕ್ಷಣಗಳು ಹುರಿಯಿರಿ. ನಂತರ ಹೆಚ್ಚಿದ ಟೊಮೆಟೋ ಹಾಕಿ ಮೆತ್ತಗಾಗುವವರೆಗೂ ಹುರಿಯಿರಿ. ನಂತರ ಹುಣಸೇ ರಸ, ರಸಂ ಪುಡಿ, ನೀರು ಹಾಕಿ ಕುದಿಯಲು ಬಿಡಿ. ರಸಂ ತೆಳುವಾಗಿಯೇ ಇರಬೇಕು. ರಸಂನನ್ನು ಪಾತ್ರೆಗೆ ಹಾಕಿ ಕೊತ್ತಂಬರಿ ಸೊಪ್ಪು ಉದುರಿಸಿ.

Share this: