ಮಧುಮೇಹ ರೋಗಿಗಳಿಗೆ ಹೃದ್ರೋಗ ಗಂಡಾಂತರ ಹೆಚ್ಚು. ನಮ್ಮ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಮಂದಿಗೆ ಈ ರೋಗವಿದ್ದಾಗ ಅದನ್ನು ನೀವೇಗೆ ನಿಯಂತ್ರಣ ಮಾಡುತ್ತೀರಿ. ನಮ್ಮ ದೇಶದಲ್ಲಿನ ಡಯಾಬಿಟಿಸ್ ಜೊತೆಗಿನ ಪ್ರಕರಣ ಇದಾಗಿದೆ. ಪ್ರತಿವರ್ಷ ಬಹುತೇಕ 8,00,000 ಜನರಿಗೆ ಮಧುಮೇಹ ರೋಗ ಪತ್ತೆಯಾಗುತ್ತಿದ್ದು, ಈಗಾಗಲೇ ಈ ರೋಗವಿರುವ 15.7 ದಶಲಕ್ಷ ಜನರೊಂದಿಗೆ ಸೇರ್ಪಡೆಯಾಗುತ್ತಿದ್ದಾರೆ. ಈ ಪೈಕಿ 10.3 ದಶಲಕ್ಷ ಮಂದಿಗೆ ರೋಗವಿರುವ ಬಗ್ಗೆ ತಿಳಿದಿದ್ದರೆ, ಉಳಿದ 5.4 ದಶಲಕ್ಷ ಜನರಿಗೆ ತಮಗೆ ರೋಗವಿರುವ ಬಗ್ಗೆಯೇ ಗೊತ್ತಿರುವುದಿಲ್ಲ.
ಡಯಾಬಿಟಿಸ್ ಹೊಂದಿರುವ ವ್ಯಕ್ತಿಗೇ ಏಕೆ ಅಂಜೈನಾ ಅಪಾಯ ಹೆಚ್ಚು ?
ಸಕ್ಕರೆ ರೋಗವಿರುವ ವ್ಯಕ್ತಿಗೆ ಆಂಜೈನಾ ಅಪಾಯ ಹೆಚ್ಚಾಗಿರುತ್ತದೆ. ಏಕೆಂದರೆ, ಬ್ಲಡ್ ಷುಗರ್(ಗ್ಲುಕೋಸ್) ಮಟ್ಟ ಏರಿಕೆಯಾಗುವುದರಿಂದ ಅದು ರಕ್ತ ನಾಳಗಳ ಗೋಡೆಗಳ ಒಳ ಭಾಗವನ್ನು ಹಾನಿ ಮಾಡಬಹುದು.
ಇದರಿಂದಾಗಿ, ಆರ್ಟರಿ ಗೋಡೆಗಳಲ್ಲಿ ಕೊಬ್ಬು ಸುಲಭವಾಗಿ ಸಂಗ್ರಹವಾಗಲು ದಾರಿಯಾಗುತ್ತದೆ. ಇದು ರಕ್ತ ನಾಳಗಳನ್ನು ಕಿರಿದಾಗಿಸಿ ಸುಗಮ ರಕ್ತ ಸಂಚಾರಕ್ಕೆ ಅಡ್ಡಿ ಉಂಟು ಮಾಡುವುದರಿಂದ ಹೃದಯಾಘಾತ ಅಥವಾ ಪಾಶ್ರ್ವವಾಯು ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ.
ಇದರೊಂದಿಗೆ, ಮಧುಮೇಹ ನಿಯಂತ್ರಣದಲ್ಲಿ ಇಲ್ಲದಿದ್ದರೆ, ರಕ್ತ ಹೆಪ್ಪುಗಟ್ಟುವ ಸಾಧ್ಯತೆಗಳು ಹೆಚ್ಚಾಗಿದ್ದು, ಇದು ಆರ್ಟರಿಯಲ್ಲಿ ರಕ್ತ ಸಂಚಾರಕ್ಕೆ ಇನ್ನಷ್ಟು ಅಡಚಣೆ ಉಂಟು ಮಾಡುತ್ತದೆ. ಡಯಾಬಿಟಿಸ್‍ನಲ್ಲಿ ಕಂಡುಬರುವ ಇತರ ಅಂಶಗಳಿಂದಲೂ ಈ ಅಪಾಯ ಹೆಚ್ಚಾಗಬಹುದು. ಉದಾಹರಣೆಗೆ, ಸಕ್ಕರೆ ಕಾಯಿಲೆ ಇರುವ ರೋಗಿಗಳ ರಕ್ತನಾಳಗಳು ಧೂಮಪಾನ, ಅಧಿಕ ಕೊಲೆಸ್ಟ್ರರಾಲ್ ಮತ್ತು ಅಧಿಕ ರಕ್ತದೊತ್ತಡದಂಥ ಇತರ ಗಂಡಾಂತರಕಾರಿ ಅಂಶಗಳಿಂದ ಗಾಯಗೊಳ್ಳುವ ಸಾಧ್ಯತೆ ಕೂಡ ಅಧಿಕವಾಗಿರುತ್ತದೆ. ಡಯಾಬಿಟಿಕ್ ಅಟೋನೊಮಿಕ್ ನ್ಯೂರೋಪಥಿ ರೋಗಿಗಳು ಆಂಜೈನಾದ ಕೆಳಕಂಡ ರೋಗ ಲಕ್ಷಣಗಳನ್ನು ವ್ಯಕ್ತಪಡಿಸುತ್ತಾರೆ.
Watch Video: ಮಧುಮೇಹ ಮತ್ತು ಹೃದ್ರೋಗ
ಆಟೋನೊಮ್ಯಾಕ್ ನ್ಯೂರೋಪಾಥ್‍ನ ಚಿಹ್ನೆಗಳು
. ಬೆವರುವಿಕೆ . ದೇಹದ ತಾಪಮಾನ ಕಡಿಮೆಯಾಗುವಿಕೆ . ದೇಹದ ಉಷ್ಣಾಂಶ ಹೆಚ್ಚಾಗುವಿಕೆ . ಅಸ್ವಸ್ಥತೆ . ದೃಷ್ಟಿ ಮಬ್ಬಾಗುವಿಕೆ . ಮಲಬದ್ದತೆ . ಅತಿಸಾರ . ಬಾಯಿ ಒಣಗುವಿಕೆ . ರುಚಿಯಲ್ಲಿ ಬದಲಾವಣೆ . ಪಾದದಲ್ಲಿ ಉರಿ ಅನುಭವ . ಕೂದಲು ಉದುರುವಿಕೆ . ಚರ್ಮ ಒಣಗುವಿಕೆ . ಪಾದ ತಣ್ಣಗಾಗುವಿಕೆ . ರಾತ್ರಿ ವೇಳೆ ಅನಾರೋಗ್ಯ ಇನ್ನಷ್ಟು ಹದಗೆಡುವಿಕೆ
ಆಂಜೈನಾಗೆ ಪ್ರಥಮ ಚಿಕಿತ್ಸೆ ಮಾಹಿತಿ
ಬಿಗಿಯಾದ ಉಡುಪುಗಳನ್ನು ಸಡಿಲಗೊಳಿಸಬೇಕು. ರೋಗಿಯನ್ನು ಮಲಗಿಸಬೇಕು. ಆಹಾರ ಅಥವಾ ಪಾನೀಯ ಸೇವಿಸುವುದನ್ನು ತಪ್ಪಿಸಬೇಕು. ಕಾರ್ಡಿಯೋಪಲ್ಮನರಿ ರಿಸಸ್‍ಸೈಟೇಷನ್‍ಗೆ ಸಿದ್ದರಾಗಬೇಕು.
ಡಯಾಬಿಟಿಸ್ ರೋಗಿಗಳು ನೆನಪಿಡಬೇಕಾದ ಸಂಗತಿಗಳು
- ಸೇಬು-ಅಧಿಕ ಪ್ರೂಕ್ಟೋಸ್, ಅಧಿಕ ಪೆಕ್ಟಿಯಾ ಹೊಂದಿರುತ್ತದೆ
- ಮರಸೇಬು ಅಥವಾ ಸೀಬೆಕಾಯಿ-ಅಧಿಕ ಪ್ರೂಕ್ಟೋಸ್ ಹೊಂದಿರುತ್ತದೆ.
- ಆಪ್ರಿಕೋಟ್ಗಳು
- ಬ್ಲೂಬೇರ್ರಿ
- ಕಿವಿ ಪ್ರೂಟ್
- ದಾಳಿಂಬೆಗಳು-ಅಧಿಕ ಮೊನೊಸ್ಯಾಚುರೇಟೆಡ್ ಫ್ಯಾಟ್ ಹೊಂದಿರುತ್ತದೆ
- ಅವೋಕ್ಯಾಡೋ
- ಪ್ರೂಕ್ಟೋಸ್ ಅಧಿಕ ಪ್ರಮಾಣದಲ್ಲಿರುವ ಹಣ್ಣುಗಳು
- ಗುವಾ
- ಮಾವಿನಹಣ್ಣು
- ಹೆಚ್ಚುವರಿ ದ್ರಾಕ್ಷಿಹಣ್ಣು
ಸೇವಿಸಬಾರದ ಆಹಾರಗಳು- ಅಧಿಕ ಪ್ರಮಾಣದ ಸಕ್ಕರೆ ಇರುವ ಆಹಾರಗಳು
- ಬಾಳೆಹಣ್ಣು
- ಖರ್ಜೂರ
- ದ್ರಾಕ್ಷಿ
- ಕಲ್ಲಂಗಡಿ ಹಣ್ಣು
- ಕಿತ್ತಳೆ ಹಣ್ಣು
- ಕಿತ್ತಳೆ ಹಣ್ಣುಗಳ ರಸ ಸೇವಿಸುವುದನ್ನು ಆದಷ್ಟೂ ಕಡಿಮೆ ಮಾಡಬೇಕು. ಏಕೆಂದರೆ ಇದರಲ್ಲಿ ಕಡಿಮೆ ಫೈಬ್ರೋಸ್ ಇರುತ್ತದೆ
- ಶುಷ್ಕ ಫಲ, ಒಣ ಹಣ್ಣುಗಳು ಮತ್ತು ಕೇನ್ಡ್ ಹಣ್ಣುಗಳು
ಸೇವಿಸಬಾರದ ಆಹಾರಗಳು
- ಪ್ರಾಣಿಜನ್ಯ ಉತ್ಪನ್ನಗಳು : ಕೆಂಪು ಮಾಂಸ, ಕೋಳಿ, ಮೀನು, ಎಲ್ಲ ಡೇರಿ ಉತ್ಪನ್ನಗಳು ಮತ್ತು ಮೊಟ್ಟೆಗಳು
- ಅಧಿಕ ಕೊಬ್ಬಿನ ಅಂಶವಿರುವ ವೆಜಿಟೆಬಲ್ ಆಯಿಲ್ ಮತ್ತು ಅಧಿಕ ಕೊಬ್ಬಿನ ಪದಾರ್ಥಗಳು
- ಅಧಿಕ-ಗ್ಲೈಸಿಮಿಕ್ ಆಹಾರಗಳು : ಅಧಿಕ ಪ್ರಮಾಣದಲ್ಲಿ ಗ್ಲೈಸಿಮಿಕ್ ಆಹಾರಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕ್ಷಿಪ್ರವಾಗಿ ಹೆಚ್ಚಾಗುತ್ತದೆ.
ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com