Vydyaloka

ನಿಮ್ಮ ಪ್ರಶ್ನೆ – ನಮ್ಮ ಉತ್ತರ

ನಿಮ್ಮ ಯಾವುದೇ ಸಂದೇಹ, ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಲಿದ್ದಾರೆ. ನಿಮ್ಮ ಪ್ರಶ್ನೆಗಳನ್ನು meಜiಚಿiಛಿoಟಿ@ಥಿmಚಿiಟ.ಛಿomಗೆ ಅಥವಾ ಪತ್ರಿಕೆ ವಿಳಾಸಕ್ಕೆ ಕಳುಹಿಸಬಹುದು.
 
ಡಾ.ಸಿ.ಶರತ್ ಕುಮಾರ್
ಖ್ಯಾತ ಗರ್ಭಧಾರಣಾ ತಜ್ಞವೈದ್ಯರು ಮತ್ತು ನಿರ್ದೇಶಕರು
ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ
ಮೈಸೂರು-570021 ದೂ.0821-2444441, 3265002
ಡಾ. ಶರತ್ ಮೆನ್ಸ್ ಕ್ಲೀನಿಕ್
34/82, 20ನೇ ಮುಖ್ಯರಸ್ತೆ, ಬಸವ ಮಂಟಪ ರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ದೂ.: 7815050100
ಗರ್ಭಧಾರಣೆ
ಹೆಸರು: ರಾಮು ಊರು: ಶಿವಪುರ
ಪ್ರಶ್ನೆ: ಮನುಷ್ಯನಾದವನು ಯಾವುದೇ ವಿಷಯದಲ್ಲಿಯೂ ಸಹ ಎಷ್ಟೇ ತಿಳಿದಿದೆ ಎಂದುಕೊಂಡರೂ ಸಹ ತಿಳಿದುಕೊಳ್ಳುವುದೇ ಬಹಳಷ್ಟು ಇರುತ್ತದೆ. ಅದಕ್ಕಾಗಿ ನಾನು ಹೆಚ್ಚಿನ ತಿಳಿವಳಿಕೆಗಾಗಿ ಈ ಪತ್ರ ಬರೆಯುತ್ತಿದ್ದೇನೆ. ಗಂಡ ಹೆಂಡತಿ ಪುಸ್ತಕದ ಒಂದು ಲೇಖನದಲ್ಲಿ ಸ್ತ್ರೀಯು ಎರಡು ಮುಟ್ಟುಗಳ ನಡುವಿನ 14, 15ನೇ ದಿನ ಪಕ್ವಗೊಂಡ ಅಂಡಾಣು ಉತ್ಪತ್ತಿಯಾಗಿರುತ್ತದೆ. ಆ ಸಮಯದಲ್ಲಿ ವೀರ್ಯಾಣು ಪ್ರವೇಶಿಸಿದರೆ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಿಳಿಸಿರುತ್ತಾರೆ.
1. ಈ ಕ್ರಮ ಎಲ್ಲಾ ಮಹಿಳೆಯರಿಗೂ ಸಹ ಅನ್ವಯಿಸುತ್ತದೆಯೇ?
2. ಮಕ್ಕಳಲ್ಲಿ ಅಂತರಬೇಕೆನ್ನುವ ದಂಪತಿಗಳು ಈ ಮಧ್ಯಂತರ ದಿನಗಳನ್ನು ಬಿಟ್ಟು ಮುಟ್ಟಿನ ಮೂರನೇ ದಿನದಿಂದ ಮತ್ತೇ ಮುಟ್ಟು ಸಂಭವಿಸುವವರೆವಿಗೂ ಸಂಭೋಗ ಕ್ರಿಯೆ ನಡೆಸಿದರು ಗರ್ಭಧಾರಣೆಯಾಗುವುದಿಲ್ಲವೇ?
3. ಮಕ್ಕಳು ಬೇಡ ಎಂದು ನಿರ್ಧರಿಸಿದ ದಂಪತಿಗಳು ಮೇಲ್ಕಂಡ 2 ದಿನಗಳಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿದರೆ ಸಂಭೋಗ ಮಾಡದಿದ್ದರೆ, ಮಾಲಾ-ಡಿ, ಮಾಲಾ-ಎನ್, ಕಾಪರ್-ಖಿ, ವಂಕಿ, ಟ್ಯುಬೆಕ್ಟಮಿ, ವ್ಯಾಸೆಕ್ಟಮಿಗಳಿಂದ ದೂರವಿರಬಹುದೇ?
4. ವಾರದಲ್ಲಿ ಒಂದು ಅಥವಾ ಎರಡು ದಿನ ಸಂಭೋಗದ ಕ್ರಿಯೆಯಲ್ಲಿ ತೊಡಗುವ ದಂಪತಿಗಳು ಸಂಭೋಗ ಹೊಂದಿದ ದಿನ ಮಾತ್ರ ಮಾಲಾ-ಡಿ ಸೇವಿಸಿದರೆ ಸಾಕೇ?
ಉತ್ತರ: 1. ಯಾವುದೇ ಮಹಿಳೆಯಲ್ಲಿ ಮುಟ್ಟು ತಿಂಗಳು, ತಿಂಗಳಿಗೆ ಏರುಪೇರಾಗುವ ಸಾಧ್ಯತೆ ಇರುತ್ತದೆ. ಋತುಚಕ್ರವು ಸರಿಯಾಗಿ ಆಗುತಿರುವ ಮಹಿಳೆಯರಲ್ಲಿ ಅಂಡೋತ್ಪಾದನೆಯು ಮುಂದಿನ ತಿಂಗಳು ಮುಟ್ಟಾಗುವ 14 ದಿನದ ಹಿಂದಿನ ದಿನ ಆಗುತ್ತದೆ. ಅಂದರೆ ಮುಟ್ಟು ಸರಿಯಾಗಿ 28, 30 ದಿನಗಳಿಗೆ ಆಗುವವರೆಗೆ ಮಾತ್ರ ಅನ್ವಯ ಆಗುತ್ತದೆ. ಆದ್ದರಿಂದ ನಿಖರವಾಗಿ ಹೇಳಲು ಸಾಧ್ಯವಿಲ್ಲ.
2. ಮಕ್ಕಳಲ್ಲಿ ಅಂತರ ಬೇಕೆನ್ನುವ ದಂಪತಿಗಳು ಈ ಮದ್ಯಂತರ ದಿನಗಳನ್ನು ಬಿಟ್ಟು ಮುಟ್ಟಿನ ಮೂರನೇ ದಿನದಿಂದ ಮತ್ತೆ ಮುಟ್ಟು ಸಂಭವಿಸುವವರೆವಿಗೂ ಸಂಭೋಗ ಕ್ರಿಯೆ ನಡೆಸಿದರೂ ಗರ್ಭಧಾರಣೆಯಾಗುವ ಸಾಧ್ಯತೆ ಇದೆ. ಏಕೆಂದರೆ ಅಂಡೋತ್ಪಾದನೆ ಏರುಪೇರಾಗುವ ಸಾಧ್ಯತೆ ಇದೆ. ಅಲ್ಲದೆ ಅಂಡಾಣು 8 ರಿಂದ 24 ಗಂಟೆ ಜೀವಂತವಾಗಿರುತ್ತದೆ. ವೀರ್ಯಾಣುಗಳು 24 ರಿಂದ 48 ಗಂಟೆ ಜೀವಂತವಾಗಿರುತ್ತದೆ. ಆದ್ದರಿಂದ ಗರ್ಭಧಾರಣೆಯಾಗುವ ಸಾಧ್ಯತೆ ಇದೆ.
3. ಮಕ್ಕಳು ಬೇಡ ಎಂದು ನಿರ್ಧರಿಸಿದ ದಂಪತಿಗಳು ಮೇಲ್ಕಂಡ 2 ದಿನಗಳಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿದರೆ ಸಂಭೋಗ ಮಾಡದಿದ್ದರೆ ಮಾಲಾ-ಡಿ, ಮಾಲಾ-ಎನ್, ಕಾಪರ್-ಖಿ, ವಂಕಿ, ಟ್ಯುಬೆಕ್ಟಮಿ, ವ್ಯಾಸೆಕ್ಟಮಿಗಳಿಂದ ದೂರವಿರುವುದು ಸಾಧ್ಯವಿಲ್ಲ. 10 ರಿಂದ 20ನೇ ದಿನದವರೆಗೆ ಗರ್ಭ ನಿಲ್ಲುವ ಸಾಧ್ಯತೆ ಇದೆ.
4. ವಾರದಲ್ಲಿ ಒಂದು ಅಥವಾ ಎರಡು ದಿನ ಸಂಭೋಗದ ಕ್ರಿಯೆಯಲ್ಲಿ ತೊಡಗುವ ದಂಪತಿಗಳು ಸಂಭೋಗ ಹೊಂದಿದ ದಿನ ಮಾತ್ರ ಮಾಲಾ-ಡಿ ಸೇವಿಸಿದರೆ ಸಾಕಾಗುವುದಿಲ್ಲ. ತಿಂಗಳು ಪೂರ್ತಿ ತೆಗೆದುಕೊಳ್ಳಬೇಕು.
ಪುರುಷರಲ್ಲಿ ಕಾಮೋದ್ರೇಕ
ಹೆಸರು: ರಾಜು ಊರು: ರಾಮನಗರ
ಪ್ರಶ್ನೆ: ನನಗೆ 23 ವರ್ಷ. ನನ್ನ ಸಮಸ್ಯೆ ಏನೆಂದರೆ ನಾನು ನಪುಂಸಕತೆಯಿಂದ ಬಳಲುತ್ತಿದ್ದೇನೆ ಹುಡುಗಿಯರನ್ನು ಕಂಡಾಗ ನನಗೆ ಯಾವುದೇ ರತಿ ಭಾವನೆಗಳು ಮೂಡುವುದಿಲ್ಲ. ಸುಂದರವಾದ ಯವಕರನ್ನು ಕಂಡಾಗ ಕಾಮೋದ್ರೇಕವಾಗುತ್ತದೆ. ನಮಗೆ 15ನೇ ವಯಸ್ಸಿನಿಂದ ಹಸ್ತಮೈಥುನದ ಚಟವಿದೆ. ಶಿಶ್ನದ ಮುಂದೊಗಲಿನಲ್ಲಿ ಬಿಳಿಹಿಟ್ಟು ಮೆತ್ತಿಕೊಂಡಿರುತ್ತದೆ ಮತ್ತು ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಇದುವರೆಗೆ ಯಾವುದೇ ವೈದ್ಯರಿಗೆ ತೋರಿಸಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.
ಉತ್ತರ: ನಿಮ್ಮ ಭಾವನೆಗಳನ್ನು ಬದಲಾಯಿಸಿಕೊಳ್ಳಿ. ಸಲಿಂಗಕಾಮ ಒಳ್ಳೆಯದಲ್ಲ. ಶಿಶ್ನವಿನ ಮುಂದೊಗಲಿನ ಸುತ್ತ ಸೆಗ್ಮಾ ಎಂಬ ಬಿಳಿ ಸ್ರವಿಕೆ ಅಂಟಿಕೊಂಡಿರುವುದು ಸಹಜ. ಅದಕ್ಕೆ ಸೋಂಕು ಉಂಟಾದರೆ ಕೆಟ್ಟ ವಾಸನೆ ಬರುತ್ತದೆ. ಉಗುರು ಬೆಚ್ಚಗಿನ ಉಪ್ಪು ನೀರಿನಿಂದ ದಿನಕ್ಕೆ ಮೂರು ಸಾರಿ ತೊಳೆದುಕೊಳ್ಳಿ. ಸರಿ ಹೋಗುತ್ತದೆ. ಕಡಿಮೆ ಆಗದಿದ್ದರೆ ಅಚಿಟಿಜiಜ ಗಿ ಉeಟ ಹೆಚ್ಚಿ ಸರಿ ಹೋಗುತ್ತದೆ.
Share this: