Vydyaloka

ಅಲರ್ಜಿಗೆ ಹೋಮಿಯೋಪತಿ ಮದ್ದು

ಅಲರ್ಜಿಗೆ ಹೋಮಿಯೋಪತಿ ಮದ್ದುಅಲರ್ಜಿಗೆ ಹೋಮಿಯೋಪತಿ ಮದ್ದು. ಅಲರ್ಜಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನರೀತಿಯಲ್ಲಿ ವ್ಯಕ್ತವಾಗಬಹುದು. ತೀರಾ ಗಂಭೀರವಲ್ಲದಿದ್ದರೂ ಇದನ್ನು ಅಲಕ್ಷಿಸಿದರೆ ಅಪಾಯಕಾರಿ. ಹೋಮಿಯೋಪತಿಯಲ್ಲಿ ಅಲರ್ಜಿಗೆ ಪರಿಣಾಮಕಾರಿ ಚಿಕಿತ್ಸೆಯಿದೆ.

ನಮ್ಮ ದೇಹವು ಕೆಲವು ವಸ್ತುಗಳಿಗೆ ಎಕ್ಸ್‍ಪೋಸ್ ಆದಾಗ ದೇಹದ ಮೇಲೆ ಆಗುವ ಹಾನಿಕಾರಕ ಪರಿಣಾಮಗಳಿಗೆ ಅಲರ್ಜಿ ಅನ್ನುತ್ತೇವೆ.
ಯಾವುದೋ ಒಂದು ವಸ್ತುವಿಗೆ ನಮ್ಮ ದೇಹವು ಅಸಮಾನ್ಯವಾಗಿ ಅಥವಾ ಅನಿಯಮಿತವಾಗಿ ಪ್ರತಿಕ್ರಿಯಿಸುವುದರಿಂದ ಆ ವಸ್ತುವಿನ ವಿರುದ್ಧ antibodies ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದರಿಂದ ಅಲರ್ಜಿ ಉಂಟಾಗುತ್ತದೆ.
ಅಲರ್ಜಿ ಯಾವುದೇ ಒಂದು ವಸ್ತುವಿನಿಂದ ಉಂಟಾಗಬಹುದು ಅಥವಾ ಹಲವಾರು ವಸ್ತುಗಳಿಂದ ಆಗಬಹುದು. ಎಲ್ಲಾ ವಸ್ತುಗಳೂ ಎಲ್ಲರಿಗೂ ಅಲರ್ಜಿಯನ್ನು ಉಂಟು ಮಾಡುವುದಿಲ್ಲ. ಒಬ್ಬರಿಗೆ ಅಲರ್ಜಿಯಾಗುವ ವಸ್ತು ಇನ್ನೊಬ್ಬರಿಗೆ ಅಲರ್ಜಿಯಾಗದೇ ಇರಬಹುದು. ಸಾಮಾನ್ಯವಾಗಿ ಅಲರ್ಜಿ ಉಂಟು ಮಾಡುವ ವಸ್ತುಗಳು ನಮ್ಮ ದಿನ ಬಳಕೆಯ ವಸ್ತುಗಳಾಗಿರುತ್ತವೆ ಮತ್ತು ಅವುಗಳ ಬಳಕೆ ಅನಿವಾರ್ಯವಾಗಿರುತ್ತದೆ.
ಅಲರ್ಜಿಗಳನ್ನುಂಟು ಮಾಡುವ ವಸ್ತುಗಳು

ಆಹಾರ ಪದಾರ್ಥಗಳು:

ಆಹಾರದಲ್ಲಿನ ಯಾವುದೋ ಒಂದು ಪದಾರ್ಥದಿಂದ ಅಲರ್ಜಿಯಾಗಬಹುದು. ಅದರಿಂದ ಬಾಯಿ ಒಡೆಯುವುದು, ಹೊಟ್ಟೆಯಲ್ಲಿ ಹುಣ್ಣಾಗುವುದು, ಮಲಬದ್ಧತೆ, ಎದೆ ಉರಿಯುವುದು ಉಂಟಾಗಬಹುದು. ಅಥವಾ ಚರ್ಮದ ತೊಂದರೆ ಉಂಟಾಗಬಹುದು. ಬೇಕರಿ ಪದಾರ್ಥಗಳು, ಚಾಟ್ಸ್ ಮತ್ತು ಹೊಟೇಲುಗಳಿಂದ ಆಗುವ ಅಲರ್ಜಿ ಬಹಳ ಸಾಮಾನ್ಯವಾದುದು.

ಭೌತಿಕ ವಸ್ತುಗಳು

ಅತಿಹೆಚ್ಚು ಉಷ್ಣ ಮತ್ತು ತಂಪು ಕೂಡ ಅಲರ್ಜಿ ಉಂಟು ಮಾಡಬಹುದು. ಉಷ್ಣ ಮತ್ತು ತಂಪಿನಿಂದ, ಚರ್ಮದ ತೊಂದರೆಗಳು ಹೆಚ್ಚಾಗಿ ಕಂಡು ಬರುವುದು.

ಔಷಧಿಗಳು:
ಅಲರ್ಜಿ ಉಂಟು ಮಾಡುವ ಇತರ ವಸ್ತುಗಳು:

Cosmetics, Perfumes, Parasites ಸೂಕ್ಷ್ಮಾಣುಜೀವಿಗಳು ಇತ್ಯಾದಿ.

ಅಲರ್ಜಿಯ ಲಕ್ಷಣಗಳು

ಅಲರ್ಜಿ ಉಂಟು ಮಾಡುವ ವಸ್ತುವಿನ ಸ್ವಭಾವ ಮತ್ತು ಅದು ಯಾವ ಮಾರ್ಗದಿಂದ ದೇಹವನ್ನು ಪ್ರವೇಶಿಸುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ.

1.ಅಲರ್ಜಿಯು ವಂಶಪರಂಪರೆಯಾಗಿ ಬರಬಹುದು. ಸೂಕ್ತ ಸಮಯದವರೆಗೆ ಸುಪ್ತಾವಸ್ಥೆಯಲ್ಲಿದ್ದು ಒಮ್ಮೆಲೇ ಕಾಣಿಸಿಕೊಳ್ಳಬಹುದು. ದೇಹದ ರೋಗನಿರೋಧಕ ಶಕ್ತಿ ಕುಂದಿದಾಗ ಅಲರ್ಜಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ.
2.ಪೂರ್ವಿಕರಲ್ಲಿ ಇರಬಹುದಾದ ಅಲರ್ಜಿಯ ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು. ಅಥವಾ ಇರಬೇಕೆಂದೂ ಇಲ್ಲ. ತಂದೆಯಲ್ಲಿ ಶ್ವಾಸಕೋಶದ ತೊಂದರೆ ಇದ್ದ ಮಕ್ಕಳಲ್ಲಿ ಚರ್ಮದ ಕಾಯಿಲೆ ಕಾಣಿಸಿಕೊಳ್ಳಬಹುದು.
3.ಕೆಲವು ಜನರಲ್ಲಿ ಅಲರ್ಜಿಯ ಲಕ್ಷಣಗಳು ಪರ್ಯಾಯವಾಗಿ ಅಥವಾ ಸರತಿಯಲ್ಲಿ ಕಾಣಿಸಿಕೊಳ್ಳಬಹುದು. ಚಿಕ್ಕವಯಸ್ಸಿನಲ್ಲಿ ಚರ್ಮದ ಅಲರ್ಜಿ ಇದ್ದರೆ, ದೊಡ್ಡವನಾದ ಮೇಲೆ ಅಸ್ತಮಾ ಬರಬಹುದು. ಅದೇ ರೀತಿ, ಚಿಕ್ಕ ವಯಸ್ಸಿನಲ್ಲಿ ಶ್ವಾಸಕೋಶದ ಅಲರ್ಜಿ ಇದ್ದು ದೊಡ್ಡವನಾದ ಮೇಲೆ ಚರ್ಮದ ಅಲರ್ಜಿಯಿಂದ ಬಳಲೂಬಹುದು.

ಅಲರ್ಜಿಗೆ ಹೋಮಿಯೋಪತಿ ಉಪಚಾರ

ಡಾ. ಬಿ.ಎಸ್. ಹೂಗಾರ್

ಹೂಗಾರ್ ಹೋಮಿಯೋ ಆಸ್ಪತ್ರೆ

ವಿಜಯನಗರ,ಬೆಂಗಳೂರು – 560040

Email: dr_hoogar@yahoo.co.in MOb: 9740731389

 

Share this: