ಔಷಧಿಗಳ ಕಚ್ಚಾ ಸಾಮಗ್ರಿಗಳ ಹೆಚ್ಚಿದ ಬೆಲೆ ಭಾರತವು ಔಷಧ ಉದ್ಯಮದಲ್ಲಿ ಸ್ವಾವಲಂಬಿಗಳಾಗಲು ಬಿಡದ ಪ್ರಯತ್ನವಾಗಿದೆ ಮತ್ತು ‘ಆತ್ಮನಿರ್ಭರ್’ ಪ್ರಯತ್ನಗಳನ್ನು ಕಸಿದುಕೊಳ್ಳುವ ಚೀನಾ ಸಂಭಾವ್ಯ ತಂತ್ರವಾಗಿದೆ. ಸ್ವಾವಲಂಭೀ ಭಾರತದ ಯೋಜನೆಗೆ ಅಡ್ಡಗಾಲು ಹಾಕುವುದು ಅವರ ಉದ್ದೇಶ.
ಔಷಧಿಗಳನ್ನು ತಯಾರಿಸಲು ಬಳಸುವ ಪ್ರಮುಖ ಕಚ್ಚಾ ಸಾಮಗ್ರಿಗಳ ಬೆಲೆಯನ್ನು ಚೀನಾವು 10-20% ರಷ್ಟು ಹೆಚ್ಚಿಸಿದೆ. ಜೀವ ಉಳಿಸುವ ಪ್ರತಿಜೀವಕಗಳು, ಸ್ಟೀರಾಯ್ಡ್ಗಳು ಮತ್ತು ಇತರ ಔಷಧಿಗಳನ್ನು ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳನ್ನು ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದರಿಂದ ಹೆಚ್ಚಿದ ಬೆಲೆಗಳಿಂದಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ದೇಶೀಯ ಉದ್ಯಮದ ಮೇಲೆ ವೆಚ್ಚದ ಒತ್ತಡವನ್ನು ಬೀರುತ್ತವೆ, ಅದಕ್ಕಿಂತ ಮುಖ್ಯವಾಗಿ ಇದು ಭಾರತವು ಔಷಧ ಉದ್ಯಮದಲ್ಲಿ ಸ್ವಾವಲಂಬಿಗಳಾಗಲು ಬಿಡದ ಪ್ರಯತ್ನವಾಗಿದೆ ಮತ್ತು ‘ಆತ್ಮನಿರ್ಭರ್’ ಪ್ರಯತ್ನಗಳನ್ನು ಕಸಿದುಕೊಳ್ಳುವ ಚೀನಾ ಸಂಭಾವ್ಯ ತಂತ್ರವಾಗಿದೆ ಎಂಬ ಅನುಮಾನಗಳಿಗೆ ನಾಂದಿ ಹಾಡಿದೆ.
ಚೀನಾದ ಕ್ರಮವು ಭಾರತದ ಆತ್ಮನಿರ್ಭರ್ ಯೋಜನೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು?
ಆಮದು ಮಾಡಿದ ಔಷಧೀಯ ಕಚ್ಚಾ ಸಾಮಾಗ್ರಿಗಳ ಬೆಲೆಯಲ್ಲಿನ ಹೆಚ್ಚಳದಿಂದ ದೇಶದಲ್ಲಿ ಸ್ಥಳೀಯವಾಗಿ ಮಾಡುವ ಔಷಧಿಯ ಉತ್ಪಾದನೆಯಲ್ಲಿ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಔಷಧಿಗಳ ಬೆಲೆ ದುಬಾರಿಯಾಗಬಹುದು ಅಥವಾ ಉತ್ಪಾದನಾ ಸಂಖ್ಯೆ ಕಡಿತಗೊಳ್ಳಬಹುದು. ಮತ್ತು ಕೆಲವು ಔಷಧ ಕಂಪನಿಯವರು ಉತ್ಪಾದನೆಯನ್ನೇ ಸ್ಥಗಿತಗೊಳಿಸಬಹುದು. ಇದರಿಂದ ನಮ್ಮ ಆರೋಗ್ಯ ರಂಗದಲ್ಲಿ ಬಹು ದೊಡ್ಡ ಹಿನ್ನಡೆ ಉಂಟಾಗುತ್ತದೆ. ಪ್ರಸ್ತುತ, ಭಾರತವು ಔಷಧದ ಕಚ್ಚಾ ವಸ್ತುಗಳಿಗಾಗಿ ಹಾಗೂ ಬಾರತದಲ್ಲಿ ತಯಾರಾಗುವ ಹಲವಾರು ಔಷಧಿಗಳ ಉತ್ಪಾದನೆಗೆ ಚೀನಾ ರಫ್ತು ಮಾಡುವ ವಸ್ತುಗಳನ್ನೇ ಅವಲಂಬಿಸಿದೆ. ಭಾರತದಲ್ಲಿ ತಯಾರಾಗುವ ಔಷಧಗಳಿಗೆಶೇಕಡಾ 70 ರಿಂದ 80 ರಷ್ಟು ಮೂಲ ಕಚ್ಚಾ ವಸ್ತುಗಳನ್ನು ಒದಗಿಸುತ್ತಿರುವುದು ಚೀನಾ ದೇಶ. ಅಚ್ಚರಿ ಎಂದರೆ ಸೆಫಲೋಸ್ಪೊರಿನ್ಗಳು, ಅಜಿಥ್ರೊಮೈಸಿನ್ ಮತ್ತು ಪೆನ್ಸಿಲಿನ್‍ನಂತಹ ಕೆಲವು ಜೀವ ಉಳಿಸುವ ಪ್ರತಿಜೀವಕಗಳಿಗೆ, ಚೀನೀ ಆಮದಿನ ಮೇಲಿನ ಅವಲಂಬನೆಯು ಶೇಕಡಾ 90ರಷ್ಟು ಇದೆ.
ಭಾರತದ ನಡೆ ಏನು?
ಸ್ಥಳೀಯ ಉತ್ಪಾದನೆ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸಲು, ಆಮದು ಅವಲಂಬನೆ ಹೆಚ್ಚಿರುವ 50 ನಿರ್ಣಾಯಕ ಔಷಧಗಳನ್ನು ತಯಾರಿಸಲು ಸರ್ಕಾರವು ಬೆಂಬಲ ಯೋಜನೆಯನ್ನು ಘೋಷಿಸಿದೆ, ವಿಶೇಷವಾಗಿ, ಕಚ್ಚಾ ಸಾಮಾಗ್ರಿಗಳ ಬೆಲೆಯಲ್ಲಿನ ಹೆಚ್ಚಳವು ಆವರ್ತಕವಾಗಿದೆ ಮತ್ತು ಸ್ಥಳಿಯ ಉತ್ಪಾದನೆಯಲ್ಲಿಯೂ ಸಹ ಇದನ್ನು ಅನುಸರಿಸಲಾಗುತ್ತದೆ. ಅಲ್ಲದೆ ಚೀನಾದ ಕರೆನ್ಸಿಗಿಂತ ಭಾರತದ ರೂಪಾಯಿ ಮೌಲ್ಯವು ಮೊದಲಿಗಿಂತಲೂ ಈಗ ಹೆಚ್ಚಾಗಿದೆ. ಅಂದg ಸಧ್ಯಕ್ಕೆ ಚೀನಾದ 1 ಯಾನ್ ಭಾರತದ 10.85 ರೂಪಾಯಿಗೆ ಸಮವಾಗಿದೆ. ಮೊದಲು ಈ ದರ ಮತ್ತಷ್ಟು ಹೆಚ್ಚಿತ್ತು. ಆರ್ಥಿಕ ವಲಯದಲ್ಲಿ ಇದು ಒಳ್ಳೆಯ ಬೆಳವಣಿಗೆಯಾದರೂ ಚೀನಾ ತನ್ನ ಮೂಲ ಕಚ್ಚಾ ವಸ್ತುಗಳ ರಫ್ತು ದರವನ್ನು ಹೆಚ್ಚಿಸಿರುವುದು ದೇಶದ ಔಷಧ ಉದ್ಯಮದಲ್ಲಿನ ಆತಂಕಕ್ಕೆ ಕಾರಣವಾಗಿದೆ.
ಅದಕ್ಕೆ ಭಾರತ ಸರ್ಕಾರವು ಉತ್ಪಾದನಾ ಕಾರ್ಯ ಹಾಗೂ ಸಂಬಂಧಿತ ಯೋಜನೆಯ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಹಣಕಾಸಿನ ಬೆಂಬಲವನ್ನು ನೀಡಲು ಯೋಚಿಸುತ್ತಿದೆ. ಆದರೆ ಇದಕ್ಕೆ ಕಂಪನಿಗಳಿಂದ ದೊಡ್ಡ ಹೂಡಿಕೆಗಳೂ ಒಳಗೊಂಡಿರುತ್ತದೆ, ವಿಶೇಷವಾಗಿ ಹೆಚ್ಚು ಅಗತ್ಯವಿರುವ ದೀರ್ಘಕಾಲೀನ ಔಷಧಿ ಉತ್ಪನ್ನಗಳಿಗೆ ಹೂಡಿಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಭಾರತ ಸರಕಾರವು ಈ ಸಮಸ್ಯೆಯನ್ನು ಇನ್ನೂ ಯಾವ ಯಾವ ರೀತಿಯಲ್ಲಿ ಬಗೆಹರಿಸುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಭಾರತವು ಚೀನಾದ ಆ್ಯಪ್‍ಗಳನ್ನು ಬ್ಯಾನ್ ಮಾಡಿ ಒಂದಷ್ಟು ನಷ್ಟ ಮಾಡಿದ್ದರ ಪ್ರತಿಯಾಗಿ ಚೀನಾ ಈ ರೀತಿಯಾಗಿ ಕುಂತಂತ್ರದ ತಂತ್ರ ನಡೆಸುತ್ತಿದೆ ಎಂಬುದು ತಜ್ಞರ ಅಭಿಮತವಾಗಿದೆ. ಅತೀ ಅಗತ್ಯ ವಸ್ತುಗಳ ಮೇಲಿನ ದರ ಹೆಚ್ಚಿಸುವುದು ಆ ಮೂಲಕ ಆರ್ಥಿಕ ಹೊಡೆತ ನೀಡುವುದು, ಸ್ವಾವಲಂಭೀ ಭಾರತದ ಯೋಜನೆಗೆ ಅಡ್ಡಗಾಲು ಹಾಕುವುದು ಅವರ ಉದ್ದೇಶ ಎಂಬುದು ಅವರ ಈ ನಡೆಯಿಂದ ತಿಳಿದುಬರುತ್ತಿದೆ.