Vydyaloka

ಡಯಾಸ್ಟೆಮಾ- ಚಿಕಿತ್ಸೆ ಹೇಗೆ?

ಹಲ್ಲುಗಳ ಮಧ್ಯಭಾಗದ ಡಯಾಸ್ಟೆಮ ಎನ್ನುವುದು ಮುಖದ ಅಂದಗೆಡಿಸುವ ಮುಜುಗರ ಉಂಟು ಮಾಡುವ ದೈಹಿಕ ದಂತ ಸಮಸ್ಯೆಯಾಗಿದ್ದು ಹಲವಾರು ಕಾರಣಗಳಿಂದ ಉಂಟಾಗಬಹುದು. ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ಮಾಡಿದಲ್ಲಿ ಶಾಶ್ವತವಾದ ಪರಿಹಾರ ಪಡೆಯಲು ಸಾಧ್ಯವಿದೆ.
ಮುಂಭಾಗದ ಎರಡು ಮಧ್ಯದ ಬಾಚಿ ಹಲ್ಲುಗಳ ನಡುವೆ ಖಾಲಿ ಜಾಗ ಅಥವಾ ಎಡೆ ಇದ್ದಲ್ಲಿ ಅದನ್ನು ‘ಡಯಾಸ್ಟೆಮಾ’ ಎಂದು ದಂತ ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುತ್ತದೆ. ಇದೊಂದು ನೋಡಲು ಸಹ್ಯವಲ್ಲದ ಮತ್ತು ವ್ಯಕ್ತಿಯ ಸೌಂದರ್ಯಕ್ಕೆ ಪೂರಕವಲ್ಲದ ಪರಿಸ್ಥಿತಿಯಾಗಿದ್ದು ಮುಖದ ಅಂದವನ್ನು ಕೆಡಿಸುತ್ತದೆ. ಯಾವ ವ್ಯಕ್ತಿಯೂ ತನ್ನ ಮುಂಭಾಗದ ಬಾಚಿ ಹಲ್ಲುಗಳ ನಡುವೆ ಖಾಲಿಜಾಗ ಅಥವಾ ಎಡೆ ಇರುವುದನ್ನು ಇಷ್ಟ ಪಡುವುದಿಲ್ಲ. ಎಲ್ಲರಿಗೂ ಮತ್ತು ಪೋಣಿಸಿದ ರೀತಿಯಲ್ಲಿ ಹಲ್ಲು ಇರುವುದನ್ನೇ ಇಷ್ಟಪಡುತ್ತಾರೆ.
ಸಾಮಾನ್ಯವಾಗಿ ಮೇಲ್ಭಾಗದ ಬಾಚಿ ಹಲ್ಲುಗಳು 7 ರಿಂದ 8 ವರ್ಷಗಳ ಹೊತ್ತಿಗೆ ಬಾಯಿಯಲ್ಲಿ ಮೂಡುತ್ತದೆ. ಹಲ್ಲು ಹುಟ್ಟುವಾಗ ಹಲ್ಲುಗಳ ನಡುವೆ ಎಡೆ ಎರುವುದು ಸಹಜ. ಮೇಲ್ಭಾಗದ ಕೋರೆ ಹಲ್ಲುಗಳು ಹುಟ್ಟುವಾಗ ಪಕ್ಕದ ಬಾಚಿ ಹಲ್ಲುಗಳ ಮೇಲೆ ಒತ್ತಡ ಹಾಕುವುದರಿಂದ ಎರಡು ಮಧ್ಯದ ಬಾಚಿ ಹಲ್ಲುಗಳ ನಡುವೆ ಈ ರೀತಿ ಸಹಜವಾದ ಎಡೆ ಬುರುವುದು ಸ್ವಾಭಾವಿಕ. ಕೋರೆ ಹಲ್ಲು ಪೂರ್ಣವಾಗಿ ಬಾಯಿಯಲ್ಲಿ ಹುಟ್ಟಿಕೊಂಡಾಗ ಈ ಎಡೆ ತನ್ನಿಂತಾನೇ ಮುಚ್ಚಿಕೊಳ್ಳುತ್ತದೆ. ಇದನ್ನು ದಂತ ವೈದ್ಯಕೀಯ ಭಾಷೆಯಲ್ಲಿ ‘ಅಗ್ಲಿ ಡಕ್ಲಿಂಗ್ ಹಂತ’ ಎನ್ನುತ್ತಾರೆ. ಕೋರೆ ಹಲ್ಲುಗಳು ಪೂರ್ತಿಯಾಗಿ ಹುಟ್ಟಿದ ನಂತರವೂ ಕೋರೆ ಬಾಚಿ ಹಲ್ಲುಗಳ ನಡುವೆ ಈ ರೀತಿ ಎಡೆ ಇದ್ದಲ್ಲಿ ಅದನ್ನು ಡಯಾಸ್ಟೆಮಾ ಎನ್ನುತ್ತಾರೆ. ಸಾಮಾನ್ಯವಾಗಿ 11 ವರ್ಷದ ಹೊತ್ತಿಗೆ ಕೋರೆಹಲ್ಲು ಪೂರ್ತಿಯಾಗಿ ಬಾಯಿಯಲ್ಲಿ ಮೂಡುತ್ತದೆ. ಆ ಬಳಿಕವೂ ಬಾಚಿ ಹಲ್ಲುಗಳ ನಡುವೆ ಎಡೆ ಇದ್ದಲ್ಲಿ ತಕ್ಷಣವೇ ದಂತ ವೈದ್ಯರನ್ನು ಕಾಣತಕ್ಕದ್ದು.

ಕಾರಣಗಳು ಏನು?
ಪತ್ತೆ ಹಚ್ಚುವುದು ಹೇಗೆ?
ಚಿಕಿತ್ಸೆ ಹೇಗೆ?

ಡಯಾಸ್ಟೆಮಾ ಚಿಕಿತ್ಸೆ ಎನ್ನುವುದು ಯಾವ ಕಾರಣದಿಂದ ಡಯಾಸ್ಟೆಮಾ ಬಂದಿದೆ ಎನ್ನುವುದು ಮೇಲೆ ಅವಲಂಬಿಸಲಾಗಿದೆ. ಡಯಾಸ್ಟೆಮಾಕ್ಕೆ ಕಾರಣವಾದ ಅಂಶಗಳಿಗೆ ಮೊದಲು ಚಿಕಿತ್ಸೆ ನೀಡಿದ ಬಳಿಕ ಹಲ್ಲಿನ ನಡುವಿನ ಎಡೆಯನ್ನು ಮುಚ್ಚಲಾಗುತ್ತದೆ. ಹೀಗೆ ಮಾಡಿದಲ್ಲಿ ಶಾಶ್ವತವಾದ ಪರಿಹಾರ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಚಿಕಿತ್ಸೆಯಲ್ಲಿ ಸರ್ಜರಿಯಿಂದ ಹಿಡಿದು, ಸರಿಗೆ ಚಿಕಿತ್ಸೆ, ಹಲ್ಲಿನ ಬಣ್ಣದ ಸಿಮೆಂಟ್ ಬಳಸಿ ಎಡೆಯನ್ನು ತುಂಬಿಸುವುದು ಎಂಬಿತ್ಯಾದಿ ಬಗೆಗಳಿದ್ದು ಯಾವ ಚಿಕಿತ್ಸೆ ಹೇಗೆ ಯಾರು ಮಾಡಬೇಕು ಎನ್ನುವುದನ್ನು ದಂತ ವೈದ್ಯರೇ ನಿರ್ಧರಿಸುತ್ತಾರೆ. ಚಿಕಿತ್ಸೆ ಮಾಡಿದ ಬಳಿಕವೂ ಈ ಸಮಸ್ಯೆ ಮರುಕಳಿಸಬಾರದು ಎಂಬ ಉದ್ದೇಶದಿಂದ ನಿರಂತರ ವೈದ್ಯರ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ಅತೀ ಅವಶ್ಯಕ.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787
www.surakshadental.com
email: drmuraleemohan@gmail.com

Share this: