Vydyaloka

ದಿನ ಒಂದು ಬಾದಾಮಿ ತಿನ್ನಿ ….. ಆರೋಗ್ಯ ಕಾಪಾಡಿ.

ಬಾದಾಮಿ ತಿನ್ನಿ ಆರೋಗ್ಯ ಕಾಪಾಡಿ. ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಆರೋಗ್ಯವೇ ಭಾಗ್ಯ ಎಂಬುದು ಸದ್ಯ ಪ್ರಚಲಿತವಾಗಿರುವ ಮಾತು. ನಾವು ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ, ಯೋಗ ಮಾಡುವುದರ ಜೊತೆಗೆ  ತಿನ್ನುವ ಆಹಾರದಲ್ಲಿಯೂ ಸಮತೋಲನ ಕಾಪಾಡಿಕೊಳ್ಳಬೇಕು.

ಅಧಿಕ ಪ್ರಮಾಣದ ರಸಾಯನಿಕಗಳನ್ನು ಬಳಸಿ ಇಂದು ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರಿಂದ ಬೆಳೆಯುವ ಆಹಾರ ಪದಾರ್ಥಗಳ ಸತ್ವ ಕುಂದಿ ಹೋಗಿರುತ್ತದೆ. ನಾವು ಹಾಗೂ ಮಕ್ಕಳು ತಿನ್ನುವ ಆಹಾರ ನಮ್ಮ ದೇಹಕ್ಕೆ ಬೇಕಾಗುವಷ್ಟು ಪ್ರೊಟೀನ್, ವಿಟಮಿನ್ ಹಾಗೂ ಮಿನರಲ್ಸ್ ಗಳನ್ನು ಪೂರೈಸುವುದಿಲ್ಲ. ಹೀಗಾಗಿ ತಿನ್ನುವ ಆಹಾರದದಲ್ಲಿ ಎಷ್ಟು ಶಕ್ತಿ ಇದೆ, ಯಾವ ಆಹಾರ ತಿಂದರೆ ಎಷ್ಟು ಪೋಷಕಾಂಶಗಳು ಲಭ್ಯ ಎನ್ನುವುದನ್ನುಮನದಟ್ಟು ಮಾಡಿಕೊಳ್ಳಬೇಕಾಗಿದೆ. ಅಂಥ ಅತ್ಯಧಿಕ ಪೋಷಕಾಂಶ ಹಾಗೂ ಹೇರಳವಾಗಿ ವಿಟಮಿನ್ ಸಿಗುವ ಪದಾರ್ಥ ಬಾದಾಮಿ.

ಬಾದಾಮಿ ಸ್ವಾಭಾವಿಕವಾಗಿ ಅತಿ ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶ ಪೂರೈಸುವ ತಿನಿಸು. ಇದರಲ್ಲಿ ಕಡಿಮೆ ಪ್ರಮಾಣದ ಕೊಲೆಸ್ಟ್ಟಾಲ್ ಇರುವುದರಿಂದ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಹಸಿ ಬಾದಾಮಿಯನ್ನು ತಿನ್ನಬಹುದು. ಇಲ್ಲವೇ ರೋಸ್ಟ್ ಮಾಡಿಯಾದರೂ ತಿನ್ನಬಹುದು. ನೆನೆಸಿ ತಿಂದರೆ ತುಂಬಾ ಒಳ್ಳೆಯದು.ಹೇಗೆ ತಿಂದರೂ ಬಾದಾಮಿ ರುಚಿಕರ ಹಾಗೂ ಆರೋಗ್ಯಕರ. ಬಾದಾಮಿ ನಾಲಿಗೆಗೆ ರುಚಿಕರ ಮತ್ತು ದೇಹಾರೋಗ್ಯಕ್ಕೆ ಹಿತಕರ. ಮೆದುಳು ಆರೋಗ್ಯ ವೃದ್ಧಿ, ಮೂಳೆ ಬಲವರ್ಧನೆ, ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ಮಲಬದ್ದತೆ ನಿವಾರಣೆಗೆ ಇದು ಸಹಕಾರಿ.

ದಿನಕ್ಕೊಂದು ಬಾದಾಮಿ ತಿಂದ್ರೆ  ಸ್ವಾಸ್ಥ್ಯ, ಸೌಂದರ್ಯ ವರ್ಧನೆಗೆ ಸಹಕಾರಿ. ಅಲ್‌ಮಂಡ್ ಅಥವಾ ಬಾದಾಮಿ ಇದನ್ನು ಕಿಂಗ್ ಆಫ್ ಡ್ರೈ ಫ್ರೂಟ್ಸ್ ಎನ್ನುತ್ತಾರೆ. ರುಚಿ-ಆರೋಗ್ಯ-ಸೌಂದರ್ಯವರ್ಧನೆ ಈ ಮೂರು ಪ್ರಮುಖ ಅಂಶಗಳ ಅಪರೂಪದ ಸಂಯೋಜನೆ ಇದು. ಇದು ನಿಜಕ್ಕೂ ಶುಷ್ಕಫಲಗಳ ರಾಜ. ವಿಶ್ವಕ್ಕೆ ಪರಿಚಿತವಾದ ಅತ್ಯಂತ ಹಳೆಯ ಶುಷ್ಕಫಲಗಳಲ್ಲಿ ಇದು ಕೂಡ ಒಂದು. ಇರಾನ್, ಸೌದಿ ಅರೇಬಿಯಾ, ಲೆಬನಾನ್, ಟರ್ಕಿ, ಸಿರಿಯಾ, ಜೋರ್ಡಾನ್ ಮತ್ತು ಇಸ್ರೇಲ್ ದೇಶಗಳಲ್ಲಿ ಮುಖ್ಯವಾಗಿ ಇದು ಕಂಡುಬರುತ್ತವೆ. ಇದು ಮುಸ್ಲಿಂ ಸಮುದಾಯದವರಿಗೆ ಪವಿತ್ರ ಆಹಾರ. ಜೊತೆಗೆ ಎಲ್ಲ ಧರ್ಮದವರಿಗೂ ಪ್ರಿಯವಾದ ಕಾಯಿ ಇದು. ಇದು ಹಲವಾರು ರೀತಿಯ ಪ್ರಯೋಜನವನ್ನು ನೀಡುತ್ತದೆ .

ಈ ಒಂದು ಬಾದಾಮಿಯ ಬೀಜ ಎಷ್ಟೆಲ್ಲ ಆರೋಗ್ಯಕ್ಕೆ ರಾಮಾಬಾಣವಾಗಿದೆ ನೀವು ತಿನ್ನಿ ಆರೋಗ್ಯ ಕಾಪಾಡಿ.

 

ನೀವು ಇಲ್ಲಿ ಬಾದಾಮ್ ಅನ್ನು ಖರೀದಿಸಬಹುದು

https://amzn.to/2Abnv4E

ನೀವು ಇಲ್ಲಿ ಬಾದಾಮ್ ಎಣ್ಣೆಯನ್ನು ಖರೀದಿಸಬಹುದು

https://amzn.to/2OhXovR

 

Share this: