Vydyaloka

ಕಣ್ಣಿನ ದೋಷ : ನಾರಾಯಣ ನೇತ್ರಾಲಯದಲ್ಲಿ ಲೇಸರ್ ದೃಷ್ಟಿ ತಿದ್ದುಪಡಿ ಚಿಕಿತ್ಸೆ

  ವಿಶ್ವದಲ್ಲಿ ಕಣ್ಣಿನ ಅಸಹಜತೆಗಳಾಗಿ ಕಂಡು ಬರುವ ಕಣ್ಣಿನ ಸಮಸ್ಯೆಗಳೆಲ್ಲವೂ, ಕಣ್ಣು ಗುಡ್ಡೆಯ ಅಳತೆಯಲ್ಲಿ (ಚಿಕ್ಕ ಅಥವಾ ದೊಡ್ಡ ಪ್ರಮಾಣದಲ್ಲಿ), ಕಾರ್ನಿಯಾದ ಆಕಾರದಲ್ಲಿ, ವಯಸ್ಸಿಗೆ ಸಂಬಂಧಿಸಿದಂತೆ ಮಸೂರದಲ್ಲಿ ಉಂಟಾಗುವ ಬದಲಾವಣೆ ಮುಂತಾದ ಕಾರಣಗಳಿಂದ ಬರುತ್ತದೆ.
ಒಂದು ಸಾಮಾನ್ಯ, ಆರೋಗ್ಯಕರ ಕಣ್ಣಿನಲ್ಲಿ, ಕಾರ್ನಿಯಾ ಮತ್ತು ಮಸೂರವು ಸರ್ವ ದಿಕ್ಕಿನಲ್ಲೂ ಸಮತೋಲನವಾಗಿ ಆರಡಿ ಬೆಳಕಿನ ಕಿರಣಗಳು, ಬೆಳಕಿಗೆ ಸೂಕ್ಷ್ಮವಾದ ಹಾಗೂ ಕಣ್ಣಿಗೆ ಹಿಂಭಾಗವಾದ ಅಕ್ಷಿಪಟಲದ ಮೇಲೆ ಸ್ಪಷ್ಟವಾಗಿ ಕೇಂದ್ರೀಕರಿಸುವಲ್ಲಿ ನೆರವಾಗುತ್ತದೆ. ಈ ವ್ಯವಸ್ಥೆಯು ಮೆದುಳು ಸ್ಪಷ್ಟವಾದ ಚಿತ್ರಗಳನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ. ವಕ್ರೀಕಾರಕ ದೋಷವಿರುವ ಕಣ್ಣಿನಲ್ಲಿ, ಅನಿಯಮಿತ ಆಕಾರದ ಕಾರ್ನಿಯಾ ಅಥವಾ ಮಸೂರವು, ಬೆಳಕಿನ ಕಿರಣವು ಅಕ್ಷಿಪಟಲದ ಮೇಲೆ ಸರಿಯಾಗಿ ಕೇಂದ್ರೀಕರಿಸುವುದನ್ನು ತಡೆಗಟ್ಟಿ ಮಸುಕು ದೃಷ್ಟಿ ಉಂಟಾಗಲು ಕಾರಣವಾಗುತ್ತದೆ.
ವಕ್ರೀಕಾರಕ ದೋಷವನ್ನು ಮೈಯೋಪಿಯಾ (ಹತ್ತಿರ/ಸಮೀಪ ದೃಷ್ಟಿ), ಹೈಪೆರೋಪಿಯಾ (ದೂರ ದೃಷ್ಟಿ), ಪ್ರೆಸ್ಸ್ಬಯೋಪಿಯಾ (ವಯಸ್ಸಿಗೆ ಸಂಬಂಧಿಸಿದ ದೃಷ್ಟಿ ಬದಲಾವಣೆ) ಹಾಗೂ ಆಸ್ಟಿಗ್ಮ್ಯಾಟಿಸಂ ಎಂಬ ನಾಲ್ಕು ಮುಖ್ಯ ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಪ್ರೆಸ್ಸ್ಬಯೋಪಿಯಾ 40 ವರ್ಷಕ್ಕೂ ಮೇಲ್ಪಟ್ಟ ವಯಸ್ಕರನ್ನು ಒಳಗೊಂಡಿದ್ದರೆ, ಇನ್ನಿತರ ವಕ್ರೀಕಾರಕ ದೋಷಗಳು ಮಕ್ಕಳು ಮತ್ತು ವಯಸ್ಕರಿಗೂ ಬಂದೊದಗುತ್ತದೆ. ವಕ್ರೀಕಾರಕ ದೋಷವನ್ನು ಸರಿಪಡಿಸದಿದ್ದಲ್ಲಿ, ಅದು ಒಂದು ಕಣ್ಣಿನ ಅಥವಾ ಎರಡೂ ಕಣ್ಣಿನ ದೃಷ್ಟಿ ಇಳಿಕೆಗೆ ಕಾರಣವಾಗಬಹುದು. ಈ ಸಮಸ್ಯೆ ರೋಗದ ತೀವ್ರತೆಯನ್ನೇ ಅವಲಂಬಿಸಿದ್ದು, ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ನಾರಾಯಣ ನೇತ್ರಾಲಯದ ಅಧ್ಯಕ್ಷರಾದಂತಹ ಡಾಕ್ಟರ್ ಭುಜಂಗ ಶೆಟ್ಟಿ ಅವರು ತಿಳಿಸುವಂತೆ, ವಕ್ರೀಕಾರಕ ದೋಷವನ್ನು ಸರಿಪಡಿಸಿಕೊಂಡ ರೋಗಿಗಳ ದೃಷ್ಟಿಯ ಗುಣಮಟ್ಟ ಉತ್ತಮವಾಗಿರುತ್ತದೆ. ಹಾಗೆಯೇ ಅವರ ಜೀವನದ ಗುಣಮಟ್ಟವು ಸಹ ಸುಧಾರಿತವಾಗಿರುತ್ತದೆ. ಹಿಂದಿನ ದಿನಗಳಲ್ಲಿ ಈ ವಕ್ರೀಕಾರಕ ದೋಷದ ಸಮಸ್ಯೆಗೆ ಕನ್ನಡಕ, ಕಾಂಟಾಕ್ಟ್ ಲೆನ್ಸ್ ಮುಂತಾದ ದೋಷ ಪರಿಹಾರಕ ಮಸೂರಗಳನ್ನು ಬಿಟ್ಟರೆ ಇತರ ಪರಿಹಾರಗಳು ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಜನರ ಅನನ್ಯ ಆಯ್ಕೆಯಾಗಿರುವ ವಕ್ರೀಕಾರಕ ಶಸ್ತ್ರ ಚಿಕಿತ್ಸೆಗಳಿಂದ ರೋಗಿಗಳು ದೋಷ ಪರಿಹಾರಕ ವಸ್ತುಗಳನ್ನು ಬಳಸಬೇಕಾದ ಅಗತ್ಯ, ಕ್ರಮೇಣ ಕಡಿಮೆಯಾಗಿದೆ. ಪ್ರಚಂಡ ಪ್ರಗತಿ ಹೊಂದಿರುವ ಶಸ್ತ್ರ ಚಿಕಿತ್ಸಾ ತಂತ್ರಗಳು, ಉಪಕರಣಗಳು ಮತ್ತು ಕಾರ್ಯ ವಿಧಾನಗಳಿಂದಾಗಿ ವಕ್ರೀಕಾರಕ ದೋಷ – ಶಸ್ತ್ರ ಚಿಕಿತ್ಸೆಯು ಒಂದು ಸುರಕ್ಷಿತವಾದ, ಪರಿಣಾಮಕಾರಿಯಾದ ಮತ್ತು ವಿಶ್ವಾಸಾರ್ಹವಾದ ದೃಷ್ಟಿ ತಿದ್ದುಪಡಿ ವಿಧಾನವಾಗಿ ಅಭಿವೃದ್ಧಿಗೊಂಡು, ಕೆಲವೇ ತೊಡಕುಗಳು ಬರುವ ಸಾಧ್ಯತೆಗಳನ್ನು ಮಾತ್ರ ಹೊಂದಿರುತ್ತದೆ.

ವಕ್ರೀಕಾರಕ ಕಾರ್ನಿಯಾದ ಶಸ್ತ್ರ ಚಿಕಿತ್ಸೆ ಹಾಗೂ ವಕ್ರೀಕಾರಕ ಮಸೂರದ ಶಸ್ತ್ರಚಿಕಿತ್ಸೆ ಇವೆರೆಡೂ, ವಕ್ರೀಕಾರಣ ದೋಷವನ್ನು ಸದ್ಯಕ್ಕೆ ಲಭ್ಯವಿರುವ ಶಸ್ತ್ರ ಚಿಕಿತ್ಸಾ ವಿಧಾನಗಳು, ವಕ್ರೀಕಾರಕ ಕಾರ್ನಿಯಾದ ಶಸ್ತ್ರ ಚಿಕಿತ್ಸಾ ವಿಧಾನದಲ್ಲಿ, ಎಗ್ಸೈಮರ್ ಲೇಸರ್ ತಂತ್ರ ಮತ್ತು ಶಸ್ತ್ರ ಚಿಕಿತ್ಸಾ ವಿಧಾನದ ನೆರವಿನೊಂದಿಗೆ ಕಾರ್ನಿಯಾವನ್ನು ತಿದ್ದುಪಡಿಸಿ ಕಣ್ಣಿನ ಹಿಂಭಾಗದಲ್ಲಿರುವ ಅಕ್ಷಿಪಟಲದಲ್ಲಿ ಬೆಳಕನ್ನು ಕೇಂದ್ರೀಕರಿಸಲು ಶಕ್ತಗೊಳಿಸಲಾಗುತ್ತದೆ. ವಕ್ರೀಕಾರಕ ಮಸೂರದ ಶಸ್ತ್ರ ಚಿಕಿತ್ಸೆಯಲ್ಲಿ ಫಾಕಿಕ್ ಇಂಟ್ರಾಕ್ಯುಲರ್ ಮಸೂರಗಳು ಅಥವಾ PIಔಐ ಮತ್ತು ವೈಕ್ರೀಕಾರಕ ಮಸೂರ ಬದಲಾವಣೆ ವಿಧಾನಗಳನ್ನು ಬಳಸಿ ಬೆಳಕಿನ ಕಿರಣಗಳನ್ನು ಮತ್ತೆ ಕೇಂದ್ರೀಕರಿಸುವುದರ ಮೂಲಕ ದೃಷ್ಟಿಯನ್ನು ತೀಕ್ಷ್ಣಗೊಳಿಸಲಾಗುತ್ತದೆ.
ಲೇಸರ್ ದೃಷ್ಟಿ ತಿದ್ದುಪಡಿ ವಿಧಾನದ ಮುಖೇನ ನಿಮ್ಮ ಕನ್ನಡಕ ಹಾಗೂ ಕಾಂಟಾಕ್ಟ್ ಮಸೂರದ ಮೇಲೆ ಅವಲಂಬಿತ ಬದುಕನ್ನು ಕೂಡಲೇ ಬದಲಿಸಿ ಲೇಸರ್ ಶಸ್ತ್ರ ಚಿಕಿತ್ಸೆಯಲ್ಲಿ ಪೂರ್ಣಾನುಭವನ್ನು ಗಳಿಸಿರುವ ಶಸ್ತ್ರ ವೈದ್ಯರಿಂದ ದೃಷ್ಟಿ ತಿದ್ದುಪಡಿ, ನುರಿತ ರೋಗ ಶೋಧನಾ ಉಪಕರಣಗಳು, ಅತ್ಯಾಧುನಿಕ ಆವಿಷ್ಕಾರಗಳಿಂದಾದ ಆಪರೇಷನ್ ಥಿಯೇಟರ್, ಅತಿ ನೆಚ್ಚಿನ ಚಿಕಿತ್ಸಾ ತರುವಾಯದ ಆರೈಕೆ, ಇಂತಹ ಶ್ರೇಷ್ಠ ಗುಣಮಟ್ಟದ ಕಾರಣಗಳಿಂದ ನಾರಾಯಣ ನೇತ್ರಾಲಯವು ನಿಮ್ಮ ಕಣ್ಣಿನ ಲೇಸರ್ ಚಿಕಿತ್ಸೆಗೆ ಸೂಕ್ತವೆಂದೆನಿಸಿ ಕೊಂಡಿದೆ. ತೊಡಕಿನಿಂದಾದ ಅನಿಯಮಿತ ಕಾರ್ನಿಯಾ ಮತ್ತು ಸಂಕೀರ್ಣವಾದ ಸಮಸ್ಯೆ ಹೊಂದಿದ ರೋಗಿಗಳ ಚಿಕಿತ್ಸೆ ನಿಭಾಯಿಸುವಲ್ಲಿ 15 ವರ್ಷದ ವ್ಯವಹಾರ ಕೌಶಲತೆ ನಮ್ಮದು. ನಾರಾಯಣ ನೇತ್ರಾಲಯದ ಉಪ ಅಧ್ಯಕ್ಷರು ಹಾಗೂ ಕಾರ್ನಿಯಾ ಮತ್ತು ವಕ್ರೀಕಾರಕ ಶಸ್ತ್ರಜ್ಞರಾದ ಡಾಕ್ಟರ್ ರೋಹಿತ್ ಶೆಟ್ಟಿ ಅವರು ಹೇಳುವಂತೆ, ಪ್ರತಿಯೊಬ್ಬ ರೋಗಿಯ ದೃಷ್ಟಿ ತಿದ್ದುಪಡಿ ವಿಧಾನವು ಬೇರೆ ಬೇರೆ, ಒಬ್ಬರಿಗೆ ಸೂಕ್ತವಾಗುವ ಶಸ್ತ್ರ ಚಿಕಿತ್ಸಾ ವಿಧಾನವು ಮತ್ತೊಬ್ಬರಿಗೂ ಸೂಕ್ತವಾಗುವ ಸಾಧ್ಯತೆ ಕಡಿಮೆ.
ಆಧುನಿಕ ತಂತ್ರಜ್ಞಾನ ಮತ್ತು ಕಾರ್ಯವಿಧಾನಗಳ ಮುಖೇನ ನಮ್ಮ ನಾರಾಯಣ ನೇತ್ರಾಲಯದಲ್ಲಿ ಕಾಂಟೋರ ಲಾಸಿಕ್, ಸ್ಮೈಲ್ ಹಾಗೂ ಪಿಆರ್ಕೆ ಮುಂತಾದ ಸೂಕ್ತ ಕಣ್ಣಿನ ಶಸ್ತ್ರ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಲೇಸರ್ ಸಹಾಯದಿಂದ ಕಾರ್ನಿಯಾವನ್ನು ರೂಪಾಂತರಗೊಳಿಸಿ, ಸ್ಪಷ್ಟವಾದ ದೃಷ್ಟಿಯನ್ನು ಪಡೆಯುವುದಕ್ಕೋಸ್ಕರ ಕೃತಕ ಮಸೂರವನ್ನೂ ಶಸ್ತ್ರ ಚಿಕಿತ್ಸೆಯ ಮೂಲಕ ಅಳವಡಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9845385398 / 080 66121417

Share this: