Vydyaloka

ಪುರುಷರಲ್ಲಿ ಧಾತು (ಸ್ಪರ್ಮ್ ಕೌಂಟ್) ನಷ್ಟ ಪಾಶ್ಚಾತ್ಯ ಜಗತ್ತನ್ನು ಕಾಡುತ್ತಿರುವ ಗಂಭೀರ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಮಕ್ಕಳಾಗದಿರುವ ಸಮಸ್ಯೆ ಹೆಚ್ಚುತ್ತಿದೆ. ಪುರುಷರಲ್ಲಿ ವೀರ್ಯ ಪ್ರಮಾಣ ಅದರಲ್ಲೂ ಮುಖ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಪುರುಷರಲ್ಲಿ ವೀರ್ಯ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದು ಆರೋಗ್ಯ ಮತ್ತು ಪುರುಷತ್ವಕ್ಕೆ ಸವಾಲಾಗಿ ಪರಿಣಮಿಸಿದೆ. ನಪುಂಸಕತೆ ಪಾಶ್ಚಾತ್ಯ ಜಗತ್ತನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದೆ.

ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಹಾಗೂ ಯುರೋಪ್ ಖಂಡದ ದೇಶಗಳ ಪುರುಷರಲ್ಲಿ ಧಾತು (ಸ್ಪರ್ಮ್ ಕೌಂಟ್) ನಷ್ಟ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ. ವಾಸ್ತವ ಸಂಗತಿ ಎಂದರೆ ಕಳದ 40 ವರ್ಷಗಳಿಂದ ಪಾಶ್ಚಿಮಾತ್ಯ ಜಗತ್ತಿನ ಗಂಡಸರಲ್ಲಿ ವೀರ್ಯ ಕುಂಠಿತ ಶೇ.50ಕ್ಕಿಂತಲೂ ಕಡಿಮೆಯಾಗಿದ್ದು, ಇದು ಕ್ಷಿಪ್ರವಾಗಿ ಮುಂದುವರಿದಿರುವುದು ಆ ದೇಶಗಳ ಪುರುಷ ಸಮುದಾಯವನ್ನು ಚಿಂತೆಗೀಡು ಮಾಡಿದೆ.
ಕಳೆದ ಕೆಲವು ವರ್ಷಗಳಿಂದ ಈ ನಿಟ್ಟಿನಲ್ಲಿ ಸಂಶೋಧಕರು ಅನೇಕ ಅಧ್ಯಯನಗಳನ್ನು ನಡೆಸುತ್ತಾ ನಿಖರ ಕಾರಣಗಳನ್ನು ಪತ್ತೆ ಮಾಡಲು ಶ್ರಮಿಸುತ್ತಿದ್ದಾರೆ. 40 ವರ್ಷಗಳಿಂದಲೂ ಪಾಶ್ಚಿಮಾತ್ಯ ಪುರುಷರಲ್ಲಿ ವೀರ್ಯ ನಷ್ಟ ವೇಗದ ಗತಿಯಲ್ಲೇ ಮುಂದುವರಿದಿದೆ. ಇದು ಆ ದೇಶಗಳ ಗಂಡಸರ ಆರೋಗ್ಯ ಮತ್ತು ಪುರುಷತ್ವಕ್ಕೂ ದಕ್ಕೆ ಉಂಟು ಮಾಡುತ್ತಿದೆ ಎಂಬುದನ್ನು ಅಧ್ಯಯನ ವರದಿಗಳಲ್ಲಿ ತಿಳಿಸಲಾಗಿದೆ.
ವಿಶೇಷವಾಗಿ ಅಮರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಐರೋಪ್ಯ ದೇಶಗಳ ಪುರುಷ ಸಮುದಾಯದಲ್ಲಿ ಧಾತು ನಶಿಷುತ್ತಿರುವುದರ ಬಗ್ಗೆ ಎಚ್ಚರಿಕೆ ಗಂಟೆ ಮೊಳಗಿಸಿರುವ ಇಸ್ರೇಲ್‍ನ ಹೆಬ್ರ್ಯೂ ವಿಶ್ವವಿದ್ಯಾಲಯದ ಸಂಶೋಧಕ ಡಾ ಹಗೈ ಲೆವೈನ್ ಇದಕ್ಕೆ ನಿಖರ ಕಾರಣಗಳನ್ನು ಪತ್ತೆ ಮಾಡಲು ಮುಂದಾಗುವಂತೆ ವಿಶ್ವದ ಆರೋಗ್ಯ ಸಂಶೋಧಕರಲ್ಲಿ ಮನವಿ ಮಾಡಿದ್ದಾರೆ.
ಪಾಶ್ಚಾತ್ಯ ಜಗತ್ತಿನಲ್ಲಿ ಹೆಚ್ಚುತ್ತಿರುವ ಸ್ಥೂಲಯಕಾಯ, ಬೊಜ್ಜು, ಧೂಮಪಾನ, ಕೆಲಸದ ಒತ್ತಡ, ಖಿನ್ನತೆ, ಕೆಲವು ರಾಸಾಯನಿಕ ಮತ್ತು ಕೀಟನಾಶಕ ಮೊದಲಾದ ಕಾರಣಗಳಿಂದ ಪುರುಷರಲ್ಲಿ ವೀರ್ಯ ನಶಿಸಿ ನಪುಂಸಕತೆ ಉಂಟಾಗುತ್ತಿರುವುದ ಮೇಲ್ನೋಟಕ್ಕೆ ಕಾರಣವಾದರೂ ಇವುಗಳ ಆಚೆ ಇರುವ ನಿಖರ ವೈಜ್ಞಾನಿಕ ಸಂಗತಿಗಳನ್ನು ತಿಳಿಯಲು ಈಗಲೂ ಸಂಶೋಧನೆ ಮುಂದುವರಿದಿದೆ.
ವೀರ್ಯ ಪ್ರಮಾಣ ಕುಂಠಿತಗೊಂಡಿರುವ ಪುರುಷರು ಜನನಾಂಗ ಉದ್ರೇಗ ಸಮಸ್ಯೆ, ನಿಮಿರು ದೌರ್ಬಲ್ಯ(ಎರೆಕ್ಟೈಲ್ ಡಿಸ್‍ಫನ್ಷನ್), ಸಂಗಾತಿಯನ್ನು ತೃಪ್ತಿಪಡಿಸಲು ಸಾಧ್ಯವಾಗದಿರುವಿಕೆ, ದಾಂಪತ್ಯ ಕಲಹ ಮೊದಲಾದ ಸಮಸ್ಯೆಗಳಿಗೆ ಎದುರಿಸುವಂತಾಗಿದೆ.
ಪುರುಷರಲ್ಲಿ ಧಾತು ಗಣನೀಯವಾಗಿ ಕಡಿಮೆಯಾಗಿರುವುದು ಗಂಡಸರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ವೀರ್ಯ ಪ್ರಮಾಣ ಮತ್ತು ಧಾತು ಪುಷ್ಟಿಯನ್ನು ಹೆಚ್ಚಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳದಿದ್ದರೆ ಇದು ಅವರ ಬದುಕಿಗೆ ಕೆಟ್ಟ ದುಷ್ಟನಾಗುತ್ತಾನೆ. ಇದು ಸಮಾಜ ಸ್ವಾಸ್ಥ್ಯದ ಮೇಲೂ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಪುರುಷರಲ್ಲಿ ಇದೇ ರೀತಿ ವೀಯ ನಷ್ಟ ಮತ್ತು ಪೌರುಷತ್ವ ಇಲ್ಲದಿರುವಿಕೆ ಮುಂದುವರಿದರೆ ಸಂತಾನೋತ್ಪತ್ತಿಗೆ ದೊಡ್ಡ ಮಟ್ಟದಲ್ಲಿ ಅಡ್ಡಿಯಾಗುತ್ತದೆ. ಇದರಿಂದ ಭವಿಷ್ಯದಲ್ಲಿ ದೂರಗಾಮಿ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಈ ಕುರಿತು ಹಲವಾರು ವರ್ಷಗಳಿಂದ ಆಧ್ಯಯನ ನಡೆಸಿರುವ ಸಂಶೋಧಕರು ತಿಳಿಸಿದ್ದಾರೆ.

ಅಪಾಯಕಾರಿ ಕೆಟ್ಟ ಕೊಲೆಸ್ಟರಾಲ್ ನಿಯಂತ್ರಣ ಮತ್ತು ಆರೋಗ್ಯ ರಕ್ಷಣೆಗಾಗಿ ರೈಸ್‍ಬ್ರಾನ್ ಆಯಿಲ್(ಭತ್ತದ ತೌಡು ಎಣ್ಣೆ) ಸಹಕಾರಿ. ಇಂದಿನ ಆಧುನಿಕ ಜಗತ್ತಿನ ಒತ್ತಡದಲ್ಲಿ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದು, ಮನುಷ್ಯರ ಆರೋಗ್ಯಕ್ಕೆ ಅಪಾಯ ತಂದೊಡ್ಡಿವೆ. ದಿಢೀರ್ ಆಹಾರ ಸೇವನೆಯಿಂದ ಶರೀರದಲ್ಲಿ ಕೆಟ್ಟ ಕೊಲೆಸ್ಟರಾಲ್ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದರಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯಾಘಾತ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ.ಜೊತೆಗೆ ನಾವು ಬಳಸುವ ಖಾದ್ಯ ತೈಲಗಳಲ್ಲಿ ಅಧಿಕ ಕೊಬ್ಬಿನ ಅಂಶಗಳಿಂದಾಗಿ ಹಾನಿಕಾರಕ ಕೊಲೆಸ್ಟರಾಲ್ ಪ್ರಮಾಣವೂ ಹೆಚ್ಚಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಭತ್ತದ ಹೊಟ್ಟು ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಇತರ ಖಾದ್ಯ ತೈಲಗಳಿಗೆ ಹೋಲಿಸಿದಲ್ಲಿ ರೈಸ್ ಬ್ರಾನ್ ಆಯಿಲ್ ಹೆಚ್ಚು ಸುರಕ್ಷಿತ. ಇದರಲ್ಲಿ ಶೇ.40ಕ್ಕಿಂತಲೂ ಅಧಿಕ ಪ್ರಮಾಣದ ಓರಿಝಾನಲ್ ಇರುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟರಾಲ್‍ನನ್ನು ತಗ್ಗಿಸುವಲ್ಲಿ ನೆರವಾಗುತ್ತದೆ. ಇದನ್ನು ಕೊಲೆಸ್ಟರಲ್ ಕಟ್ಟರ್ ಎಂದೇ ಪರಿಗಣಿಸಲಾಗಿದೆ.
ಜನರು ಬಳಸುವ ಆಹಾರದ ಮೂಲಕ ದೇಹದಲ್ಲಿ ಅಪಾಯಕಾರಿ ಕೊಲೆಸ್ಟರಾಲ್ ಅಂಶ ಹೆಚ್ಚಾಗುತ್ತಿರುವುದನ್ನು ಪರಿಗಣಿಸಿ ಸುದೀರ್ಘ ಸಂಶೋಧನೆ ನಂತರ ಅಭಿವೃದ್ದಿಗೊಳಿಸಿರುವ ಈ ತೈಲವು ಉತ್ಕರ್ಷಣ ಪ್ರತಿರೋಧಕ (ಆಂಟಿ-ಆಕ್ಸದಂಟ್) ಗುಣಗಳನ್ನು ಹೊಂದಿದ್ದು, ವಿಟಮಿನ್ ಎ. ಡಿ ಮತ್ತು ಇ ಜೀವಸತ್ವಗಳೊಂದಿಗೆ ಸಮೃದ್ಧವಾಗಿದೆ.

ಡಾ. ಸಿದ್ದುಕುಮಾರ್ ಘಂಟಿ
ಬಸವಶ್ರೀ ಆಯುರ್ವೇದ ಸೇವಾ ಕೇಂದ್ರ
ಇಎಸ್‍ಐ ಆಸ್ಪತ್ರೆ ಮುಖ್ಯರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ದೂ.: 9845042755

Share this: