Vydyaloka

ನೀವು ತಿಳಿಯಲೇಬೇಕಾದ ಅವಳಿ ಹೆರಿಗೆಯ ಸಮಸ್ಯೆಗಳು !

ಮಹಿಳೆಯೊಬ್ಬಳಿಗೆ ಸಹಜ ಹೆರಿಗೆ‘ ಆಗುತ್ತದೆಯೆಂದರೆ ಅದನ್ನೇ ಕಷ್ಟಕರಎಂದು ಭಾವಿಸಲಾಗುತ್ತದೆ. ಇನ್ನು ಸಿಸೇರಿಯನ್ ಹೆರಿಗೆಆದರೆ ಅದನ್ನು ಮಹಾಕಷ್ಟದ ಹೆರಿಗೆಎಂದು ತಿಳಿಯಲಾಗುತ್ತದೆ. ಇನ್ನು ಒಬ್ಬ ಮಹಿಳೆಯ ದೇಹದಲ್ಲಿ ಎರಡು ಭ್ರೂಣಗಳು ಇವೆಯೆಂದರೆ ಅದನ್ನು ಅತ್ಯಂತ ಕಾಳಜಿದಾಯಕ ಹೆರಿಗೆ ಅವಧಿ‘ ಎಂದು ತಿಳಿಯಬೇಕಾಗುತ್ತದೆ.

ಏನು ಕಾರಣ?
ಒಬ್ಬ ಮಹಿಳೆಯ ಗರ್ಭಕೋಶದಲ್ಲಿ ಎರಡು ಭ್ರೂಣಗಳು ಉತ್ಪತ್ತಿಯಾಗಲು ಅನೇಕ ವೈಜ್ಞಾನಿಕ ಕಾರಣಗಳನ್ನು ಪಟ್ಟಿ ಮಾಡಬಹುದು. ಅಮ್ಮನ ಕಡೆಯಿಂದ ಅವಳಿ ಹೆರಿಗೆಯ ಇತಿಹಾಸ ಇದ್ದರೂ ಸಹ ಜೋಡಿ ಜೀವಗಳು ಜನ್ಮ ತಳೆಯಬಹುದು.

ಎರಡು ಬಗೆಯ ಅವಳಿಗಳು
ಅವಳಿಗಳಲ್ಲಿ ಎರಡು ಬಗೆಗಳಿವೆ ಮೊದಲನೆಯದು ಮೊನೊಜೈಗೊಟಿಕ್ ಅಂದರೆ ತದ್ರೂಪಿ ಅವಳಿಗಳು. ಎರಡನೆಯದು ಡೈಜೈಗೊಟಿಕ್ ಅಂದರೆ ಭಿನ್ನ ಅವಳಿಗಳು.

ಅವಳಿ ಹೆರಿಗೆಯ ತೊಂದರೆಗಳು
ಅವಳಿ ಮಕ್ಕಳನ್ನು ಹೆರುವ ಮಹಿಳೆಗೆ ಏನೇನು ತೊಂದರೆ ಕಾಣಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ಏಕೆಂದರೆ ಕ್ಲಿಷ್ಟಕರ ಸಂದರ್ಭದಲ್ಲಿ ಜೋಡಿಗರ್ಭ ಹೊತ್ತ ಮಹಿಳೆಯನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ನಮ್ಮ ಅರಿವಿಗೆ ಬರುತ್ತದೆ.

  1. ಅವಧಿಪೂರ್ವ ಹೆರಿಗೆ
    37ವಾರಗಳ ಮುಂಚೆ ಆಗುವ ಹೆರಿಗೆಯನ್ನು ಅಕಾಲಿಕ ಹೆರಿಗೆ‘ ಅಥವಾ ಅವಧಿಗೆ ಮುಂಚೆ ಆಗುವ ಹೆರಿಗೆ ಎಂದು ಹೇಳಲಾಗುತ್ತದೆ. ಅವಳಿ ಗರ್ಭದಾರಣೆ ಹೊಂದಿದ ಶೇಕಡಾ 60ರಷ್ಟು ಮಹಿಳೆಯರಿಗೆ ಅವಧಿಗೆ ಮುಂಚೆಯೇ ಹೆರಿಗೆಯಾಗುತ್ತದೆ. ಗರ್ಭಕೋಶವು ಹೆಚ್ಚುವರಿ ಗರ್ಭವನ್ನು ಹೊಂದಿದ್ದರೆ ಗರ್ಭಾವಸ್ಥೆಯ ಅವಧಿ ಕೂಡ ಕುಗ್ಗುತ್ತದೆ. ಈ ಕಾರಣದಿಂದ ಅಕಾಲಿಕ ಹೆರಿಗೆಯ ಸ್ಥಿತಿ ನಿರ್ಮಾಣವಾಗುತ್ತದೆ.
  2. ಕಡಿಮೆ ತೂಕ
    ಅವಧಿಗೆ ಮುಂಚೆಯೇ ಜನಿಸುವ ಮಕ್ಕಳ ದೇಹ ತೂಕ ಸಾಮಾನ್ಯ ಶಿಶುಗಳಿಗೆ ಹೋಲಿಸಿದರೆ ಸಾಕಷ್ಟು ಕಡಿಮೆಯಿರುತ್ತದೆ. ಅಂತಹ ಶಿಶುಗಳ ಜನನ ಸಮಯದ ತೂಕ5 ಪೌಂಡ್ ಅಂದರೆ ಎರಡೂವರೆ ಕಿಲೊಗಿಂತ ಕಡಿಮೆಯಿರುತ್ತದೆ. ಇಂತಹ ಶಿಶುಗಳು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಅಂತಹ ಶಿಶುಗಳು ಪೋಷಕಾಂಶದ ಕೊರತೆ ಹೊಂದಿರುವುದರಿಂದ ಉಸಿರಾಟದ ಸಮಸ್ಯೆಸೋಂಕು ಎದುರಿಸುವ ಸಾಮರ್ಥ್ಯವೂ ಇರುವುದಿಲ್ಲ. ಇದರ ಜತೆಗೆ ದೃಶ್ಯ ಸಮಸ್ಯೆಆಲಿಸುವ ಸಮಸ್ಯೆಸೆರೆಬ್ರಲ್ ಮತ್ತು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇಂತಹ ಮಕ್ಕಳನ್ನು ತೀವ್ರ ನಿಗಾ ಘಟಕದ್ದಲ್ಲಿಟ್ಟು ಆರೈಕೆ ಮಾಡಬೇಕಾಗುತ್ತದೆ.
  3. ಗರ್ಭಾವಸ್ಥೆಯ ಅವಧಿ ಕುಂಠಿತ
    ಗರ್ಭದಲ್ಲಿ ಅವಳಿಗಳ ಬೆಳವಣಿಗೆ ಪ್ರಮಾಣ ನಿಧಾನವಾಗಿರುತ್ತದೆ. ಪ್ಲೆಸೆಂಟಾ ಅಂತಹ ಶಿಶುಗಳನ್ನು ನಿರ್ವಹಣೆ ಮಾಡಲು ಅಸಮರ್ಥವಾಗಿರುತ್ತದೆ. ಹೀಗಾಗಿ ಗರ್ಭಾವಸ್ಥೆಯ ಒಟ್ಟು ಅವಧಿ ಕಡಿಮೆಯಾಗುತ್ತದೆ.
  4. ಪ್ರಿಕ್ಲಾಂಪ್ಸಿಯ ಸಮಸ್ಯೆ
    ಗರ್ಭಾವಸ್ಥೆಯಲ್ಲಿ ಪ್ರಿಕ್ಲಾಂಪ್ಸಿಯ ಮತ್ತು ಇಂಡ್ಯೂಸ್ಡ್ ಹೈಪರ್ ಟೆನ್ಶನ್ ಸಮಸ್ಯೆ ಇರುತ್ತದೆ. ಪ್ರಸವಪೂರ್ವ ಸೂಕ್ತ ಆರೈಕೆಯೊಂದಿಗೆ ಇಂತಹ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.
  5. ಗರ್ಭಾವಸ್ಥೆಯ ಮಧುಮೇಹ
    ಅವಳಿ ಗರ್ಭಧಾರಣೆಯ ಸಂದರ್ಭದಲ್ಲಿ ಮಧುಮೇಹದ ಉಪಟಳ ಹೆಚ್ಚುತ್ತದೆ. ಎರಡು ಪ್ಲೆಸೆಂಟಾಗಳು ಇನ್ಸುಲಿನ್ ಉತ್ಪಾದನೆಗೆ ಪ್ರತಿರೋಧ ಒಡ್ಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತದೆ.
  6. ದುರ್ಬಲ ಪ್ಲೆಸೆಂಟಾ
    ಅವಳಿಗಳು ಗರ್ಭದಲ್ಲಿ ಇರುವ ಸಂದರ್ಭದಲ್ಲಿ ಪ್ಲೆಸೆಂಟಾ ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ. ಪ್ಲೆಸೆಂಟಾ3ನೇ ತ್ರೈಮಾಸಿಕದಲ್ಲಿ ಹೆಚ್ಚು ಒತ್ತಡಕ್ಕೊಳಗಾಗುವುದರಿಂದ ಕೂಸುಗಳನ್ನು ಅವಧಿಗೆ ಮುನ್ನವೇ ಹೊರದೂಡುತ್ತದೆ.
  7. ಭ್ರೂಣಕ್ಕೆ ಆಪತ್ತು
    ಭ್ರೂಣಗಳು ಗರ್ಭಾವಸ್ಥೆಯಲ್ಲಿ ಅಸುನೀಗುವುದು ಅಪರೂಪ. ಆದರೂ ಮೇಲಿಂದ ಮೇಲೆ ಅಂತಹ ಶಿಶುಗಳ ಅವಲೋಕನ ಮಾಡಬೇಕಾಗುತ್ತದೆ. ಭ್ರೂಣಗಳಿಗೆ ಏನಾದರೂ ತೊಂದರೆ ಇದ್ದರೆ ವೈದ್ಯರು ತಕ್ಷಣವೇ ಕಾರ್ಯಪ್ರವೃತ್ತರಾಗುತ್ತಾರೆ.
  8. ಹುಟ್ಟುತೊಂದರೆಗಳು
    ಪೋಷಕಾಂಶಗಳ ಕೊರತೆಯಿಂದ ಅವಳಿಗಳು ಜನಿಸಿದರೆ ಹಲವು ಬಗೆಯ ಜನ್ಮಜಾತ ತೊಂದರೆಗಳನ್ನು ಹೊಂದಿರುತ್ತವೆ. ಹೃದಯ ತೊಂದರೆಬೆನ್ನುಮೂಳೆಯ ಸಮಸ್ಯೆಜಠರದ ಸಮಸ್ಯೆಗಳು ಕಾಣಿಸಬಹುದು.
  9. ಟ್ವಿನ್ಟುಟ್ವಿನ್ ಟ್ರಾನ್ಸಫ್ಯೂಷನ್
    ಅವಳಿ ಮಕ್ಕಳು ಒಂದೇ ಪ್ಲೆಸೆಂಟಾ ಹೊಂದಿದ್ದಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಒಂದೇ ಪ್ಲೆಸೆಂಟಾದಿಂದ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ರಕ್ತ ಹಾಗೂ ಆಮ್ಲಜನಕ ಪೂರೈಕೆ ಆಗುತ್ತಿರುತ್ತದೆ. ಈ ಕಾರಣದಿಂದ ಒಂದು ಮಗುವಿಗೆ ಹೆಚ್ಚು ರಕ್ತ ಮತ್ತು ಆಮ್ಲಜನಕ ಪೂರೈಕೆ ಆಗುತ್ತದೆ. ಮತ್ತೊಂದು ಮಗುವಿಗೆ ಕಡಿಮೆ ಪೂರೈಕೆ ಆಗುತ್ತದೆ. ಅತಿಯಾದ ರಕ್ತ ಮತ್ತು ಆಮ್ಲಜನಕ ಪೂರೈಕೆಯಿಂದ ಹೃದಯದ ರಕ್ತನಾಳಗಳ ಮೇಲಿನ ಒತ್ತಡ ಹೆಚ್ಚುತ್ತದೆ. ಸ್ತ್ರೀರೋಗ ತಜ್ಞರು ಎರಡೂ ಶಿಶುಗಳಿಗೆ ಸಮಾನ ಪೂರೈಕೆಯ ಬಗ್ಗೆ ಗಮನ ಹರಿಸುತ್ತಾರೆ.
  10. ಹೊಕ್ಕಳು ಬಳ್ಳಿಯ ತೊಡಕು
    ತದ್ರೂಪಿ ಅವಳಿಗಳಿದ್ದ ಸಂದರ್ಭದಲ್ಲಿ ಒಮ್ಮೊಮ್ಮೆ ಅಮ್ನಿಯೊಟಿಕ್ ದ್ರವದೊಳಗೆ ಹೊಕ್ಕಳು ಬಳ್ಳಿ ಜಾರುತ್ತದೆ. ಯಾವುದೇ ಅಪಾಯದ ಸ್ಥಿತಿ ಕಂಡುಬಂದರೆ ವೈದ್ಯರು ಅವಧಿಗೆ ಮುಂಚೆಯೇ ಹೆರಿಗೆ ಮಾಡಲು ಸನ್ನದ್ಧರಾಗುತ್ತಾರೆ.
  11. ಸಿಸೇರಿಯನ್ ಹೆರಿಗೆ
    ಅವಳಿ ಮಕ್ಕಳು ಸಾಮಾನ್ಯವಾಗಿ ಸಹಜ ಹೆರಿಗೆಯ ಮೂಲಕವೇ ಜನಿಸುತ್ತಾರೆ. ಆದರೆ ಆ ಮಕ್ಕಳ ಸ್ಥಿತಿ ಸರಿಯಾಗಿರದಿದ್ದರೆ ಆಗ ವೈದ್ಯರು ಅನಿವಾರ್ಯವಾಗಿ ಸಿಸೇರಿಯನ್ ಮಾಡಬೇಕಾದ ಸಂದರ್ಭ ಬರುತ್ತದೆ.
  12. ಪ್ರಸವಾನಂತರದ ರಕ್ತಸ್ರಾವ
    ಗರ್ಭಕೋಶ ಹಾಗೂ ಪ್ಲೆಸೆಂಟಾ ಹೆಚ್ಚು ವಿಸ್ತಾರಗೊಳ್ಳುವುದರಿಂದ ಹೆರಿಗೆಯ ಬಳಿಕ ಅತಿಯಾಗಿ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ.

ಗಮನಿಸಬೇಕಾದ ಕೆಲವು ವಿಷಯಗಳು

 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರಬೆಂಗಳೂರು. 9663311128
ಶಾಖೆ: ರಾಜಾಜಿನಗರ 9900031842
E-mail : endoram2006@yahoo.co.in     dr.rameshb@yahoo.com
www.laparoscopicsurgeries.com

Share this: