Vydyaloka

ಮೆಚ್ಚುಗೆಯ ಟಿಪ್ಪಣಿಯೊಂದಿಗೆ ಒಂದಿಷ್ಟು ನಾವು ಬದಲಾಗೋಣ

ಮೆಚ್ಚುಗೆಯ ಟಿಪ್ಪಣಿಯೊಂದಿಗೆ ಒಂದಿಷ್ಟು ನಾವು ಬದಲಾಗೋಣ. ನಮ್ಮ ಸುತ್ತ ಮುತ್ತಲಿನವರಿಗೆ ಸಂತೋಷ ನೀಡೋಣ. ಸಂಪದ್ಭರಿತ ಮತ್ತು ಜವಾಬ್ದಾರಿಯುತ ಉತ್ತಮ ನಾಗರೀಕರನ್ನಾಗಿಸೋಣ. ಒಳ್ಳೆಯದಕ್ಕಾಗಿ ಒಳ್ಳೆಯ ಪ್ರಯತ್ನವನ್ನು ಸಫಲವಾಗಿಸೋಣ.

ಬದಲಾಗುತ್ತಿರುವ ವ್ಯವಸ್ಥೆಗಳಲ್ಲಿ ಕೆಲ ಪ್ರಕ್ರಿಯೆಗಳು ವಿಭಿನ್ನ ಸ್ಥಾನಗಳನ್ನು ಆಕ್ರಮಿಸಿದ್ದು ಇವುಗಳು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಪ್ರಮುಖ ಪಾತ್ರವನ್ನು ಅಲಂಕರಿಸುತ್ತದೆ. ಹೊಸ ಪ್ರವೃತಿ ಗಮನಿಸಿದರೆ ಮೆಚ್ಚುಗೆ ಸೂಚಿಸುವ ಪ್ರಾಮಾಣಿಕ ಟಿಪ್ಪಣಿಗಳು ಈ ಸಾಲಿನಲ್ಲಿ ಮೊದಲಿಗಿದೆ. ಹೆಜ್ಜೆ ಹೆಜ್ಜೆಗೂ ಅಸಕ್ತಿದಾಯಕವಾಗಿ ಕೊಂಕು ಹುಡುಕುವ ಬಹಳಷ್ಟು ವ್ಯವಸ್ಥೆಗಳು ನಮ್ಮ ಸುತ್ತ ಮುತ್ತ ರಾರಾಜಿಸುತ್ತಿರುವುದು ಮನುಕುಲದ ಅನೇಕ ಉತ್ತಮ ಕೆಲಸ ಕಾರ್ಯಗಳು ಮೂಲೆಗುಂಪಾಗಿಸಿವೆ. ಪರಿಣಾಮ ಉತ್ತಮ ಮನುಕುಲ ಭಾವನೆ ಬರ ಹಿಡಿತದ ಕೈಗೆ ಬಳುವಳಿಯಾಗಿಸಿದೆ.

ರಾಮಬಾಣ

ಈ ಅನಾರೋಗ್ಯಕರ ಬೆಳವಣಿಗೆಗೆ ಮೆಚ್ಚುಗೆಯ ಟಿಪ್ಪಣಿಗಳು ರಾಮ ಬಾಣವಾಗಿ ಕಾರ್ಯನಿರ್ವಹಿಸುತ್ತಿರುವುದು ಅನೇಕ ರೀತಿಯಲ್ಲಿ ಖುಷಿ ಕೊಡುವ ಪ್ರಗತಿಪಥ. ನಮ್ಮ ಸುತ್ತ ಮುತ್ತ ಸಕಾರಾತ್ಮಕ ಚಿಂತನೆಗಳ ಮನಗಳಿದ್ದರೆ ಜಗತ್ತಿನಲ್ಲಿ ಪ್ರತಿಯೊಂದು ಮೆಚ್ಚುಗೆಗೆ ಅಥವಾ ಉತ್ತಮ, ಆರೋಗ್ಯಕರ ವಿಮರ್ಶೆಗೆ ಯೋಗ್ಯ. ಒಂದು ಪ್ರಶಸ್ತಿ ಯಾರಿಗೆ ನೀಡಲಾಗುತ್ತದೆ ಎಂಬುದರ ಮೇಲೆ ಆ ಪ್ರಶಸ್ತಿಯ ಘನತೆ ಎತ್ತಿ ತೋರಿಸುತ್ತದೆ ಎಂದು ಅನೇಕ ಹಿರಿಯರ ನುಡಿಗಳಲ್ಲಿ ಕೇಳಿದ್ದೇವೆ. ಈ ಅನುಕರಣೆಯ ಮಾನದಂಡ ಮೌಲ್ಯಗಳನ್ನು ಎತ್ತಿ ತೋರಿಸುವುದೇ ಆಗಿದೆ.
ಅರ್ಹತೆ

ಪ್ರಶಂಸೆ ಪ್ರಸ್ತುತಿಯು ಪ್ರಾಮಾಣಿಕ ಮತ್ತು ಮನಪೂರ್ವಕವಾಗಿದ್ದರೆ ಮತ್ತು ಅದನ್ನು ಪಡೆದ ವ್ಯಕ್ತಿ ಈ ಪ್ರಶಂಸೆಗೆ ಅರ್ಹನಾಗಿದ್ದರೆ, ಆ ವ್ಯಕ್ತಿಯು ತನ್ನೊಳಗಿರುವ ಮತ್ತಷ್ಟು ಮೌಲ್ಯಯುತ, ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುವ ಗುಣಗಳನ್ನು ಹೊರತರಬಹುದು ಮತ್ತು ಅದರ ಯೋಗ್ಯತೆ ಗಗನಚುಂಬಿಗೆ ಹೋಲಿಸಬಹುದು. ಸರಳತೆಯ ಈ ಪ್ರಕ್ರಿಯೆಗೆ ಸಕಾರಾತ್ಮಕ ಮನಸ್ಸು ಬೇಕು ಇದರ ನಿಜ ಫಲ ಅನುಭವದಿಂದ ಮಾತ್ರ ಕಾಣಲುಸಾಧ್ಯ. ಯೋಗ್ಯ ವ್ವಕ್ತಿತ್ವದ ಪ್ರಶಂಸೆ ಯೋಗ್ಯ ವ್ಯಕ್ತಿಗಳಿಗೆ ಸಂದಾಯಿಸುವುದು ಉತ್ತಮ ಸಮಾಜ, ಸ್ವಸ್ಥ ಮನಸ್ಸು,ಸುಂದರ ನಾಗರೀಕತೆಯ ಸಮಾಜ ಸ್ರಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸರಳ ಶಕ್ತಿ

ಜಗತ್ತಿನಲ್ಲಿ ಉತ್ತಮ ಪ್ರಶಂಸೆಯ ಮಾತುಗಳಿಂದ ಅನೇಕ ಕೆಟ್ಟ ದಿನಚರಿಗಳು ಒಳ್ಳೆಯ ದಿನಚರಿಗಳಾಗಿ ಬದಲಾಗಿರುವ ಉದಾಹರಣೆಗಳು ಉಂಟು; ಕಾರಣ ಇದು ವ್ಯಕ್ತಿಯ ಶಕ್ತಿ ತೋರಿಸುವ ಸರಳ ವಿದ್ಯೆ. ಇದರಲ್ಲಿ ನೈಜಸತ್ವ ಇದೆ ಇದರ ಸ್ಥಾನ ಅಮೂಲ್ಯ.ಒಳ್ಳೆಯ ಕೆಲಸಗಳನ್ನು ಹುಡುಕಿ ಬೆನ್ನು ತಟ್ಟುವುದು ಎಂದರೆ ಸಂಪಾದನೆಗಾಗಿ ದೃಶವಾಹಿನಿಗಳಲ್ಲಿಗಿಮಿಕ್ ತೋರುವ ರಿಯಾಲಿಟಿ ಶೋ ಗಳಲ್ಲ. ಯುವಶಕ್ತಿ ದಾರಿತಪ್ಪಿಸುವ ಸಾಲು ಸಾಲು ಅನಾರೋಗ್ಯಕರ ಪ್ರಕ್ರಿಯೆಗಳು ರಕ್ತ ಹೀರುವ ಸೊಳ್ಳೆಗಳಂತೆ ಸಲೀಸಾಗಿ ಹುಟ್ಟುಹಾಕುವ ಸಾಮಾಜಿಕ ಜಾಲತಾಣದಂತ ವೇದಿಕೆ ಅರ್ಥ ಪೂರ್ಣ ಬದುಕಿಗೆ ಸವಾಲಾಗಿದ್ದು, ಕಿಂಚಿತ್ತೂ ಘನತೆವಿಲ್ಲದ ಲೈಕ್, ಕಾಮೆಂಟ್ಸ್ ಗಳಿಗೆ ರಕ್ತಹೀರುತ್ತ ಆಹಾರವಾಗಿರುವುದನ್ನು ದಿನನಿತ್ಯ ನೋಡುವ ಹಂತಕ್ಕೆ ನಾವು ಬಂದಿದ್ದೇವೆ.

ಕಾರ್ಪೊರೇಟ್ ಜಗತ್ತು

ಕಾರ್ಪೊರೇಟ್ ಜಗತ್ತಿನಲ್ಲಿ ಉತ್ತಮ ಪ್ರಶಂಸೆಯ ಟಿಪ್ಪಣಿಗಳಿಗೆ ತನ್ನದೇ ಆದ ಬೆಲೆಯಿದೆ. ಅನೇಕ ವೃತ್ತಿಪರರು ನಿರೀಕ್ಷೆ ಮಾಡುವ ಬಡ್ತಿ, ಸಂಬಳ ಏರಿಕೆಗೆ ಇದು ಬಲು ಸಹಕಾರಿ. ಆದ್ದರಿಂದ ವೃತ್ತಿಪರರು ಸಾಧ್ಯವಾದಷ್ಟು ಸಭ್ಯ ರೀತಿಯಲ್ಲಿ ಸಮಾಧಾನದಿಂದ ಗ್ರಾಹಕರೊಂದಿಗೆ ಸಂಪರ್ಕ ಬೆಳೆಸುವುದನ್ನು ಹಲವೆಡೆ ಕಾಣಬಹುದು. ಇಂದು ಪ್ರತಿ ವ್ಯಾಪಾರ ವಹಿವಾಟುಗಳು ಗ್ರಾಹಕರ ಪ್ರತಿಕ್ರಿಯೆಗೆ, ಮೆಚ್ಚುಗೆಯ ಟಿಪ್ಪಣೆ ಗಳಿಗೆ ಕಾತರದಿಂದ ಕಾಯುತ್ತಿರುತ್ತವೆ.

ಬದಲಾವಣೆ ಅಸ್ತ್ರ

ಅತೀ ಕಿರಿಯರಿಂದ ಹಿಡಿದು ಅತೀ ಹಿರಿಯರ ವರೆಗೂ ಯಾವುದೇ ಅಡ್ಡ ಪರಿಣಾಮ ಬೀರದ ಮೆಚ್ಚುಗೆಯ ಟಿಪ್ಪಣಿಗಳನ್ನು ಪ್ರಾಮಾಣಿಕವಾಗಿ ನೀಡುವುದರೊಂದಿಗೆ ನಾವು ಬದಲಾಗೋಣ. ನಮ್ಮ ಸುತ್ತ ಮುತ್ತಲಿನವರಿಗೆ ಸಂತೋಷ ನೀಡೋಣ. ಅವರನ್ನು ಮಾನಸಿಕವಾಗಿ ಗಟ್ಟಿ, ಸಂಸ್ಕಾರ, ಸುಂದರ, ಸಂಪದ್ಭರಿತ ಮತ್ತು ಜವಾಬ್ದಾರಿಯುತ ಉತ್ತಮ ನಾಗರೀಕರನ್ನಾಗಿಸೋಣ. ಒಳ್ಳೆಯದಕ್ಕಾಗಿ ಒಳ್ಳೆಯ ಪ್ರಯತ್ನವನ್ನು ಸಫಲವಾಗಿಸೋಣ.

Also Read: ಆರೋಗ್ಯ ಆನಂದಮಯ ಬದುಕಿಗೆ ರಹದಾರಿ 

 ಉ.ದೇವರಾಯ ಪ್ರಭು – ಬೆಂಗಳೂರು

Share this: