Vydyaloka

ಶ್ರವಣದೋಷಕ್ಕೆ ಆತ್ಯಾಧುನಿಕ ಪರಿಹಾರ

ಶ್ರವಣದೋಷಕ್ಕೆ ಆತ್ಯಾಧುನಿಕ ಪರಿಹಾರ  ತಂತ್ರಜ್ಞಾನದ ಪ್ರಗತಿಯೊಂದಿಗೆ ಪ್ರಸ್ತುತ ಲಭ್ಯವಿದೆ. ಶ್ರವಣದೋಷ ಅಥವಾ  ಕಿವುಡುತನವನ್ನು ಕಡಿಮೆ ಸ್ವರೂಪದ ವಿಕಲತೆಯನ್ನಾಗಿ ಪರಿಗಣಿಸಲಾಗಿದೆ.  ಹೀಗಾಗಿ ಈ ವಿಕಲತೆ ಬಗ್ಗೆ ಜನಜಾಗೃತಿ ಮತ್ತು ಅರಿವು ಸಹ ಕಡಿಮೆ ಪ್ರಮಾಣದಲ್ಲಿದೆ. ಇಂಥ ಸಮಸ್ಯೆಗೆ ಒಳಗಾಗುವ ಮಕ್ಕಳಿಗೆ ಆರಂಭದಲ್ಲಿ ಶ್ರವಣ ತಪಾಸಣೆ ಮತ್ತು ಮಧ್ಯಸ್ಥಿಕೆ ವಹಿಸುವುದು ತುಂಬಾ ಮುಖ್ಯ.

ಶ್ರವಣದೋಷವನ್ನು ವ್ಯಕ್ತಿಯ ಆಲಿಸುವ ಸಾಮಥ್ರ್ಯ ನಷ್ಟ ಅಥವಾ ಕಿವಿ ಕೇಳಿಸದಿರುವಿಕೆ ಅಥವಾ ಕಿವುಡುತನ ಎಂದು ವ್ಯಾಖ್ಯಾನಿಸಬಹುದು. ಶ್ರವಣ ದೋಷವು ಭಾಗಶ: ಅಥವಾ ಸಂಪೂರ್ಣ ಸಮಸ್ಯೆಯಾಗಿರುತ್ತದೆ. ಇಂಥ ಸಮಸ್ಯೆ ಬಾಧಿತ ವ್ಯಕ್ತಿಗೆ ಸ್ವಲ್ಪ ಮಟ್ಟಿಗೆ ಕಿವಿ ಕೇಳದೇ ಇರಬಹುದು ಅಥವ ಅವರು ಪೂರ್ಣ ಶ್ರವಣ ದೋಷಿಯಾಗಿರುತ್ತಾರೆ. ಶ್ರವಣ ದೋಷ ಅಥವಾ ಕಿವಿ ಕೇಳಿಸದಿರುವಿಕೆಯು ಒಂದು ಅಥವಾ ಎರಡೂ ಕಿವಿಗಳ ಮೇಲೆ ಪರಿಣಾಮ ಉಂಟು ಮಾಡಬಹುದು. ಮಕ್ಕಳಲ್ಲಿ ಶ್ರವಣದೋಷ ಸಮಸ್ಯೆಯು ಅವರ ಭಾಷೆ ಕಳಿಕೆ ಸಾಮಥ್ರ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ. ದೊಡ್ಡವರಲ್ಲಿ ಇದು ಉದ್ಯೋಗಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಪ್ರಕಾರ ಮಕ್ಕಳಲ್ಲಿ ಶ್ರವಣ ದೋಷವು ಅಧಿಕ ಮಟ್ಟದಲ್ಲಿ ಕ್ಷಿಪ್ರವಾಗಿ ಏರುತ್ತಿದೆ. (ಶೇಕಡ 60). ಇದನ್ನು ವಿವಿಧ ರೋಗಗಳ ವಿರುದ್ಧ ಲಸಿಕೆ ಹಾಕುವ ಮೂಲಕ, ಶಬ್ಧ ಮಾಲಿನ್ಯ ನಿಯಂತ್ರಣ ಮತ್ತು ಕೆಲವು ಔಷಧಿಗಳ ಬಳಕೆಯಿಂದ ತಡೆಗಟ್ಟಬಹುದಾಗಿದೆ.

ಭಾರತದ ನಿರ್ದಿಷ್ಟ ಅಂಕಿ-ಅಂಶಗಳು :

ಆರಂಭದಲ್ಲೇ ಮಧ್ಯಸ್ಥಿಕೆ ಅಗತ್ಯ

ಆಜನ್ಮ ಶ್ರವಣ ದೋಷವನ್ನು ಆರಂಭದಲ್ಲೇ ಪತ್ತೆ ಮಾಡುವುದಕ್ಕಾಗಿ ಇರುವ ಒಂದು ಪ್ರಮುಖ ವೈದ್ಯಕೀಯ ವಿಧಾನವೆಂಧರೆ ನವಜಾತ ಶ್ರವಣ ತಪಾಸಣೆ (ಯೂನಿವರ್ಸಲ್ ನ್ಯೂಬಾರ್ನ್ ಹೀಯರಿಂಗ್ ಸ್ಕ್ರೀನಿಂಗ್-ಯುಎನ್‍ಎಚ್‍ಎಸ್). ನವಜಾತ ಶಿಶುಗಳಲ್ಲಿನ ಶ್ರವಣ ದೋಷಗಳನ್ನು ಪತ್ತೆ ಮಾಡಲು ಮತ್ತು ಆರಂಭದಲ್ಲೇ ಮಧ್ಯಸ್ಥಿಕೆ ವಹಿಸಲು ಈ ತಪಾಸಣೆ ತುಂಬಾ ಮುಖ್ಯ. ಶ್ರವಣದೋಷ ಅಥವಾ ಕಿವಿ ಕೇಳದಿರುವಿಕೆ ಅಥವಾ ಕಿವುಡುತನವನ್ನು ಕಡಿಮೆ ಸ್ವರೂಪದ ವಿಕಲತೆಯನ್ನಾಗಿ ಪರಿಗಣಿಸಲಾಗಿದೆ. ಏಕೆಂದರೆ ಇದು ಕಣ್ಣಿಗೆ ಕಾಣದ ವಿಕಲಾಂಗತೆ. ಹೀಗಾಗಿ ಈ ವಿಕಲತೆ ಬಗ್ಗೆ ಜನಜಾಗೃತಿ ಮತ್ತು ಅರಿವು ಸಹ ಕಡಿಮೆ ಪ್ರಮಾಣದಲ್ಲಿದೆ.

ಪ್ರತಿ 1,000 ಶಿಶುಗಳಲ್ಲಿ ನಾಲ್ಕು ಹಸುಳೆಗಳು ಆರಂಭದ ಬಾಲ್ಯಾವಸ್ಥೆಯಲ್ಲೇ ಶ್ರವಣ ದೋಷದಿಂದ ಜನಿಸಿರುತ್ತವೆ ಅಥವಾ ಇಂಥ ಮಕ್ಕಳಲ್ಲಿ ಕಿವುಡುತನ ಅಭಿವೃದ್ದಿಗೊಳ್ಳುತ್ತಿರುತ್ತದೆ. ಪ್ರತಿ ವರ್ಷ ಅಂದಾಜು 1,00,000 ಮಕ್ಕಳು ತೀವ್ರ ಸ್ವರೂಪದಿಂದ ಗಾಢ ಪ್ರಮಾಣದ ಶ್ರವಣ ದೋಷಗಳೊಂದಿಗೆ ಜನಿಸುತ್ತಾರೆ. ಅಲ್ಲದೇ ಅಲ್ಪ, ಭಾಗಶ: ಮತ್ತು ತೀವ್ರ ಸ್ವರೂಪದ ಶ್ರವಣ ದೋಷ ಹೊಂದಿದ ಮಕ್ಕಳು ಮತ್ತು ಪ್ರೌಢರು ಸಾಮಾಜಿಕ ಪರಿತ್ಯಕ್ತ ಮತ್ತು ಕಳಂಕವನ್ನು ಸಹ ಎದುರಿಸಬೇಕಾಗುತ್ತದೆ. ಇಂಥ ಸಮಸ್ಯೆಗೆ ಒಳಗಾಗುವ ಮಕ್ಕಳಿಗೆ ಆರಂಭದಲ್ಲಿ ಶ್ರವಣ ತಪಾಸಣೆ ಮತ್ತು ಮಧ್ಯಸ್ಥಿಕೆ ವಹಿಸುವುದು ತುಂಬಾ ಮುಖ್ಯ. ಇದರಿಂದ ಅವರ ಭಾಷಾ ಮತ್ತು ಮಾತು ಕಲಿಯುವ ವೃದ್ದಿಯಾಗುತ್ತದೆ ಹಾಗೂ ಮಕ್ಕಳ ಮುಂದಿನ ಭವಿಷ್ಯದಲ್ಲಿ ಶಿಕ್ಷಣ-ಆರ್ಥಿಕ-ಸಾಮಾಜಿಕ ಸ್ಥಿತಿ ಸುಧಾರಣೆಯಾಗಲು ಸಹಕಾರಿಯಾಗುತ್ತದೆ.

ನವಜಾತ ಶಿಶುಗಳ ಶ್ರವಣ ತಪಾಸಣೆಯನ್ನು ಅಭಿವೃದ್ದಿ ಹೊಂದಿದ ದೇಶಗಳಲ್ಲಿ ನವಜಾತ ಶ್ರವಣ ತಪಾಸಣೆ (ಯೂನಿವರ್ಸಲ್ ನ್ಯೂಬಾರ್ನ್ ಹೀಯರಿಂಗ್ ಸ್ಕ್ರೀನಿಂಗ್-ಯುಎನ್‍ಎಚ್‍ಎಸ್)ಕಡ್ಡಾಯಗೊಳಿಸಿದೆ. ಆದರೆ ಭಾರತ ನವಜಾತ ಹಸುಳೆಗಳ ಶ್ರವಣ ಆಲಿಕೆ ಸಾಮಥ್ರ್ಯ ಪರೀಕ್ಷಿಸುವ ಆರೋಗ್ಯ ತಪಾಸಣೆ ವಿಧಾನವನ್ನು ಕಡ್ಡಾಯವಾಗಿ ಇನ್ನೂ ಸೇರ್ಪಡೆ ಮಾಡಿಲ್ಲ. ನವಜಾತ ಶಿಶುಗಳಲ್ಲಿನ ಶ್ರವಣ ದೋಷವನ್ನು ಆರಂಭದಲ್ಲಿ ಪತ್ತೆ ಮಾಡುವುದು ಕಷ್ಟ. ಮಕ್ಕಳು ಬೆಳದಂತೆ ಅವರಲ್ಲಿನ ಈ ದೋಷವನ್ನು ಪೋಷಕರು ಪತ್ತೆ ಮಾಡಬೇಕಾಗುತ್ತದೆ. ಇದು ಮಕ್ಕಳ ಭಾಷೆ ಮತ್ತು ಇತರ ಕಲಿಕೆಗಳ ಸಾಮಥ್ರ್ಯಕ್ಕೆ ಅಡ್ಡಿ ಉಂಟು ಮಾಡುತ್ತದೆ. ಶ್ರವಣ ತಪಾಸಣೆ ಕಾರ್ಯಕ್ರಮದ ಮೂಲಕ ಈ ದೋಷಗಳನ್ನು ಆರಂದಲ್ಲೇ ಪತ್ತೆ ಮಾಡಿದರೆ ಚಿಕಿತ್ಸಾ ವಿಧಾನಗಳು ಮತ್ತು ವೈದ್ಯಕೀಯ ಮಧ್ಯಸ್ಥಿಕೆಗಳು ಪರಿಣಾಮಕಾರಿಯಾಗಿರುತ್ತದೆ.

ಆರಂಭಿಕ ಮಧ್ಯಸ್ಥಿಕೆಯು ಶ್ರವಣ ದೋಷ ವಿಳಂಬವಾಗಿ ಪತ್ತೆಯಾಗುವುದನ್ನು ತಪ್ಪಿಸುವ ಜೊತೆಗೆ ಅವರ ಕಿವಿ ಕೇಳಿಸುವ ಸಾಮಥ್ರ್ಯ ಕುಂಠಿತಗೊಳ್ಲುವುದನ್ನು ತಪ್ಪಿಸುತ್ತದೆ. ತಪಾಸಣೆಗೆ ಒಳಪಡಿಸಲು ಉದ್ದೇಶಿಸಲಾಗಿರುವ ಮಕ್ಕಳಲ್ಲಿ ಅರ್ಧದಷ್ಟು ಶಿಶುಗಳು ತಪಾಸಣೆಗೆ ಒಳಪಡುತ್ತಿಲ್ಲವೆಂದು ಅಧ್ಯಯನಗಳು ತೋರಿಸಿವೆ. ಶ್ರವಣ ದೋಷವಿರುವ ಮಕ್ಕಳು ಆರಂಭದಲ್ಲೇ ತಪಾಸಣೆಗೆ ಒಳಪಡುವುದರಿಂದ ಅವರು ಶ್ರವಣ ಸಾಧನೆಗಳ ಬಳಕೆ ವಯೋಮಾನವು 13-16 ತಿಂಗಳಿಂದ 5-7 ತಿಂಗಳವರೆಗೆ ಇಳಿಯುತ್ತದೆ. ಇದು ಅವರ ಬಾಷೆ ಮತ್ತು ಕಲಿಕಾ ಸಾಮಥ್ರ್ಯ ವೃದ್ಧಿಯಾಗಲು ಸಹಕಾರಿ ಎಂದು ಅಧ್ಯಯನಗಳು ಹೇಳಿವೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದರೆ, ಆರಂಭಿಕ ತಪಾಸಣೆ ಮತ್ತು ವೈದ್ಯಕೀಯ ಮಧ್ಯಸ್ಥಿಕೆ ಅನಿವಾರ್ಯ. ಇದು ಇಲ್ಲದೇ ನಂತರದ ತಪಾಸಣೆ ಮತ್ತು ವೈದ್ಯಕೀಯ ಚಿಕಿತ್ಸೆ ಮಧ್ಯಸ್ಥಿಕೆಗಳು ಅಷ್ಟಾಗಿ ಪರಿಣಾಮಕಾರಿಯಾಗದು.

ಶ್ರವಣ ಸಾಧನ ಮತ್ತು ಕೋಕ್ಲಿಯರ್ ಇಂಪ್ಲಾಟ್ ನಡುವಣ ವ್ಯತ್ಯಾಸ

ಶಬ್ಧವನ್ನು ಧ್ವನಿವರ್ಧಕದಂತೆ ಹೆಚ್ಚಿಸುವ ಶ್ರವಣ ಸಾಧನಗಳಂತಲ್ಲದೇ, ಕೋಕ್ಲಿಯರ್ ಇಂಪ್ಲಾಟ್ ಚಿಕಿತ್ಸಾ ವಿಧಾನವು ಒಳ ಕಿವಿ (ಕೋಕ್ಲಿಯಾ)ಯ ರೋಮ ಕೋಶಗಳ ಹಾನಿಯನ್ನು ಬೈಪಾಸ್ ಮಾಡುತ್ತದೆ. ಇದರಿಂದ ಶಬ್ಧ ಸಂದೇಶ ಮೆದುಳು ತಲುಪುವಂತಾಗುತ್ತದೆ. ಕೋಕ್ಲಿಯರ್ ಇಂಪ್ಲಾಂಟ್ ಒಂದು ವಿದ್ಯುನ್ಮಾನ ವೈದ್ಯಕೀಯ ಉಪಕರಣ. ಇದು ಹಾನಿಗೀಡಾದ ಒಳ ಕಿವಿಯ ಕಾರ್ಯವನ್ನು ಪರ್ಯಾಯವಾಗಿ ನಿರ್ವಹಿಸುತ್ತದೆ. ಇದರ ಕಾರ್ಯನಿರ್ವಹಣೆಯು ಸಾಮಾನ್ಯ ಹೀಯರಿಂಗ್ ಏಡ್‍ಗಿಂತಲೂ ತುಂಬಾ ವಿಭಿನ್ನವಾಗಿರುತ್ತದೆ.

ಧ್ವನಿ ಹೆಚ್ಚಿಸುವ ಶ್ರವಣ ಸಾಧನಗಳಂತಲ್ಲದೇ, ಕೋಕ್ಲಿಯರ್ ಇಂಪ್ಲಾಟ್ ಚಿಕಿತ್ಸಾ ವಿಧಾನವು ಒಳ ಕಿವಿ(ಕೋಕ್ಲಿಯಾ)ಯ ರೋಮ ಕೋಶಗಳ ಹಾನಿಯನ್ನು ಬೈಪಾಸ್ ಮಾಡುತ್ತದೆ. ಇದರಿಂದ ಶಬ್ಧ ಸಂದೇಶ ಮೆದುಳು ತಲುಪುವಂತಾಗುತ್ತದೆ. ಇದರಿಂದ ಸಹಜ ರೀತಿಯಲ್ಲಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಧ್ವನಿಯನ್ನು ಆಲಿಸಬಹುದು.

ಕೋಕ್ಲಿಯರ್ ಇಂಪ್ಲಾಂಟ್ ಟೆಕ್ನಾಲಜಿಯು ಎರಡೂ ಕಿವಿಗಳಲ್ಲೂ ಸಾಧಾರಣದಿಂದ ಅಳವಾದ ಶ್ರವಣ ದೋಷ ಮತ್ತು ಕಿವುಡುತನ ಹೊಂದಿರುವ ವ್ಯಕ್ತಿಗಳಿಗೆ ಸಹಕಾರಿ. ಇದು ಇತರ ಶ್ರಣ ಸಾಧನೆಗಳಿಗಿಂತ ಭಿನ್ನ, ಇದರ ಉಪಯೋಗದ ವ್ಯಾಪ್ತಿ ಅಧಿಕ. ಅನೇಕ ಮಂದಿ ಎರಡೂ ಕಿವಿಗಳಿಗೂ ಕೋಕ್ಲಿಯರ್ ಸಾಧನಗಳನ್ನು ಹೊಂದಿರುತ್ತಾರೆ. ಎರಡೂ ಕಿವಿಗಳಿಂದ ಆಲಿಸುವ ಸಾಮಥ್ರ್ಯವು ಶಬ್ಧ ಬರುವ ದಿಕ್ಕನ್ನು ಗುರುತಿಸಲು ಮತ್ತು ಪ್ರತ್ಯೇಕ ಶಬ್ಧಗಳನ್ನು ಆಲಿಸಲು ಸಹಕಾರಿ.

ಕೋಕ್ಲಿಯರ್ ಇಂಫ್ಲಾಂಟ್-ಕಾರ್ಯಗಳು ಮತ್ತು ಪ್ರಕ್ರಿಯೆ

ಒಳ ಕಿವಿ (ಅಥವಾ ಕೋಕ್ಲಿಯಾ)ಯ ರೋಮ ಕೋಶಗಳು ಹಾನಿಗೀಡಾಗುವುದರಿಂದ ಅನೇಕ ಜನರಲ್ಲಿ ಶ್ರವಣ ದೋಷ ಮತ್ತು ಕಿವುಡುತನ ಉಂಟಾಗುತ್ತದೆ. ಕೋಕ್ಲಿಯರ್ ಇಂಪ್ಲಾಂಟ್, ಶ್ರವಣ ನರಕ್ಕೆ ಶಬ್ಧವನ್ನು ರವಾನಿಸಲು ಮತ್ತು ಅದನ್ನು ನೀವು ಆಲಿಸಲು ನೆರವಾಗುತ್ತದೆ. ಈ ಪ್ರಕ್ರಿಯೆಯನ್ನು ಈ ಕೆಳಗೆ ವಿವರಿಸಲಾಗಿದೆ :

ಸೌಂಡ್ ಪ್ರೊಸೆಸರ್ ಸಾಧನವನ್ನು ಕಿವಿಯ ಹಿಂದೆ ಅಥವಾ ದೇಹದ ಸೂಕ್ತ ಸ್ಥಳದಲ್ಲಿ ಧರಿಸಬೇಕು. ಕಿವಿ ಹಿಂದೆ ಇದನ್ನು ಅಳವಡಿಸಿಕೊಳ್ಳುವುದು ಸೂಕ್ತ. ಇದು ಶಬ್ಧವನ್ನು ಗ್ರಹಿಸಿ ಸೆರೆಹಿಡಿದು ಡಿಜಿಟಲ್ ಕೋಡ್‍ಗೆ ಪವರ್ತಿಸುತ್ತದೆ. ಸೌಂಡ್ ಪ್ರೊಸೆಸರ್‍ನಲ್ಲಿ ಒಂದು ಬ್ಯಾಟರಿ ಇದ್ದು, ಅದು ಇಡೀ ವ್ಯವಸ್ಥೆಗೆ ಶಕ್ತಿ ಒದಗಿಸುತ್ತದೆ.ಸೌಂಡ್ ಪ್ರೊಸೆಸರ್ ತಲೆಯ ಹೊರಗೆ ಇರುವ ಕಾಯಿಲ್ ಮೂಲಕ ಡಿಜಿಟಲ್ ಕೋಡ್ ಆಗಿರುವ ಶಬ್ಧವನ್ನು ಪ್ರಸರಣ ಮಾಡುತ್ತದೆ.

ಕೋಕ್ಲಿಯರ್ ಇಂಪ್ಲಾಂಟ್ ಸಾಧನವು ಡಿಜಿಟಲ್ ಕೋಡ್ ಆಗಿರುವ ಶಬ್ಧವನ್ನು ವಿದ್ಯುತ್ ತರಂಗಗಳಾಗಿ ಪರಿವರ್ತಿಸುತ್ತದೆ ಹಾಗೂ ಕೋಕ್ಲಿಯಾ (ಒಳ ಕಿವಿ)ಯಲ್ಲಿ ಇರಿಸಲಾದ ಎಲೆಕ್ಟ್ರೋಡ್‍ಗೆ ರವಾನಿಸಿ ಶಬ್ಧವು ನಿಖರವಾಗಿ ಕೇಳುವಂತೆ ಮಾಡುತ್ತದೆ. ಕೋಕ್ಲಿಯರ್ ಇಂಪ್ಲಾಂಟ್ಸ್‍ನ ಎಲೆಕ್ಟ್ರೋಡ್‍ಗಳು ಕೋಕ್ಲಿಯಾದ ಶ್ರವಣ ನರವನ್ನು ಪ್ರಚೋದಿಸುತ್ತದೆ. ಇದು ಆನಂತರ ಮೆದುಳಿಗೆ ಶಬ್ಧ ತರಂಗಗಳನ್ನು ರವಾನಿಸುತ್ತದೆ. ಅಲ್ಲಿ ಇದು ಸಬ್ಧವಾಗಿ ಪರಿವರ್ತನೆಯಾಗುತ್ತದೆ.

ಪ್ರಮುಖ ಅಂಕಿಅಂಶಗಳು

ಸುಮಾರು 466 ದಶಲಕ್ಷ ಜನರಲ್ಲಿ-ವಿಶ್ವದ ಒಟ್ಟು ಜನಸಂಖ್ಯೆಯ ಶೇಕಡ 5ರಷ್ಟು ಮಂದಿ ಶ್ರವಣ ದೋಷ ಮತ್ತು ಕಿವುಡುತನ ಸಮಸ್ಯೆಗೆ ಒಳಗಾಗಿದ್ದಾರೆ. ಇವರು ಅಲ್ಪ, ಭಾಗಶ:, ಸಾಧಾರಣ ಅಥವಾ ಒಳ ಶ್ರವಣ ದೋಷವುಳ್ಳವರಾಗಿರುತ್ತಾರೆ.ಮಕ್ಕಳಲ್ಲಿ ಶ್ರವಣದೋಷಗಳಿಗೆ ಕಾರಣಗಳು :

ಡಾ. ಪ್ರವೀಣ್ ಕುಮಾರ್
ಮುಖ್ಯ ಶ್ರವಣ ತಜ್ಞರು, ಸಿಟಿ ಹಿಯರಿಂಗ್ ಎಯಿಡ್ಸ್
#3784/1, 13ನೇ ಅಡ್ಡರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560070

ದೂ.: 96324 55673, 080-2671 3902 ಮೊ.: +91-97397 47933
Email: praveenaud@gmail.com
Website: www.cityhearingaids.com

Share this: