Vydyaloka

ಕೋರೋನಾ‌ ಗಣಿತ-ಕರೋನಾ ಹೇಗೆ ಹರಡುತ್ತದೆ?

ಕೋರೋನಾ‌ ಗಣಿತ-ಕರೋನಾ ಹೇಗೆ ಹರಡುತ್ತದೆ?ಸಾಮಾಜಿಕ ಅಂತರ, ಪ್ರತ್ಯೇಕಿಸವಿಕೆ (Quarantine) ಹಾಗೂ ಬೇರ್ಪಡಿಕೆಯಂತಹ(Isolation) ಕಟ್ಟಿನಿಟ್ಟಿನ‌ ಕ್ರಮಗಳಿಂದ ಕೋರೋನಾ ಸೆದೆಬಡಿಯುವುದು ಸುಲಭ. 

ಸಾಂಕ್ರಮಿಕ ಕೋರೋನಾ‌ ಹರಡುವದನ್ನುಗಣಿತದ ಮೂಲಕ‌ತಿಳಿದುಕೊಳ್ಳೋಣ. ವೈರಸ್ ಹರಡ ಬೇಕೆಂದರೆ ಅದರ ಸಂಖ್ಯೆ ವೃದ್ಧಿಸಬೇಕು. ಸೊಂಕಿತರ ದೇಹದಲ್ಲಿ ವೈರಸ್ ಸಂಖ್ಯೆ  ಹೆಚ್ಚಾದಂತೆ,ಅವರಿಂದ ವೈರಸ್ ಹರಡುವ ಸಂಖ್ಯೆಗಳು ಹೆಚ್ಚು.
ವೈರಸ್  ಹರಡುವಿಕೆಯನ್ನು R0 -R nought ( ನಾಟ್) ಎಂಬ ಗಣಿತ ಸಂಕೇತದಿಂದ‌ ಗುರುತಿಸಲಾಗುತ್ತದೆ .
                     ಹೊಸ‌ದಾಗಿ ಸೋಂಕಿತರು
    R0 =  ————————————
               ಮೂಲ ಸೋಂಕಿತರು( ಹಳೆಯ ರೋಗಿಗಳು)

R0 ದು ಮೂರು ಸಂಭವನೀಯತೆಗಳು ಸಾಧ್ಯ .
1. ಒಂದು ಸಾಂಕ್ರಾಮಿಕದ R0 ಬೆಲೆ ಒಂದಕ್ಕಿಂತ ಕಡಿಮೆ‌ಇದ್ದೇ (R0>1) ಅಂದರೆ ,ಈ ಸೊಂಕಿತರಿಂದ ಹೊಸಬರಿಗೆ ಸೊಂಕು ಹರಡುವದಿಲ್ಲ .ಹಾಗಾಗಿ ಈ ತರಹದ ಸಾಂಕ್ರಾಮಿಕಗಳು ಹರಡದೆ ಒಂದೆ ರೋಗಿಯಲ್ಲಿ‌ ಕೊನೆಗಾಣುತ್ತವೆ .
2. R0=೧ ಅಂದರೆ ಇದರ ಬೆಲೆ ಒಂದಾಗಿದ್ದರೆ ,ಒಬ್ಬ ಸೊಂಕಿತನಿಂದ‌ ಒಂದೆ ವ್ಯಕ್ತಿಗೆ ಹರಡುತ್ತದೆ ( ಮುಂಚಿತ ಲಸಿಕೆ ಹಾಕಿಕಿಸಿಕೊಳ್ಳದ ಹಾಗೂ ಸಮುದಾಯ ರೋಗನಿರೋಧತೆ ಹೊಂದದವರಲ್ಲಿ).ಈ ಸಾಂಕ್ರಾಮಿಕ ಹರಡುತ್ತದೆ ಆದರೆ ಹೆಚ್ಚಿನ ಜನರಲ್ಲಿ ಹರಡುವದಿಲ್ಲ .
3. R0 >1 ಇದರ ಸಂಖ್ಯೆ ಒಂದಕ್ಕಿಂತ ಹೆಚ್ಚಿದ್ದರೆ,ಸೋಂಕಿತ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳಿಗೆ ಸೊಂಕು ಹರಡುತ್ತಾನೆ‌. ಈ ರೋಗಗಳು ಪ್ರಬಲ‌ ಸಾಂಕ್ರಾಮಿಕ ವಾಗಬಹುದು. ಜಾಗತಿಕ ಸಾಂಕ್ರಾಮಿಕವಾಗಬಹುದು ಉದಾ: ಎಬೋಲಾ R0=2 ಅಂದರೆ ಒಬ್ಬ ಎಬೋಲಾ ರೋಗಿ ಇಬ್ಬರು ಹೊಸಬರಿಗೆ ರೋಗ ಹರಡುತ್ತಾನೆ.
ಎಡ್ಸ/ಎಚ್ ಐವಿ R0=4, ಸಾರಾಸರಿ ನಾಲ್ಕು ಜನರಿಗೆ ಹರಡಬಹುದು .
ದಡಾರ R0=೧೮ ಒಬ್ಬರಿಂದ ಹೊಸ ಹದಿನೆಂಟು ರೋಗಿಗಳು .
ಇಂದಿನ ಕಥಾನಾಯಕ ಕೋರೋನಾದ R0= 1.4-3.9 ಅಂದರೆ ಒಬ್ಬ ಕೋರೋನಾ‌ ರೋಗಿ‌ 1-4 ಸರಾಸರಿ ಜನರಿಗೆ ಅಥವಾ ಹತ್ತು ಕೋರೋನಾ ಸೋಂಕಿತರಿಂದ ಹದಿನಾಲ್ಕರಿಂದ – ಮೂತ್ತೋಂಬತ್ತು ಜನರಿಗೆ ಸೊಂಕು ಹರಡುತ್ತದೆ .
ಹರಡುವಿಕೆಯ ಮೇಲೆ‌ಪರಿಣಾಮ ಬೀರುವ ಮುಖ್ಯ ಅಂಶಗಳು:
1. ಪರಿಸರ, ಸದ್ಯಕ್ಕೆ ಭಾರತ
2. ಜನರ ನಡವಳಿಕೆ
3. ದುರ್ಬಲ ಜನಸಂಖ್ಯೆ
4. ಸೋಂಕತರ ಒಡನಾಟದಲ್ಲಿರುವ ವ್ಯಕ್ತಿಗಳ ಸಂಖ್ಯೆ
ಹರಡುವಿಕೆಯ ಸಂಖ್ಯೆ ತುಂಬ ಕಡಿಮೆ‌ ಇರುದರಿಂದ ಸಾಮಾಜಿಕ ಅಂತರ, ಪ್ರತ್ಯೇಕಿಸವಿಕೆ (Quarantine) ಹಾಗೂ ಬೇರ್ಪಡಿಕೆಯಂತಹ(Isolation) ಕಟ್ಟಿನಿಟ್ಟಿನ‌ ಕ್ರಮಗಳಿಂದ ಕೋರೋನಾ ಸೆದೆಬಡಿಯುವುದು ಸುಲಭ. ಸೋಂಕಿತರ ಬೇರ್ಪಡಿಸಿ ಕಾಯಿಲೆ‌ ವಾಸಿಮಾಡಿಸಿಕೊಂಡು ಉಳಿದವರು ಕಟ್ಟುನಿಟ್ಟಿನ‌ ಮುಂಜಾಗ್ರತೆಯ ವಹಿಸಿದರೆ ಕೋರೋನಾದ ಮೇಲೆ ಜಯ ಕಷ್ಟವೇನಲ್ಲ.

ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this: