ಇನ್ನೊಂದು ಆಸಕ್ತಿದಾಯಕ ಹೃದಯ ಮತ್ತು ಸೈಕಲ್ ಅಳವಡಿಕೆ ಸಮಾರಂಭವನ್ನು ಹಳೆ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್ ಮತ್ತು ವೈಟ್‍ಫೀಲ್ಡ್‍ನ ಗ್ಲೋಬಲ್ ಟೆಕ್‍ಪಾರ್ಕ್ ಅವರಣದಲ್ಲಿ ನಡೆಸಲಾಗುವುದು. ಇದರ ಮುಖ್ಯವಾದ ಉದ್ದೇಶವೆಂದರೆ, ಹೃದಯಪೂರ್ವಕ ಹೃದಯ ಮತ್ತು ಆರೋಗ್ಯಕರ ನಡವಳಿಕೆಯ ನಡುವಿನ ಸಂಬಂಧವನ್ನು ತಿಳಿಸುವುದು. ಇದರಲ್ಲಿ ಪಾಲ್ಗೊಳ್ಳುವ ರೋಗಿಗಳು ಸೈಕಲ್ ಪೆಡಲ್ ತುಳಿದುಕೊಂಡು, ಅಳವಡಿಸಿರುವ ಹೃದಯ ಚಿತ್ರದ ಬಳಿಗೆ ಬರಬೇಕು. ಇದೇ ವೇಳೆ ಹಳೆ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್‍ನಲ್ಲಿ, ವಾಕಾಥಾನ್ ಕೂಡಾ ಆಯೋಜಿಸಲಾಗಿದೆ. ಈ ವಾಕಥಾನ್, ಸೆಪ್ಟೆಂಬರ್ 30ರಂದು ಬೆಳಿಗ್ಗೆ 6ಕ್ಕೆ ಆರಂಭವಾಗಲಿದೆ. ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಇದನ್ನು ಆಯೋಜಿಸಲಾಗಿದೆ.
ನಾರಾಯಣ ಹೆಲ್ತ್ ನಿಂದ ಚೇಂಜ್ ಆಫ್ ಹಾರ್ಟ್ ಅಭಿಯಾನ
