ಪಾರ್ಶ್ವವಾಯು (ಲಕ್ವ) ಅಥವಾ ಸ್ಟ್ರೋಕ್ ಪೀಡಿತರೆ ಜಾಗೃತರಾಗಿ. ಸಾರ್ವಜನಿಕರು ತಿಳಿದುಕೊಂಡಿರುವಂತೆ ಪಾರ್ಶ್ವವಾಯು ಖಾಯಿಲೆಯಲ್ಲ. ಇದು ಮಾನವನ ಮೆದುಳಿಗೆ ಬರುವಂತಹ ರಕ್ತನಾಳದ ತೊಂದರೆ. ಪುನಶ್ಚೇತನ ಕ್ರಿಯೆಯಿಂದ ಪಾರ್ಶ್ವವಾಯುವನ್ನು ಗುಣಪಡಿಸಬಹುದು. ಇದಕ್ಕೆ (ಪುನಶ್ಚೇತನಕ್ಕೆ) ಯಾವುದೇ ವಯೋಮಿತಿಯ ಸಂಬಂಧ ಇರುವುದಿಲ್ಲ.
ಪಾರ್ಶ್ವವಾಯು (ಲಕ್ವ) ಎಂದರೇನು?
ಪಾರ್ಶ್ವವಾಯು ಯಾರಿಗೆ ಬೇಕಾದರು ಬರಬಹುದು, ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಚಿಕ್ಕವರಿಂದ ಅಂದರೆ ತಾಯಿಯ ಗರ್ಭದಲ್ಲಿರುವ ಮಗುವಿನಿಂದ ಹಿಡಿದು 90ರ ವೃದ್ಧಾಪ್ಯದ ಜನರಿಗೆ ಸಹಾ ಬರಬಹುದು. ಇದು ಮನುಷ್ಯನಿಗೆ ಎಲ್ಲಿ ಬೇಕಾದರು ಬರಬಹುದು. ಅವನು ಕೆಲಸಮಾಡುತ್ತಿರಲಿ, ಬಸ್‌ನಲ್ಲಿ ಪ್ರಯಾಣಿಸುತ್ತಿರಲಿ, ಮಲಗಿರಲಿ, ಯಾವುದೆ ಸಮಯದಲ್ಲಾದರು ಬರಬಹುದು. ಜಗತ್ತಿನಲ್ಲಿ ಪಾರ್ಶ್ವವಾಯು ಪೀಡಿತರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ, ಇದಕ್ಕೆ ಹಲವಾರು ಕಾರಣಗಳು. ಒಂದೆ ಮಾತಿನಲ್ಲಿ ಹೇಳುವುದಾದರೆ ಕ್ಯಾನ್ಸರ್ ಹಾಗು ಹೃದಯ ಸಂಬಂದಿ ಕಾಯಿಲೆಗಳ ನಂತರ ಇದನ್ನು ಮೂರನೆಯ ಅತಿ ದೊಡ್ಡ ತೊಂದರೆ ಎಂದು ಪರಿಗಣಿಸಲಾಗುತ್ತದೆ. ವಿಶ್ವಸಂಸ್ಥೆ ಅಂಕಿಅಂಶಗಳ ಪ್ರಕಾರ ಪ್ರತಿ ವರ್ಷ ಸುಮಾರು ಲಕ್ಷ ಜನರು ಪಾರ್ಶ್ವವಾಯುವಿನಿಂದ ಮರಣ ಹೊಂದಿದ್ದಾರೆ. ಅದಕ್ಕಿಂತಲು ದುಪ್ಪಟ್ಟು ಜನರು ಅಂಗವಿಕಲರ ಪಟ್ಟಿಗೆ ಸೇರುತ್ತಾರೆ.
ಪಾರ್ಶ್ವವಾಯುವಿನಲ್ಲಿ ಎಷ್ಟು ವಿಧ ಹಾಗು ಕಾರಣಗಳು
ಪಾರ್ಶ್ವವಾಯುವಿನಲ್ಲಿ ಪ್ರಮುಖವಾಗಿ ಎರಡು ವಿಧ – ಇಸ್ಕೆಮಿಕ್ ಪಾರ್ಶ್ವವಾಯು ಹಾಗು ಹೆಮೊರೆಜಿಕ್ ಪಾರ್ಶ್ವವಾಯು.
1. ಇಸ್ಕೆಮಿಕ್ ಪಾರ್ಶ್ವವಾಯು:
ಮಿದುಳಿಗೆ ರಕ್ತಸರಬರಾಜಾಗುವ ರಕ್ತನಾಳ ಮುಚ್ಚಿಕೊಳ್ಳುವುದು ಇಸ್ಕೆಮಿಕ್ ಪಾರ್ಶ್ವವಾಯು. ಇದು ಸಾಮಾನ್ಯವಾಗಿ ರಕ್ತನಾಳ ಕಿರಿದಾಗುವುದರಿಂದ ಅಥವಾ ರಕ್ತ ಹೆಪ್ಪುಗಟ್ಟುವುದರಿಂದ ಅಥವಾ ಗಟ್ಟಿಯಾಗುವುದರಿಂದ ಪಾರ್ಶ್ವ ಅಥವಾ ಸಂಪೂರ್ಣ ರಕ್ತ ಸರಬರಾಜು ನಿಂತು ಹೋಗುತ್ತದೆ. ಇದರಿಂದ ಇಸ್ಕೆಮಿಕ್ ಪಾರ್ಶ್ವವಾಯು ಬರುತ್ತದೆ. ಇಸ್ಕೆಮಿಕ್ ಪಾರ್ಶ್ವವಾಯುವಿನಲ್ಲಿ ಎರಡು ವಿಧಗಳು- ತ್ರೊಂಬೋಟಿಕ್ ಪಾರ್ಶ್ವವಾಯು ಮತ್ತು ಎಂಬೊಲೆಟಿಕ್ ಪಾರ್ಶ್ವವಾಯು.
ತ್ರೊಂಬೋಟಿಕ್ ಪಾರ್ಶ್ವವಾಯು ತಲೆ ಅಥವಾ ಕತ್ತಿನ ರಕ್ತನಾಳ ಹೆಪ್ಪುಗಟ್ಟುದರಿಂದ ಉಂಟಾಗುವ ತೊಂದರೆ. ಎಂಬೊಲೆಟಿಕ್ ಪಾರ್ಶ್ವವಾಯು ಮೆದುಳಿಗೆ ರಕ್ತಸರಬರಾಜಾಗುವ ವ್ಯವಸ್ಥೆಯ, ದೇಹದ ಯಾವುದೇ ಬಾಗದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಉಂಟಾಗುವ ತೊಂದರೆ ಇದು [ಉದಾಹರಣೆಗೆ ಹೃದಯದ ಅಫದಮನಿ ರಕ್ತ ಸಂಚಾರ ವ್ಯವಸ್ಥೆ ಹೆಪ್ಪುಗಟ್ಟುವುದು] ಈ ತೊಂದರೆಗೆ ಎಂಭೊಲಸ್ ಎಂದು ಕರೆಯುತ್ತಾರೆ
2.ಹೆಮೊರಾಜಿಕ್ ಪಾರ್ಶ್ವವಾಯು :
ಇದು ಅತ್ಯಂತ ಗಂಭೀರ ಸ್ವರೂಪದ ಪಾರ್ಶ್ವವಾಯು, ರಕ್ತನಾಳ ಸ್ಫೋಟಗೊಂಡಾಗ ಹೆಮೊರಾಜಿಕ್ ಪಾರ್ಶ್ವವಾಯು ಬರುತ್ತದೆ. ಇದರಿಂದ ರಕ್ತನಾಳ ಸೋರಿಕೆಯಾಗಿ ಮಿದುಳಿನ ಒಂದು ಭಾಗದಲ್ಲಿ ರಕ್ತ ಚಲ್ಲಿ ಹೊಗುತ್ತದೆ. ಇದರಲ್ಲೂ 2 ವಿಧಗಳಿವೆ.
1 ಸಬ್‍ಅರಕ್ನಾಯ್ಡ್ ಹೆಮೊರೆಜ್-ಇದು ಮಿದುಳಿನ ಸುತ್ತಲಿನ ಬಾಗದಲ್ಲಿ ಊಂಟಾಗುತ್ತದೆ
2 ಇಂಟ್ರಾಸೆರಿಬ್ರಲ್ ಹೆಮೊರೆಜ್- ಇದು ಸಾಮಾನ್ಯ ಸಮಸ್ಯೆ ಊಂಟಾದಾಗ ಮಿದುಳಿನ ನರಮಂಡಲದಲ್ಲಿ [Brain tissue] ರಕ್ತಸೋರಿಕೆ ಉಂಟಾಗುತ್ತದೆ.
ಪಾರ್ಶ್ವವಾಯು ಅಪಾಯಕ್ಕೆ ಕಾರಣಗಳು
1. ಹೆಚ್ಚಿದ ರಕ್ತದ ಓತ್ತಡ
2. ತಂಬಾಕು ಹಾಗು ಆಲ್ಕೊಹಾಲ್ ಸೇವನೆ [ಭಾರತದಲ್ಲಿ ಅತಿ ಹೆಚ್ಚಿನ ಪಾರ್ಶ್ವವಾಯು ಸಮಸ್ಯೆಗೆ ಇದು ಪ್ರಮುಖ ಕಾರಣ]
3. ರಕ್ತನಾಳಗಳು ಗಡುಸಾಗುವಿಕೆ ಅಥವಾ ಕಿರಿದಾಗುವಿಕೆ[ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗುವುದರಿಂದ ಧೀರ್ಘಕಾಲದ
ನಂತರ ಈ ಸಮಸ್ಯೆ ಊಂಟಾಗುತ್ತದೆ]
4. ಹೃದಯ ಸಂಬಂಧಿತ ತೊಂದರೆಗಳು
5. ಕೊಲೆಸ್ಟ್ರಾಲ್ ಹೆಚ್ಚಿರುವ ಅಹಾರ ಸೇವನೆ
6. ಧೂಮಪಾನ
7. ಅನುವಂಶಿಕತೆ
8. ಮದುಮೇಹ ರೋಗ
9. ಮೆದುಳಿನ ಅಪಘಾತ
10. ಮಿದುಳು ಸಂಭಂದಿ ಕಾಯಿಲೆಗಳು
ಪಾರ್ಶ್ವವಾಯುವಿನ ಲಕ್ಷಣಗಳು
1. ನಮ್ಮ ದೇಹದ ಚಲನವಲನಗಳ ಮೇಲೆ ಮಿದುಳಿನ ನಿಯಂತ್ರಣ ಕ್ಷೀಣಿಸುವುದು ಅಥವಾ ದೇಹದ ಕೆಲವು ಭಾಗಗಳು ಸ್ವಾಧೀನ ಕಳೆದುಕೊಳ್ಳುವುದಂತೆ ಭಾಸವಾಗುವುದು.
2. ನೆಡೆಯಲು ಕಷ್ಟವಾಗುವುದು
3. ದೇಹದ ಸಮತೋಲನ ಕಳೆದುಕೋಳ್ಳುವಿಕೆ
4. ಕಣ್ಣು ಮಂಜಾಗುವುದು
5. ಮಾತು ತೊದಲುವಿಕೆ ಮತ್ತು ಅಹಾರ ನುಂಗಲು ಕಷ್ಟವಾಗುವುದು
6. ಮಿದುಳಿನ ಸ್ಮರಣೆ ಕಡಿಮೆಯಾಗುವಿಕೆ
7. ಭಾವನೆಗಳ ಮೇಲೆ ನಿಯಂತ್ರಣ ತಪು ್ಪವುದು
ಪಾರ್ಶ್ವವಾಯುವಿಗೆ ಪ್ರಥಮ ಚಿಕಿತ್ಸೆ ಇಲ್ಲ
ಪಾರ್ಶ್ವವಾಯುವಿನ ಈ ಲಕ್ಷಣಗಳು ಯಾವಾಗಲಾದರು ತಾತ್ಕಾಲಿಕವಾಗಿ ಕಾಣಿ ಕೊಂಡು ಮಾಯವಾಗಬಹುದು ಇದನ್ನು ಇಸ್ಕೆಮಿಕ್ ಅಟ್ಯಾಕ್ ಆಥವಾ TIA (TRANSIT ISCHIMIC ATTACK) ಎಂದು ಕರೆಯುವುದುಂಟು. ಈ ಲಕ್ಷಣಗಳು ಕಾಣಿಸಿ ಕೊಂಡರೆ ಕೂಡಲೆ ಸಮೀಪದ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಲಕ್ವ(ಪಾರ್ಶ್ವವಾಯುವಿಗೆ)ಕ್ಕೆ ಯಾವುದೇ ಪ್ರಥಮ ಚಿಕಿತ್ಸೆ ಇರುವುದಿಲ್ಲ. ಆದ್ದರಿಂದ ತಕ್ಷಣ ಸಂಬಂದಿಕರು ಹತ್ತಿರದ ಆಸ್ಪತ್ರೆಗೆ ಧಾಖಲಿಸಬೇಕು. ಈ ಸಮಯದಲಿ ಪ್ರತಿ ನಿಮಿಷವು ತುಂಬಾ ಮುಖ್ಯವಾದದ್ದು. ಏಕೆಂದರೆ ಪೀಡಿತನ ತತಕ್ಷಣದ ಚಿಕಿತ್ಸೆಗೆ ವಿಳಂಬವಾದಷ್ಟು ಮೆದುಳಿನ ಆಘಾತದ ಪ್ರಮಾಣ ಹೆಚ್ಚಾಗುವುದು.
ಅಂದಾಜಿನಪ್ರಕಾರ ಪ್ರತಿ ಆರ್ಧಗಂಟೆ ವಿಳಂಬವಾದರೆ ಸುಮಾರು 10 ರಿಂದ 20 ಲಕ್ಷ ಮೆದುಳಿನ ನರಕೋಶಗಳು ಸಾಯುವವು ಅಥವಾ ನಿಯಂತ್ರಣ ಕಳೆದುಕೋಳ್ಳುವುವು. ಈ ಸಮಯದಲ್ಲಿ ವೈದ್ಯರ ಸಲಹೆಯಂತೆ ಕ್ರಮಗಳನ್ನು ತಗೆದುಕೊಂಡ್ಡಿದ್ದೆ ಆದರೆ ಮಿದುಳಿನ ಆಘಾತದ ಪ್ರಮಾಣವನ್ನು ಶೇಖಡ 80 ರಿಂದ 95 ರಷ್ಟು ಕಡಿಮೆ ಮಾಡಬಹುದು. ಈ ಸಮಯದಲ್ಲಿಯೆ ಹೆಚ್ಚಾಗಿ ಸಂಬಂದಿಕರು ಪೀಡಿತನನ್ನು ನುರಿತ ನರರೋಗ ತಜ್ಞರ ಬಳಿಗೆ ಕರೆದುಕೊಂಡು ಹೋಗುವ ಬದಲು ಅಸಂಪ್ರದಾಯಿಕ ಹಾಗು ಪಾರ್ಶ್ವವಾಯುವಿನ ಬಗ್ಗೆ ಅರಿಯದ ವೈದ್ಯರ ಬಳಿಗೆ ತೆರಳಿ ಅವೈಜ್ಞಾನಿಕ ಚಿಕಿತ್ಸಾಪದ್ದತಿಯನ್ನು ಅನುಸರಿಸುವರು. ಇದು ಪೀಡಿತನ ಸಂಬಂದಿಗಳು ಮಾಡುವ ಪ್ರಾಥಮಿಕ ತಪ್ಪು.
ಮೊದಲ 3 ರಿಂದ 6 ತಿಂಗಳು ಪಾರ್ಶ್ವವಾಯು ಪೀಡಿತನ ಚಿಕಿತ್ಸೆಗೆ ಸರಿಯಾದ ಸಮಯ. ಈ ಸಮಯದಲ್ಲಿ ಸರಿಯಾದ ಪುನಶ್ಚೇತನ ಕ್ರೀಯೆಗಳನ್ನು ತಗೆದುಕೊಂಡರೆ ಪೀಡಿತನ ಸುಮಾರು 95 ರಷ್ಟು ಅಂಗವಿಕಲತೆಯನ್ನು ಕಡಿಮೆಮಾಡಬಹುದು ಹಾಗು ಅತ್ಯಂತ ಕಡಿಮೆ ಸಮಯದಲ್ಲಿ ಪೀಡಿತನು ತನ್ನ ದೈನಂದಿನ ಕೆಲಸಗಳಲ್ಲಿ ತೊಡಗಬಹುದು. ಇಲ್ಲಿ ಸಾರ್ವಜನಿಕರಲ್ಲಿ ನನ್ನ ಕಳಕಳಿಯ ಮನವಿಯೇನೆಂದರೆ ಪಾರ್ಶ್ವವಾಯುವಾದ ತಕ್ಷಣ ಅವೈಜ್ಞಾನಿಕ ಪದ್ದತಿಗಳನ್ನು ಅನುಸರಿಸದೇ ವೈಜ್ಞಾನಿಕ ಆಧಾರಿತ ಚಿಕಿತ್ಸಾ ಪದ್ದತಿಗಳನ್ನು ಅನುಸರಿಸುವುದು ಓಳ್ಳೆಯದು.
ಪಾರ್ಶ್ವವಾಯು ಪುನಶ್ಚೇತನದ ಕ್ರಮಗಳು ಹಾಗು ವಿಧಾನಗಳು
ಕೆಲವು ಅಪರೂಪದ ಸಂದರ್ಭಗಳಲ್ಲಿ ದೇಹ ತಂತಾನೆ: ಚೇತರಿ ಕೊಳ್ಳುತ್ತದೆ. ಮಿದುಳಿನ ರಕ್ತನಾಳಗಳು ತಾವಾಗಿ ಸರಿಹೋಗಿ ರಕ್ತದ ಚಲನೆ ಸುಗಮವಾಗುತ್ತದೆ. ಅದು ಪಾರಿವಾಳದ ರಕ್ತ ಹೀರಿದ್ದರಿಂದ ಸರಿ ಹೋಯಿತು ಎಂದು ಜನರು ತಿಳಿಯುತ್ತಾರೆ. ಮುಂದಿನ ಬಾರಿ ಅಂಥದೇ ಇನ್ನೊಬ್ಬ ಪಾಶ್ರ್ವವಾಯು ಪೀಡಿತನಿಗೆ ಪಾರಿವಾಳದ ರಕ್ತ ಕೊಟ್ಟಾಗಲೂ ಸರಿಹೋಗದಿದ್ದರೆ ಅದು ಅವನ ನಸೀಬು ಎಂದು ಕೈಕೊಡವುತ್ತಾರೆ. ಇನ್ನೂ ಕ್ರೂರವಾದ ಪದ್ದತಿಯೆಂದರೆ ಲಕ್ವಹೊಡೆದವರನ್ನು ಕಟ್ಟಿಹಾಕಿ ಕಾದ ಕಬ್ಬಿಣದಿಂದ ಪಾರ್ಶ್ವವಾಯುವಿನ ಭಾಗಕ್ಕೆ ಸುಡುತ್ತಾರೆ. ಇದು ಇಂದಿಗು ಕೆಲವು ಹಳ್ಳಿಗಳಲ್ಲಿ ಈಗಲೂ ಪ್ರಚಲಿತ.
ಅವೈಜ್ಞಾನಿಕ ಪದ್ದತಿಗಳಿಂದ ಹಾಳಾದ ಅಂಗಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ಕಠಿಣದ ಕೆಲಸ. ನನ್ನ ಒಂದುವರೆ ದಶಕದ ಅನುಭವದಿಂದ ಹೇಳುವುದಾದರೆ ಸಾಮಾನ್ಯವಾಗಿ ಪೀಡಿತರು ಮೊದಲು ಮೇಲೆ ಹೇಳಿದಂತ ಎಲ್ಲಾ ಅವೈಜ್ಞಾನಿಕ ಪದ್ದತಿಗಳನ್ನು ಪ್ರಯತ್ನಿ ಕೊನೇಯ ಪ್ರಯತ್ನವೆಂಬಂತೆ ನಮ್ಮಗಳ ಬಳಿಗೆ ಬರುವರ ಸಂಖ್ಯೆ ಹೆಚ್ಚು. ಇಷ್ಟರಲ್ಲಾಗಲೆ ಸಾಕಷ್ಟು ಸಮಯ ಹಾಗು ಹಣ ಹಾಳುಮಾಡಿಕೊಂಡಿರುತಾರೆ. ಭವಿಷ್ಯದಲ್ಲಿ ಇಂತಹವರು ಎದುರಿಸುವ ಮಾನ ಕ, ಕೌಟುಂಬಿಕ, ಆರ್ಥಿಕ ಹಾಗು ಆರೋಗ್ಯದ ಸಮಸ್ಯೆಗಳು ನೂರಾರು. ಆದ್ದರಿಂದ ಜನರು ಪ್ರಾಥಮಿಕ ಹಂತದಲ್ಲಿ ಈ ಪದ್ದತಿಗಳ ಕಡೆಗೆ ವಾಲದಿರುವುದೆ ಓಳಿತು.
ಇಷ್ಟೆಲ್ಲಾ ಅವಾಂತರಗಳಿಗೆ ಮೂಲ ಸಮಸ್ಯೆ ಹಾಗು ಪರಿಹಾರ
ಸಭಂದಿಗಳು ಸಾಮಾನ್ಯವಾಗಿ ಈ ಕ್ರಮಗಳನ್ನು ಅನುಸರಿಸದೇ ಅವರಿವರ ಮಾತುಗಳಿಂದ ಪ್ರೇರೆಪಿತಗೊಂಡು ಅವೈಜ್ಞಾನಿಕ ಪದ್ದತಿಗಳ ಕಡೆಗೆ ವಾಲತೊಡಗುತ್ತಾರೆ.
ಈ ಪ್ರಾಥಮಿಕ ಹಂತದ ಸಣ್ಣ ತಪ್ಪು ಮುಂದೆ ಪೀಡಿತನ ದುರಂತದ ದಿನಗಳಿಗೆ ಮುನ್ನುಡಿ ಬರೆದಂತಾಗುತ್ತದೆ. ಇದಕ್ಕೆ ಎಲ್ಲರೂ ಜವಾಬ್ದಾರರು. ಅಂದರೆ ಚಿಕಿತ್ಸೆ ತೆಗೆದುಕೂಂಡ ಆಸ್ಪತ್ರೆ, ವೈದ್ಯರು ಹಾಗು ಪೀಡಿತನ ಸಂಬಂಧಿಗಳು. ಪರಿಹಾರವೆಂದರೆ, ಪಾರ್ಶ್ವವಾಯು ಪೀಡಿತನ ಆಸ್ಪತ್ರೆಯಲ್ಲಿರುವಾಗಲೆ ಸಂಬಂಧಪಟ್ಟ ವೈದ್ಯರು ಪೀಡಿತನ ಸಂಬಂಧಿಗಳಿಗೆ ಪಾರ್ಶ್ವವಾಯುವಿನ ಬಗ್ಗೆ ಸಮಗ್ರ ಮಾಹಿತಿ ಕೊಡುವುದು ಹೆಚ್ಚು ಸೂಕ್ತ. ಅಮೇರಿಕಾದಂತಹ ಮುಂದುವರಿದ ದೇಶಗಳಲ್ಲಿ ಈ ವ್ಯವಸ್ಥೆಗಳನ್ನು ಅನುಸರಿಸುತ್ತಾರೆ. ಹಾಗೆಯೆ ಸಂಬಂಧಿಕರು ಪಾರ್ಶ್ವವಾಯುವಿನ ಬಗ್ಗೆ ಪ್ರಾಥಮಿಕ ಹಂತದಲ್ಲಿಯೆ ಚಿಕಿತ್ಸಾ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಪಾರ್ಶ್ವವಾಯುವಿನ ಬಗ್ಗೆ ಹಚ್ಚಿನ ಮಾಹಿತಿಗಳನ್ನು ಕಂಪ್ಯೂಟರ್ ಇಂಟರ್ನೆಟ್ (ಗೂಗಲ್ ಡಾಟ್ ಕಾಮ್) (ಕೆಲವು ಉತ್ತಮ ಆರೋಗ್ಯ ವೆಬ್‌ಪೋರ್ಟಲ್‌ಗಳನ್ನು ನೋಡಿ)ಮಾದ್ಯಮಗಳಿಂದ ಪಡೆದುಕೊಳ್ಳಬಹುದು.
ಪಾರ್ಶ್ವವಾಯುವಿನ ಬಗ್ಗೆ ಜನರಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆಗಳು
1. ಪಾರ್ಶ್ವವಾಯು ಚಳಿ ಅಥವಾ ಶೀತ ಥಂಡಿಯಿಂದ ಬರುತ್ತದೆ
ಉತ್ತರ: ಪಾರ್ಶ್ವವಾಯು ಹಾಗು ಚಳಿ ಅಥವಾ ಶೀತ (ಥಂಡಿ) ಗಾಳಿಗೂ ಯಾವುದೇ ಸಂಭಂದ ಇರುವುದಿಲ್ಲ. ಥಂಡಿ ಪದಾರ್ಥಗಳನ್ನು ತಿನ್ನಬಾರದು ಎಂಬುದು ಶುದ್ದ ಮೂಡನಂಭಿಕೆ. ಯಾವುದೇ ಪೀಡಿತನಿಗೆ ಉತ್ತಮ ಪ್ರೋಟೀನ್ ವಿಟಾಮಿನ್‍ಯುಕ್ತ ಅಹಾರ ಬಹುಮುಖ್ಯ. ಪಾರ್ಶ್ವವಾಯು(ಲಕ್ವ) ಬರಲು ಮುಖ್ಯಕಾರಣ ಮೆದುಳಿನ ರಕ್ತನಾಳಗಳಲ್ಲಾಗುವ ತತಕ್ಷಣದ ಬದಲಾವಣೆ ಹೊರತು ಚಳಿ ಅಥವಾ ಥಂಡಿಗಾಳಿ ಕಾರಣವಲ್ಲ.
2. ಪಾರ್ಶ್ವವಾಯು ಕೇವಲ ವಯಸ್ಸಾದವರಿಗೆ ಬರುತ್ತದೆ
ಇದು ಶುದ್ದ ತಪ್ಪು ಗ್ರಹಿಕೆ, ಪಾರ್ಶ್ವವಾಯು ಯಾರಿಗೆ ಬೇಕಾದರು ಬರಬಹುದು ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿರುವುದಿಲ್ಲ. ಆಗತಾನೆ ಹುಟ್ಟುವ ಮಕ್ಕಳಿಂದ ಹಿಡಿದು 90 ರ ವಯೋವೃದ್ದರಿಗೂ ಬರಬಹುದು.
3. ಎಲ್ಲಾ ಪಾರ್ಶ್ವವಾಯು (ಲಕ್ವ) ಪೀಡಿತರು ಒಂದೆ.
ಇದು ಸುಳ್ಳು. ಯಾವುದೆ ಕಾರಣಕ್ಕೂ ಲಕ್ವ ಎಲ್ಲರಿಗೂ ಒಂದೇ ಪ್ರಮಾಣದಲ್ಲಿ ಇರುವುದಿಲ್ಲ. ಪ್ರತಿಯೊಂದು ಪೀಡಿತನಿಗೂ ಲಕ್ವಬರಲು ಅದರದೇ ಆದ ಕಾರಣಗಳಿರುತ್ತವೆ. ಊದಾಹರಣೆಗೆ 10000 ಪಾರ್ಶ್ವವಾಯು(ಲಕ್ವ) ಪೀಡಿತರನ್ನು ಒಂದಡೆ ನಿಲ್ಲಿ ದರೆ ಅಂಗವೈಕಲ್ಯತೆ ನೊಡಲು ಒಂದೆ ಇದ್ದರು ಕಾರಣ ಹಾಗು ಆಘಾತದ ಪ್ರಮಾಣ ಬೆರೇಯದೆ ಆಗಿರುತ್ತದೆ. ಕೆಲವರಿಗೆ ತುಂಬಾ ಕಡಿಮೆ ಪ್ರಮಾಣದ ಆಘಾತವಾಗಿದ್ದರೆ ಇನ್ನು ಕೆಲವರಿಗೆ ತೀವ್ರ ಪ್ರಮಾಣದ್ದಾಗಿರುತ್ತದೆ. ಕಡಿಮೆ ಪ್ರಮಾಣದವರು ಕೆಲವೊಮ್ಮೆ ಯಾವುದೇ ಔಷದಿಯ ನೆರವಿಲ್ಲದೆ ಗುಣ ಹೊಂದಿದ ಪ್ರಕರಣಗಳೂಂಟು. ಹೆಚ್ಚಿದ್ದವರು ಗುಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಲುವುದುಂಟು. ಹೀಗಾಗಿ ಯಾವುದೇ ಕಾರಣಕ್ಕೂ ಪೀಡಿತರೊಬ್ಬರಿಗೊಬ್ಭರನ್ನು ಹೊಲಿಸಕೂಡದು. ಅವೈಜ್ಞಾನಿಕ ಚಿಕಿತ್ಸಾ ಪದ್ದತಿಯಲ್ಲಿ ಈ ರೀತಿಯ ತಪ್ಪುಗಳಿಂದ ಪೀಡಿತರು ಹಾಗು ಸಂಬಂದಿಕರು ಹಾದಿ ತಪ್ಪುವುದು ಹೆಚ್ಚು.
ಪಾರ್ಶ್ವವಾಯುವಿನ (ಲಕ್ವ)ಜಾಗೃತಿಗೆ ಮಾದ್ಯಮಗಳ ಪಾತ್ರ
ಹೆಚ್ಚು-ಹೆಚ್ಚು ಕೆಲಸ ಮಾಡಬೇಕಿದೆ. ಲಕ್ವ ಸಮಸ್ಯೆಯ ಆಳ ಹೊಕ್ಕರೆ ಪೀಡೀತರ ಹಾಗು ಸಂಬಂದಿಗಳ ನರಕಸದೃಶ ಬದುಕಿನ ಅರಿವಾಗುತ್ತದೆ. ದಯವಿಟ್ಟು ಮಾದ್ಯಮಗಳು ಇ ನಿಟ್ಟಿನಲ್ಲಿ ಕೆಲಸ ಮಾಡುವ ಸಮಯ ಇದೀಗ ಬಂದಿದೆ.
1. ಪಾರ್ಶ್ವವಾಯು ಪೀಡಿತರೇ ಜಾಗೃತರಾಗಿ (ಭಾಗ 1)- ಡಾ. ಚಂದ್ರಶೇಖರ ಬೆಳ್ಳೂಡಿ
2. ಲಕ್ವ ಅಥವಾ ಪಾರ್ಶ್ವವಾಯು ಪೀಡಿತರೇ ಜಾಗೃತರಾಗಿ (ಭಾಗ 2)- ಡಾ. ಚಂದ್ರಶೇಖರ ಬೆಳ್ಳೂಡಿ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವಿಳಾಸ:
ಡಾ|| ಚಂದ್ರಶೇಖರ್ ಬೆಳ್ಳೂಡಿ
ಡಿಸಿ ಇಂಟರ್ನ್ಯಾಷನಲ್ ಪಾರ್ಶ್ವವಾಯು ಪುನಃಶ್ಚೇತನ ಸೇವೆಗಳು ಪ್ರೈವೇಟ್ ಲಿಮಿಟೆಡ್,
24, 3 ನೇ ಕ್ರಾಸ್ ರೋಡ್, ಬಿಮಾಜೋತಿ ಎಲ್ಐಸಿ ಕಾಲೋನಿ
ಮೋದಿ ಆಸ್ಪತ್ರೆ ರಸ್ತೆ, ಶಂಕರಮಠದ ಹತ್ತಿರ
ಬಸವೇಶ್ವರ ನಗರ, ಬೆಂಗಳೂರು -560079
ದೂರವಾಣಿ: 87109 64433
ಇಮೇಲ್: dcrehabservice@gmail.com
ಕಳೆದ ಒಂದುವರೆ ದಶಕದಿಂದ ಪಾರ್ಶ್ವವಾಯು ಪೀಡಿತರ ಪುನಃಶ್ಚೇತನಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಡಾ|| ಚಂದ್ರಶೇಖರ್ ಬೆಳ್ಳೂಡಿಯವರು ಹಲವಾರು ಹೊಸ ಹೊಸ ಚಿಕಿತ್ಸಾ ವಿಧಾನಗಳ ಮೂಲಕ ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡಂತಹ ನೂರಾರು ಪಾರ್ಶ್ವವಾಯು ಪೀಡಿತರಿಗೆ ಹೊಸ ಆಶಾಕಿರಣವಾಗಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ತಮ್ಮ ಸಂಶೋದನೆಯಲ್ಲಿ ಅಳವಡಿ ಕೊಂಡು ಹಲವಾರು ಸುಧಾರಿತ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸಿದ್ದಾರೆ. ಅವರ ಸುಧಾರಿತ ಚಿಕಿತ್ಸಾ ವಿಧಾನಗಳಿಂದ ಎಷ್ಟೋ ಹಳೆಯ (5 ರಿಂದ 10 ವರುಷಗಳಷ್ಟು) ಪಾರ್ಶ್ವವಾಯು ಪ್ರಕರಣಗಳಿಗೆ ಚಿಕಿತ್ಸೆ ನೀಡಿದ್ದಾರೆ. ಡಿಸಿ ಇಂಟರ್ನ್ಯಾಷನಲ್ ಪಾರ್ಶ್ವವಾಯು ಪುನಶ್ಚೇತನ ಕೇಂದ್ರವನ್ನು ಸಂಸ್ಥಾಪಿ ಪ್ರಸ್ತುತ ಅದರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.