ಮೆದುಳು ಸ್ಟ್ರೋಕ್ – ಯುವ ಪೀಳಿಗೆಯವರನ್ನು ಕಾಡುತ್ತಿರುವ ಗಂಭೀರ ಕಾಯಿಲೆ. “ಮೆದುಳಿನ ಅಟ್ಯಾಕ್’ ಅಥವಾ “ಮೆದುಳಿನ ಸ್ಟ್ರೋಕ್’ ಒಂದು ಸಂಪೂರ್ಣ ತುರ್ತು ಚಿಕಿತ್ಸೆಯ ಅಗತ್ಯ ಹೊಂದಿದ ಸಮಸ್ಯೆಯಾಗಿದೆ.
ತ್ವರಿತ ಗತಿಯಲ್ಲಿ ಅವರ ರಕ್ತದ ಮಾದರಿಯನ್ನು ಪಡೆದು ತಪಾಸಣೆಗೆ ಕಳಿಸಲಾಯಿತು. ಕೂಡಲೇ ಅವರನ್ನು ಎಂಆರ್‍ಐ ಸೂಟ್‍ಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯಕೀಯ ಅನುಮಾನಗಳನ್ನು ಪರಿಹರಿಸಿಕೊಳ್ಳಲಾಯಿತು. ಎಂಆರ್‍ಐನಲ್ಲಿ ಮೆದುಳಿನ ಭಾಗದ ಸ್ಪಷ್ಟ ಚಿತ್ರಣ ದೊರಕಿತು. ಸ್ಟ್ರೋಕ್ ಮುಖ್ಯ ಅಪಧಮನಿಗೆ ರಕ್ತ ಪೂರೈಸುವ ಭಾಗದಲ್ಲಿ ಆಗಿತ್ತು. ಮೆದುಳಿನ ಎಡಭಾಗದಲ್ಲಿ ಮಾತನಾಡುವ ಹಾಗೂ ಭಾಷಾ ಕೇಂದ್ರ ಇರುತ್ತದೆ. ಇದನ್ನು ಮಿಡಲ್ ಸೆರೆಬ್ರಲ್ ಆರ್ಟರಿ (ಎಂಸಿಎ) ಎಂದು ಕರೆಯಲಾಗುತ್ತದೆ. ಈ ಭಾಗ ಕಟ್ಟಿಹೋಗಿತ್ತು. ಇದರಿಂದ ರಕ್ತದ ಹರಿವು ಸರಿಯಾಗಿ ಆಗದೇ ಮಾತನಾಡುವ ಭಾಗದಂತಹ ಪ್ರಮುಖ ಭಾಗ ಕಾರ್ಯನಿರ್ವಹಿಸದಂತೆ ಆಗಿತ್ತು.
ವಿಳಂಬ ಮಾಡಿದ್ದಲ್ಲೆ ಈ ಪರಿಸ್ಥಿತಿ ಸಂಪೂರ್ಣ ಪಾಶ್ರ್ವವಾಯುವಿಗೆ ದಿವ್ಯಾ ತುತ್ತಾಗುವಂತೆ ಮಾಡುತ್ತಿತ್ತು. ಇದಲ್ಲದೇ ಮಾತಿನ ಶಕ್ತಿ ಕಳೆದುಕೊಳ್ಳುವ, ದೊಡ್ಡ ಮಟ್ಟದಲ್ಲಿ ಮಾನಸಿಕ ಕಾರ್ಯನಿರ್ವಹಣೆಯಲ್ಲಿ ಲೋಪ ಎದುರಿಸುವ, ಶರೀರದ ಬಲ ಭಾಗದ ಸ್ವಾದೀನ ಕಳೆದುಕೊಳ್ಳುವ ಆತಂಕ ಇತ್ತು. ಆಧುನಿಕ ವೈದ್ಯಕೀಯ ಹಾಗೂ ವಿಜ್ಞಾನ ಪ್ರಗತಿ ದಿವ್ಯಾರಂತ ರೋಗಿಗಳ ಬದುಕನ್ನು ಉಳಿಸಲು ಸಹಕಾರಿಯಾಗಿ ಲಭಿಸಿವೆ. ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡುವ ಸ್ಟ್ರೋಕ್‍ನಂತಹ ಸಮಸ್ಯೆಯನ್ನು ರಕ್ತ ಹೆಪ್ಪುಗಟ್ಟಿದ್ದನ್ನು ಒಡೆಯುವ ಅಥವಾ ಥ್ರಂಬೊಲಿಟಿಕ್ ಚುಚ್ಚುಮದ್ದನ್ನು ಆಂತರಿಕವಾಗಿ ಇಲ್ಲವೇ ಅಪಧಮನಿ,ಮೂಲಕ ನೀಡಲಾಗುತ್ತದೆ.
ಮುಂದುವರಿದು, ಈ ಹೆಪ್ಪುಗಟ್ಟುವಿಕೆಯಿಂದಾಗಿ ಮೆದುಳಿಗೆ ಸರಬರಾಜು ಮಾಡುವ ಪ್ರಮುಖ ಅಪಧಮನಿಗಳಲ್ಲಿ ಗೋಚರಿಸುವ ಒಂದು ಬ್ಲಾಕ್ ಇತ್ತು. ಇವುಗಳನ್ನು “ಸ್ಟೆಂಟರಿವಿರ್ಸ್’ ಎಂದು ಕರೆಯುವ ಸುರಕ್ಷತೆಯನ್ನು ಬಳಸಿಕೊಂಡು ತೆಗೆಯಲಾಗುತ್ತದೆ ಅಥವಾ ಅಪೇಕ್ಷಿತ (ಹೀರುವಿಕೆಯ ಮೂಲಕ) ವಿಧಾನದಲ್ಲಿ ತೆಗೆಯಲಾಗುತ್ತದೆ. ಇದಕ್ಕಾಗಿ ಪಂಪ್‍ಗಳ ಬಳಕೆ ಪ್ರಮುಖವಾಗಿ ಆಗುತ್ತದೆ. ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎಂಬ ಕಾರಣಕ್ಕೆ ಪಂಪ್ ಬಳಸಲಾಗುತ್ತದೆ. ತೊಡೆಯ ಬಲಭಾಗದ ಸಂದಿನಲ್ಲಿ ಸಣ್ಣದೊಂದು ಸೂಜಿಮೊನೆಯಷ್ಟು ದೊಡ್ಡ ರಂದ್ರಮಾಡಿ ಸಣ್ಣ ಕ್ಯಾತಿಟರ್‍ಗಳ್ನು ರವಾನಿಸುವ ಕಾರ್ಯ ಮಾಡಲಾಯಿತು. ತೊಡೆಯ ಎಲುಬಿನ ಅಪಧಮನಿ ಮೂಲಕ ಈ ಕ್ಯಾತಿಟರ್‍ಗಳನ್ನು ರವಾನಿಸಲಾಯಿತು. ಈ ಮೂಲಕ ಮಿದುಳಿನ ಎಡಭಾಗದಲ್ಲಿರುವ ನಿರ್ಬಂಧಿತ ಅಪಧಮನಿಯ ವರೆಗೆ ತಲುಪಲು ಅವಕಾಶ ಮಾಡಿಕೊಳ್ಳಲಾಯಿತು.
ಇವೆಲ್ಲಾ ಕಾರ್ಯಗಳೂ ಎಕ್ಸ್‍ರೇ ನಿಯಂತ್ರಣದ ಮೂಲಕ ಸಾಧ್ಯವಾದವು. ಸ್ಟೆಂಟ್ರಿವರ್ ಎಂಬ ಸಣ್ಣ ಬಾಸ್ಕೆಟ್‍ನಂತದ ಸಾಧನದ ಮೂಲಕ ಸೂಕ್ಷ್ಮ ಕ್ಯಾತಿಟರ್ ಬಳಸಲಾಯಿತು. ಈ ಮೂಲಕ ನಿರ್ಬಂಧಿತ ಅಪಧಮನಿಯನ್ನು ತಲುಪಿ ಎರಡು ಹಂತದಲ್ಲಿ ತಕ್ಷಣವೇ ಅಪಧಮನಿಯಲ್ಲಿ ಆಗಿದ್ದ ಬ್ಲಾಕ್‍ನ್ನು ತೆರೆಯಲಾಯಿತು. ಅಂತಿಮ ಹಂತದ ಆಂಜಿಯೋಥೆರಪಿ ಮುಕ್ತಾಯದ ಹೊತ್ತಿಗೆ 30 ನಿಮಿಷ ಕಾಲಾವಧಿ ಆಗಿತ್ತು. ಅಷ್ಟರಲ್ಲಿ ನಿರ್ಬಂಧಿತ ಅಪಧಮನಿ ಮತ್ತು ಸಾಮಾನ್ಯ ರಕ್ತದ ಹರಿವಿನ ಮರು ಸ್ಥಾಪನೆಯನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ನೆರವೇರಿಸಲಾಗಿತ್ತು.
“ಮೆದುಳಿನ ಸ್ಟ್ರೋಕ್’ ತುರ್ತು ಚಿಕಿತ್ಸೆಯ ಅಗತ್ಯ ಹೊಂದಿದ ಸಮಸ್ಯೆ
“ಮೆದುಳಿನ ಅಟ್ಯಾಕ್’ ಅಥವಾ “ಮೆದುಳಿನ ಸ್ಟ್ರೋಕ್’ ಒಂದು ಸಂಪೂರ್ಣ ತುರ್ತು ಚಿಕಿತ್ಸೆಯ ಅಗತ್ಯ ಹೊಂದಿದ ಸಮಸ್ಯೆಯಾಗಿದೆ. ಹಾಗೂ ಇದರಿಂದ ಯಾವುದೇ ಸಂದರ್ಭದಲ್ಲಿ ಹಾಗೂ ಎಲ್ಲಿಬೇಕಾದರೂ ಸ್ಟ್ರೋಕ್ ಆಘಾತ ಎದುರಾಗಬಹುದು. ಇದರಿಂದ ಇಂತಹ ಸೂಚನೆಗಳು ಗೋಚರಿಸಿದಾಗ ಸಮೀಪದಲ್ಲಿರುವ ಸ್ಟ್ರೋಕ್ ಆಸ್ಪತ್ರೆಗೆ ಧಾವಿಸಬೇಕು. ಅತ್ಯಂಥ ಕಿರಿಯ ವಯಸ್ಸಿನಲ್ಲಿಯೇ ಸ್ಟ್ರೋಕ್‍ಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮನಸ್ಸಿನ ಮೇಲೆ ಹೆಚ್ಚಾಗುತ್ತಿರುವ ಒತ್ತಡ, ಜಡ ಜೀವನಶೈಲಿ ಹಾಗೂ ಅಪಾಯಕಾರಿ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಇದಕ್ಕೆ ಪ್ರಮುಖ ಕಾರಣ.
ಸ್ಟ್ರೋಕ್ ಕೂಡ ಒಂದು ವಿಧದ ಕಾಯಿಲೆಯಾಗಿದೆ. ಇಂತಹ ಸಮಸ್ಯೆಗ್ಧೆ ಚಿಕಿತ್ಸೆಯನ್ನು ಪಡೆಯಲು ರೋಗಿಗಳು ಬುದ್ದಿವಂತಿಕೆಯಿಂದ ದೂರದ ಸ್ಥಳಗಳಿಗೆ ಧಾವಿಸುತ್ತಾರೆ. ಆದರೆ ತಕ್ಷಣಕ್ಕೆ ಚಿಕಿತ್ಸೆ ಸಿಕ್ಕರೆ ಮಾತ್ರ ಪರಿಹಾರ ಎಂಬುದನ್ನು ಮರೆಯುತ್ತಾರೆ. ಇದರ ಫಲವಾಗಿ ಬೆಲೆಬಾಳುವ ಸಮಯ ಹಾಗೂ ಮಿದುಳನ್ನು ಕಳೆದುಕೊಳ್ಳುತ್ತಾರೆ. (ಇಂತಹ ಸಮಸ್ಯೆಇದ್ದಾಗ ಪ್ರತಿ ಒಂದು ನಿಮಿಷದ ವಿಳಂಬದಿಂದಾಗಿ ಒಂದು ಮಿಲಿಯನ್ ನರಕೋಶಗಳು ಮಿದುಳಿನಲ್ಲಿ ಸಾಯುತ್ತಾ ಹೋಗುತ್ತವೆ). ಇಲ್ಲಿ ಸಹ ದಿವ್ಯಾ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ ಕೆಲವೇ ಗಂಟೆಗಳಲ್ಲಿ ಅವರ ಶರೀರದ ಬಲಭಾಗದ ದೌರ್ಭಲ್ಯ ಹಾಗೂ ಮಾತಿನ ತೊಂದರೆ ನಿವಾರಣೆಯಾಗಿತ್ತು.
ಒಂದೊಮ್ಮೆ ಬ್ರೈನ್ ಸ್ಟ್ರೋಕ್ ಸಮಸ್ಯೆ ಎದುರಾದಲ್ಲಿ, ರೋಗಿಯ ಜತೆ ಇದ್ದವರು ತಕ್ಷಣ ಜಾಗೃತರಾಗಬೇಕು ಹಾಗೂ ಅತ್ಯಂತ ಸುಸಜ್ಜಿತ ಬ್ರೈನ್ ಸ್ಟ್ರೋಕ್ ಚಿಕಿತ್ಸಾಲಯ ಅಥವಾ ಕೇಂದ್ರಕ್ಕೆ ರೋಗಿಯನ್ನು ಕರೆದೊಯ್ಯಬೇಕು. ಏಕೆಂದರೆ ಬ್ರೈನ್ ಸ್ಟ್ರೋಕ್ ಸಂಭವಿಸಿದ ಸಂದರ್ಭದಲ್ಲಿ ಅತ್ಯಂಥ ತ್ವರಿತವಾಗಿ ಚಿಕಿತ್ಸೆ ನೀಡುವ ಅಗತ್ಯ ಇರುತ್ತದೆ.
ಡಾ. ಸ್ವರೂಪಾ ಗೋಪಾಲ್
ನರರೋಗಶಾಸ್ತ್ರ ವಿಭಾಗ
ಸಕ್ರ ವರ್ಡ್ ಹಾಸ್ಪಿಟಲ್
ದೇವರಬೀಸನಹಳ್ಳಿ, ವರ್ತೂರು ಹೋಬಳಿ,
ಬೆಂಗಳೂರು-560 103 (ಇಂಟೆಲ್ ಎದುರು, ಹೊರವರ್ತುಲ ರಸ್ತೆ, ಮಾರತ್ ಹಳ್ಳಿ)
ದೂ. : 08049694969