Vydyaloka

ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ

ಬಂಜೆತನಕ್ಕೆ ಸ್ತ್ರೀಯೊಬ್ಬಳೇ  ಕಾರಣಳಲ್ಲ. ಬಂಜೆತನವು ಸ್ತ್ರೀ ಮತ್ತು ಪುರುಷರಿಬ್ಬರಿಗೂ ಅನ್ವಯಿಸುವಂತಹದ್ದಾಗಿದೆ. ಆದರೆ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಹಲವಾರು ಕಾರಣಗಳು `ಬಂಜೆತನ’ವನ್ನು ಹುಟ್ಟುಹಾಕಬಹುದು.

ಇಂದು ವಿಶ್ವದಾದ್ಯಂತ `ಬಂಜೆತನ’ದ ಸಮಸ್ಯೆಯನ್ನು ಎಲ್ಲಾ ದೇಶಗಳೂ ಎದುರಿಸುತ್ತಿವೆ. ಇದು ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಬಂಜೆತನಕ್ಕೆ ದಂಪತಿಗಳಿಬ್ಬರೂ ಕಾರಣರಾಗುತ್ತಾರೆ. ಸ್ತ್ರೀಯೊಬ್ಬಳೇ ಕಾರಣಳಲ್ಲ. ಬಂಜೆತನವುಂಟಾಗುವುದಕ್ಕೆ ನಾನಾ ರೀತಿಯ ಕಾರಣಗಳು ಕಂಡುಬರುತ್ತವೆ. ಬಂಜೆತನವು ಸ್ತ್ರೀ ಮತ್ತು ಪುರುಷರಿಬ್ಬರಿಗೂ ಅನ್ವಯಿಸುವಂತಹದ್ದಾಗಿದೆ. ಆದರೆ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ದಂಪತಿಗಳಲ್ಲಿ ಬಂಜೆತನ ಸಮಸ್ಯೆಗೆ ಪುರುಷನೇ ಹೆಚ್ಚಿನ ಕಾರಣನಾಗುತ್ತಾನೆ.

ದೈಹಿಕ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು ರಕ್ತಸಂಬಂಧ ವೈವಾಹಿಕತೆ, ಕಲುಷಿತಗೊಂಡಿರುವ ಪರಿಸರ, ರಾಸಾಯನಿಕ ಬಳಕೆಯಿಂದ ಬೆಳೆಯುವ ಧಾನ್ಯಗಳು ಹಾಗೂ ಆಹಾರ ಪದಾರ್ಥಗಳು, ಮದ್ಯಪಾನ, ಧೂಮಪಾನ ಇತ್ಯಾದಿಗಳಿಂದ ಬಂಜೆತನ ಹೆಚ್ಚಾಗುತ್ತಿವೆಯಲ್ಲದೇ ನಾನಾ ರೀತಿಯ ಕಾಯಿಲೆಗಳು ಉಲ್ಬಣಗೊಳ್ಳುವುದಕ್ಕೆ ಕಾರಣವಾಗಿವೆ. ಪುರುಷನ ಪಾಲು ಶೇ.42ರಷ್ಟಿದ್ದರೆ, ಸ್ತ್ರೀಯರ ಪಾಲು ಶೇ. 38ರಷ್ಟಿರುತ್ತದೆ. ಬಂಜೆತನಕ್ಕೆ ಒಂದೇ ಕಾರಣ ಎಂದು ಹೇಳಲಾಗುವುದಿಲ್ಲ. ಹಲವಾರು ಕಾರಣಗಳು `ಬಂಜೆತನ’ವನ್ನು ಹುಟ್ಟುಹಾಕಬಹುದು.

ಸ್ತ್ರೀಯರಲ್ಲಿ ಬಂಜೆತನಕ್ಕೆ ಕಾರಣವಾಗುವ ಅಂಶಗಳು ಏನು?

ಹಾರ್ಮೋನ್ ಏರುಪೇರಾಗುವುದರಿಂದ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುವ ಅಂಶಗಳು ಏನು?

ಸ್ತ್ರೀ-ಪುರುಷರಿಬ್ಬರಲ್ಲಿನ ಬಂಜೆತನಕ್ಕೆ ಕಾರಣಗಳು ಏನು?

 ಲೈಂಗಿಕತೆ ಮತ್ತು ಲೈಂಗಿಕ ಕ್ರಿಯೆ ನಮ್ಮ ಜೀವನದ ಒಂದು ಭಾಗ. ಲೈಂಗಿಕ ಕ್ರಿಯೆಯು ಬರೀ ಸಂತಾನ ಪ್ರಾಪ್ತಿಗೆ ಮಾತ್ರ ಸೀಮಿತವಲ್ಲ,  ಸಮಸ್ಯೆಗಳು ಉಲ್ಬಣಗೊಂಡಾಗ ಮಾತ್ರ ವೈದ್ಯರನ್ನು ಸಂದರ್ಶಿಸುತ್ತಾರೆ. ಕೆಲವೊಮ್ಮೆ ಸಂಪೂರ್ಣ ಮಾಹಿತಿಯನ್ನೂ ನೀಡುವುದಿಲ್ಲ. ಈ ಮನೋಭಾವ ಪುರುಷರಿಗೆ ಹೋಲಿಸಿದರೆ ಸ್ತ್ರೀಯರಲ್ಲೇ ಜಾಸ್ತಿ ಕಂಡುಬರುತ್ತದೆ. ಕೆಲವೊಮ್ಮೆ ಪುರುಷರು ತಮ್ಮ ನ್ಯೂನ್ಯತೆಗಳನ್ನು ಮರೆಮಾಚಿ ಸಂಗಾತಿಯನ್ನೇ ದೂಷಿಸುವುದುಂಟು. ನಮ್ಮ ದೇಶದಲ್ಲಿ ಅನೇಕರು ಲೈಂಗಿಕತೆ ಮತ್ತು ಲೈಂಗಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಿಂಜರಿಯುತ್ತಾರೆ. ಲೈಂಗಿಕ ಸಮಸ್ಯೆಗಳನ್ನು ಗೌಪ್ಯವಾಗಿಡಲು ಯತ್ನಿಸುತ್ತಾರೆ.

ಲೈಂಗಿಕತೆ, ಜನನೇಂದ್ರಿಯಗಳು ಮತ್ತು ಲೈಂಗಿಕ ಕ್ರಿಯೆಗಳ ಬಗ್ಗೆ ಅಪೂರ್ಣ ಮಾಹಿತಿ ಅಥವಾ ಸಮರ್ಪಕ ಜ್ಞಾನ ಇಲ್ಲದಿರುವುದು ಮತ್ತು ಕೆಲಬಗೆಯ ಅಪನಂಬಿಕೆಗಳಿಂದಲೂ ಲೈಂಗಿಕ ಸಮಸ್ಯೆಗಳು ಉದ್ಭವಿಸುತ್ತವೆ.  ಇದರಿಂದ ಸ್ತ್ರೀ ಪುರುಷರ ನಡುವೆ ಅನ್ಯೋನ್ಯತೆ ಬೆಳೆಯುವುದಲ್ಲದೇ ಸುಖ ಸಂತೃಪ್ತಿಯನ್ನು ಒದಗಿಸುವ ಒಂದು ಮಾಧ್ಯಮವೂ ಆಗಿದೆ. ಲೈಂಗಿಕ ಕ್ರಿಯೆಯಿಂದ ವ್ಯಕ್ತಿಯ ಶಾರೀರಿಕ, ಮಾನಸಿಕ, ಭಾವನಾತ್ಮಕ ಅಭಿವೃದ್ಧಿಯಾಗುತ್ತದೆ, ಸುಖನಿದ್ರೆಗೆ, ಹೃದಯದ ಆರೋಗ್ಯಕ್ಕೆ, ದೇಹದ ರೋಗ ನಿರೋಧಕ ಶಕ್ತಿ (Immunity) ಬಲಗೊಳ್ಳಲು ಹೀಗೆ ಇನ್ನೂ ಅನೇಕ ಧನಾತ್ಮಕ ಪರಿಣಾಮಗಳು ಆಗುತ್ತವೆ.

ಲೈಂಗಿಕ ಆರೋಗ್ಯಕ್ಕೆ ಹತ್ತು ಸೂತ್ರಗಳು

ಡಾ. ಸಿದ್ದುಕುಮಾರ್ ಘಂಟಿ
ಬಸವಶ್ರೀ ಆಯುರ್ವೇದ ಸೇವಾ ಕೇಂದ್ರ
ಇಎಸ್‍ಐ ಆಸ್ಪತ್ರೆ ಮುಖ್ಯರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ದೂ.: 9845042755

Share this: