Vydyaloka

ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು ?

ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು, ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಅನ್ನೋದು ಇಲ್ಲಿದೆ. ಪ್ರಥಮ ಚಿಕಿತ್ಸೆ ನಂತರ ಆದಷ್ಟು ಬೇಗವೈದ್ಯರ ಬಳಿ ಕರೆದುಕೊಂಡು ಹೋಗಿ.ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು ?

ಇದು ಯಾರನ್ನು ಹೇಳಿ ಕೇಳಿ ಆಗುವಂತಹ ಅಪಾಯ ಅಲ್ಲ. ಸಾಮಾನ್ಯವಾಗಿ ರಸ್ತೆಯಲ್ಲಿ ಅಥವಾ ನಾವು ಮಲಗಿದ್ದ ಸಮಯದಲ್ಲಿ ಹಾಗೆ ಬೇರೆ ಯಾವುದೇ ಸಮಯದಲ್ಲಿ ಹಾವು ಕಚ್ಚಿದರೆ ಅದಕ್ಕೆ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಅನ್ನೋದು ಇಲ್ಲಿದೆ.

ಪ್ರಪಂಚದಾದ್ಯಂತ ಪ್ರತಿವರ್ಷ ಸುಮಾರು 50 ಲಕ್ಷ ಜನ ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಈ ಸಂಖ್ಯೆ ಎರಡು ಲಕ್ಷ ಜನ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಹೆಚ್ಚಿನ ಜನ ಹಾವಿನ ವಿಷಕ್ಕಿಂತ ಭಯದಿಂದಲ್ಲೇ ಸಾವನ್ನಾಪ್ಪುತ್ತಿದ್ದಾರೆ. ನಮ್ಮ ದೇಶದಲ್ಲಿ 250 ಜಾತಿಯ ಹಾವುಗಳಿವೆ. ಅದರಲ್ಲಿ ಸುಮಾರು 52 ಜಾತಿಯ ವಿಷ ಹಾವುಗಳು. ಐದು ಹಾವುಗಳು ಹೆಚ್ಚು ವಿಷಹೊಂದಿದ್ದು, ಹಾವು ಕಚ್ಚಿದ ಮೂರು ಗಂಟೆಗಳಲ್ಲಿ ವ್ಯಕ್ತಿ ಸಾವನ್ನಪ್ಪುತ್ತಾನೆ. ನಾವು ಯಾವುದೇ ಚಿಕಿತ್ಸೆ ನೀಡುವುದ್ದಿದ್ದರೆ ಆ ಮೂರು ಗಂಟೆಯೊಳಗೆ ನೀಡಬೇಕು.

ಕಚ್ಚಿದ ಹಾವು ವಿಷಪೂರಿತ ಹಾವೋ ಅಥವಾ ವಿಷವಿಲ್ಲದ ಹಾವೋ ಎಂದು ತಿಳಿದುಕೊಳ್ಳಲು ಅದು ಕಚ್ಚಿದ ಜಾಗದಲ್ಲಿ ಎಷ್ಟು ಕಚ್ಚಿದ ಗುರುತುಗಳಿವೆ ಎಂಬುದನ್ನು ನೋಡಬೇಕು. ಒಂದು ಅಥವಾ ಎರಡು ಗುರುತು ಇದ್ದರೆ ವಿಷಪೂರಿತ ಹಾವೆಂದು, ಮೂರಕ್ಕಿಂತ ಹೆಚ್ಚಿದ್ದರೆ ವಿಷರಹಿತ ಹಾವೆಂದು ತಿಳಿದುಕೊಳ್ಳಬಹುದು. ವಿಷಪೂರಿತ ಹಾವು ಕಚ್ಚಿದರೆ ಕಚ್ಚಿದ ಜಾಗದಿಂದ ವಿಷ ಶರೀರಕ್ಕೆ ಹೋಗುತ್ತದೆ. ಅಲ್ಲಿಂದ ಹೃದಯ, ಹೃದಯದಿಂದ ಶರೀರದ ಎಲ್ಲಾ ಭಾಗಗಳಿಗೆ ಸೇರುತ್ತದೆ.

1. ವಿಷ ಶರೀರದ ಎಲ್ಲಾಭಾಗಗಳಿಗೆ ಸೇರಲು ಮೂರು ಗಂಟೆ ಸಮಯ ತೆಗೆದುಕೊಳ್ಳಬಹುದು. ಅಷ್ಟರ ಒಳಗೆ ಆ ವ್ಯಕ್ತಿಗೆ ಚಿಕಿತ್ಸೆ ನೀಡದಿದ್ದರೆ ಬದುಕಲಾರ.

2. ಹಾವು ಕಚ್ಚಿದ ತಕ್ಷಣ ಕಚ್ಚಿದ ಜಾಗದ ಸ್ವಲ್ಪ ಮೇಲ್ಭಾಗದಲ್ಲಿ ದಾರದಿಂದ ಗಟ್ಟಿಯಾಗಿ ಕಟ್ಟಬೇಕು.

3. ಸೂಜಿಯಿಲ್ಲದ ಸಿರಂಜಿಯಿಂದ ಹಾವು ಕಚ್ಚಿದ ಜಾಗದಲ್ಲಿ ಇಟ್ಟು ರಕ್ತವನ್ನು ಎಳೆಯಬೇಕು. ಮೊದಲು ರಕ್ತ ಕಪ್ಪು ಬಣ್ಣದಲ್ಲಿರುತ್ತದೆ. ಅದು ವಿಷಯುಕ್ತ ರಕ್ತವಾಗಿರುತ್ತದೆ. ಹೀಗೆ ಎರಡು ಮೂರು ಸಾರಿ ಎಳೆಯಬೇಕು.

4. ಹಾವು ಕಡಿತಕ್ಕೆ ಒಳಗಾದ ವ್ಯಕ್ತಿ ಗಾಬರಿಯಾಗದೇ ಶಾಂತವಾಗಿರುವಂತೆ ನೋಡಿಕೊಳ್ಳಬೇಕು.

5. ಸೋಪು ಮತ್ತು ಸಾಕಷ್ಟು ನೀರಿನಿಂದ ಕಡಿತಕ್ಕೆ ಒಳಗಾದ ಜಾಗವನ್ನು ತೊಳೆಯಬೇಕು. ಜೋರಾಗಿ ಉಜ್ಜಬಾರದು.

6. ಕಡಿತವಾದ ಮುಖ್ಯ ಜಾಗದ ಮೇಲೆ ಕನ್ಸ್‍ಟ್ರಕ್ಟಿವ್ ಬ್ಯಾಂಡೇಜ್‍ನನ್ನು ಮೊದಲು ಹಾಕಬೇಕು(20 ನಿಮಿಷಗಳಿಗಿಂತ ಹೆಚ್ಚು ಸಮಯ ಅದನ್ನು ಸತತವಾಗಿ ಹಾಕಬಾರದು).

7.  ಗಾಯದಿಂದ ವಿಷವನ್ನು ಎಳೆಯಲು ಪ್ರಯತ್ನಿಸಬಾರದು. ತಕ್ಷಣ ಚಿಕಿತ್ಸೆ ಕೊಡಿಸಬೇಕು.

8. ಕಚ್ಚಿದ ಹಾವು ಯಾವುದೆಂದು ಪತ್ತೆ ಮಾಡಲು ಯತ್ನಿಸಬೇಕು.

ಹೀಗೆ ಪ್ರಥಮ ಚಿಕಿತ್ಸೆ ನಂತರ ಆದಷ್ಟು ಬೇಗವೈದ್ಯರ ಬಳಿ ಕರೆದುಕೊಂಡು ಹೋಗಿ.

Share this: