Vydyaloka

ಗೋಲ್ಡನ್ ಮಿಲ್ಕ್ – ಅದ್ಭುತ ಆದರೆ ಎಚ್ಚರ ಅಗತ್ಯ

ಗೋಲ್ಡನ್ ಮಿಲ್ಕ್ –ಅಂದರೆ ಅರಿಶಿನ ಹಾಕಿದ ಹಾಲನ್ನುಕುಡಿಯಲು ಆಯುಷ್ ಸಚಿವಾಲಯವು ತಿಳಿಸಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉಪಾಯವಾಗಿ ಕೋವಿಡ್ ಸಮಯದಲ್ಲಿ ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳಾದ ಸಿಟ್ರಸ್ ಹಣ್ಣುಗಳು (ನಿಂಬೆ, ಮೂಸಂಬಿ, ಕಿತ್ತಳೆ), ದಾಳಿಂಬೆ, ನೆಲ್ಲಿಕಾಯಿ ಇವೆಲ್ಲವೂ ಅತ್ಯಂತ ಅನುಕೂಲಕರ.

ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉಪಾಯವಾಗಿ ಗೋಲ್ಡನ್ ಮಿಲ್ಕ್ ಅಂದರೆ ಅರಿಶಿನ ಹಾಕಿದ ಹಾಲನ್ನು ಕುಡಿಯಲು ಆಯುಷ್ ಸಚಿವಾಲಯವು ತಿಳಿಸಿದೆ. ಇದಕ್ಕೆ ಕಾರಣ ಅರಿಷಿಣದಲ್ಲಿರುವ ಅದ್ಭುತ ಔಷಧೀಯ ಗುಣಗಳು. ವಿಶೇಷವಾಗಿ ರೋಗ ನಿರೋಧಕ ಮತ್ತು ವೈರಸ್ ನಿರೋಧಕ ಗುಣಗಳು. ಭಾವಪ್ರಕಾಶ ನಿಘಂಟುವಿನಲ್ಲಿ ಅರಿಶಿಣಕ್ಕೆವರ್ಣ್ಯಎಂದೂ ಕರೆದಿದ್ದಾರೆ. ಅಂದರೆ ಚರ್ಮದ ಬಣ್ಣವನ್ನು ಅಂದರೆ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರ್ಥ.

ತೊಂದರೆಗಳು ಬರದಂತೆ ತಡೆಯುವ ಶಕ್ತಿಯೂ ಅರಿಶಿಣಕ್ಕಿದೆ

ಅಷ್ಟೇ ಅಲ್ಲ, ಬೆಳಿಗ್ಗೆ ಎದ್ದ ಕೂಡಲೇ ಅಲರ್ಜಿಯ ಕಾರಣದಿಂದ ಬರುವ ಸೀನಿನಿಂದ ಹಿಡಿದು ರಾತ್ರಿ ಮಧುಮೇಹದ ಕಾರಣದಿಂದ ಆಗುವ ಪದೇ ಪದೇ ಬರುವ ಮೂತ್ರ ಪ್ರವೃತ್ತಿಯವರೆಗೆ, ಎಲ್ಲಾ ರೀತಿಯ ಚರ್ಮರೋಗಗಳು, ರಕ್ತಕ್ಕೆ ಸಂಬ0ಧಿಸಿದ ರೋಗಗಳು, ಗುಣವಾಗದ ಗಾಯ, ದೇಹದೊಳಕ್ಕೆ ಸೇರಿದ ಯಾವುದೇ ರೀತಿಯ ವಿಷ, ಪಿತ್ತಜನಕಾಂಗಕ್ಕೆ ಸಂಬ0ಧಿಸಿದ ಸಮಸ್ಯೆಗಳು, ಪದೇ ಪದೇ ಕಾಡುವ ಜ್ವರ, ಕೆಲವು ಕಣ್ಣಿನ ಸಮಸ್ಯೆಗಳು, ಬೊಜ್ಜು ಹೀಗೆ ಇಡೀ ದೇಹದ ಬಹುತೇಕ ತೊಂದರೆಗಳಲ್ಲಿ ಅರಿಶಿಣ ಸಹಾಯಕ.

ಜೊತೆಗೆ ಈ ಎಲ್ಲಾ ತೊಂದರೆಗಳು ಬರದಂತೆ ತಡೆಯುವ ಶಕ್ತಿಯೂ ಅರಿಶಿಣಕ್ಕಿದೆ. ಅರಿಶಿಣವನ್ನು ನಿತ್ಯ ಸೇವಿಸುವುದರಿಂದ ಕಾಮಾಲೆ(ಜಾಂಡೀಸ್) ಬರುತ್ತದೆ ಎಂಬ ಕಲ್ಪನೆ ಎಷ್ಟೋ ಜನರಿಗಿದೆ. ಇದು ನೂರಕ್ಕೆ ನೂರರಷ್ಟು ತಪ್ಪು. ಅದರ ಬಣ್ಣ ನೋಡಿ ಆ ಖಾಯಿಲೆ ಬರುತ್ತದೆ ಎಂದು ಲೆಕ್ಕ ಹಾಕುವುದು ಸರಿಯಲ್ಲ. ವಿಚಿತ್ರವೆಂದರೆ ಕಾಮಾಲೆ ಇರುವವರಿಗೆ ಅರಿಶಿಣವನ್ನು ನಿತ್ಯ ನೀಡಿದರೆ ಆ ರೋಗ ಬೇಗ ಗುಣವಾಗಲು ಸಹಯವಾಗುತ್ತದೆ.

ಹಳದಿ ಇರುವುದೆಲ್ಲಾ ಅರಿಶಿಣವಲ್ಲ:

ಆದರೆ ಇಂದಿನ ಕಾಲದಲ್ಲಿ ವಿಷವನ್ನೂ ಅಮೃತವೆಂದು ಕೊಡುವುದು ಸಾಮಾನ್ಯವಾಗಿದೆ. ಬೆಳ್ಳಗಿರುವುದೆಲ್ಲಾ ಹೇಗೆ ಹಾಲಲ್ಲವೋ ಹಾಗೇ ಹಳದಿ ಇರುವುದೆಲ್ಲಾ ಅರಿಶಿಣವಲ್ಲ. ಅರಿಶಿಣದಲ್ಲಿರುವ ಕರ್ಕ್ಯೂಮಿನ್ ಎಂಬ ಸತ್ವವು ಕ್ಯಾನ್ಸರ್ ನಿರೋಧಕ ಎಂಬುದು ಸಾಬೀತಾಗಿದೆ. ಹಾಗೇ ನಾವು ಅರಿಶಿಣ ಎಂದು ನಂಬಿ ಅಂಗಡಿಗಳಲ್ಲಿ ತೆಗೆದುಕೊಳ್ಳುವ ಹಳದಿ ಬಣ್ಣದ ಪುಡಿಯಿಂದ ಕ್ಯಾನ್ಸರ್ ಬರುತ್ತದೆ ಎಂಬುದೂ ದೃಢಪಟ್ಟಿದೆ. ಅರಿಶಿಣದ ಹೆಸರಿನಲ್ಲಿ ಕೊಡುವ ಪುಡಿಯು ಒಂದೋ ಅರಿಶಿಣದಲ್ಲಿರುವ ಕರ್ಕ್ಯೂಮಿನ್ ಎಂಬ ಔಷಧೀಯ ಸತ್ವವವನ್ನು ತೆಗೆದು ರಫ್ತು ಮಾಡಿದ ನಂತರ ಉಳಿದ ನಿಷ್ಪçಯೋಜಕ ಪುಡಿಯಾಗಿರುತ್ತದೆ ಅಥವಾ ಹಳದಿ ಬಣ್ಣದ ರಾಸಾಯನಿಕವಿರುತ್ತದೆ. ಇನ್ನು ಅರಿಶಿಣದ ಕೊಂಬು ಕೂಡಾ ಬಣ್ಣ ಹಾಕಿದ ನಕಲಿ ಕೊಂಬು ಬರುತ್ತಿದೆ. ಹಾಗಾಗಿ ನಿವೇ ಬೆಳೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ, ನೀವು ಖರೀದಿಸಿದ್ದು ಅರಿಶಿಣದ ಕೊಂಬೇ ಎಂದು ಖಾತ್ರಿ ಪಡಿಸಿಕೊಂಡು ಬಳಸುವುದು ಸೂಕ್ತ.

1. ಸಾಮಾನ್ಯ ವಯಸ್ಕರು ದಿನಕ್ಕೆ ಒಂದರಿ0 ಎರಡು ಟೀ ಚಮಚದಷ್ಟು ಅರಿಶಿಣ ಸೇವನೆ ಮಾಡಬಹುದು. ಉಷ್ಣ ಗುಣ ಹೊಂದಿರುವ ಕಾರಣ ಉಷ್ಣ ಪ್ರಕೃತಿಯವರು ಬೇಸಿಗೆಯಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಒಳಿತು. ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಹೆಚ್ಚು ಪರಿಣಾಮಕಾರಿ.

2. ಕಡಲೆಹಿಟ್ಟು, ಅರಿಶಿಣ, ಶೀಗೆಕಾಯಿ ಪುಡಿ ಮತ್ತು ಬೇವಿನ ಪುಡಿಯ ಮಿಶ್ರಣ ಮಾಡಿಕೊಂಡು ನಿತ್ಯ ಸ್ನಾನಕ್ಕೆ ಸೋಪಿನ ಬದಲು ಬಳಸುತ್ತಾ ಹೋದರೆ ಚರ್ಮದ ಕಾಂತಿ ಹೆಚ್ಚುವುದರ ಜೊತೆಗೆ ಚರ್ಮರೋಗಗಳನ್ನು, ಮೊಡವೆಯನ್ನು ತಡೆಯುತ್ತದೆ.

ಸಿಟ್ರಸ್ ಹಣ್ಣುಗಳು ಅತ್ಯಂತ ಅನುಕೂಲಕರ

ಯಾವುದೇ ರೋಗವಿದ್ದರೂ ಅದಕ್ಕೆ ಕೆಲವು ಆಹಾರಗಳು ಪೂರಕವಾಗಿಯೂ ಕೆಲವು ವಿರುದ್ಧವಾಗಿಯೂ ಕೆಲಸ ಮಾಡುತ್ತವೆ. ಕೋವಿಡ್ ವಿಷಯದಲ್ಲೂ ಹಾಗೇ. ದೇಹದಲ್ಲಿ ಇನ್ಫ್ಲಮೇಷನ್ (ಉರಿಯೂತ) ಅನ್ನು ಕಡಿಮೆ ಮಾಡುವ ಆಹಾರಗಳು ಮನುಷ್ಯನನ್ನು ಈ ಸಮಸ್ಯೆಯಿಂದ ಕಾಪಾಡಲು ಸಹಕಾರಿ. ಅಂಥ ಆಹಾರಗಳ ಬಗ್ಗೆ ಮೊದಲು ನೋಡೋಣ. ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳಾದ ಸಿಟ್ರಸ್ ಹಣ್ಣುಗಳು (ನಿಂಬೆ, ಮೂಸಂಬಿ, ಕಿತ್ತಳೆ), ದಾಳಿಂಬೆ, ನೆಲ್ಲಿಕಾಯಿ ಇವೆಲ್ಲವೂ ಅತ್ಯಂತ ಅನುಕೂಲಕರ.

ಅದರಲ್ಲೂ ಈ ಋತುವಿನಲ್ಲಿ ಬೆಳೆಯುವ ಬೆಟ್ಟದ ನೆಲ್ಲಿಕಾಯಿ ರೋಗ ನಿರೋಧಕ ಶಕ್ತಿ ಹೆಚ್ಚಲು ಮತ್ತು ಶ್ವಾಸಕೋಶದ ಆರೋಗ್ಯವನ್ನು ಹೆಚ್ಚಿಸಲು ಅತ್ಯಂತ ಸಹಕಾರಿ. ಚ್ಯವನಪ್ರಾಶದ ಅತ್ಯಂತ ಮುಖ್ಯ ಘಟಕ ಇದು. ಈ ಋತುವಿನಲ್ಲೇ ಹೆಚ್ಚಾಗಿ ಬೆಳೆಯುವ ಬೂದುಗುಂಬಳ, ಸೌತೆಕಾಯಿಗಳು ಕೂಡಾ ಉಪಯುಕ್ತವೇ. ಎಲ್ಲಾ ರೀತಿಯ ಹಣ್ಣುಗಳು, ನಟ್ ಗಳು, ತರಕಾರಿಗಳು ಇನ್ಫ್ಲಮೇಷನ್ ಕಡಿಮೆ ಮಾಡುವಲ್ಲಿ ಸಹಕಾರಿ. ಕೇವಲ ಅರಿಶಿನವೊಂದೇ ಅಲ್ಲ; ಎಲ್ಲಾ ಸಾಂಬಾರ ಪದಾರ್ಥಗಳಲ್ಲಿಯೂ ಈ ಗುಣವಿದೆ.

ಕೆಲವು ಆಹಾರಪದಾರ್ಥಗಳು ನಮ್ಮ ಶ್ವಾಸಾಂಗವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತವೆ. ಸಂಸ್ಕರಿತ ಆಹಾರ ಪದಾರ್ಥಗಳು ಅಂದರೆ ರೆಡಿ-ಟು-ಈಟ್ ತರಹದ ಮತ್ತು ಬೇಕರಿ ವಸ್ತುಗಳು ಇವುಗಳಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತವೆ. ಶೈತ್ಯೀಕರಿಸಿದ ಆಹಾರಗಳೂ ಈ ಸಮಸ್ಯೆಗಳಲ್ಲಿ ದೇಹಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತವೆ. ವಿರುದ್ಧ ಆಹಾರಗಳು ಇಂತಹ ಸಮಸ್ಯೆಯನ್ನು ಹೆಚ್ಚಿಸುತ್ತವೆ ಉದಾಹರಣೆಗೆ ಹಾಲಿನ ಜೊತೆ ಉಪ್ಪು, ಹುಳಿ ಪದಾರ್ಥಗಳನ್ನು ಸೇವಿಸುವುದು. ಸಕ್ಕರೆಯು ಇನ್ಫ್ಲಮೇಷನ್ ಅನ್ನು ಹೆಚ್ಚಿಸಲು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜೀರ್ಣಕ್ಕೆ ಜಡವಾದ ಆಹಾರಗಳನ್ನು ನಿತ್ಯವೂ ಸೇವಿಸುವುದು ಇಂತಹ ಸಮಸ್ಯೆಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ. ಉದಾಹರಣೆಗೆ ಕರಿದ ಪದಾರ್ಥಗಳು.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com

 

Share this: