Vydyaloka

ಸಮಾನಮ್ ಫುಡ್ಸ್ ನಿಂದ ಮಿಲ್ಲೆಕ್ಸ್ ಉತ್ಪನ್ನಗಳ ಬಿಡುಗಡೆ

ಸಮಾನಮ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಮಿಲ್ಲೆಕ್ಸ್ ಬ್ರಾಂಡ್ ) ತನ್ನ ಬೃಹತ್ ಕೈಗಾರಿಕಾ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಿ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಬೆಂಗಳೂರು : ಸಮಾನಮ್ ಸಂಸ್ಥೆಯ (ಮಿಲ್ಲೆಕ್ಸ್ ಬ್ರಾಂಡ್) ಬೃಹತ್ ಉತ್ಪಾದನಾ ಘಟಕದ ಉದ್ಘಾಟನೆಯನ್ನು ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು “ ಶ್ರೀ ಶ್ರೀ ವಿಧುಶೇಖರ ಭಾರತೀ” ಮಹಾಸ್ವಾಮಿಗಳ ಪೂರ್ಣಾನುಗ್ರಹದೊಂದಿಗೆ ದಿನಾಂಕ 15 ಡಿಸೆಂಬರ್, 2023 ರಂದು ಮಾಡಲಾಯಿತು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಆರು ವರ್ಷಗಳ ಹಿಂದೆ ಶುರುವಾದ ಸಂಸ್ಥೆಯು ಇದೀಗ ಸಮಾನಮ್ ಎಂಬ ಹೆಸರಿನ ಬೃಹತ್ ಕೈಗಾರಿಕಾ ಘಟಕದಡಿಯಲ್ಲಿ (ಮಿಲ್ಲೆಕ್ಸ್ ಬ್ರಾಂಡ್) ಮಿಲೆಕ್ಸ್ ಸರಣಿಯ ಉತ್ಪನ್ನಗಳನ್ನು ಪರಿಚಯಿಸಿ ಕರ್ನಾಟಕ ರಾಜ್ಯ ಅಷ್ಟೇ ಅಲ್ಲದೆ ಭಾರತದಾದ್ಯಂತ ಸಂತೃಪ್ತ ಗ್ರಾಹಕರನ್ನು ಹೊಂದಿದೆ.
ಮಿಲ್ಲೆಕ್ಸ್ ನ ಉತ್ಪನ್ನ ಶ್ರೇಣಿಯು ಮಿಲ್ಲೆಕ್ಸ್ ಚೂರ್ಣಂ, ಮಿಲ್ಲೆಕ್ಸ್ ಹೆಲ್ತ್ ಮಿಕ್ಸ್ ಹಾಗೂ ಮಿಲ್ಲೆಕ್ಸ್ ಮದರ್ ರೂಟ್ ಉತ್ಪನ್ನಗಳನ್ನು ಹೊಂದಿದ್ದು, FSSAI ಮತ್ತು ISO ಇಂದ ಪ್ರಮಾಣಿಕೃತಗೊಂಡಿವೆ.
ಇದರಿಂದ ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚುವುದಲ್ಲದೆ ಸಂಸ್ಥೆಯು ನೂತನ ಮಿಲ್ಲೆಕ್ಸ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಅನುಕೂಲವಾಗುತ್ತದೆ.
ರಾಗಿ ತಿಂದವನು ನಿರೋಗಿ, ಜೋಳ ತಿಂದವನು ಜಟ್ಟಿ “ಈ ಮಾತಿನಂತೆ ನಮ್ಮ ನೆಲದಲ್ಲಿ ನಮ್ಮ ದೇಹದ ಆರೋಗ್ಯದ ಅವಶ್ಯಕತೆಗಾಗಿ ಬೆಳೆಯುವ ಸಿರಿಧಾನ್ಯಗಳನ್ನು ನಿತ್ಯ ಸೇವಿಸುವುದರಿಂದ ಸಕ್ಕರೆ ಕಾಯಿಲೆ, ರಕ್ತದ ಒತ್ತಡ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳಿಂದ ದೂರವಿರಬಹುದು.
ಇದನ್ನು ಅರಿತ ಸಂಯುಕ್ತ ರಾಷ್ಟ್ರಗಳು 2023 ನೇ ಇಸವಿಯನ್ನು ಸಿರಿಧಾನ್ಯಗಳ ವರುಷ ಮತ್ತು “Healthy Millets, Healthy People” ಎಂದು ಘೋಷಿಸಿದೆ.

Share this: