ಇತ್ತ ಭಾರತದಲ್ಲಿ ಉಹಾಪೋಹಗಳನ್ನು ಬಿಟ್ಟು, ಅಧಿಕೃತ ಸೊಂಕಿತರು ಹೆಚ್ಚಿಗೇನೂ ಇಲ್ಲ. ಇದಕ್ಕೆ ಕಾರಣವೇನಿರಬಹದು. ಯುರೋಪ್, ಚೈನಾದಂತಹ ಶ್ರೀಮಂತ ಹೆಚ್ಚಿನ ಸುಶಿಕ್ಷಿತ ಜನರ ರಾಷ್ಟ್ರಗಳಲ್ಲಿ ಈ ಪರಿಯ ಸಾವುಗಳೇಕೆ? ಅತ್ಯುನ್ನತ ಆರೋಗ್ಯ ವ್ಯವಸ್ಥೆ ಇದ್ದರೂ ಅವರಿಂದ ಸೊಂಕು ನಿಗ್ರಹಿಸಲಾರದ ಸ್ಥಿತಿ . ಭಾರತಿಯರರಲ್ಲಿ ಸೊಂಕು ಕಂಡರೂ ಹೆಚ್ಚಿನ ಜನರಲ್ಲಿ ರೋಗ ಕಾಣಿಸಿಕೊಳ್ಳುತ್ತಿಲ್ಲ ಯಾಕೆ ….? (ಇದುವರೆಗಿನ ಕರೋನ ಪ್ರಕರಣಗಳು – 2,13,541 ;ಸಾವಿನ ಸಂಖ್ಯೆ – 8,790;ಭಾರತದಲ್ಲಿನ ಪ್ರಕರಣಗಳು – 155;ಭಾರತದಲ್ಲಿ ಸಾವಿನ ಸಂಖ್ಯೆ – 3)
“Herd immunity ” ( Immunity in a community)-ಇದು ಒಂದು ಕಾರಣವಾಗಿರಬಹುದು. ಹರ್ಡ್ ಇಮ್ಮ್ಯುನಿಟಿ ಅಂದರೆ ಒಂದು “ಸಮುದಾಯದ ರೋಗ ನಿರೋಧಕತೆ “. ಒಂದು ಸಮಾಜ, ಸಮುದಾಯ, ಊರು, ಜನಾಂಗದ ಜನರ ದೇಹದಲ್ಲಿ ಬೆಳೆದುಕೊಳ್ಳುವ ರೋಗ ನಿರೋಧಕತೆ. ಚಿಕ್ಕ ಮಗುವೊಂದು ಹುಟ್ಟಿದಾಗ ಸುತ್ತಲಿನ ಪರಿಸರದಲ್ಲಿನ ರೋಗಾಣುಗಳು, ಬ್ಯಾಕ್ಟೀರಿಯಾ, ವೈರಸ್ಗಳು ನಿರಂತರ ದೇಹ ಪ್ರವೇಶಿಸುತ್ತವೆ. ಕೆಲ ರೋಗಾಗುಣಗಳು ಕಾಯಿಲೆ ಉಂಟುಮಾಡುತ್ತವೆ. ಜ್ವರ, ಕೆಮ್ಮು, ನೆಗಡಿ, ಶ್ವಾಸಕೋಶದ ಸೋಂಕು, ವಾಂತಿ-ಭೇದಿ, ಚರ್ಮ ವ್ಯಾಧಿ, ಕುರುಗಳು, ಹೀಗೆ. ಚಿಕಿತ್ಸೆಯಿಂದ ರೋಗಗುಣವಾದರೂ, ನಿರಂತರ ಸೊಂಕುಗಳಿಂದ ದೇಹದ ಆಂತರಿಕ ರೋಗ ನಿರೋಧಕ ಶಕ್ತಿ ಬೆಳೆಯಲಾರಂಭಿಸುತ್ತದೆ. ಕೆಲ ಸಾರಿ ಆಸ್ಪತ್ರೆಗೆ ಹೋಗದೆ ಮನೆ ಮದ್ದುಗಳನ್ನು ಮಾಡಿ ಕಾಯಿಲೆ ವಾಸಿಮಾಡಿಕೊಳ್ಳುವುದರಿಂದ ಆಂತರಿಕ ನಿರೋಧ ಶಕ್ತಿ ಬೆಳೆಯುತ್ತಾ ಹೋಗುತ್ತದೆ.
ಹುಟ್ಟಿದ ದಿನದಿಂದ ಹಿಡಿದು ಸಾಯುವ ದಿನದನ ವರೆಗೂ ರೋಗಾಣುಗಳ ನಿರಂತರ ದಾಳಿಗಳು ನಡೆಯುತ್ತಿರುತ್ತವೆ. ಕಲುಷಿತ ನೀರು, ಗಾಳಿ, ಸುತ್ತ ಮುತ್ತಲಿನ ರೋಗಿಗಳು, ಮುಖದ ಮೇಲೆ ಕೆಮ್ಮುವುದು, ಸೀನುವುದು, ರೋಗಿಯ ಮನೆಯಲ್ಲಿ ಹರಡಿದ ರೋಗಾಣುಗಳು ಅಕ್ಕಪಕ್ಕದವರಲ್ಲಿ ಸೋಂಕು ಉಂಟುಮಾಡಿ ರೋಗನಿರೋಧತೆ ಬೆಳೆಸುತ್ತವೆ. ಹಾಗಾಗಿ ನಮ್ಮ ಗಲೀಜು ಪರಿಸರಗಳಿಂದ ತುಂಬಾ ಕಷ್ಟವಾದರೂ ಅದರಿಂದ ನಮ್ಮ ದೇಹಗಳಲ್ಲಿ ಬೆಳೆದ ರೋಗ ನಿರೋಧತೆ ಇಂದು ನಮ್ಮನ್ನು ಕೋರೋನಾದಿಂದ ಕಾಪಾಡುತ್ತಿದೆ. ಇದೆ ನಿಜ, ದಿಟ, ಸತ್ಯ ( ನೇರ ನಿತ್ಯ ನಿರಂತರ ಅಂದಂಗೆ )
ಸ್ವಚ್ಛ ನಗರ, ಗಲ್ಲಿಗಳು, ನಿರ್ಮಲ ನದಿ ಕೊಳ ಹೊಂದಿದ ಐರೋಪ್ಯ ರಾಷ್ಟ್ರಗಳ ರೋಗಿಗಳ ದೇಹದ ವ್ಯವಸ್ಥೆ ಕೋರೋನಾ ದಾಳಗೆ ತತ್ತರಿಸಿದೆ. ಭಾರತೀಯರ ದೇಹದಲ್ಲಿ ಕೋರೋನಾ ತತ್ತರಿಸಿ ಸತ್ತು ಹೋಗುತ್ತಿದೆ. ನಮ್ಮ ದೇಶದಲ್ಲಿ ಕೋರೋನಾ ಸತ್ತು ಹೋಗುತ್ತದೆ. ಹಾಗಂತ ನಮ್ಮ ಪರಿಸರ ಇನ್ನೂ ಹದಗೆಡಿಸುವುದಲ್ಲ.
ಈ ದಾಳಿಯಿಂದ ಕಲಿಯಬೇಕಾದಷ್ಟು ಬಹಳಷ್ಟಿದೆ. ಕಲಿಯಬೇಕು ಕಲಿತು ಇದಕ್ಕಿಂತ ಬಲಿಷ್ಠ ಸೋಂಕಿಗೆ ಅಣಿಯಾಗಬೇಕು .ಜನರು ಎಷ್ಟೇ ಶ್ರೀಮಂತರಾದರೂ ರೋಗನಿರೋಧಕ ಶಕ್ತಿ ಇಲ್ಲವಾದರೆ ಎಲ್ಲವೂ ನಿಷ್ಪ್ರಯೋಜಕ…..! ಕೊನೆಗೆ” ಯೋಗಕ್ಷೇಮಂ ವಹಾಮ್ಯಹಂ”.
ಅಣುಶಕ್ತಿ ರಾಷ್ಟ್ರಗಳು, ಯುದ್ದೋಪಕರಣ ತಯಾರಿಕೆಯಲ್ಲಿ ಮಂಚೂಣಿಯಲ್ಲಿರುವ ರಾಷ್ಟ್ರಗಳು ಕರೋನಾದ ಮುಂದೆ ಮಂಡಿಯೂರಿವೆ. ಕೆಲ ಸಾರಿ ತೀವ್ರ ಸ್ವಚ್ಚತೆ ನೈರ್ಮಲ್ಯವೂ ಮಾರಕವಾಗಬಹುದು. ಏನೇ ಇರಲಿ ಎಲ್ಲರಂತೆ ನಾವೂ ಮುನ್ನಚ್ಚರಿಕೆವಹಿಸೋಣ. ಸೋಂಕು ನಿಯಂತ್ರಿಸೋಣ.
ವಿಶೇಷವಾಗಿ ಕಾಯಿಲೆಗಳ ಸಮಯದಲ್ಲಿ ಮಾಡುವ ಪಥ್ಯಗಳನ್ನು ನಿಲ್ಲಿಸಿ ಪುಷ್ಟಿಕರವಾದ ಆಹಾರ ಸೇವಿಸಿ, ಮಸಾಲೆ, ಖಾರ, ತುಪ್ಪ, ಎಣ್ಣೆಗಳನ್ನು ಸೊಂಕಿನ ಛಾಯೆ ಮರೆಯಾಗುವವರೆಗೂ ಬಳಸಿ ಸುರಕ್ಷಿತವಾಗಿರೋಣ.
ಬೇರೆ ದೇಶದಲ್ಲಿ ಬಳುಲುತ್ತಿರುವರಿಗಾಗಿ ಪ್ರಾರ್ಥಿಸೋಣ. ದೇವರು ಅವರ ಕಷ್ಟಗಳನ್ನು ಶೀಘ್ರದಲ್ಲಿ ನಿವಾರಿಸಲಿ.
ಎಲ್ಲರೂ ಧೈರ್ಯದಿಂದಿರಿ, ಸುಳ್ಳು ಸುದ್ದಿ ನಂಬ ಬೇಡಿ, ಹರಡಬೇಡಿ. ಧೈರ್ಯ ಹರಡಿ, ಪ್ರೀತಿ ಹಂಚಿಕೊಳ್ಳಿ.
ಡಾ. ಸಲೀಮ್ ನದಾಫ್
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415