Vydyaloka

ಗಾಂಧೀಜಿ ತೋರಿದ ಆರೋಗ್ಯ ಪಥ

  ಈ ವರ್ಷ ಗಾಂಧೀಜಿಯವರ 150ನೇ ಜಯಂತಿ ವರ್ಷಾಚರಣೆ. ಈ ಸಂದರ್ಭದಲ್ಲಿ, ಆರೋಗ್ಯದ ಬಗೆಗಿನ ಗಾಂಧೀಜಿಯವರ ವಿಚಾರ ಧಾರೆಯನ್ನ ಓದಿ, ಕೇಳಿ ತಿಳಿದುಕೊಳ್ಳುವ ಕುತೂಹಲ ಮೂಡಿತು. ಗಾಂಧೀಜಿ ಸರದಾರ್ ಪಟೇಲ್‍ರೊಂದಿಗೆ, ಪುಣೆಯಿಂದ 29 ಕಿ.ಮೀ. ದೂರದಲ್ಲಿದ್ದ ಉರುಳಿ ಕಾಂಚನ್ ಶಹರಕ್ಕೆ, 1945ರ ಡಿಸೆಂಬರ್‍ನಲ್ಲಿ ಬಂದು, ಅಲ್ಲೇ 2 ತಿಂಗಳು ಇದ್ದರಂತೆ. ಅಲ್ಲಿ ಆಗ ಗಾಂಧೀಜಿಯವರೊಂದಿಗೆ 200 ಶಿಷ್ಯರು ಬಂದು, ಗ್ರಾಮೀಣ ಸ್ವಚ್ಛತೆ ಹಾಗೂ ಆರೋಗ್ಯ ಜೀವನದ ಸಂದೇಶ ಸಾರಿದರು. 22-3-1946ರಂದು ಮಹಾತ್ಮ ಗಾಂಧೀಜಿ ಮಹಾರಾಷ್ಟ್ರ ರಾಜ್ಯದ ಪುಣೆಯ ಬಳಿ ಇರುವ, ಉರುಳಿ ಕಾಂಚನ್ ಎಂಬ ಶಹರದಲ್ಲಿ, ನಿಸರ್ಗೋಪಚಾರ ಆಶ್ರಮ ಸ್ಥಾಪಿಸಿದ್ದರು. ಬಡವರು, ಶ್ರೀಮಂತರು ಎಲ್ಲರಿಗೂ ಉಪಯೋಗವಾಗಲೆಂದು ಈ ಕೇಂದ್ರ ಆರಂಭಿಸಿದ ಉದ್ದೇಶವಾಗಿತ್ತು. ಗಾಂಧೀಜಿಯವರು ಬಲವಾಗಿ ನಂಬಿದ್ದಂತೆ, ಸಮಾಜದಲ್ಲಿ ಆರೋಗ್ಯ ರಕ್ಷಣೆಯ ಸೌಲಭ್ಯದಲಿ,್ಲ ಯಾವುದೇ ಪಕ್ಷಪಾತವಿರಬಾರದು.ಅಲ್ಲಿ ಅವರು ಸ್ಥಾಪಿಸಿದ ಪ್ರಕೃತಿ ಚಿಕಿತ್ಸಾ ಕೇಂದ್ರ ಈಗ ಪ್ರಕೃತಿ ಚಿಕಿತ್ಸೆಯ ರಾಷ್ಟ್ರೀಯ ಕೇಂದ್ರವಾಗಿದೆ.
ಗಾಂಧೀಜಿಯ 136ನೇ ಜನ್ಮ ದಿನದ ಸಂದರ್ಭದಲ್ಲಿ, ಆಗಸ್ಟ್ 2012ರಲ್ಲಿ, ಭವನ್ ಆಸ್ಟ್ರೇಲಿಯಾದಲ್ಲಿ ಪ್ರಕಟಿಸಲಾದ, ಈ ಆಶ್ರಮದ ಕಾರ್ಯಕ್ರಮ ನಿರ್ದೇಶಕರಾದ ಡಾ. ರವೀಂದ್ರ ವಸಂತ ನಿಸಾಲ್ ಅವರ ಲೇಖನದ, ಕೆಲವು ಅಂಶಗಳನ್ನು ಈಗ ಗಮನಿಸೋಣ. ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ತಿಂದದ್ದು ಸರಿಯಾಗಿ ಜೀರ್ಣವಾಗದೇ, ಪಚನ ಸಮಸ್ಯೆಗಳಿಂದ ಬಳಲುತ್ತಿದ್ದರಂತೆ. ಆಗ ಅವರು ಗಿಡಮೂಲಿಕೆಗಳ ಔಷಧಿ ತೆಗೆದುಕೊಳ್ಳುತ್ತಿದ್ದರು. ಪ್ರತಿಬಾರಿ ಔಷಧ ತೆಗೆದುಕೊಂಡು, ಪಚನಕ್ರಿಯೆ ಸುಧಾರಿಸಲು ಕರುಳು ಸ್ವಚ್ಛಮಾಡಿ, ಮಲ ವಿಸರ್ಜನೆ ಮಾಡುವುದು, ಸರಿಯಾದ ಚಿಕಿತ್ಸೆಯಲ್ಲ ಎಂದು ಅವರು ಆಲೋಚಿಸಿದರು. ಆಗ ಅವರಿಗನಿಸಿತು – ತನ್ನ ಸಮಸ್ಯೆಯ, ತನ್ನ ರೋಗದ ಪತ್ತೆಹಚ್ಚುವಿಕೆ ಹಾಗೂ ನಿರ್ವಹಣೆಯಲ್ಲಿ ಏನೋ ದೋಷವಿದೆಯೆಂದು. ಅವರು ತೆಗೆದುಕೊಳ್ಳುತ್ತಿದ್ದ ಕೆಲವು ಔಷಧಿಗಳಿಂದ ಏನೂ ಪ್ರಯೋಜನವಾಗÀಲಿಲ್ಲ. ಪ್ರತಿದಿನ ಒಬ್ಬ ವೈದ್ಯರು ಹಾಗೂ ಒಬ್ಬ ಔಷದ ಅಂಗಡಿಯವರನ್ನು ಅವಲಂಬಿಸುವ, ಇಂಥ ಔಷದ ವಿಧಾನದ ಪ್ರಯೋಜನವೇನು? ಎಂದು ಅವರು ಚಿಂತಿಸಿದರು. ಸಸ್ಯಾಹಾರಿ ಸಮಾಜದ ಅವರ ಒಬ್ಬರು ಸ್ನೇಹಿತರು, ಅಡಾಲ್ಫ್ ಜಸ್ಟ್ ಅವರ “ಖeಣuಡಿಟಿ ಣo ಣhe ಓಚಿಣuಡಿe” ಎಂಬ ಪುಸ್ತಕ ಕೊಟ್ಟರು. (ಪ್ರಕೃತಿಗೆ ವಾಪಸ್ಸು). ಗಾಂಧಿ ಆ ಪುಸ್ತಕ ಓದಿ, ಆಹಾರ ಪಥ್ಯ ಸುಧಾರಣೆ, ಹೊಟ್ಟೆಯ ಮೇಲೆ ಮಣ್ಣು ಹಚ್ಚಿಕೊಳ್ಳುವುದು. ಒದ್ದೆ ಬಟ್ಟೆಯ ಒತ್ತುವಿP,É ಮುಂತಾದ ಸರಳ ಪ್ರಯೋಗಗಳನ್ನು ಮಾಡಿದರು. ಈ ವಿಧಾನಗಳಿಂದ ಅವರ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಕ್ಕಿತು.
ಭಾರತದಂತಹ ಅಭಿವೃದ್ಧಿಯಾಗುತ್ತಿರುವ ದೇಶದಲ್ಲಿ, ಹಳ್ಳಿಗಳಲ್ಲಿರುವ ಬಹಳಷ್ಟು ಜನ, ಅವರಿಗೆ ವೈದ್ಯರು, ಹಾಗೂ ಆಸ್ವತ್ರೆಯ ಲಭ್ಯತೆ ಇಲ್ಲದಿರುವುದು, ಇಂಥ ಸ್ಥಿತಿಯಲ್ಲಿ, ಔಷಧರಹಿತ ಚಿಕಿತ್ಸಾವಿಧಾನ, ಜನರಿಗೆ ಲಾಭದಾಯಕ ಎಂದೆನಿಸಿತು ಗಾಂಧೀಜಿಗೆ. ತಮ್ಮ ಈ ಅನುಭವಗಳನ್ನು ಅವರದೇ ಪ್ರಕಟಣೆಯಾದ Iಟಿಜiಚಿಟಿ oಠಿiಟಿioಟಿದಲ್ಲಿ ಆರೋಗ್ಯಕ್ಕೆ ಮಾರ್ಗದರ್ಶಿ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಪ್ರಕೃತಿ ಚಿಕಿತ್ಸೆ, ಪಂಚ ಮೂಲ ವಸ್ತುಗಳು, ಅವುಗಳ ಪರಿಣಾಮದ ಬಗ್ಗೆ ತಮ್ಮ ಲೇಖನಗಳನ್ನು 1906ರಲ್ಲಿ ಬರೆದರು. 1942ರಲ್ಲಿ ಆಗಾಖಾನ್ ಅರಮನೆಯಲ್ಲಿ ಬಂಧಿಯಾಗಿದ್ದ ಕಾಲದಲ್ಲಿ, ಈ ಲೇಖನಗಳನ್ನು ಞeಥಿ ಣo heಚಿಟಣh ಎಂಬ ಪುಸ್ತಕದಲ್ಲಿ ಪ್ರಕಟಿಸಿದರು. ಇದು ಅನೇಕ ಭಾರತೀಯ ಹಾಗೂ ಯುರೋಪಿಯನ್ ಭಾಷೆಗಳಿಗೆ ಅನುವಾದಿಸಲ್ಪಟ್ಟಿತ್ತು. ಗಾಂಧೀಜಿಯವರ ಈ ನವ ವಿಚಾರಗಳು, ವೈದ್ಯರು ಹಾಗೂ ವೈದ್ಯಕೀಯ ವಿಜ್ಞಾನಿಗಳು ಅಳವಡಿಸಿದ ವಾರಿಗಳಿಗಿಂತ ಭಿನ್ನವಾಗಿದ್ದುದರಿಂದ ಇವು ಜನಪ್ರಿಯವಾದವು.ಗಾಂಧೀಜಿ ಅವರ ಆರೋಗ್ಯ ಹಾಗೂ ಸ್ವಚ್ಛತಾ ಶಿಕ್ಷಣ, ಅವರ 18 ಅಂಶಗಳ ರಚನಾತ್ಮಕ ಕಾರ್ಯಕ್ರಮಗಳಲ್ಲಿ ವಿವರಿಸಲ್ಪಟ್ಟಿದೆ. ಸತ್ಯ ಹಾಗೂ ಅಹಿಂಸಾ ಮಾರ್ಗದಲ್ಲಿ, ಸಂಪೂರ್ಣ ಸ್ವಾತಂತ್ರ್ಯ ಗಳಿಕೆಯ ಗುರಿಯತ್ತ, ಇವು ಮುಖಮಾಡಿದ್ದವು. ಪ್ರಾಕೃತಿಕ ಚಿಕಿತ್ಸಾ ವಿಧಾನದಲ್ಲಿ ಗಾಂಧಿ ಸಸ್ಯಾಹಾರವನ್ನು ಪ್ರತಿಪಾದಿಸಿದರು. ಅವರು ತಮ್ಮ 11 ಪ್ರಮಾಣಗಳಲ್ಲಿ ವಿಶ್ವಾಸವಿರಿಸಿದ್ದರು. ಅವು ಅಹಿಂಸೆ, ಸತ್ಯ, ಅರುಚಿ, ಬ್ರಹ್ಮಚರ್ಯ, ಶಾರೀರಿಕ ಶ್ರಮ, ಕದಿಯದಿರುವುದು, ಅಪರಿಗ್ರಹ, ನಿರ್ಭೀತತನ, ಜಾತಿ ಗೋಡೆಯ ನಿರ್ಮೂಲನೆ, ಧಾರ್ಮಿಕ ಸಮಾನತೆ, ಸ್ವದೇಶಿ ಆಥವಾ ಸ್ವಾವಲಂಬನೆ.
ಸಮಾಜಶಾಸ್ತ್ರ ಅಧ್ಯಾಪಕರಾದ ಶ್ರೀ ಮಿತ್ತಲ್ ಚೌಹಾಣ್ ದಾಖಲಿಸಿರುವಂತೆ, ನಿಜವಾದ ಆಸ್ತಿಯೆಂದರೆ ಆರೋಗ್ಯ.. ಚಿನ್ನ, ಬೆಳ್ಳಿಯ ಚೂರುಗಳು ಈ ಅರ್ಥದಲ್ಲಿ ಆಸ್ತಿಯಲ್ಲ. ಗಾಂಧಿ ಸ್ವತಂತ್ರ ವಿಚಾರವಾದಿ. ತಾಜಾತನದ ಎಲ್ಲ ವಿಚಾರಗಳನ್ನೂ ಅವರು ಗಮನಿಸುತ್ತಿದ್ದರು. ಅವರ ನಂಬಿಕೆಯಂತೆ, ಆಧುನಿಕ ಔಷಧವೇ ಮನುಷ್ಯನಿಗೆ ವಿಷ ಹಾಗೂ ಇದು ಕೆಟ್ಟ ಚಟಗಳನ್ನು ಶಾಶ್ವತವಾಗಿವಾಗಿಸುತ್ತದೆ. ಆಹಾರ, ಪಾನೀಯ, ಕೆಟ್ಟ ಚಟಗಳಿಗೆ ಬರುವ ಅಹಿತಕರ ಪ್ರತಿಕ್ರಿಯೆಗಳು, ಒಳ್ಳೆಯ ಹವ್ಯಾಸಗಳನ್ನು ಮಾತ್ರ ಬೆಳೆಸಿಕೊಳ್ಳಿ ಎಂದು ನಮ್ಮ ದೇಹಕ್ಕೆ ಕೊಡುವ ಸೂಚನೆಯಾಗಿದೆ. ಆದರೆ ನಾವು ಚಿಹ್ನೆಗಳಿಗೆ ಮುಸುಕು ಹಾಕಿ ಔಷಧ ಸ್ವೀಕರಿಸುತ್ತೇವೆ. ನಮ್ಮ ದೇಹದಲ್ಲಿ sಸ್ವ ಯಾಂತ್ರಿಕ ಚಿಕೆತ್ಸೆಯಲ್ಲಿ ನಾವು ವಿಶ್ವಾಸ ಇಡಬೇಕು. ಗಾಂಧಿ ದೃಷ್ಟಿಯಲ್ಲಿ ಆರೋಗ್ಯವೆಂದರೆ, ಆರಾಮವಾಗಿರುವ ದೇಹ. ಯಾರ ದೇಹ ರೋಗಗಳಿಂದ ಮುಕ್ತವಾಗಿರುವದೋ, ಯಾರು ತಮ್ಮ ಸಾಮಾನ್ಯ ದೈನಂದಿಕ ಚಟುವಟಿಕೆಗಳನ್ನು ಆಯಾಸ ಇಲ್ಲದೇ ಮಾಡುತ್ತಾನೋ, ಅವನೇ ಆರೋಗ್ಯವಂತ ವ್ಯಕ್ತಿ. ಪ್ರತಿಯೊಬ್ಬರಿಗೂ ಅವರ ದೇಹದ ಬಗ್ಗೆ ಜ್ಞಾನ ಇರಬೇಕೆಂದು ಗಾಂಧಿ ಪ್ರತಿಪಾದಿಸಿದರು. ಬಹಳ ಜನರಿಗೆ ಈ ಬಗ್ಗೆ ಅಜ್ಞಾನ ತುಂಬಿದೆ. ಗಾಂಧಿ ಪ್ರತಿಪಾದಿಸುವ ಪ್ರಾಚೀನ ತತ್ವಜ್ಞಾನಿಗಳ ಜ್ಞಾನವೆಂದರೆ, ಈ ಮಾನವ ಶರೀರ ಭೂಮಿ, ಜಲ, ಅಗ್ನಿ, ವಾಯು, ಹಾಗೂ ಆಕಾಶ ಎಂಬ ಐದು ತತ್ವಗಳಿಂದ ಆಗಿದೆ.
ಮಾನವ ದೇಹ ಉತ್ತಮವಾಗಿ ಕೆಲಸ ಮಾಡಲು, ವಿವಿಧ ಘಟಕ ಭಾಗಗಳಲ್ಲಿ ಸೌಹಾರ್ದ ಚಟುವಟಿಕೆಗಳಿರಬೇಕು. ಮೊದಲ ತತ್ವವೆಂದರೆ ವಾಯು ಅರ್ಥಾತ್ ಗಾಳಿ. ಇದಿಲ್ಲದೇ ನಾವಿಲ್ಲ. ಇದು ನಮ್ಮ ಸುತ್ತಲೂ ಇದೆ. ಯಾರಿಗೆ ತಮ್ಮ ಉಸಿರಾಟದ ಬಗ್ಗೆ ಅರಿವಿಲ್ಲವೋ, ಅವರು ಉಸಿರಾಟದ ವ್ಯಾಯಾಮಗಳನ್ನು ಮಾಡಬೇಕು. ಮೂಗಿನ ಹೊರಳೆಗಳ ಸ್ವಚ್ಛತೆ, ಮುಕ್ತ ಆಕಾಶÀದ ಕೆಳಗೆ ನಿದ್ರಿಸುವ ಮಹತ್ವ, ಇವೆಲ್ಲವನ್ನೂ ಗಾಂಧಿ ನಮಗೆ ಹೇಳಿದ್ದಾರೆ. ಎರಡನೇ ತತ್ವವಾದ ಜಲ ಅಂದರೆ ನೀರು, ಜೀವನದ ಮೂಲಭೂತ ಆವಶ್ಯಕv.É ಈ ನೀರು ಶುದ್ಧ ಹಾಗೂ ಸ್ವಚ್ಛವಿರಬೇಕು. ಇದರ ಪೂರೈಕೆ ಮಾಡುವುದು ಚರಂಡಿ ಮತು ಒಳಚರಂಡಿ ವ್ಯವಸ್ಥೆ ಮುನಸಿಪಾಲಿಟಿಯ ಜವಾಬ್ದಾರಿ. ಜಲಚಿಕಿತ್ಸೆಯೂ ಚಿರಪರಿಚಿತವಾದ ಒಂದು ಚಿಕಿತ್ಸಾ ವಿಧಾನ.3ನೇ ತತ್ವವಾದ ಭೂಮಿ ಅಂದರೆ ಮಣ್ಣು. ಇದನ್ನು ಕಾಯಿಲೆಗಳಿಗೆ ಪ್ರಕೃತಿಯ ದಾರಿಯಲ್ಲೇ ನೀಡುವ ಚಿಕಿತ್ಸೆ ಎನ್ನಬಹುದು. ಉದಾ: ಚೇಳು ಕಡಿತಕ್ಕೆ ಮಣ್ಣಿನ ಪೋಟ್ಲೀಸ್ ಹಾಕುವುದು, ಮಲಬದ್ಧತೆ ಹಾಗೂ ಮಲವಿಸರ್ಜನೆಗೆ ಸಂಬಂಧಿಸಿದ ಚಿಕಿತ್ಸೆಗಳು. ಅಗ್ನಿ ತತ್ವದಲ್ಲಿ ಸೂರ್ಯನಿಂದ ನಾವು ಪಡೆಯುವ ಬೆಳಕು ಆಧರಿಸಿ, ಸೂರ್ಯಸ್ನಾನ ಮುಂತಾದ ಚಿಕಿತ್ಸೆ ಮಾಡಬಹುದು. ಆಕಾಶ ತತ್ವವನ್ನು, ಆರೋಗ್ಯ ಉಳಿಸಲು ಹಾಗೂ ಮತ್ತೆ ಪಡೆಯಲು ಬಳಸಬಹುದು. ಆರೋಗ್ಯಕರ ಜೀವನಕ್ಕೆ ಬ್ರಹ್ಮಚರ್ಯ ಅವಶ್ಯ ಎಂದರು ಗಾಂಧಿ. ದೇವರ ಸಾಕ್ಷಾತ್ಕಾರದ ಪಥದಲ್ಲಿ ಇದೇ ಜೀವನದ ಮಾರ್ಗ. ಇದರ ಸಾಕ್ಷಾತ್ಕಾರವಾಗಲು, ಇಂದ್ರಿಯಗಳ ಸಂಯಮ ಪಾಲಿಸಬೇಕು. ವಿಚಾರ ಹಾಗೂ ಕ್ರಿಯೆಗಳಲ್ಲಿ ದೃಡತೆಯಿದ್ದರೆ ವಿಜಯ ಪ್ರಾಪ್ತಿ. ತನ್ನಲ್ಲಿರುವ ಪ್ರಾಣಿತನಕ್ಕೆ ದಾಸನಾಗುವುದೇ ಅತ್ಯಂತ ಕೆಟ್ಟ ವಿಚಾg.À ಮಾನವ ಶರೀರದ ಉಪಯೋಗ ಹಾಗೂ ಆಹಾರ ಗಾಂಧಿ ಹೇಳುತ್ತಾರೆ ಪ್ರಪಂಚದಲ್ಲಿರುವ ಎಲ್ಲವನ್ನೂ ಒಳ್ಳೆಯ ಹಾಗೂ ಕೆಟ್ಟ ಉದ್ದೇಶಗಳಿಗೆ ಬಳಸಲಾಗುವಂತೆ ನಮ್ಮ ದೇಹವನ್ನೂ ಬಳಸಬಹುದು. ಸ್ವಾರ್ಥಪರ ಉದ್ದೇಶಗಳಿಗೆ ದೇಹದ ದುರ್ಬಳಕೆ ಮಾಡಿದರೆ, ಅದು ದೇಹಕ್ಕೆ ಹಾನಿ ತರುತ್ತದೆ. ಸ್ವನಿಯಂತ್ರಣದಿಂದ, ಸಂಯಮದಿಂದÀ ಬಳಕೆ ಮಾಡಿದರೆ ಇದೇ ಪ್ರಪಂಚದ ಸೇವೆಗೆ ನಮ್ಮನ್ನುನಾವು ಸಮರ್ಪಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಗಾಂಧಿ ಆಹಾರವನ್ನು ಸಸ್ಯಾಹಾರಿ, ಮಾಂಸಾಹಾರಿ ಹಾಗೂ ಮಿಶ್ರ ಎಂದು 3 ಭಾಗಗಳಾಗಿ ವಿಭಜಿಸಿದ್ದಾರೆ. ಸಸ್ಯಾಹಾರವೇ ಉತ್ತಮ ಎಂದು ಅವರ ಖಚಿತ ನಿಲುವು. ಗಾಂಧಿ ಹೇಳುವಂತೆ ಹಾಲು, ಏಕಧಳ ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣು, ತರಕಾರಿ, ಕೊಬ್ಬು ಇವೆಲ್ಲವನ್ನು ಬಳಸಬೇಕಾದ ಪ್ರಮಾಣದಲ್ಲೇ ಬಳಸಬೇಕು. ಮಾಂಸ ಬಳಸಲು ಪ್ರಾಣಿಯನ್ನು ಕೊಲ್ಲಬೇಕು. ಆದ್ದರಿಂದ ಹಿಂಸೆಯಾಗುತ್ತದೆ. ಗಾಂಧಿ ಹೇಳುವಂತೆ ದೇಹಕ್ಕೆ ಬೇಕಾದ ಉಪ್ಪು ಆಹಾರ ಪದಾರ್ಥಗಳಲ್ಲೇ ದೊರೆಯುತ್ತದೆ. ಅವರ ಪ್ರಕಾರ ಸಿಹಿಗಾಗಿ ಬೆಲ್ಲವೇ ಉತ್ತಮ ಕರಿದ ಪದಾರ್ಥಗಳನ್ನು ತ್ಯಜಿಸಬೇಕು. ಎಷ್ಟು ಆಹಾರ ಸೇವಿಸಬೇಕು? ಗಾಂಧೀ ಉವಾಚ ಹೀಗಿದೆ. ಕರ್ತವ್ಯ ಹಾಗೂ ಔಷಧ ಎಂಬಂತೆ, ದೇಹವನ್ನು ಉಳಿಸಲು, ಆಹಾರ ಸೇವಿಸಬೇಕಲ್ಲದೇ, ನಾಲಿಗೆಯ ತೃಪ್ತಿಗಾಗಿ ಅಲ್ಲ ಈ ನಿಟ್ಟಿನಲ್ಲಿ ಸ್ವನಿಯಂತ್ರಣವಿರಬೇಕು. ಹಿರಿಯರ ಚಟಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ದಿನಕ್ಕೆ 3 ಬಾರಿ ತಿನ್ನಬಹುದು. ಗಾಂಧಿ ಹೇಳುವಂತೆ – ಔಷಧ ಹಾಗೂ ಮದ್ಯ ದೆವ್ವದ 2 ಬಾಹುಗಳು. ಇವುಗಳ ಮೂಲಕ ಅಸಹಾಯಕ ಗುಲಾಮರನ್ನು, ಈ ದೆವ್ವ ಜಡಸ್ಥಿತಿ ಹಾಗೂ ಮಾದಕತೆಗೆ ತಳ್ಳುತ್ತಾನೆ. ಗಾಂಧಿ ಅವರ ಪ್ರಕಾರ ಇವುಗಳ ಪರಿಣಾಮಗಳು ಆರ್ಥಿಕ ನಷ್ಟವಷ್ಟೇ ಅಲ್ಲದೇ, ನೈತಿಕ ನಷ್ಟವೂ ಆಗುತ್ತವೆ.
ಬ್ರಿಟಿಷರ ಕಾಲದಲ್ಲಿ ಆರಂಭವಾದ ಆಫೀಮು ದುರ್ಬಳಕೆ, ಯುವಜನ ಹಾಗೂ ಹಿರಿಯರ ಸಿಗರೇಟು ಸೇದುವಿಕೆ, ಇವುಗಳ ಕೆಟ್ಟಪರಿಣಾಮಗಳಾದ ದೃಷ್ಟಿದೋಷ, ಪಚನ ಕ್ರಿಯೆ ಸಮಸ್ಯೆಗಳು, ಇವುಗಳತ್ತ ಗಾಂಧಿ ಜನರ ಗಮನ ಸೆಳೆಯ ಬಯಸುತ್ತಾರೆ. ಪ್ರತಿಯೊಬ್ಬ ಧೂಮ್ರಪಾನಿ, ತನ್ನ ಬಾಯಿಯನ್ನು ಹೊಗೆ ಕೊಳವೆ ಮಾಡಿಕೊಳ್ಳುವ ಕೆಟ್ಟ ಚಟ ಬಿಟ್ಟರೆ, ಇದರಿಂದ ಆತನ ಉಳಿತಾಯ ಅತನಿಗೆ ಹಾಗೂ ದೇಶಕ್ಕೆ ಲಾಭದಾಯಕ. ಕಾಫಿ, ಟೀ ಸಹ ಜೀವನಕ್ಕೆ ಅವಕಾಶವಲ್ಲ. ಭಾರತದ ಅನಾರೋಗ್ಯದ ಮುಖ್ಯ ಕಾರಣಗಳು, ದೋಷಪೂರಿತ ಹಾಗೂ ಹಾನಿಕಾರಕ ಪ್ರಕೃತಿ ಕರೆಗಳಿಗೆ ಜನ ಉತ್ತರಿಸುವ ವಿಧಾನಗಳು. ಶೌಚಾಲಯಗಳ ಕೊಳಕು ಹಾಗೂ ಬಯಲು ಶೌಚಾಲಯ ಅನೇಕ ಕಾಹಿಲೆಗಳಿಗೆ ಮೂಲವಾಗುತ್ತದೆ. ಸ್ವಚ್ಛತೆ ಬಗ್ಗೆ ಶಿಕ್ಷಣ ನೀಡಲು ಹಿಂದೆ ಸ್ವಯಂಸೇವಕರು ಹೋದಾಗ, ಹಿಂದಿನಿಂದ ಬಂದ ಹಳೆ ಅಭ್ಯಾಸಗಳನ್ನು ಸುಲಭವಾಗಿ ಬಿಡಲಾಗದ ಜನರನ್ನು ಕಂಡರು. ಹಳ್ಳಿಗಳಲ್ಲಿ ಜನ ಸ್ನಾನ ಮಾಡಿ, ಬಟ್ಟೆ ಒಗೆದ ಅದೇ ಕೆರೆಯ ಅಶುದ್ಧ ನೀರನ್ನು ಕುಡಿಯುತ್ತಾರೆ. ತೀರ್ಥಯಾತ್ರಾ ಸ್ಥಳಗಳಲ್ಲಿಯ ಕೊಳಕು ಕಂಡು ಅಂದು ಗಾಂಧಿ ದುಃಖಿತರಾಗಿದ್ದರು. ಇಷ್ಟು ವರ್ಷಗಳಾದ ಮೇಲೂ ಈ ಕ್ಷೇತ್ರಗಳಲ್ಲಿ ಇನ್ನೂ ಸಾಕಷ್ಟು ಬದಲಾವಣೆ ಹಾಗೂ ಪರಿವರ್ತನೆ ಆಗಬೇಕಾಗಿದೆ. ಇದು ಸರಕಾರ ಹಾಗೂ ಪ್ರತಿ ಸಾಮಾನ್ಯ ವ್ಯಕ್ತಿಯ ಜವಾಬ್ದಾರಿ. ಪರಿಸರ, ಸ್ವಚ್ಛವಾಗಿರಬೇಕು. ಗಾಂಧೀಜಿ ಪ್ರಕಾರ ಪ್ರತಿ ಧರ್ಮ, ಸ್ವಚ್ಛತೆಯ ಬಗ್ಗೆ ಸಾರುತ್ತದೆ. ಶಿಬಿರಗಳಲ್ಲಿ ಸ್ವಚ್ಛತೆಗಾಗಿ ಪ್ರತಿಯೊಬ್ಬ ವ್ಯಕ್ತಿ ಭಂಗಿ ಕೆಲಸ ಮಾಡಿ ಶೌಚಾಲಯ ಹಾಗೂ ಸ್ನಾನಗೃಹಗಳನ್ನು ಸ್ವಚ್ಛವಾಗಿಡಬೇಕು ಎಂದು, ಅಂದು ಕರೆ ನೀಡಿ ನುಡಿದಂತೆ ನಡೆದು ಇದನ್ನು ಗಾಂಧಿ ಸ್ವತಃ ಸದಾ ಪಾಲಿಸಿದ್ದರು.
ಗಾಂಧಿ ಅಂದು ನೀಡಿರುವ ಕರೆ ಇಂದಿಗೂ ಪ್ರಚಲಿತ. ಅದು ತಿಂದು, ಕುಡಿದು, ಮಜವಾಗಿರಲು ವ್ಯಕ್ತಿ ಬದುಕಬಾರದು. ದೇಹಗಳನ್ನು ದೇವಾಲಯ ಮಾಡಿಕೊಂಡು, ಜನತಾ ಜನಾರ್ಧನನ ಸೇವೆಗೆ ಬಳಸಲು, ವ್ಯಕ್ತಿ ತಿನ್ನಬೇಕು ಹಾಗೂ ಯೋಗ್ಯ ಪಾನೀಯ ಕುಡಿಯಬೇಕು. ಗಾಂಧೀಜಿ ಪ್ರಕಾರ ದಣಿದ ಕಾರ್ಮಿಕರಿಗೆ, ವಿಶ್ರಾಂತಿ ಹಾಗೂ ಮನರಂಜನಾ ಕೋಣೆಗಳಿರಬೇಕು. ಅಲ್ಲಿ ಕೆಲಸಗಾರರು ವಿಶ್ರಾಂತಿ ಪಡೆದು, ಆರೋಗ್ಯಕರ ಹಾಗೂ ಕಡಿಮೆ ವೆಚ್ಚದ ತಿನಿಸು ತಿನ್ನಬೇಕೇ ಹೊರತು, ಕೆಟ್ಟ ಚಟಗಳಲ್ಲಿ ತೊಡಗಬಾರದು. 2010ರ ಅಕ್ಟೋಬರ್ 2 ರಂದು, ಮ್ಯಾನ್‍ಹಟ್ಟನ್‍ದ ಹರ್ಲೆಂದ ಮ್ಯಾಕಸ್ ಗಾರ್ವೆ ಉದ್ಯಾನದಲ್ಲಿ, ನ್ಯೂಯಾರ್ಕ್ ಹಾಗೂ ಇತರ ದೇಶಗಳಿಂದ ಬಂದಿದ್ದ ನೂರಾರು ಜನ, ಮಹಾತ್ಮ ಗಾಂಧಿ ಆರೋಗ್ಯ ಹಾಗೂ ಶಾಂತಿಯ ನಡಿಗೆಯಲ್ಲಿ ಪಾಲ್ಗೊಂಡಿದ್ದನ್ನು ಇಲ್ಲಿ ನೆನೆಯಬಹುದು. ಇವರೆಲ್ಲ ಮಹಾತ್ಮ ಗಾಂಧಿ ಅವರ ಮಾತುಗಳನ್ನು ಜ್ಞಾಪಿಸಿಕೊಂಡು, ಅವರ ನಡಿಗೆಯನ್ನು ಪಾಲಿಸುವವರು. ಈ ರೂಡಿಗಳಿಂದ, ಪ್ರಂಪಂಚದಾದ್ಯಂತ ಪಿಡುಗಾಗಿರುವ, ಸ್ಥೂಲಕಾಯತೆ, ಮಧುಮೇಹ, ಹಾಗೂ ಹೃದಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯ ರಕ್ಷಿಸಿಕೊಳ್ಳಬೇಕೆಂಬ ಕಾಳಜಿ ಇವರೆಲ್ಲರದು.

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this: