Vydyaloka

ಕೊರೋನಾ.. ಬಾಲಕಿಯರ ಬದುಕಿಗೆ ಬಾಧೆ ಬೇಡ..!

ಕೊರೋನಾ.. ಬಾಲಕಿಯರ ಬದುಕಿಗೆ ಬಾಧೆ ಬೇಡ. ಕೊರೋನಾ ಜೊತೆ ಜಾಗೃತರಾಗಿ ಬದುಕೋಣ. ಇನ್ನೂ ನಾವೆಲ್ಲರು ಶಿಕ್ಷಣದ ಪ್ರಗತಿಯತ್ತ ನಡೆಯೋಣ. ಬಾಲಕಿ ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳೋಣ.

ಕೊರೋನಾ.. ಬಾಲಕಿಯರ ಬದುಕಿಗೆ ಬಾಧೆ ಬೇಡ..!ಕೆಲ ತಿಂಗಳ ಹಿಂದೆ ಹುಟ್ಟಿ ಜಗತ್ತನ್ನೆ ತಲ್ಲಣಿಸಿದ ಶಬ್ದವೆಂದರೆ ಕೊರೋನಾ. ಇದರ ಜೊತೆ ಜೊತೆಯಲ್ಲಿ ಲಾಕ್ಡೌನ್, ಕ್ವಾರಂಟಾಯಿನ್,ಐಸೊಲೆಶನ್ ಶಬ್ದಗಳು ಭಯದ ಜೊತೆ ಸಾಮನ್ಯರ ಬದುಕನ್ನು ಕಿತ್ತಿಕೊಳ್ಳುತ್ತಿವೆ.ಉದ್ಯೋಗ, ವ್ಯಾಪಾರ ಅಷ್ಟೆ ಅಲ್ಲದೆ ಶಿಕ್ಷಣ ಕ್ಷೇತ್ರದ ಮೇಲೆ ಪ್ರತಿಕೂಲವಾದ ಪರಿಣಾಮ ಬೀರುತ್ತಿವೆ. ಇಂದು ಶಾಲೆಗಳು ಮುಚ್ಚಿಕೊಂಡಿವೆ, ತೆರೆಯುವ ಕಾಲ ಸನ್ನಿಹಿತವಿದೆ.  ಯೋಗ್ಯ ನಿಯೋಜನೆಯಲ್ಲಿ ಶಾಲೆಗಳು ತೆರೆದರೆ ಒಳ್ಳೆಯದು. ಆದರೆ ಕೊರೋನಾದಿಂದ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಷು ಬದಲಾವಣೆಗಳು ಉಲ್ಬಣಿಸಬಹುದು. ಅದರಲ್ಲಿ ಬಾಲಕಿಯರು ಶಾಲೆಗೆ ಮೊದಲಿನಂತೆ ಬರಬಹುದಾ ಎಂಬ ಪ್ರಶ್ನೆ ಕಾಡುವ ಸಾಧ್ಯತೆ ಇದೆ.

ಹಲವು ದಶಕಗಳ ಹೋರಾಟದಿಂದ ಕಳೆದೆರಡು ದಶಕಗಳಲ್ಲಿ ಬಾಲಕಿಯರ ಶಿಕ್ಷಣ ಪಡೆಯುವ ಪ್ರಮಾಣ ಹೆಚ್ಚುತ್ತಲಿತ್ತು. ಜಗತ್ತಿನ ಪ್ರತಿ ದೇಶಗಳಲ್ಲಿ ಇವರ ಶಿಕ್ಷಣಕ್ಕಾಗಿ ವಿಶೇಷ ಪ್ರೋತ್ಸಾಹ ಕೊಟ್ಟು ಶಾಲೆಗೆ ಬರುವಂತೆ ಮಾಡುತ್ತಿದ್ದರು. ವಿಶೇಷವಾಗಿ ಆಫ್ರೀಕಾ ಮತ್ತು ಅರಬ ರಾಷ್ಟ್ರಗಳು ಈವಾಗ ತಾನೆ ತಮ್ಮ ಬಾಲಕಿಯರಿಗೆ ಶಾಲೆಗಳಿಗೆ ಕಳುಹಿಸಲು ಪ್ರಾರಂಭ ಮಾಡಿದ್ದವು.  ಆದರೆ ಹಠಾತ್ತನೆ ಬಂದ ಕೊರೋನಾ ಬಾಲಕಿಯರ ಕಲಿಕೆಯಲ್ಲಿ ಕಂಟಕವಾಗುವ ಸಾಧ್ಯತೆ ಇದೆ.
ಲಾಕ್ಡೌನ್ದಲ್ಲಿ ಬಾಲ್ಯ ವಿವಾಹದ ಪ್ರಮಾಣ ಹೆಚ್ಚಿಗೆ:
ಮೊನ್ನೆ ತಾನೆ ವಿಶ್ವ ಮಕ್ಕಳ ಸಂರಕ್ಷಣೆ ಒಕ್ಕೂಟ ಯುನಿಸೆಫ್ ಕೂಡ ಈ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದೆ. ಕೊರೋನಾದಿಂದ ವಿಶ್ವದ ಬಹುಸಂಖ್ಯೆ  ಬಾಲಕಿಯರು ಶಿಕ್ಷಣದಿಂದ ದೂರಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಇದರಲ್ಲಿ ಭಾರತದ ಬಾಲಕಿಯರು ಇದ್ದಾರೆ. ಇನ್ನೂ ಬಾಲಕಿಯರ ಕಲಿಕೆಗೆ ಮತ್ತು ಕೊರೋನಾ ಹಾವಳಿಗೆ ಏನು ಸಂಬಂಧ..? ಎನ್ನುತ್ತಿರಾ. ಕರ್ನಾಟಕ ಸರಕಾರ ಮಕ್ಕಳ ಸಂರಕ್ಷಣೆ ವಿಭಾಗದ “ಕಳೆದೆರಡು ತಿಂಗಳ ಲಾಕ್ಡೌನ್ದಲ್ಲಿ ಬಾಲ್ಯ ವಿವಾಹದ ಪ್ರಮಾಣ ಹೆಚ್ಚಿಗೆ ಆಗಿದೆ..” ಈ ಹೇಳಿಕೆಯನ್ನು ಸೂಕ್ಷ್ಮವಾಗಿ ನೋಡಿದರೆ ನೈಜ ಪರಿಸ್ಥಿತಿ ನಮ್ಮ ಗಮನಕ್ಕೆ ಬರಬಹುದು.
ಮೊದಲೆ ಅಂದಶೃದ್ಧೆಯ ದವಡೆಯಲ್ಲಿ ಸಿಕ್ಕಾಕಿಕೊಂಡು ಆಮ್ಲಜನಕದ ಮೇಲೆ ನಿಂತ ನಮ್ಮ ಸಮಾಜಕ್ಕೆ ಕೊರೋನಾ ಭಯ ಎಣ್ಣೆ ಸುರಿದಿದ್ದು ಒಂದು ವಿಷಯ. ಇನ್ನೂ ಪಾಲಕರ ಬಡತನ ಮತ್ತೊಂದು ಕಾರಣ ಆಗಬಹುದು.  ನಮ್ಮ ದಿನಚರಿ ಇನ್ಮೂಂದೆ ಕೊರೋನಾ ಜೊತೆ ಆರಂಭವಾಗುವದು. ಕಲಿಕೆ ಕೂಡ ಹಾಗೆಯೇ. ಆದರೆ ಕಲಿಕೆ ಮಾತ್ರ ದೊಡ್ಡ ಖರ್ಚಿನ ಸಂಗತಿಯಾಗಿ ಮಾರ್ಪಾಡುತ್ತದೆ. ಏಕೆಂದರೆ ಇದರ ವ್ಯಾಕ್ಸಿನ್ ಶೋಧಿಸಿದರೆ ಅಥವಾ ಶೋಧಿಸದೆ ಹೋದರೆ ಎರಡು ಸಂದರ್ಭಗಳಲ್ಲಿ ಸುರಕ್ಷಿತವಾಗಿಯೆ ಶಾಲೆಗೆ ಹೋಗಬೇಕಾಗುತ್ತದೆ. ಇನ್ಮೂಂದೆ ಮಾಸ್ಕ,  ಸ್ಯಾನಿಟೈಜರ್,  ಹ್ಯಾಂಡವಾಶ್,  ಸಾಬೂನು ಇನ್ನಿತರ ಶೋಧನೆ ಆಗುವ ಕಿಟ್‍ಗಳ ಬಳಿಕೆಯು ಮನೆ ಮತ್ತು ಶಾಲೆಗಳಲ್ಲಿ ಕಡ್ಡಾಯ ಮಾಡಬೇಕಾಗುತ್ತದೆ. ಜೊತೆಯಲ್ಲಿ ಶೈಕ್ಷಣಿಕ ಸಾಹಿತ್ಯಗಳ ಬೆಲೆ ಗಗನಕ್ಕೆ ತಲುಪುವ ಸಾಧ್ಯತೆ ಇದೆ. ಈ ಭಾರ ಬಡಪಾಲಕ ಎತ್ತಬಹುದಾ..?
ಒಂದು ವಿಚಾರದಂತೆ ಇವಳು ಕೊಟ್ಟ ಮನೆಗೆ ಹೋಗುವಳು. ಸುಮ್ಮನೆ ಏಕೆ ವೆಚ್ಚ ಎಂಬ ವಿಚಾರದಲ್ಲಿ ಪಾಲಕರು ತಮ್ಮ ಬಾಲಕರಿಗೆ ಮಾತ್ರ ಶಾಲೆಗೆ ಕಳುಹಿಸಬಹುದು. ಕೊರೋನಾ ಹಾವಳಿಯಲ್ಲಿ ಉಂಟಾದ ಆರ್ಥಿಕ ನಷ್ಟವನ್ನು ಭರಿಸುವ ಸಲುವಾಗಿ ಸಿಕ್ಕ ಸಣ್ಣ ಪುಟ್ಟ ಕೆಲಸಕ್ಕೆ ಬಾಲಕಿಯರನ್ನು ಕಳುಹಿಸುವ ಸಾಧ್ಯತೆಯು ಅಲ್ಲಗಳಿಯುವಂತಿಲ್ಲ. ಹೀಗಾಗಿ ತನ್ನಿಂದ ತಾನೆ ಬಾಲಕಾರ್ಮಿಕ ಪದ್ಧತಿ ಮತ್ತಷ್ಷು ತೆಲೆ ಎತ್ತುವ ಸಾಧ್ಯತೆ ಇದೆ. ಇದು ಬಾಲಕಿಯರ ಕನಸನ್ನು ನುಚ್ಚುನೂರು ಮಾಡುತ್ತದೆ.
ಸ್ತ್ರೀಯರ, ಬಾಲಕಿಯರ ಮೇಲಿನ ದೌರ್ಜನ್ಯಗಳು  ಹೆಚ್ಚಾಗುತ್ತಿವೆ:
ಅತ್ಯಂತ ಆಘಾತದ ವಿಷಯವೆಂದರೆ ವಲಸೆ ಕಾರ್ಮಿಕ ಬಾಲಕಿಯರ ಭವಿಷ್ಯದ ಅದೋಗತಿ. ಹಲವು ವರ್ಷಗಳಿಂದ ಪಟ್ಟಣಗಳಲ್ಲಿ ವಾಸವಿದ್ದ ಪಾಲಕರು ಕೆಲಸಕ್ಕೆಂದು ಹೋದರೆ ಬಾಲಕಿ ಶಾಲೆ ಕಲಿಯಲು ಹೋಗುತ್ತಿದ್ದಳು. ಆದರೆ ಇವರು ಈಗ ಒಮ್ಮೇಲೆ ಹಳ್ಳಿಗಳತ್ತ ಮುಖ ಮಾಡಿದ್ದರಿಂದ ಹಳ್ಳಿಗಳಲ್ಲಿ ಇವರ ಪುನಃಶ್ಚೇತನಕ್ಕೆ ಬಹಳ ಸಮಯಬೇಕು. ಅಲ್ಲಿಯವರಿಗೆ ಬಹುತೇಕ ಇವರಿಗೆ ಶಾಲೆಯಿಂದ ದೂರ ಉಳಿಯಬೇಕಾಗುತ್ತದೆ. ಅದಲ್ಲದೆ ಮೊದಲೆ ಹಳ್ಳಿಗಳಲ್ಲಿ ನೀರಿನ ದೊಡ್ಡ ಸಮಸ್ಯೆ. ಅದರಲ್ಲಿ ವಲಸಿಗರು ಆಗಮನದಂತೆ ನೀರಿನ ದೊಡ್ಡ ಹಾಹಾಕಾರವೇ ಆಗುವವದು. ಸಹಜವಾಗಿ ಪಾಲಕರು ತಾವು ಉದರನಿರ್ವಣೆ ಕಾರಣ ಕೆಲಸಕ್ಕೆ ಹೋಗುವರು ಮತ್ತು ತಮ್ಮ ಹೆಣ್ಣು ಮಕ್ಕಳನ್ನು ನೀರು, ಬಟ್ಟೆ, ಮುಸುರಿ ಇನ್ನಿತರ ಕೆಲಸಕ್ಕೆ ಹಚ್ಚಬಹುದು. ಆದಿವಾಸಿ ಮತ್ತು ಅಲೆದಾಡುವ ಜನಾಂಗದ ಬಾಲಕಿಯರು ಶಾಲೆಗೆ ಮರಳಲು ಹರಸಾಹಸ ಮಾಡಬೇಕಾಗುತ್ತದೆ.
ಒಂದು ವರದಿಯಂತೆ ಲಾಕಡೌವುನ್ ಸಮಯದಿಂದ ಸ್ತ್ರೀಯರ ಮೇಲಿನ ದೌರ್ಜನ್ಯಗಳು ಮತ್ತಷ್ಟು ಹೆಚ್ಚಾಗುತ್ತಿವೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಬಾಲಕಿಯು ಅಪವಾದವಲ್ಲ. ಅದಕ್ಕೆ ಪಾಲಕರು ತಮ್ಮ ಬಾಲಕಿಯರ ಸುರಕ್ಷತೆಯ ವಿಚಾರ ಮಾಡಿ ಮನೆಯಲ್ಲಿ ಕೂಡಿಸಬಹುದು. ಇಲ್ಲದೆ ಆದಲ್ಲಿ ಬಾಲ್ಯವಿವಾಹದ ಮಾರ್ಗ ಅನುಸರಿಸುತ್ತಾರೆ. ಅದಲ್ಲದೆ ಬಾಲ್ಯ ವಿವಾಹಕ್ಕೆ ಆರ್ಥಿಕ ಪರಿಸ್ಥಿಯು ಕಾರಣ ಆಗುತ್ತದೆ. ಇದು ಬಾಲಕಿಯರ ಕಲಿಕೆ ಅರ್ಧದಲ್ಲಿ ನಿಲ್ಲಿಸುತ್ತದೆ.
ಕೆಲವೊಂದು ದೇಶಗಳಲ್ಲಿ ಅಂಧ ಧರ್ಮದ ಜನ ಕೊರೋನಾ ಹರಡುವಿಕೆಗೆ ಹೆಣ್ಣು ಶಾಲೆ ಕಲಿತು ಮುಂದೆ ಬಂದು ಸ್ವತಂತ್ರಳಾಗಿ ತಿರುಗುದೆ ಕಾರಣ ಎಂದು ಬಿಂಬಿಸುತ್ತಿದ್ದಾರೆ. ನೈಜೇರಿಯಾ,  ಸಿರಿಯಾ,  ಅಪಘಾನಿಸ್ತಾನ,  ಪಾಕಿಸ್ತಾನಗಳಂತಹ ಆತಂಕಿ ಹಾವಳಿ ರಾಷ್ಟ್ರಗಳಲ್ಲಿ ಈ ಕೊರೋನಾ ಮತ್ತಷ್ಟು ಭಯ ಒಡ್ಡಿದೆ. ಅಲ್ಲಿಯ ಪಾಲಕ ಬಾಲಕಿಯನ್ನು ಶಾಲೆಗೆ ಕಳುಹಿಸುವದು ಅನುಮಾನ ಎಂದು ಹೇಳಲಾಗುತ್ತಿದೆ. ಅದರಂತೆ ಕೆಲಸ ಮತ್ತು ದುಡಿಮೆ ಇಲ್ಲದ ಅದೆಷ್ಟೋ ಜನರಿಗೆ ಶಿಕ್ಷಣ ಕೊಡುವದು ದೊಡ್ಡ ಸಮಸ್ಯೆಯೆ ಸರಿ.
ಅದಕ್ಕಾಗಿ ಜಗತ್ತಿನ ಎಲ್ಲ ದೇಶಗಳು ಯುನಿಸೆಫ್‍ದ ಮಾರ್ಗದರ್ಶನ ಮತ್ತು ದೇಶದ ಶಿಕ್ಷಣ ತಜ್ಞರ ಸಲಹೆ ಮೇರೆಗೆ ಶಿಕ್ಷಣವನ್ನು ಪ್ರಾರಂಭಿಸಬೇಕಿದೆ. ಎಲ್ಲಕ್ಕಿಂತ ಮಹತ್ವದ್ದು ಪ್ರತಿ ಕುಟುಂಬಕ್ಕೆ ದುಡಿಮೆ ಮತ್ತು ಆರ್ಥಿಕ ಸಹಾಯ ಒದಗಿಸುವದು. ಕುಡುಂಬದ ಸ್ಥಿರತೆ ಕಾಪಾಡಿ ಆತ್ಮಸ್ಥೈರ್ಯ ತುಂಬಿದರೆ ಬಾಲಕಿ ಎದುರಿಸುವ ಗಂಡಾಂತರ ತಕ್ಷಣ ನಿಲ್ಲಿಸಬಹುದು. ಮತ್ತಷ್ಟು ಕಠಿಣವಾದ ಕಾನೂನು ಜಾರಿ ಮಾಡುವ ಅವಶ್ಯಕತೆ ಇದ್ದರೆ ಮಾಡಬಹುದು. ಅದಲ್ಲದೆ ಸರಕಾರಗಳು ಕೇವಲ ಶಾಲೆಗಳನ್ನು ಪ್ರಾರಂಬಿಸಿ ಎಂದು ಆದೇಶ ಹೊರಡಿಸದೆ, ಕೊರೋನಾ ಶಾಲೆಗೆ ಬರಬಾರದು. ಇದಕ್ಕೆ  ಕಟ್ಟುನಿಟ್ಟಿನ ಉಪಾಯ ಕೈಗೊಳ್ಳಬೇಕು. ಮಕ್ಕಳಿಗೆ ಆರೋಗ್ಯ ಮತ್ತು ಚಿಕಿತ್ಸೆಯ ಕುರಿತು ವಿಶೇಷ ಸೌಲಭ್ಯಗಳನ್ನು ಕೊಡಬೇಕು.
ಈ ವೈರಾಣುವಿನ ಅಸ್ತ್ರ ಸಿಗುವವರೆಗೆ ಖಾಸಗಿ ಕಾನ್ವೆಂಟ್ ಶಾಲೆಗಳನ್ನು ತೆರೆಯುವ ಅನುಮತಿ ಕೊಡುವದು ಆಘಾತಕಾರಿ ಆಗಬಹುದು. ಜೊತೆಯಲ್ಲಿ ಸಾಮಾಜಿಕ ಜಾಗೃತಿಯು ಮಹತ್ವದ್ದಾಗಿದೆ. ಇಲ್ಲದೆ ಹೋದರೆ ಬಾಲಕಿ ಭವಿಷ್ಯಕ್ಕೆ ಈ ಕೊರೋನಾ ಬಾಧೆ ಒಡ್ಡುವದು. ಕೊರೋನಾ ವೈರಾಣು ಜನರ ಜೀವಕ್ಕಿಂತ ಹೆಚ್ಚು ಅವರ ಬದುಕಿನ ಮೇಲೆ ಹಲ್ಲೆ ಮಾಡಿದೆ. ಅಂದರೆ ನಾವು ವೈರಾಣು ಮಾಡಿದ ಸಮಾಜದ ಮೇಲಿನ ಹಲ್ಲೆಯನ್ನು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಮುಂದೆ ಸಾಗಬೇಕಿದೆ. ಕೊರೋನಾ ಜೊತೆ ಜಾಗೃತರಾಗಿ ಬದುಕೋಣ. ಇನ್ನೂ ನಾವೆಲ್ಲರು ಶಿಕ್ಷಣದ ಪ್ರಗತಿಯತ್ತ ನಡೆಯೋಣ. ಬಾಲಕಿ ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳೋಣ.

ಮಲಿಕಜಾನ್ ಶೇಖ್
ಜಾನ್ ಹೌಸ್‘, ಪ್ಲಾಟ್ ಕ್ರ.709/31, ಬಾಸಲೇಗಾಂವ ರೋಡಅಕ್ಕಲಕೋಟ- 413216
ಸಂಪರ್ಕ: 9423468808

Share this: