Vydyaloka

ಅನಾರೋಗ್ಯವನ್ನು ಗುಣಪಡಿಸುವುದಕ್ಕಿಂತಲೂ ತಡೆಗಟ್ಟುವುದು ಉತ್ತಮ

ಅನಾರೋಗ್ಯವನ್ನು ಗುಣಪಡಿಸುವುದಕ್ಕಿಂತಲೂ ತಡೆಗಟ್ಟುವುದು ಉತ್ತಮ. ಭಾರತದಲ್ಲಿನ ಪ್ರಿವೆಂಟಿವ್ ಹೆಲ್ತ್‌ಕೇರ್ ಮಾರುಕಟ್ಟೆಯು 2022 ರ ವೇಳೆಗೆ ಗಾತ್ರದಲ್ಲಿ 106 ಶತಕೋಟಿ ಡಾಲರ್ ಗೆ ಏರಿಕೆಯಾಗುವ ಸಾಧ್ಯತೆಯಿದೆ.

ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ರೋಗದ ಚಿಹ್ನೆಗಳು ಮತ್ತು ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕಾಗಿ ಕಾಯಬೇಕಾದ ದಿನಗಳು ಇನ್ನು ಮುಗಿದವು. ಈ ಆಧುನಿಕ ಯುಗದಲ್ಲಿ, ನಿಮ್ಮ ರಕ್ತದ ಕೇವಲ 2 ಮಿಲಿಯಿಂದ ನಡೆಯುವ ಪರೀಕ್ಷೆಯು ಕುಟುಂಬದ ಇತಿಹಾಸ ಮತ್ತು ಜೀವನಶೈಲಿಯ ಆಧಾರದ ಮೇಲೆ ಅಸ್ವಸ್ಥತೆಯ ಕಾರಣ/ ಸಾಧ್ಯತೆಯ ಭವಿಷ್ಯ ನುಡಿಯಬಹುದು. ಎಲ್ಲೆಡೆ ಹುಟ್ಟಿಕೊಳ್ಳುತ್ತಿರುವ ಸರಣಿ ಲ್ಯಾಬ್  ಮತ್ತು ಮಾಧ್ಯಮ ಜಾಗೃತಿ ಕಾರಣ ಭಾರತೀಯರು ಇಂದು ಆರೋಗ್ಯ ತಡೆಗಟ್ಟುವ ತಪಾಸಣೆ ಪರಿಕಲ್ಪನೆಗೆ ತೆರೆದುಕೊಳ್ಳುತ್ತಿದ್ದಾರೆ. ಈ ಪ್ರವೃತ್ತಿ ಯುವಕರು ಮತ್ತು ಹಿರಿಯರು ಇಬ್ಬರನ್ನೂ ಸಮಾನವಾಗಿ ಸೆಳೆಯುತ್ತಿದೆ!

ಆರೋಗ್ಯಕರ ಭಾರತನಾವು ವಾಸ್ತವದಿಂದ ದೂರವಿರುತ್ತೇವೆಯೇ?

ಜೀವನಶೈಲಿ ಕಾಯಿಲೆಗಳಾದ ಮಧುಮೇಹ, ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ನಮ್ಮನ್ನು ಬಹಳ ಹಿಂದಿನಿಂದಲೂ ಬಾಧಿಸುತ್ತಿವೆ. 1990 ಮತ್ತು 2016 ರ ನಡುವೆ ಈ ರೋಗಗಳ ಹರಡುವಿಕೆಯು, ಪ್ರತಿ ಭಾರತೀಯ ರಾಜ್ಯಗಳಲ್ಲಿ ಕನಿಷ್ಠ 50% ರಷ್ಟು ಸಾವಿನ ಅಂಕಿ ಅಂಶಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿವರವಾದ ಅಧ್ಯಯನಗಳು ಸೂಚಿಸುತ್ತವೆ. ಪ್ರತಿ ವರ್ಷ, ಸುಮಾರು 5.8 ಮಿಲಿಯನ್ ಭಾರತೀಯರು ಹೃದಯ, ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ಮಧುಮೇಹ.ಶ್ವಾಸಕೋಶದ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ.   2025 ರ ವೇಳೆಗೆ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಭಾರತದ ರೋಗದ ಹೊರೆಯು 75% ಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತವೆ ಎಂದು ನಿರೀಕ್ಷಿಸಲಾಗಿದೆ.

ಆಯುಷ್ಮಾನ್ ಭಾರತ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತರುವ ಮೂಲಕ 10 ಕೋಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ನೀಡುವ ಮೂಲಕ ಭಾರತ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ. ಒಂದು ದೇಶವಾಗಿ, ನಮ್ಮ ಇಡೀ ದೇಶದ ಜನಸಂಖ್ಯೆಗೆ ದೃಢವಾದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸುವುದರಲ್ಲಿ ನಾವು ಇನ್ನೂ ಸಾಗಬೇಕಾಗಿದೆ. ಡಬ್ಲ್ಯುಎಚ್‌ಒ  ನ (2005) ಪ್ರಕಾರ, ಹೃದಯ ಕಾಯಿಲೆಗಳು, ಪಾರ್ಶ್ವವಾಯು ಮತ್ತು ಮಧುಮೇಹದಿಂದಾಗಿ ಭಾರತದ ರಾಷ್ಟ್ರೀಯ ಆದಾಯದಲ್ಲಿ 2005 ರಲ್ಲಿ ಅಂದಾಜು 9 ಬಿಲಿಯನ್ ನಷ್ಟ  ಆಗಿದ್ದು,   ಈ ನಷ್ಟಗಳು ಮುಂದಿನ ದಶಕದಲ್ಲಿ US $ 200 ಶತಕೋಟಿಯನ್ನು ಮೀರುವ ನಿರೀಕ್ಷೆಯಿದೆ. ಇಂತಹ ಸನ್ನಿವೇಶದಲ್ಲಿ, ತಡೆಗಟ್ಟುವ   ಆರೋಗ್ಯ ತಪಾಸಣೆಗೆ ಒತ್ತು ನೀಡಲಾಗುತ್ತದೆ.

ತಡೆಗಟ್ಟುವ ಆರೋಗ್ಯ ರಕ್ಷಣೆ ಮಾರುಕಟ್ಟೆಯ ಬೆಳವಣಿಗೆ ?

ರೆಡ್‌ಸೀರ್ ಕನ್ಸಲ್ಟಿಂಗ್‌ನ ವರದಿಯ ಪ್ರಕಾರ, ಭಾರತದಲ್ಲಿನ ಪ್ರಿವೆಂಟಿವ್ ಹೆಲ್ತ್‌ಕೇರ್ ಮಾರುಕಟ್ಟೆಯು 2022 ರ ವೇಳೆಗೆ ಗಾತ್ರದಲ್ಲಿ 106 ಶತಕೋಟಿ ಡಾಲರ್ ಗೆ ಏರಿಕೆಯಾಗುವ ಸಾಧ್ಯತೆಯಿದೆ. ಸುಮಾರು 130 ಮಿಲಿಯನ್ ಆರೋಗ್ಯ ಪ್ರಜ್ಞೆ ಹೊಂದಿರುವ ವ್ಯಕ್ತಿಗಳು ಆರೋಗ್ಯಕರ ಜೀವನವನ್ನು ಖಚಿತಪಡಿಸಿಕೊಳ್ಳಲು ಪ್ರಿವೆಂಟಿವ್ ಹೆಲ್ತ್‌ಕೇರ್ ತಪಾಸಣಗಳಲ್ಲಿ  ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇತರ ಕೈಗಾರಿಕಾ ವಿಶ್ಲೇಷಕರು, ಕಳೆದ ಐದು ವರ್ಷಗಳಲ್ಲಿ ಪ್ರಿವೆಂಟಿವ್ ಹೆಲ್ತ್‌ಕೇರ್ – ತಡೆಗಟ್ಟುವ ಅರೋಗ್ಯ  ಮಾರುಕಟ್ಟೆಯಲ್ಲಿ 25% ಬೆಳವಣಿಗೆಯನ್ನು ಉಲ್ಲೇಖಿಸಿದ್ದಾರೆ. ಪ್ರಿವೆಂಟಿವ್ ಹೆಲ್ತ್‌ಕೇರ್ ತಪಾಸಣಾ ಸೇವೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. 2019 -20 ರ ಕೇಂದ್ರ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 62, 398 ಕೋಟಿ ರೂ. ಮೀಸಲಿಟ್ಟಿದೆ. ಇದು ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಅತಿ ಹೆಚ್ಚು ಆಗಿದೆ. ಆದರೆ, ಎಫ್‌ಐಸಿಸಿಐನಂತಹ ಉದ್ಯಮ ಸಂಸ್ಥೆಗಳು ಪ್ರಿವೆಂಟಿವ್ ಹೆಲ್ತ್‌ಕೇರ್ ತಪಾಸಣೆಗಾಗಿ  ತೆರಿಗೆ ವಿನಾಯಿತಿಯನ್ನು ರೂ. 20,000 ಗಳಿಗೆ ಮತ್ತು  ನಿಯಮಿತ ಆರೋಗ್ಯ ತಪಾಸಣೆಗಳನ್ನು ಆರಿಸಿಕೊಳ್ಳಲು ರೂ. 5,000ನ್ನು  ತೆರಿಗೆ ವಿನಾಯಿತಿಯನ್ನು ನಿರೀಕ್ಷಿಸುತ್ತಿದ್ದಾರೆ. ಇದರಿಂದಾಗಿ ಆರಂಭಿಕ ರೋಗನಿರ್ಣಯಕ್ಕೆ ಸಹಾಯ ಆಗುತ್ತದೆ ಮತ್ತು ದ್ವಿತೀಯ ಮತ್ತು ತೃತೀಯ ಆರೈಕೆ ಸೌಲಭ್ಯಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ಆದರೆ, ಈ ಪ್ರಸ್ತಾಪವು ಸರ್ಕಾರದೊಂದಿಗೆ ಚರ್ಚಿಸಬೇಕಾಗಿದೆ.

ಅದೇನೇ ಇದ್ದರೂ, ಇದರಿಂದಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಕಾರ್ಪೊರೇಟ್‌ಗಳು ಉದ್ಯೋಗ ಪೂರ್ವ ಆರೋಗ್ಯ ತಪಾಸಣೆಗಳನ್ನು ಹೇಗೆ ಕಡ್ಡಾಯಗೊಳಿಸುತ್ತಿದ್ದಾರೆ ಎಂಬುದನ್ನು ಇದು ಪ್ರೋತ್ಸಾಹಿಸುತ್ತಿದೆ. ಕಾರ್ಪೊರೇಟ್‌ಗಳು ಕೇವಲ ಉದ್ಯೋಗ ಪೂರ್ವರಿಗಲ್ಲದೇ, ಅವರ ಎಲ್ಲಾ ಉದ್ಯೋಗಿಗಳಿಗೆ ವಾರ್ಷಿಕ ತಪಾಸಣೆಗೂ ಈ ಅನುಕೂಲ ನೀಡುತ್ತಿದ್ದಾರೆ. ಮುಂದಿನ ರಕ್ತಸಂಬಂಧಿಗಳಿಗೆ ರಿಯಾಯಿತಿ ಪ್ಯಾಕೇಜ್‌ಗಳ ಪ್ರಯೋಜನವನ್ನು ವಿಸ್ತರಿಸುವುದು ಈ ವಲಯದ ಬೆಳವಣಿಗೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ.

ತಂತ್ರಜ್ಞಾನವು ಕ್ಷೇತ್ರವನ್ನು ಚಾಲನೆ ಮಾಡುತ್ತಿದೆ:

ಪ್ರಿವೆಂಟಿವ್ ಹೆಲ್ತ್‌ಕೇರ್ ಎಂಬುದು ಈಗ ಎರಡನೇ ಮತ್ತು ಮೂರನೇ ಹಂತದ ಜನರ ಮತ್ತು ಭೌಗೋಳಿಕತೆಯನ್ನು ತಲುಪುತ್ತಿದೆ.  ಅಪ್ಲಿಕೇಶನ್‌ಗಳು, ಸ್ಮಾರ್ಟ್ ಕೈಗಡಿಯಾರಗಳು ಮತ್ತು ಫಿಟ್‌ನೆಸ್ ಬ್ಯಾಂಡ್‌ಗಳ ಲಭ್ಯತೆಯು ಬಳಕೆದಾರರಿಗೆ ಅವರ ಆರೋಗ್ಯದ ಬಗ್ಗೆ ನಿಯಮಿತವಾಗಿ ನಿಗಾ ಇಡಲು ಅನುಕೂಲವಾಗುತ್ತಿದೆ. ಭವಿಷ್ಯದಲ್ಲಿ, ಈ ವಲಯವು ಆರೋಗ್ಯ ಕ್ಷೇತ್ರಕ್ಕಿಂತ ಮುಂಚಿತವಾಗಿ ತಂತ್ರಜ್ಞಾನದಿಂದಾಗಿ ನೀಡಲಿರುವ ಈ ಅನುಕೂಲದಿಂದಾಗಿ  ಹೊಸ ಆಯಾಮದ ಸಾಕ್ಷಿಯಾಗಲಿದೆ. ಬಳಕೆದಾರರು ಆರೈಕೆಯನ್ನು ಪಡೆಯಲು ಕೈಗೆಟುಕುವ ಸ್ಥಳಗಳನ್ನು ಹುಡುಕಲು, ಅವರ ಪರೀಕ್ಷೆಗಳನ್ನು ನಿಗದಿಪಡಿಸಲು ಜ್ಞಾಪನೆಗಳನ್ನು ಹೊಂದಿಸಲು, ಪರೀಕ್ಷೆಗಳು ಪೂರ್ಣಗೊಂಡಾಗ ಗುರುತಿಸಲು ಮತ್ತು ಇನ್ನೂ ಹೆಚ್ಚಿನವುಗಳಿಗೆ ಸಹಾಯ ಮಾಡಲು ಹೊಸ ಪ್ರಿವೆಂಟಿವ್ ಹೆಲ್ತ್‌ಕೇರ್ ಸಾಧನವನ್ನು ಪ್ರಾರಂಭಿಸಲು ಫೇಸ್‌ಬುಕ್ ಈಗಾಗಲೇ ಅಮೇರಿಕಾದಲ್ಲಿನ ಆರೋಗ್ಯ ಸಂಸ್ಥೆಗಳೊಂದಿಗೆ  ಸೇವೆಗಳಿಗಾಗಿ ಕೈಜೋಡಣೆ-ಸಹಯೋಗದಂತಹ ಯೋಜನೆಗಳನ್ನು  ಪ್ರಾರಂಭಿಸಿದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟ, ರಕ್ತದೊತ್ತಡ ಮತ್ತು ಮೂತ್ರದ ವಿಶ್ಲೇಷಣೆಗಾಗಿ ಪಾಯಿಂಟ್-ಆಫ್-ಕೇರ್ ಪರೀಕ್ಷಾ ಉತ್ಪನ್ನಗಳು ಈಗಾಗಲೇ ತಮ್ಮ ಛಾಪು ಮೂಡಿಸಿವೆ.

ತಡೆಗಟ್ಟುವ ಆರೋಗ್ಯ ತಪಾಸಣೆ:

ಇತ್ತೀಚಿನ ದಿನಗಳಲ್ಲಿ ಸರಣಿ ಲ್ಯಾಬ್‌ಗಳು, ಜನಸಂಖ್ಯೆಯ ವಯಸ್ಸು ಮತ್ತು ಲಿಂಗವನ್ನು ಅವಲಂಬಿಸಿ ವೈಯಕ್ತಿಕ ವಿಶೇಷಣಗಳು ಅಥವಾ ಆದ್ಯತೆಯ ಪ್ರಕಾರ ಮಾಡಿದ ಆರೋಗ್ಯ ತಪಾಸಣೆ ಪ್ಯಾಕೇಜ್‌ಗಳನ್ನು ನೀಡುತ್ತವೆ. ನಿರ್ದಿಷ್ಟ ಆರೋಗ್ಯ ಸ್ಥಿತಿಯನ್ನು ಕಂಡುಹಿಡಿಯಲು ಉದ್ದೇಶಿಸಲಾದ ಪ್ಯಾಕೇಜ್‌ಗಳಲ್ಲಿ ಮನೆ ಸಂಗ್ರಹ ಸೇವೆಗಳು ಮತ್ತು ವರದಿ ಮಾಡಲು ತ್ವರಿತ ಪ್ರತಿಕ್ರಿಯೆ ಸಮಯ ಈ ವಲಯದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ರೋಗನಿರ್ಣಯ ಸಾಧನಗಳು ಮತ್ತು ತಯಾರಕರ ಪಾತ್ರವು ಬಹಳ ನಿರ್ಣಾಯಕವಾಗಿದೆ. ಸ್ಪರ್ಧೆಯನ್ನು ಉಳಿಸಿಕೊಳ್ಳಲು, ಸರಣಿ ಲ್ಯಾಬ್‌ಗಳು ರೋಗನಿರ್ಣಯದ ಉತ್ಪನ್ನಗಳನ್ನು ಅವಲಂಬಿಸಿವೆ. ಅದು ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಆರ್ಥಿಕತೆಯ ಮಟ್ಟವನ್ನು ಪೂರೈಸಲು ಕೈಗೆಟುಕುವಿಕೆಯನ್ನು ನೀಡುತ್ತದೆ ಮತ್ತು ಅಲಭ್ಯತೆಯನ್ನು ಕಡಿಮೆ ಮಾಡಲು ಮಾರಾಟದ ನಂತರದ ಬಲವಾದ ಸೇವೆಯಾಗಿದೆ.ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ನಾಗರಿಕರು ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ತಡೆಗಟ್ಟುವ ಆರೋಗ್ಯ ಪ್ಯಾಕೇಜ್ ಅನ್ನು ಆರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.

ಭಾರತದ ಅತಿದೊಡ್ಡ ಇನ್-ವಿಟ್ರೊ ಡಯಾಗ್ನೋಸ್ಟಿಕ್ ಕಂಪನಿಯಾದ ಟ್ರಾನ್ಸ್ಏಷಿಯಾ ಬಯೋ-ಮೆಡಿಕಲ್ಸ್ ಲಿಮಿಟೆಡ್, ದೂರದ ಪ್ರದೇಶಗಳಲ್ಲಿಯೂ ಸಹ ತಮ್ಮ ಕೇಂದ್ರಗಳನ್ನು ಸಜ್ಜುಗೊಳಿಸಲು ಪ್ರಮುಖ ಸರಪಳಿ ಪ್ರಯೋಗಾಲಯಗಳಿಂದ ವಿಶ್ವಾಸಾರ್ಹವಾಗಿದೆ. ಪ್ರತಿವರ್ಷ ನಮ್ಮ ಸಾಧನಗಳಲ್ಲಿ 150 ಕೋಟಿಗೂ ಹೆಚ್ಚು ರಕ್ತ ಪರೀಕ್ಷೆಗಳನ್ನು ಮಾಡಲಾಗುತ್ತದೆ, ಇವುಗಳಲ್ಲಿ ಸಾಕಷ್ಟು ಪ್ರಮಾಣವು ತಡೆಗಟ್ಟುವ ಆರೈಕೆಗಾಗಿರುತ್ತದೆ. ಟ್ರಾನ್ಸ್ಏಷಿಯಾ, ಭಾರತದಾದ್ಯಂತ 75,000 ಕ್ಕೂ ಹೆಚ್ಚು ಉಪಕರಣಗಳನ್ನು ಸ್ಥಾಪಿಸಿದೆ. ವಾಸ್ತವವಾಗಿ, ಪ್ರತಿ 2 ಸೆಕೆಂಡಿಗೆ, 1 ಪರೀಕ್ಷೆಯನ್ನು ಟ್ರಾನ್ಸ್ಏಷಿಯಾ ಉಪಕರಣಗಳಲ್ಲಿ ನಡೆಸಲಾಗುತ್ತಿದೆ. ಭಾರತೀಯ ಐವಿಡಿ  ಉದ್ಯಮದಲ್ಲಿ ಅತಿದೊಡ್ಡ 700+ ಮಾರಾಟ ಮತ್ತು ಸೇವಾ ತಂಡದ ತಜ್ಞರ ವಿಶಾಲ ಜಾಲವನ್ನು ಹೊಂದಿರುವ ಟ್ರಾನ್ಸ್ಏಷಿಯಾ  40,000 ಕ್ಕೂ ಹೆಚ್ಚು ಪ್ರಯೋಗಾಲಯಗಳಿಗೆ ದಾಖಲೆಯ ಪ್ರತಿಕ್ರಿಯೆ ಸಮಯದಲ್ಲಿ ಸೇವೆ ಸಲ್ಲಿಸುತ್ತದೆ.

ಅನಿಲ್ ಜೋಟ್ವಾನಿ
ಹಿರಿಯ ಅಧ್ಯಕ್ಷಮಾರಾಟ ಮತ್ತು ಮಾರ್ಕೇಟಿಂಗ್
ಟ್ರಾನ್ಸ್ಏಷಿಯಾ ಬಯೋ ಮೆಡಿಕಲ್ಸ್ ಲಿಮಿಟೆಡ್.

Share this: