Vydyaloka

ವಾಯುದೋಷಕ್ಕೆ ಮನೆಮದ್ದುಗಳು ಯಾವುವು?

ಬಹಳ ಜನರು ವಾಯುದೋಷದಿಂದ ನರಳೋದು, ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗೋದು ಸಾಮಾನ್ಯ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೇನೋ, ದೇಹದ ಗುದದ್ವಾರದಿಂದ ಹೊರಬರುವ ಶಬ್ದಸಹಿತ-ಶಬ್ದರಹಿತ, ವಾಸನೆಯುಕ್ತ-ವಾಸನೆ ಇರದ ಅಪಾನವಾಯು ಬಹಳ ಜನರಿಗೆ ಬಹಳ ಬಾರಿ ಕಾಡುವ ಸಮಸ್ಯೆ. ಬಂದಾಗ ತಡೆದುಕೊಳ್ಳಲೂ ಆಗದೇ, ಕಷ್ಟಪಟ್ಟು ಕೆಲಕಾಲ ತಡೆದರೂ, ಹೆಚ್ಚು ಒತ್ತಡದಿಂದ ಅದು ಬೇಗ ಹೊರಬರುತ್ತದೆ.ಕರುಳುಗಳಲ್ಲಿ ಹುದುಗಿರುವ ವಾಯು ಅಹಿತಕರ ಅನುಭವ ನೀಡುತ್ತದೆ. ಇದರಿಂದ ತೀವ್ರ ನೋವು, ಸೆಡೆತ, ವಾತ, ಬಿಗಿತ, ಉಬ್ಬರ ಉಂಟಾಗಬಹುದು. ಬಹಳ ಜನ ಪ್ರತಿದಿನ 13ರಿಂದ 21 ಸಲ ಅಪಾನ ವಾಯು ಹೊರಬಿಡುತ್ತಾರೆ. ಅದನ್ನು ಕಷ್ಟಪಟ್ಟು ಒಳಗೇ ತಡೆದರೆ ಅದು ಹೊರಹೋಗದಿದ್ದರೆ ಭೇದಿ ಅಥವಾ ಮಲಬದ್ಧತೆ ಆಗಬಹುದು.ವಾಯುವಿನಿಂದಾಗುವ ನೋವು ಎಷ್ಟು ಹೆಚ್ಚಿರುತ್ತದೆಯೆಂದರೆ, ವೈದ್ಯರು ಇದರ ಮೂಲಕಾರಣವನ್ನು ಕರುಳುವಾಳ (ಅಪೆಂಡಿಸೈಟಿಸ್), ಪಿತ್ತಗಲ್ಲುಗಳು ಅಥವಾ ಹೃದಯ ಕಾಹಿಲೆ ಎಂದು ತಪ್ಪಾಗಿ ಗ್ರಹಿಸುತ್ತಾರೆ.
ಅನೇಕ ಮನೆ ಪರಿಹಾರಗಳು ಈ ವಾಯು ಬಿಡುಗಡೆಗೆ ಅಥವಾ ಅದು ಹೆಚ್ಚಾಗುವುದನ್ನು ತಡೆಯಲು ನೆರವು ನೀಡಬಲ್ಲವು.

ನನ್ನ ಅನುಭವದಲ್ಲಿ, ಯಾರಿಗೋ, ಎಂದೋ, ಒಬ್ಬ ವೈದ್ಯರು ಸೂಚಿಸಿದ, ಒಂದು ನಿಗದಿತ ಔಷಧಿ- ಮಾತ್ರೆ- ಕ್ಯಾಪ್ಸೂಲನ್ನು ಮತ್ಯಾರೋ ಮತ್ತೆಂದೋ ಎಂದೂ ತೆಗೆದುಕೊಳ್ಳಬಾರದು. ತಜ್ಞ ವೈದ್ಯರು ಹೇಳಿದಂತೆ ಪ್ರತಿ ವ್ಯಕ್ತಿಯ ದೇಹ ರಚನೆ, ಅವರ ವಯಸ್ಸು, ಅವರ ಆರೋಗ್ಯ -ಅನಾರೋಗ್ಯದ ಹಿನ್ನೆಲೆ, ಅವರ ಜೀವನ ಶೈಲಿ, ಅವರ ಚಟಗಳು ಪದ್ಧತಿಗಳು, ಆಹಾರ-ವಿಶ್ರಾಂತಿ ಇವುಗಳನ್ನು ಆಧರಿಸಿ. ಅವರ ವ್ಯಕ್ತಿಗತ ವಿವರಗಳನ್ನು ಗಮನಿಸಿ, ಪ್ರತಿ ರೋಗಿಯ ವೈಯಕ್ತಿಕ ಪರಿಶೀಲನೆ ನಡೆಸಿ, ವೈದ್ಯರು ಔಷಧಿ ಸೂಚಿಸುತ್ತಾರೆ. ನಿಗದಿತ ಮಾತ್ರೆಗಳು, ಅದರ ಪ್ರಮಾಣ, ತೆಗೆದುಕೊಳ್ಳಬೇಕಾದ ಅವಧಿ, ಹೇಳಿರುತ್ತಾರೆ. ಇದು ವ್ಯಕ್ತಿ-ಕಾಲ-ಸ್ಥಳ- ಹವಾಮಾನ ಆಧರಿಸಿರುತ್ತದೆ. ಯಾರೋ ಒಬ್ಬರಿಗೆ ಎಂದೋ ಒಬ್ಬ ವೈದ್ಯರು ಹೇಳಿದ ಔಷಧಿಗಳನ್ನು ಎಲ್ಲರೂ ಅಥವಾ ಬೇರಾರೋ ಇನ್ನೆಂದೋ ಕಣ್ಣು ಮುಚ್ಚಿ ಹಾಗೇ ಬಳಸಬಾರದು.

ಎನ್.ವ್ಹಿ ರಮೇಶ್
ಮೊ:98455-65238

Share this: