Vydyaloka

ಯಾವ ಮನೆಯ ದೀಪವೂ ಆರದಿರಲಿ..

ಯಾವ ಮನೆಯ ದೀಪವೂ ಆರದಿರಲಿ…… ವೈದ್ಯರಿಗೊಂದು ನಮನ

ಈಗಷ್ಟೆ ರಕ್ತಸಿಕ್ತ ಕೈ ತೊಳೆದು
ದಣಿವಾರಿಸಿಕೊಳ್ಳುತ್ತಿದ್ದೇನೆ.
ಓಟಿ , ಐಸಿಯು,ಎಮರ್ಜೆನ್ಸಿಯಲ್ಲಿ‌ ದಣಿದು ಹಸಿದು ತಲೆ ಸುತ್ತುವಾಗ ಸಿಕ್ಕ ಕುರ್ಚಿಯೆ ಹಂಸತೂಲಿಕಾ ತಲ್ಪ
ಗಾಯಗೊಂಡು ಉಸಿರಾಡದ
ಮಗುವಿನೆದೆಯಲ್ಲಿ ಉಸಿರು
ಊದಿ, ಮಡಿಲ ಬರಿದಾಗುವುದ
ಉಳಿಸಿರುವೆ ನೋಡಿ ಸ್ವಲ್ಪ,
ಸತ್ಯದ ಪಾಠ ಹೇಳಿದ ನನ್ನದೆ
ಕುಡಿಗೆ ಎಂದಿನಂತೆ ನಾನೆ ಸುಳ್ಳು ಹೇಳಿ ಬೇಗ ಬರುವ “ಪ್ರಾಮಿಸ್”
ಮುರಿದಿರುವ‌ ಪಾಪ ಅಲ್ಪ, ಅದ‌ಕ್ಕಿಂತ ಹಸಿದು ಅತ್ತು ಮಲಗಿದ ಮಗುವಿನ ಕಣ್ಣೀರು ಘೋರ
ನನ್ನ ಕೈತುತ್ತಿನ ಆಸೆಗೆ ಬರಿಹೊಟ್ಟೆಯಲ್ಲಿ ಮಲಗಿದ‌ ಮಗುವಿನ ಮಧ್ಯರಾತ್ರಿಯ ಹಸಿವಿನ‌ ಅಳು ಒತ್ತೆ , ಅಸ್ವಸ್ಥ ಮಗುವಿನ ಉಸಿರಿನೆರವಲಿಗಾಗಿ
ಹೆತ್ತ ಮಡಿಲು ಬರಿದಾಗದಿರಲಿ.
ನನ್ನ ಕೈ ಕಾಫಿ ಕುಡಿದು ದಣಿವಾರಿಸಿಕೊಳ್ಳುವ ಗಂಡನ ಪ್ರತಿ ನೋವ ನಿವಾಳಿಸಿ ಎಸೆಯುವೆ ಸುಮಂಗಲಿಯ ತಾಳಿಯ ಗಟ್ಟಿಗಾಗಿ.
ಕ್ಯಾಟರ‌್ಯಾಕ್ಟ ಕಂಗಳ ಅತ್ತೆ ಮಾವ, ಹೆತ್ತವರ, ರಾತ್ರಿಯ ಬಿಪಿ ಮಾತ್ರೆ ತಪ್ಪಿದರೂ, ಮಧುಮೇಹಿಯ ಇನ್ಸುಲಿನ್ ತಪ್ಪದಿರಲಿ
ಅಕ್ಸಿಡೆಂಟಾದ ಅಪ್ಪನ ನೋಡಲು ಅಳುತ್ತ ಎಮರ್ಜೆನ್ಸಿ ರೂಮಿನ ಹೊರಗೆ ನಿದ್ದೆಹೋದ ಮಗು ಏಳುವ ಮುನ್ನ ನನ್ನ ರೋಗಿ‌ ಮತ್ತೆ ಮಾತನಾಡಲಿ .
ಸೋಂಕು ಪ್ರತಿಸೋಂಕಿನ ಸುಳಿಯಲಿ
ನನ್ನ ಜೀವ ಮುಖ್ಯವಾ?, ರೋಗಿಯ
ಪ್ರಾಣ ಮುಖ್ಯವಾ?
ಎಂಬುದು ದ್ವಂದ್ವ, ವಿಕಲ್ಪ,
ಜೀವಂತ ಮನೆ ಸೇರಿ ಕುಟುಂಬ ಕಾಂಬ ಸಂಕಲ್ಪ
ರೋಗಿಗಳೆಲ್ಲಾ ನಡೆದು ಮನೆ ಸೇರಲಿ ಇದ‌ಬಿಟ್ಟು ಇನ್ನೇನು ಬೇಡಲಿ..?
ಭಗವಂತಾ ….
ಯಾವ ಮನೆಯ ದೀಪವೂ ಆರದಿರಲಿ.

-ಅಬುಯಾಹ್ಯಾ

ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು

ಮೊ.: 8073048415

Share this: