Vydyaloka

ಉಪಯುಕ್ತ ಮಾಹಿತಿ

ತಾಜಾ ಪುದೀನ ಎಲೆಗಳ ರಸ ಒಂದು ವೇಳೆ ಅಜೀರ್ಣತೆಯ ಕಾರಣ ವಾಕರಿಕೆ ಹಾಗೂ ವಾಂತಿ ಎದುರಾದರೆ ಈ ವಿಧಾನ ಸೂಕ್ತವಾಗಿದೆ. ಅಲ್ಲದೇ ಹೊಟ್ಟೆ ಕಿವುಚಿದಂತೆ ನೋವಾಗುತ್ತಿದ್ದರೂ ಈ ವಿಧಾನ ಉತ್ತಮ. ಹೊಟ್ಟೆ ನೋವು ಕಂಡುಬಂದ ತಕ್ಷಣ ಕೆಲವು ಹಸಿ ಪುದೀನಾ ಎಲೆಗಳನ್ನು ಚೆನ್ನಾಗಿ ಜಗಿದು ನುಂಗುವುದು ಅತ್ಯುತ್ತಮ. ಇದು ಸಾಧ್ಯವಾಗದೇ ಹೋದರೆ ಕೆಲವು ಎಲೆಗಳನ್ನು ಮಿಕ್ಸಿಯಲ್ಲಿ ಕಡೆದು ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯಬಹುದು. ಕೆಲವೊಮ್ಮೆ ಊಟದ ತಕ್ಷಣ ಹೊಟ್ಟೆನೋವು ಕಂಡುಬರುತ್ತದೆ. ಆಗಲೂ ಈ ವಿಧಾನ ಹೆಚ್ಚು ಸೂಕ್ತವಾಗಿದೆ.
ತುಂಬೆ ಸೊಪ್ಪಿನ ರಸಕ್ಕೆ ಬೆಳ್ಳುಳ್ಳಿ ರಸ ಮತ್ತು ಜೇನು ತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿದರೆ ನೆಗಡಿ ಬೇಗ ಗುಣವಾಗುವುದು.
ಚೆರ್ರಿ ಹಣ್ಣಿನ ರಸ ಅಮೃತವಂತೆ!
ಚೆರ್ರಿ ಹಣ್ಣು ಅಮೃತವೇ ಸರಿ. ಕೇವಲ ಕಾಲು ಲೀಟರ್ ಚೆರ್ರಿ ರಸದಲ್ಲಿ ಇತರ ಹಣ್ಣುಗಳು ಮತ್ತು ತರಕಾರಿಗಳಲ್ಲಿರುವುದಕ್ಕಿಂತಲೂ 23 ಪಟ್ಟು ಅಧಿಕ ಪೋಷಕಾಂಶಗಳು ಇರುವುದಾಗಿ ಸಂಶೋಧನೆಗಳಿಂದ ತಿಳಿದುಬಂದಿದೆ.
ಬಟಾಣಿ, ಟೊಮಾಟೋ, ಕರಬೂಜ, ಕ್ಯಾರೆಟ್, ಬಾಳೆಹಣ್ಣು ಮುಂತಾದವುಗಳಿಗೆ ಹೋಲಿಸಿದರೆ ಚೆರ್ರಿ ರಸದಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಐದು ಪಟ್ಟು ಅಧಿಕವಾಗಿರುತ್ತದೆ. ಕ್ಯಾನ್ಸರ್, ಹೃದಯಬೇನೆ, ಮತ್ತಿತರ ಸಮಸ್ಯೆಗೆ ಕಾರಣವಾಗುವ ಅಂಶಗಳನ್ನು ಈ ಆಂಟಿ ಆಕ್ಸಿಡೆಂಟ್‍ಗಳು ಸಮರ್ಥವಾಗಿ ಪ್ರತಿರೋಧಿಸಬಲ್ಲವು.
 
ಬೆಳ್ಳುಳ್ಳಿಯೊಂದಿಗೆ ಜೇನುತುಪ್ಪ ಬೆರೆಸಿ ಖಾಲಿ ಹೊಟ್ಟೆಲಿ ತಿಂದ್ರೆ ಈ 16 ಲಾಭಗಳು ಪಡ್ಕೊಬಹುದು
ನೈಸರ್ಗಿಕವಾಗಿ ಕೂದಲು ಉದರುವುದನ್ನು ತಡೆಯಲು, ದೇಹದ ಕೊಬ್ಬು ಕರಗಿಸಲು ಮತ್ತು ಡಾರ್ಕ್ ಸರ್ಕಲ್ (ಕಪ್ಪು ವರ್ತುಲ ) ತಡೆಯಲು ಬೆಳ್ಳುಳ್ಳಿಯನ್ನು ಜೇನುತುಪ್ಪದಲ್ಲಿ ನೆನೆಸಿ ಸೇವಿಸಬಹುದು. 2-3 ಬೆಳ್ಳುಳ್ಳಿ ಎಸಳುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಂದು ಚಮಚ ಜೇನುತುಪ್ಪದೊಂದಿಗೆ ಮಿಶ್ರಮಾಡಿ ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ನೀವು ಹೆಚ್ಚು ಶಕ್ತಿಶಾಲಿ ಮತ್ತು ಆರೋಗ್ಯಕರವಾಗಿರುವಿರಿ.
ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಅನೇಕ ಔಷಧೀಯ ಗುಣಗಳು :
  • ರಕ್ತದೊತ್ತಡ ಕಡಿಮೆಮಾಡುತ್ತದೆ.
  • ಜೀರ್ಣ ಕ್ರಿಯೆಯನ್ನು ಹೆಚ್ಚಿಸಿ ದೇಹದ ಕೊಬ್ಬು ಕಡಿಮೆ ಮಾಡಿಕೊಳ್ಳಲು ಸಹಾಯಕ.
  • ಪರಿಧಮನಿಯ ಹೃದಯ ಕಾಯಿಲೆ ಮತ್ತು ಹೃದಯಾಘಾತವನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ಅಪಧಮನಿ ಕಾಠಿಣ್ಯ (ಚಿಣheಡಿosಛಿಟeಡಿosis)ದ ತೊಂದರೆಗಳನ್ನು ತಪ್ಪಿಸುತ್ತದೆ.
  • ಶೀತ, ಜ್ವರ ದಂತಹ ಸಾಮಾನ್ಯ ಸಮಸ್ಯೆಗಳನ್ನು ತಪ್ಪಿಸುತ್ತದೆ.
  • ಬೆಳ್ಳುಳ್ಳಿ ಯಲ್ಲಿನ ಅಂಶ ಆಂಟಿಬಯೋಟಿಕ್ ರೀತಿ ವರ್ತಿಸುತ್ತದೆ.
  • ಬಿಕ್ಕಳಿಕೆ ಸಮಸ್ಯೆಗೆ ಇದ್ದರೆ ನಾಲಿಗೆಮೇಲೆ ಬೆಳ್ಳುಳ್ಳಿ ಜಜ್ಜಿ ಉಜ್ಜಬೇಕು.
  • ಮೂಲವ್ಯಾಧಿ, ಮಲಬದ್ಧತೆ, ಕಿವಿನೋವು, ರಕ್ತದೊತ್ತಡ ಇತ್ಯಾದಿ ಅನೇಕ ಕಾಯಿಲೆಗಳಿಗೆ ಇದು ರಾಮಬಾಣ.
  • ಹಸಿವನ್ನು ಹೆಚ್ಚಿಸುವ ಕೆಲಸವನ್ನೂ ಇದು ಮಾಡುತ್ತದೆ.
  • ಬೆಳ್ಳೆಗ್ಗೆ ಬೆಳ್ಳುಳ್ಳಿ ಸೇವಿಸಿದ ಒಂದು ಗಂಟೆಯಲ್ಲಿ ಜೀರ್ಣವಾಗಿ ಅದು ಆರೋಗ್ಯ ವೃದ್ಧಿ ಕೆಲಸ ಮಾಡಲು ಶುರುವಾಗುತ್ತದೆ.
  • ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಶರೀರದಲ್ಲಿರುವ ವಿಷ ಪದಾರ್ಥವನ್ನು ಮಲ ಹಾಗೂ ಮೂತ್ರದ ಮೂಲಕ ಹೊರ ಹಾಕುತ್ತದೆ.
  • ದೇಹದ ಆಲಸ್ಯ ಕಡಿಮೆ ಮಾಡಿ ಶರೀರಕ್ಕೊಂದು ವಿಶೇಷ ಶಕ್ತಿ ಕೊಡುತ್ತದೆ.
  • ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ಕೋಶಗಳು ಶಕ್ತಿ ಕಳೆದುಕೊಳ್ಳುತ್ತವೆ.
  • ಪ್ರತಿದಿನ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಚಯಾಪಚಯ ಕ್ರಿಯೆ ಸುಲಭವಾಗಿ ದೇಹದ ಬೊಜ್ಜು ಕರಗಿಸುವಲ್ಲಿ ಸಹಾಯ ಮಾಡುತ್ತದೆ.
  • ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಶ್ವಾಸನಾಳಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
  • ಅಸ್ತಮಾ, ಕೆಮ್ಮು, ಕಫ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಮೆದುಳು ರೋಗದ ಮುಖ್ಯ 7 ಕಾರಣಗಳು
1. ಬೆಳಗಿನ ಉಪಾಹಾರ ಬಿಡುವುದು
2. ತಡವಾಗಿ ಮಲಗುವುದು
3. ಹೆಚ್ಚಾಗಿ ಸಕ್ಕರೆಯ ಸೆವಿಕೆ
4. ಹೆಚ್ಚಾದ ಬೆಳಗಿನ ನಿದ್ದೆ
5. ಟಿವಿ ಮತ್ತು ಕಂಪೂಟರ್ ನೋಡುತ್ತ ಆಹಾರ ಸೇವನೆ
6. ಮಲಗುವಾಗ ಮುಖ, ಕಾಲು ಮತ್ತು ತಲೆ ಮುಚ್ಚುದು
7. ತಕ್ಕ ಸಮಯಕ್ಕೆ ಮೂತ್ರ ಮಾಡದಿರುವುದು
Share this: