Vydyaloka

ಸುಸ್ಥಿರ ಆರೋಗ್ಯಕ್ಕಾಗಿ “ಸತ್ವಮ್ ಗಿಡಮೂಲಿಕಾ ನೀರು”

ಸತ್ವಮ್ ಗಿಡಮೂಲಿಕಾ ನೀರು ಹತ್ತು ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳ ಸಾರವನ್ನು ಹೊಂದಿರುವ ನೀರು. ಸತ್ವಮ್ ಸಕ್ಕರೆಯ ಪಾನೀಯಗಳು ಮತ್ತು ಕೃತಕ ಮಿಶ್ರಣಗಳಿಂದ ಕೂಡಿದ ಪಾನೀಯಗಳಿಗೆ ಉಲ್ಲಾಸಕರ ಮತ್ತು ಆರೋಗ್ಯಕರ ಪರ್ಯಾಯವನ್ನು ನೀಡುತ್ತದೆ.

“ಪಾನೀಯಂ ಪ್ರಾಣಿನಾಂ ಪ್ರಾಣಃ” ಎಂಬ ಮಾತಿನಂತೆ ನೀರು ಜೀವಕ್ಕೆ – ಜೀವನಕ್ಕೆ ಚೈತನ್ಯವನ್ನು ನೀಡುತ್ತದೆ. ಆದ್ದರಿಂದ ಆರೋಗ್ಯಯುತ ಜೀವನಶೈಲಿಗಾಗಿ ಹಾತೊರೆಯುತ್ತಿರುವ ಪ್ರಸ್ತುತ ಯುಗದಲ್ಲಿ, ಕುಡಿಯಲು ಯೋಗ್ಯವಾದ ನೀರಿನ ಅವಶ್ಯಕತೆಯೊಂದಿಗೆ, ಅಗತ್ಯತೆಯೂ ಅಷ್ಟೇ ಇದೆ.

ಈ ಹೊಸ ಯುಗದಲ್ಲಿ ಸಾಂಪ್ರದಾಯಿಕ ಆಯುರ್ವೇದ ಜ್ಞಾನ ಮತ್ತು ವೈಜ್ಞಾನಿಕ ಪ್ರಕ್ರಿಯೆ ಅಥವಾ ಪ್ಯಾಕೇಜಿಂಗ್ ತಂತ್ರಜ್ಞಾನದ ಬೆಂಬಲದೊಂದಿಗೆ ಬಾಯಾರಿಕೆ ನೀಗಿಸಲು ಮತ್ತು ತಮ್ಮ ದಿನನಿತ್ಯದ ಒತ್ತಡದ ಜೀವನದಲ್ಲಿ ಆರೋಗ್ಯಕರವಾಗಿರಲು ಜನರಿಗೆ ಸಹಾಯ ಮಾಡುವಂತಹ ನೀರನ್ನು ನೀಡುವ ಹೊಸ ವಿಧಾನವನ್ನು ಹೊತ್ತು ತಂದಿದೆ ʻಹಾರ್ದಿಕ್‌ ಹರ್ಬಲ್ಸ್‌ʼ.

ನೈಸರ್ಗಿಕ ಗಿಡಮೂಲಿಕೆಗಳ ಸತ್ವವನ್ನು, ಶುದ್ಧವಾದ ಕುಡಿಯುವ ನೀರಿನಲ್ಲಿ, ಸುರಕ್ಷಿತ ವಿಧಾನದಿಂದ ಸೇರಿಸಿ ತಯಾರಿಸಲಾಗುವ ಹೊಸ ಆಕರ್ಷಕ ಪಾನೀಯ ಹಾರ್ದಿಕ್‌ ಹರ್ಬಲ್ಸ್‌ನ “ಸತ್ವಮ್ ಹರ್ಬಲ್ ವಾಟರ್‌”, ಹೇರಳ ಆರೋಗ್ಯ ಪ್ರಯೋಜನಗಳನ್ನು ಹೊಂದಿದ ಹತ್ತಾರು ಗಿಡಮೂಲಿಕೆಗಳ ಸಾರದಿಂದ ದೇಹದಲ್ಲಿ ಜಲಸಂಚಯನವನ್ನು ಮಾಡುವುದರ ಜೊತೆಗೆ ನಿರ್ಜಲೀಕರಣವನ್ನು ನೀಗಿಸುತ್ತದೆ.

ಜೀವಜಲದೊಂದಿಗೆ ಪ್ರಕೃತಿಯ ಸಾರ:

ಪ್ರಕೃತಿಯ ಔದಾರ್ಯತೆ ಹಾಗೂ ಮೌಲ್ಯವರ್ಧಿತ ಗುಣಗಳನ್ನು ಬಳಸಿಕೊಂಡು ಸತ್ವಯುತವಾದ ಗಿಡಮೂಲಿಕಾ ಉತ್ಪನ್ನಗಳನ್ನು ನೀಡುತ್ತಾ ಬಂದಿರುವ ಹಾರ್ದಿಕ್‌ ಹರ್ಬಲ್ಸ್‌ ಆರೋಗ್ಯ ಪ್ರಜ್ಞೆಯನ್ನು ಇನ್ನಷ್ಟು ಜಾಗೃತಿಗೊಳಿಸುವ ಹೊಸ ತಂತ್ರದೊಂದಿಗೆ ನಿಮ್ಮೊಂದಿಗಿದೆ. ಅದರ ಅಪಾರ ಕೊಡುಗೆಗಳ ಸಂಗ್ರಹದಲ್ಲಿ, ಅಮೃತ ಸಮಾನವಾದ “ಸತ್ವಮ್ ಗಿಡಮೂಲಿಕಾ ನೀರು” ಸುಸ್ಥಿರ ಆರೋಗ್ಯಕ್ಕಾಗಿ ಆಧುನಿಕ ಅನುಕೂಲಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಸಾವಿರಾರು ವರ್ಷಗಳ ಹಿಂದಿನ ಆಯುರ್ವೇದ ಜ್ಞಾನವನ್ನು ಬಳಸಿ, ಉಶಿರಾ, ಭದ್ರ ಮುಷ್ಟಿ, ಆಮ್ಲಾ, ನನ್ನಾರಿ, ಕೊತ್ತಂಬರಿ, ಶುಂಠಿ, ಲವಂಗ, ಏಲಕ್ಕಿ, ಅಶ್ವಗಂಧ ಮತ್ತು ನಿಂಬೆ ಹುಲ್ಲುಗಳ ಸಾರಗಳಿಂದ ತುಂಬಿದ ಸತ್ವಯುತವಾದ ಕುಡಿಯುವ ನೀರಿನ ಸಂಯೋಜನೆಯು ದೇಹಕ್ಕೆ ಉಲ್ಲಾಸ, ಚೈತನ್ಯ ಮತ್ತು ಪೋಷಣೆಯನ್ನು ನೀಡುತ್ತದೆ.

ಶಾಂತಯುತವಾದ ಉಶಿರಾ:

ಶಾಂತ ಹಾಗೂ ಶುದ್ಧೀಕರಣದ ಗುಣಗಳನ್ನು ಹೊಂದಿರುವ ಉಶಿರಾ, ಹಾರ್ದಿಕ್‌ ಹರ್ಬಲ್ಸ್‌ನ ʻಸತ್ವಮ್‌ʼ ಗಿಡಮೂಲಿಕಾ ನೀರಿನಲ್ಲಿ ಪ್ರಮುಖ ಅಂಶವಾಗಿದೆ. ಪಿತ್ತದೋಷದ ಸಮತೋಲನವನ್ನು ಕಾಪಾಡಲು ಹೆಸರುವಾಸಿಯಾಗಿರುವ ಉಶಿರಾ, ಅತಿಯಾದ ಬೆವರುವಿಕೆಯನ್ನು ಸಮತೋಲನಗೊಳಿಸಲು ತುಂಬಾ ಉಪಯುಕ್ತವಾಗಿದೆ. ದೇಹದ ದಣಿವಾರಿಸುವುದಲ್ಲದೇ, ಮನಸ್ಸನ್ನು ಶಾಂತಗೊಳಿಸಿ, ದೇಹವನ್ನು ತಂಪಾಗಿರಿಸಿ ದೈಹಿಕ ಹಾಗೂ ಮಾನಸಿಕ ವಿಶ್ರಾಂತಿಯನ್ನು ನೀಡುತ್ತದೆ.

ಆರೋಗ್ಯಕ್ಕೆ ಭದ್ರಮುಷ್ಟಿ: 

ಭದ್ರ ಮುಷ್ಟಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮತ್ತೊಂದು ಪ್ರಮುಖ ಗಿಡಮೂಲಿಕೆಯಾಗಿದೆ. ಇದರಲ್ಲಿ ಇರುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಚರ್ಮರೋಗ ಅಥವಾ ಚರ್ಮ ಸುಕ್ಕುಗಟ್ಟುವಿಕೆಗೆ ಪರಿಣಾಮಕಾರಿ ಗಿಡಮೂಲಿಕೆ. ಅಲ್ಲದೇ ಜಠರದ ಆರೋಗ್ಯವನ್ನು ಬಲಪಡಿಸುವ ಖನಿಜಗಳನ್ನು ಹೊಂದಿದ ಭದ್ರಮುಷ್ಟಿ, ಜೀರ್ಣಕ್ರಿಯೆಯನ್ನು ಮಾತ್ರವಲ್ಲದೇ ಸ್ತ್ರೀ ರೋಗಗಳ ಚಿಕೆತ್ಸೆಗೆ ರಾಮಬಾಣವಾಗಿದೆ. ಒಟ್ಟಾರೆಯಾಗಿ ಆರೋಗ್ಯದ ಸ್ವಾಸ್ಥ್ಯವನ್ನು ಉತ್ತೇಜಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.

ಆಮ್ಲಾ ಮತ್ತು ಆರೋಗ್ಯ:

ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ಸ್ ಹಾಗೂ ಇತರೆ ಪೋಷಕಾಂಶಗಳು ಮನುಷ್ಯನ ದೇಹಕ್ಕೆ ಅಪಾರ ಕೊಡುಗೆಗಳನ್ನು ನೀಡುವುದಲ್ಲದೆ, ಗಿಡಮೂಲಿಕೆಯ ನೀರನ್ನು ಸುವಾಸನೆ ಮತ್ತು ಪೋಷಕಾಂಶಗಳ ಸಮೃದ್ಧಿಯೊಂದಿಗೆ ನೀರೀನ ಸತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕಾಂತಿಯುತ ಚರ್ಮದ ರಕ್ಷಣೆಗೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಆಮ್ಲಾ, ಹಾರ್ದಿಕ್ ಹರ್ಬಲ್ಸ್‌ನ ಸೂತ್ರೀಕರಣದಲ್ಲಿ ಒಂದು ಶಕ್ತಿಶಾಲಿ ಘಟಕಾಂಶವಾಗಿದೆ.

ಆರೋಗಕ್ಕೆ ನನ್ನಾರಿ:

ನನ್ನಾರಿ ಅಥವಾ ಸೋಗದೆ ಬೇರು, ಅದರ ಮಣ್ಣಿನ ಸತ್ವದೊಂದಿಗೆ, ಆಂಟಿಫಂಗಲ್ ಗುಣಗಳಿಂದಾಗಿ ಚರ್ಮದ ಸಂಭಾವ್ಯ ಪ್ರಯೋಜನಗಳನ್ನು ನೀಡುತ್ತದೆ. ಮಣ್ಣು ಮತ್ತು ಬೇರಿನ ಮಿಶ್ರಣದ ಸತ್ವವು ನೀರಿಗೆ ನಾಸ್ಟಾಲಾಜಿಕ್ ಸ್ಪರ್ಶವನ್ನು ಸೇರಿಸುತ್ತದೆ. ಜೊತೆಗೆ ಕೊತ್ತಂಬರಿ, ಪಾನೀಯದ ಸ್ವಾದವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಜೀರ್ಣಕ್ರಿಯಗೆ ಬೆಂಬಲವನ್ನು ನೀಡುವುದರ ಜೊತೆಗೆ, ತಾಜಾತನವನ್ನು ನೀಡುತ್ತದೆ. ಆಯುರ್ವೇದ ಚಿಕಿತ್ಸಕಗಳಲ್ಲಿ ಕೂಡ ಇದನ್ನು ಹಸಿವು, ರಕ್ತ ಶುದ್ಧೀಕರಣ, ಬ್ಯಾಕ್ಟೀರಿಯೊಸ್ಟಾಟಿಕ್ ಆಗಿ ಬಳಸಲಾಗುತ್ತದೆ. ಇದು ಒಂದು ಪರಿಣಾಮಕಾರಿ ಉತ್ಕರ್ಷಣ ನಿರೋಧಕವಾಗಿದೆ.

ಬೆಚ್ಚಗಿನ ಶುಂಠಿ, ಲವಂಗ:

ಹಸಿವನ್ನು ಹೆಚ್ಚಿಸುವ ಶುಂಠಿ ಮತ್ತು ನೈಸರ್ಗಿಕ ಮೌತ್‌ ಫ್ರೆಶ್‌ನರ್‌ ಲವಂಗ, ಇವುಗಳನ್ನು ಬೆಚ್ಚಗಿನ ಗುಣಗಳನ್ನು ಹೊಂದಿರುವ ಗಿಡಮೂಲಿಕೆಗಳೆಂದು ಹೇಳಲಾಗುತ್ತದೆ. ವಿಶಿಷ್ಠವಾದ ಸುವಾಸನೆಯಿಂದಲೇ ಪ್ರಾಶಸ್ತ್ಯವನ್ನು ಪಡೆದ ಈ ಗಿಡಮೂಲಿಕೆಗಳು ಜೀರ್ಣಕ್ರಿಯೆ ಮತ್ತು ಉಸಿರಾಟದ ಸಂಬಂಧಿ ಕಾಯಿಲೆಗಳನ್ನು ದೂರಗೊಳಿಸುತ್ತದೆ. ಇವುಗಳ ಪರಿಮಳದ ಗುಣಲಕ್ಷಣ ಕುಡಿಯುವ ನೀರನ್ನು ಇನ್ನಷ್ಟು ಸಮೃದ್ಧಗೊಳಿಸುತ್ತದೆ.

ರೋಗ ನಿರೋಧಕ ಅಶ್ವಗಂಧ:

ಆಯುರ್ವೇದ ಗಿಡಮೂಲಿಕಾ ಪದಾರ್ಥಗಳಲ್ಲಿ ಅಶ್ವಗಂಧ ಬಹಳಷ್ಟು ಪ್ರಸಿದ್ಧಿ ಪಡೆದ ಗಿಡಮೂಲಿಕೆ. ಏಕೆಂದರೆ ಮನುಷ್ಯನ ಕಾಯಿಲೆಗಳನ್ನು ಗುಣಪಡಿಸುವ ಇದರ ವ್ಯಾಪ್ತಿ ತುಂಬಾ ವಿಸ್ತಾರವಾಗಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಹಿಡಿದು ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ವೃದ್ಧಿಸಿ, ಆರೋಗ್ಯಕರವಾದ ರೋಗ ನಿರೋಧಕ ಶಕ್ತಿಯನ್ನು ದೇಹಕ್ಕೆ ಒದಗಿಸಿ ಕೊಡುತ್ತದೆ. ಇದರ ಸೇರ್ಪಡೆಯು ಹಾರ್ದಿಕ್ ಹರ್ಬಲ್ಸ್‌ನ ಸಮಗ್ರ ಸ್ವಾಸ್ಥ್ಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಅನಾರೋಗ್ಯಕ್ಕೆ ರಾಮಬಾಣ ನಿಂಬೆ ಹುಲ್ಲು:

ನೋವು ಮತ್ತು ಊತವನ್ನು ನಿವಾರಿಸುವ, ಜ್ವರವನ್ನು ಕಡಿಮೆ ಮಾಡುವ ಅಂಶಗಳನ್ನು ನಿಂಬೆ ಹುಲ್ಲಗಳು ಒಳಗೊಂಡಿದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನೂ ಹೊಂದಿದೆ. ಅಲ್ಲದೆ, ನಿಂಬೆ ಹುಲ್ಲಿನ ಸುಗಂಧವು ನಮ್ಮಲ್ಲಿ ಹೂಸ ಶಕ್ತಿಯನ್ನು ತುಂಬುತ್ತದೆ ಎಂದು ನಂಬಲಾಗಿದೆ. ಇದು ಸತ್ವಂನ ನೀರನ್ನು ಇನ್ನಷ್ಟು ಸತ್ವಯುತವಾದ, ಪ್ರಬಲಯುತವಾದ ಹಾಗೂ ಸುವಾಸನಾಭರಿತವಾದ ಪಾನೀಯವನ್ನಾಗಿಸಿದೆ.

ಒಂದೊಂದು ಗುಟುಕಿನಲ್ಲಿಯೂ ಗ್ರಾಹಕರ ಆರೋಗ್ಯದ ಸ್ವಾಸ್ಥ್ಯವನ್ನು ಕಾಪಾಡುವ, ಪ್ರಕೃತಿಯ ಔದಾರ್ಯತೆಯನ್ನು ಆರೋಗ್ಯಕರ ಶಕ್ತಿಯಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಸತ್ವಮ್‌, ಸಕ್ಕರೆಯ ಪಾನೀಯಗಳು ಮತ್ತು ಕೃತಕ ಮಿಶ್ರಣಗಳಿಂದ ಕೂಡಿದ ಪಾನೀಯಗಳಿಗೆ ಉಲ್ಲಾಸಕರ ಮತ್ತು ಆರೋಗ್ಯಕರ ಪರ್ಯಾಯವನ್ನು ನೀಡುತ್ತದೆ.

ಹೀಗೆ ಹತ್ತು ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳ ಸಾರವನ್ನು ಹೊಂದಿರುವ ನೀರು ಸತ್ವಮ್, ಹಾರ್ದಿಕ್‌ ಹರ್ಬಲ್ಸ್‌ನ ಮೂಲಕ ಜನರ ಕೈ ಸೇರುತ್ತಿದೆ ಮತ್ತು ಜನ ಮನಕ್ಕೆ ಹತ್ತಿರವಾಗುತ್ತಿದೆ. ಸತ್ವಮ್‌ ಗಿಡಮೂಲಿಕೆಗಳ ನೀರು ಸಾಮಾನ್ಯ ಪಾನೀಯವಾಗಿರದೆ ದೇಹ, ಮನಸ್ಸು, ಆತ್ಮವನ್ನು ತೃಪ್ತಿಪಡಿಸುವ, ಪೋಷಿಸುವ ಆಧುನಿಕ ಜೀವನ ಶೈಲಿಗೆ ಬೇಕಾಗುವ ರೀತಿಯಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ತಯಾರಿಸುವ ಉತ್ಪನ್ನ.

ಸತ್ವಮ್‌ ಹರ್ಬಲ್ ವಾಟರ್ ಜೊತೆಗೆ ಹಾರ್ದಿಕ್ ಹರ್ಬಲ್ಸ್, ಆರೋಗ್ಯ ಸ್ವಾಸ್ಥ್ಯವನ್ನು ಕಾಪಾಡುವ ವೈವಿಧ್ಯಮಯ ಉತ್ಪನ್ನಗಳನ್ನು ಹೊಂದಿದೆ. ಈ ಸಾಲಿನಲ್ಲಿ ಜೀರ್ಣಕಾರಿ ಪ್ರಯೋಜನಗಳಿಗೆ ಹೆಸರುವಾಸಿಯಾದ ಜೀರಾ ಪ್ಲಸ್, ದೇಹದಲ್ಲಿನ ನೈಸರ್ಗಿಕ ಸತ್ವವನ್ನು ಹೆಚ್ಚಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ರೋಗನಿರೋಧಕ ಬೂಸ್ಟರ್‌ (ಇಮ್ಯುನಿಟಿ ಬೂಸ್ಟರ್) ಮತ್ತು ಮೂತ್ರಸಂಬಂಧಿತ ಆರೋಗ್ಯವನ್ನು ಕಾಪಾಡುವ ಯುರಿನರಿ ಸಿಸ್ಟಮ್ ಬೂಸ್ಟರ್ಗಳಿವೆ.

ಇದಲ್ಲದೆ, ವೈಯಕ್ತಿಕ ಆರೈಕೆಗೆ ಸಮಗ್ರವಾದ ವಿಧಾನವನ್ನು ಒದಗಿಸುವ ಗಿಡಮೂಲಿಕೆ ಪದಾರ್ಥಗಳ ಸಂಯೋಜನೆಯೊಂದಿಗೆ ತಯಾರಾದ ಗಿಡಮೂಲಿಕೆಗಳ ಸಾಬೂನುಗಳನ್ನೂ ನೀಡುತ್ತಿದೆ. ಗುಣಮಟ್ಟ ಮತ್ತು ನೈಸರ್ಗಿಕ ಸೂತ್ರೀಕರಣಗಳಿಗೆ ಬದ್ಧವಾಗಿ, ಹಾರ್ದಿಕ್ ಹರ್ಬಲ್ಸ್ ಗ್ರಾಹಕರ ಅತ್ಯುತ್ತಮ ಆರೋಗ್ಯ ಮತ್ತು ಯೋಗಕ್ಷೇಮದ ಕಾಳಜಿಯನ್ನು ವಹಿಸುತ್ತದೆ.

ಭೂಮಿಯಲ್ಲಿ ಮಾನವನ ಇರುವಿಕೆಗೆ ಪ್ರಮುಖ ಕಾರಣವೇ ಪರಿಸರ. ಮನುಷ್ಯ ತನ್ನ ಸುತ್ತಮುತ್ತಲಿನ ವಾತಾವರಣದಲ್ಲಿರುವ ಬಹುತೇಕ ವಸ್ತುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾನೆ. ಅದರಲ್ಲೂ ಸಸ್ಯ ಸಂಕುಲ ಜೀವನದ ಅಂಗವೇ ಆಗಿದೆ. ಸಸ್ಯ ಸಂಕುಲದ ಸತ್ವವನ್ನು ಆರೋಗ್ಯಕರ ವಿಧಾನವಾಗಿ ಬದಲಾಯಿಸಿಕೊಂಡು ಸಮಾಜದ ಸ್ವಾಸ್ಥ್ಯ ಜೀವನಕ್ಕೆ ಹಾಗೂ ಸ್ವಾಸ್ಥ್ಯ ಆರೋಗ್ಯಕ್ಕೆ ಹಾರ್ದಿಕ್‌ ಹರ್ಬಲ್ಸ್‌ ಶ್ರಮಿಸುತ್ತಿದೆ.

ಜಿ. ಶಿವಕುಮಾರ್ ಭಟ್
ಕ್ವಾಲಿಟಿ ಅಶ್ಯುರೆನ್ಸ್
& ಇನ್ವೆಂಟರಿ ಕಂಟ್ರೋಲ್
ಹಾರ್ದಿಕ್ ಹರ್ಬಲ್ಸ್
ಮೊಬೈಲ್ ನಂ. : 8217796256
ಈ ಮೇಲ್ : satvamshivakumar@gmail.com

Share this: