Vydyaloka

ಕುತ್ತಿಗೆ ಭಾಗ ಕಪ್ಪಾಗಲು ಕಾರಣವೇನು? ತಡೆಯುವುದು ಹೇಗೆ?

ಕುತ್ತಿಗೆ ಭಾಗ ಕಪ್ಪಾಗಲು ಹಲವು ಕಾರಣಗಳು. ನಮ್ಮಲ್ಲಿ ಬಹುತೇಕ ಮಂದಿ ಮುಖವನ್ನು ಸ್ವಚ್ಚಗೊಳಿಸುವಾಗ ಕುತ್ತಿಗೆ ಭಾಗದ ಸ್ವಚ್ಚತೆಯನ್ನು ಕಡೆಗಣಿಸುತ್ತಾರೆ. ನಿರ್ಲಕ್ಷ್ಯ ಮುಂದುವರೆದಂತೆ ಕುತ್ತಿಗೆ ಚರ್ಮವು ಮುನ್ನವೇ ವೃದ್ದಾಪ್ಯಕ್ಕೆ ಎಡೆ ಮಾಡಿಕೊಡುತ್ತದೆ.
ಕುತ್ತಿಗೆ ಭಾಗ ಕಪ್ಪಾಗಲು ಕಾರಣವೇನು? ತಡೆಯುವುದು ಹೇಗೆ?
ಕತ್ತು ಅಥವಾ ಕುತ್ತಿಗೆ ದೇಹದಲ್ಲಿ ನಿರ್ಲಕ್ಷಕ್ಕೆ ಒಳಗಾದ ಭಾಗಗಳಲ್ಲಿ ಒಂದು. ನಮ್ಮಲ್ಲಿ ಬಹುತೇಕ ಮಂದಿ ಮುಖವನ್ನು ಸ್ವಚ್ಚಗೊಳಿಸುವಾಗ ಕುತ್ತಿಗೆ ಭಾಗದ ಸ್ವಚ್ಚತೆಯನ್ನು ಕಡೆಗಣಿಸುತ್ತಾರೆ. ಇದರಿಂದಾಗಿ ಕತ್ತಿನ ಭಾಗದಲ್ಲಿ ಕೊಳೆ ಸಂಗ್ರಹಗೊಂಡು ಕುತ್ತಿಗೆಯ ಚರ್ಮ ಕಪ್ಪಾಗಿ ಕಾಣುತ್ತದೆ. ಕುತ್ತಿಗೆ ಪ್ರದೇಶದಲ್ಲಿ ಸೆಬಾಷಿಯಸ್ ಗ್ರಂಥಿಯ ಕೊರತೆ ಇದ್ದು, ಈ ಜಾಗ ವೃದ್ದಾಪ್ಯದ ಮೊದಲ ಚಿಹ್ನೆಯನ್ನು ತೋರ್ಪಡಿಸುವ ಸ್ಥಳವಾಗಿದೆ. ಇದೇ ರೀತಿ ನಿರ್ಲಕ್ಷ್ಯ ಮುಂದುವರೆದಂತೆ ಕುತ್ತಿಗೆ ಚರ್ಮವು ಮುನ್ನವೇ ವೃದ್ದಾಪ್ಯಕ್ಕೆ ಎಡೆ ಮಾಡಿಕೊಡುತ್ತದೆ.
ಕತ್ತಿನ ಭಾಗ ಕಪ್ಪಾಗಲು ಕಾರಣಗಳು:

1. ಚರ್ಮದ ಸಹಜ ಬಣ್ಣ, ಕಲೆಗಳು.

2. ನಿಮ್ಮ ಚರ್ಮದ ಮೇಲ್ಮೈ ಮೇಲೆ ಮೃತ ಕೋಶಗಳು ಗಟ್ಟಿಯಾಗಿ ಹಿಡಿದುಕೊಂಡಿರುವಿಕೆ.

3. ಮಾಲಿನ್ಯಕ್ಕೆ ಕುತ್ತಿಗೆ ಭಾಗ ತೆರೆದುಕೊಳ್ಳುವಿಕೆ.

4. ಕುತ್ತಿಗೆ ಭಾಗದ ಆರೈಕೆ ನಿರ್ಲಕ್ಷ್ಯ.

5. ಕತ್ತಿನ ಸುತ್ತ ಯಾವಾಗಲೂ ಆಭರಣಗಳನ್ನು ಧರಿಸುವುದರಿಂದ ಉಂಟಾಗುವ ಚರ್ಮದ ಅಲರ್ಜಿ.

6. ಗಂಧಕ ಹೊಂದಿರುವ ಸಾಬೂನು ಬಳಕೆ.

ಸೇವಿಸಬೇಕಾದ ಆಹಾರ:

1. ತುಂಬಾ ಮುಖ್ಯವಾದ ಉಪಶಮನವೆಂದರೆ ಇಡೀ ದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಪ್ರತಿ ನಿತ್ಯ ಕನಿಷ್ಠ 10-12 ಲೋಟಗಳಷ್ಟು ನೀರು ಕುಡಿಯಬೇಕು.

2. ನಿಮ್ಮ ಆಹಾರದಲ್ಲಿ ಎಲ್ಲಾ ರೀತಿಯ ಧಾನ್ಯಗಳು, ಕಾಳುಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳು ಇರಲಿ.

3. ವಿಟಮಿನ್ ಸಿ ಮೆಲನಿನ್ ರೂಪುಗೊಳ್ಳುವ ಪ್ರಕ್ರಿಯೆಯನ್ನು ತಡೆಗಟ್ಟುತ್ತದೆ. ಅಧಿಕ ಪ್ರಮಾಣದಲ್ಲಿ ಟೊಮೊಟೋ, ಕಿತ್ತಳೆ, ನಿಂಬೆ ಸೇವಿಸಿ.

4. ಕೆಂಪು ಮತ್ತು ಹಳದಿ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಸೊಪ್ಪುಗಳು ಒಳ್ಳೆಯದು. ಕ್ಯಾರೆಟ್, ಮಾವಿನಹಣ್ಣು, ಕೆಂಪು ಮತ್ತು ಹಳದಿ ಟೊಮೊಟೋ, ಪಪ್ಪಾಯಿ, ಗೆಣಸು, ಕುಂಬಳಕಾಯಿ, ಪಾಲಕ ಸೊಪ್ಪು ಚರ್ಮ ಆರೋಗ್ಯಕ್ಕೆ ಉತ್ತಮ.

5. ಮೊಳೆಕೆ ಕಾಳುಗಳಲ್ಲಿ ಅಗತ್ಯ ಕಿಣ್ವಗಳು, ವಿಟಮಿನ್ ಸಿ ಮತ್ತು ಪ್ರೊಟೀನ್‍ಗಳ ಸಮೃದ್ದ ಮೂಲವಿದ್ದು, ಇವು ದೇಹ ಸಮರ್ಪಕವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಹಾಗೂ ಇದರಿಂದ ಚರ್ಮದ ಆರೋಗ್ಯಕ್ಕೆ ಕೊಡುಗೆ ಲಭಿಸುತ್ತದೆ.

ಬಾಹ್ಯ ಲೇಪನ:
1.ಅಲೋವೆರಾ (ಲೊಳೆರಸ) ಜೆಲ್ ಮತ್ತು ನಿಂಬೆರಸ (ರಾತ್ರಿ ವೇಳೆ) ಕಲೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿ.

2. ಟೊಮೊಟೊ ರಸ್ ಮತ್ತು ನಿಂಬೆ ರಸವನ್ನು 3:1 ಅನುಪಾತದಲ್ಲಿ ಮಿಶ್ರಣ ಮಾಡಿ ಹತ್ತಿ ಉಂಡೆಯಿಂದ ನಿಮ್ಮ ಚರ್ಮಕ್ಕೆ ಲೇಪಿಸಿ. 20 ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

3. ನಿಂಬೆ ರಸ ಮತ್ತು ಅರಿಶಿಣ ಪುಡಿಯೊಂದಿಗೆ ಸ್ವಲ್ಪ ಉಪ್ಪು ಮಿಶ್ರಣ ಮಡಿ ನಿಮ್ಮ ಕುತ್ತಿಗೆಗೆ ಹಚ್ಚಿ.

4. ಸೌತೆಕಾಯಿ ಮತ್ತು ನಿಂಬೆ ರಸದ ತಾಜಾ ಕ್ರಿಮ್ ಮಿಶ್ರಣವನ್ನು ನಿಮ್ಮ ಕುತ್ತಿಗೆಗೆ 15 ನಿಮಿಷಗಳ ಕಾಲ ಹಚ್ಚುವುದರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ.

5. ಹಾಲು ಅತ್ಯುತ್ತಮ ಶುಭ್ರಕ. ಪುಡಿ ಮಾಡಿದ ಸ್ಟ್ರಾಬೆರ್ರಿಗಳನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಶುಭ್ರಕವಾಗಿ ಬಳಸಬಹುದು. ಸ್ಟ್ರಾಬೆರ್ರಿ ಉತ್ತಮ ಆಂಟಿಆಕ್ಸಿಡೆಂಟ್‍ಗಳನ್ನು ಒಳಗೊಂಡಿರುವುದರಿಂದ ಇದು ಮೃತ ಕೋಶಗಳನ್ನು ತೆಗೆದು ಹಾಕಿ ನಿಮ್ಮ ಚರ್ಮವನ್ನು ಬಿಗಿಗೊಳಿಸುತ್ತದೆ.

6. ಮೆಂತ್ಯ ರಸವನ್ನು ಬೇಸನ್‍ನೊಂದಿಗೆ ಮಿಶ್ರಣ ಮಾಡಿ ನಿಮ್ಮ ಕತ್ತಿಗೆ ಲೇಪಿಸಿಕೊಳ್ಳಿ. 15-20 ನಿಮಿಷ ಬಿಟ್ಟು ತೊಳೆಯಿರಿ.

7. ರೋಸ್ ವಾಟರ್‍ನೊಂದಿಗೆ ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ನಿಮ್ಮ ಕತ್ತಿನ ಭಾಗಕ್ಕೆ ಲೇಪಿಸಿ, 15 ನಿಮಿಷಗಳ ನಂತರ ತೊಳೆಯಿರಿ.

ತಪ್ಪಿಸಬೇಕಾದುದು:

1. ಕಾಫಿ, ಟೀ ಇತ್ಯಾದಿ ಸೇವನೆಯನ್ನು ತಪ್ಪಿಸಿ.

2. ಸಂಸ್ಕರಿತ ಮತ್ತು ಎಣ್ಣೆಯುಕ್ತ ಆಹಾರಗಳನ್ನು ವಿಪರೀತವಾಗಿ ಸೇವಿಸುವುದನ್ನು ತಪ್ಪಿಸಿ.

3. ಗಾಳಿ ತುಂಬಿಸಿದ ಪಾನೀಯಗಳ ಸೇವನೆಯನ್ನು ನಿಯಂತ್ರಿಸಿ

ಯೋಗಾಸನಗಳು, ಪ್ರಾಣಾಯಾಮ ಮತ್ತು ಕುತ್ತಿಗೆ ವ್ಯಾಯಾಮಗಳನ್ನು ಕ್ರಮಬದ್ದವಾಗಿ ಮಾಡುವುದರಿಂದ ಉತ್ತಮ ಮತ್ತು ಕ್ಷಿಪ್ರ ಫಲಿತಾಂಶ ಲಭಿಸುತ್ತದೆ. ಬಿಸಿ ನೀರಿನಲ್ಲಿ ಅದ್ದಿದ ಟವಲ್‍ನಿಂದ ಹಬೆ ಪಡೆದು ನಿಮ್ಮ ಕತ್ತಿನ ಸುತ್ತ 2 ನಿಮಿಷಗಳ ಕಾಲ ಸುತ್ತುರುವುದರಿಂದ ಚರ್ಮದ ಗಾಢ ವರ್ಣವನ್ನು ತಿಳಿಗೊಳಿಸುವುದಲ್ಲದೇ ನಿಮ್ಮ ಕತ್ತಿನ ಸುತ್ತ ಇರುವ ಕೊಬ್ಬನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆ. (ಸೂಚನೆ : ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳು ಈ ಚಿಕಿತ್ಸೆಯನ್ನು ಉಪಯೋಗಿಸಬಾರದು. ಇಂಟ್ರಾಅಕ್ಯುಲರ್ ಒತ್ತಡವನ್ನು ಇದು ಹೆಚ್ಚು ಮಾಡುತ್ತದೆ.)
ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್
ನಂ.222, 2ನ `ಇ’ ಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರನಗರ,
ಬೆಂಗಳೂರು – 560 079,  ಮೊ: 9480334750
Share this: