Vydyaloka

ಮುಖದ ಮೇಲಿನ ಕೊಳೆ ನಿವಾರಣೆ

ಮುಖದ ಮೇಲಿನ ಕೊಳೆ ನಿವಾರಣೆ

ಬ್ಲಾಕ್‍ಹೆಡ್ (ಕಪ್ಪು ಕಲೆ) ನಿವಾರಣೆ 

ಬೇಕಾಗುವ ಸಾಮಗ್ರಿ : ಒಂದು ಹಿಡಿ ಪ್ಲಾರ್ಸಿ (ಕೊತ್ತಂಬರಿ ಸೊಪ್ಪಿನಂತೆ ಕಾಣುತ್ತದೆ. ತರಕಾರಿ ಮಳಿಗೆಗಳಲ್ಲಿ ದೊರೆಯುತ್ತದೆ). ಲಭಿಸದಿದ್ದಲ್ಲಿ ಕೊತ್ತಂಬರಿ ಸೊಪ್ಪು ಬಳಸಬಹುದು.
ವಿಧಾನ : ಚೆನ್ನಾಗಿ ತೊಳೆದ ಪ್ಲಾರ್ಸಿ ಅಥವಾ ಕೊತ್ತಂಬರಿ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಎಲ್ಲೆಲ್ಲಿ ಬ್ಲಾಕ್‍ಹೆಡ್‍ಗಳು ಇದೆಯೋ ಅಲ್ಲಲ್ಲಿ ಲೇಪಿಸಬೇಕು. ಬ್ಲಾಕ್‍ಹೆಡ್ ಅಥವಾ ಕಪ್ಪುತಲೆಗಳ ಹಣೆ ಮತ್ತು ಮೂಗಿನ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಪಾತ್ರೆಯಲ್ಲಿ ನೀರನ್ನು ಕುದಿಸಿ ಹಬೆಯನ್ನು ಮುಖಕ್ಕೆ ಹಿಡಿಯಿರಿ. ಐದು ನಿಮಿಷಗಳ ಕಾಲ ಹಬೆಯನ್ನು ತೆಗೆದುಕೊಳ್ಳಬೇಕು. ನಂತರ ಮುಖ ತೊಳೆದು ಸ್ಕ್ರಬ್‍ನಿಂದ ಉಜ್ಜಬೇಕು. ಇದರಿಂದ ಸತ್ತ ಚರ್ಮದ ಪದರ ತೆರೆದುಕೊಂಡು ಬ್ಲಾಕ್‍ಹೆಡ್ ಹೊರ ಬರುತ್ತದೆ.

ಮುಖದ ಕೊಳೆ ನಿವಾರಣೆ

ಬೇಕಾಗುವ ಸಾಮಗ್ರಿ : ಒಂದು ಹನಿ ಪಚೌಲಿ ಎಣ್ಣಿ, ಎರಡು ಹನಿ ಚಹಾ ಗಿಡದ ಎಣ್ಣೆ, ಮೂರು ಹನಿ ಲ್ಯಾವೆಂಡರ್ ಎಣ್ಣೆ ಮತ್ತು ನೀರು.
ವಿಧಾನ : ಎಲ್ಲವನ್ನು ಬೆಚ್ಚಗಿನ ನೀರಿಗೆ ಹಾಕಿ, ಕುದಿಸಿ. ಇದನ್ನು ದೊಡ್ಡ ಪಾತ್ರೆಗೆ ಹಾಕಿ ತಲೆಗೆ ಟವಲ್‍ನನ್ನು ಮುಚ್ಚಿಕೊಂಡು ಮುಖವನ್ನು ಮಾತ್ರ ಆವಿಗೆ ಒಡ್ಡಿ. ಕಣ್ಣಿನ ಬಗ್ಗೆ ಎಚ್ಚರವಿರಲಿ. 10-15 ನಿಮಿಷಗಳ ಕಾಲ ಈ ರೀತಿ ಮಾಡಿದರೆ ಮುಖ ಶುದ್ದವಾಗುವುದಲ್ಲದೇ, ಈ ಆವಿಯನ್ನು ಉಸಿರಾಡುವುದರಿಂದ ಕಟ್ಟಿಕೊಂಡ ಕಫ ಕೂಡ ಸಡಿಲವಾಗುತ್ತದೆ.

ಹಸಿರು ಚಹಾ ವಿಧಾನ:

ಬೇಕಾಗುವ ಸಾಮಗ್ರಿ : ಹಸಿರು ಚಹಾ ಪುಡಿ, ನೀರು ಮತ್ತು ಒಂದು ಹನಿ ನೀಲಗಿರಿ ಎಣ್ಣೆ.
ವಿಧಾನ : ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ. ಇದಕ್ಕೆ ಹಸಿರು ಚಹಾ ಪುಡಿ ಸೇರಿಸಿ ಮತ್ತೆ ಕುದಿಸಿ. ಪರಿಮಳಕ್ಕೆ ನೀಲಗಿರಿ ಎಣ್ಣೆ ಹಾಕಿ. ಆವಿಗೆ ಮುಖ ಒಡ್ಡಿಕೊಳ್ಳಿ.

Share this: