Vydyaloka

ಅಲೋವೆರಾ ನಿಮ್ಮ ಅರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡುತ್ತೆ

ಅಲೋವೆರಾ ಉಪಯೋಗಗಳು ಹಲವು ರೀತಿಯಲ್ಲಿ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಯಾವೆಲ್ಲ ರೀತಿ ಈ ಅಲೋವೆರಾ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಕಾಪಾಡುತ್ತೆ ಅನ್ನೋದು ಇಲ್ಲಿದೆ ನೋಡಿ.

1. ಡ್ರೈ ಸ್ಕಿನ್–  ಚಿಟಿಕೆ ಅರಿಶಿನ, ಒಂದು ಚಮಚ ಜೇನುಹನಿ, ಒಂದು ಚಮಚ ಹಾಲು, ರೋಸ್‌ ವಾಟರ್‌ನ ಹನಿಗಳನ್ನು ಅಲೋವೆರಾ ಪೇಸ್ಟ್‌ಗೆ ಬೆರೆಸಿ, ಮೈಗೆ ಹಚ್ಚಿಕೊಂಡರೆ, ಡ್ರೈ ಸ್ಕಿನ್‌ ನಿವಾರಣೆ ಆಗುತ್ತದೆ.

2. ಅಲೋವೆರಾ ಕೇಶಕ್ಕೆ ನುಣುಪು ತಂದುಕೊಡುತ್ತದೆ. ಇದರಲ್ಲಿರುವ ಪ್ರೊಟಿಯೋಲಿಟಿಕ್‌ ಅಂಶವು ಕೂದಲು ಉದುರುವುದನ್ನು ತಡೆಯುತ್ತದೆ. ವಾರಕ್ಕೊಮ್ಮೆ ಕೂದಲಿಗೆ ಅಲೋವೆರಾ ಜೆಲ್‌ ಬಳಸಿದರೆ, ರೇಷ್ಮೆಯಂಥ ಕೂದಲು ನಿಮ್ಮದಾಗುವುದು.

3. ಅಲೋವೆರಾದಲ್ಲಿ ವಿಟಮಿನ್‌ ಮತ್ತು ಮಿನರಲ್ಸ್‌ಗಳು ಅಧಿಕವಿರುತ್ತವೆ. ಇದರ ಲೋಳೆ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

4. ಅಲೋವೆರಾ ಜೆಲ್‌ ಅನ್ನು ಪ್ರತಿನಿತ್ಯ ಒಂದರಿಂದ ಮೂರು ಔನ್ಸ್‌ಗಳಷ್ಟನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ಪಚನಶಕ್ತಿಯು ಸುಧಾರಿಸುತ್ತದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ.

5. ದುರ್ಗಂಧ ದೂರ ಮಾಡುವುದರಲ್ಲಿ ಇದರ ಪ್ರಯೋಜನ ಬಹಳ. ರಾಸಾಯನಿಕಯುಕ್ತ ಮೌತ್‌ವಾಶ್‌ಗಳನ್ನು ನಿತ್ಯ ಬಳಸುವುದಕ್ಕಿಂತಲೂ, ನ್ಯಾಚುರಲ್‌ ಆಗಿ ಸಿಗುವಂಥ ಅಲೋವೆರಾ ಜೆಲ್‌ ಅನ್ನು ಬಳಸಿದರೆ, ಒಳ್ಳೆಯ ಫ‌ಲಿತಾಂಶ ಸಿಗುತ್ತದೆ.

6. ಅಲೋವೆರಾ ಜ್ಯೂಸ್‌ ಅನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ. ಕರುಳಿನ ಸಮಸ್ಯೆಗಳೂ ಬರುವುದಿಲ್ಲ.

7. ನಿತ್ಯ ಒಂದು ಲೋಟ ಅಲೋವೆರಾ ಜ್ಯೂಸನ್ನು ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಹಸಿವು ಕಡಿಮೆಯಾಗಿ, ಆಹಾರ ನಿಯಂತ್ರಣ ಸಾಧ್ಯವಾಗುತ್ತದೆ.

8. ಅಜೀರ್ಣ ಸಮಸ್ಯೆ – ಅಜೀರ್ಣ ಸಂಬಂಧೀ ಸಮಸ್ಯೆಗಳಾದ ಮಲಬದ್ಧತೆ, ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಅಲೋವೆರಾ ಜ್ಯೂಸ್ ಪ್ರತಿನಿತ್ಯ ಕುಡಿಯುವುದರಿಂದ ಪರಿಹಾರ ಸಿಗುವುದು.

9. ರಕ್ತಹೀನತೆಗೆಅಜೀರ್ಣ ಸಮಸ್ಯೆಯ ಜತೆಗೆ, ರಕ್ತಹೀನತೆ, ಹಳದಿ ರೋಗ ಮುಂತಾದ ಸಮಸ್ಯೆಗಳಿಗೂ ಪ್ರತಿನಿತ್ಯ ಅಲ್ಯುವೀರಾ ಜ್ಯೂಸ್ ಕುಡಿಯುವುದು ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ.

Share this: