ಕಾರ್ಪೊರೇಟ್ ಉದ್ಯೋಗಿ ಸಂತೋಷ್ ಕುಮಾರ್ ಅವರು ಜಸ್ಟ್‌ಡೆಂಟಲ್ ಮೂಲಕ ದಂತ ಆರೋಗ್ಯ ಆರೈಕೆ ಮತ್ತು ಅವರ ಸಮಸ್ಯೆ ನಡುವಣ ಅಂತರಕ್ಕೆ ಸೇತುಸಂಪರ್ಕ ಕಲ್ಪಿಸಿದ್ದಾರೆ.
JUSTDENTAL ಎಂದರೇನು?
ಜಸ್ಟ್‌ಡೆಂಟಲ್ ಇದೊಂದು ಪ್ರಾಕ್ಟಿಸ್ ಮ್ಯಾನೇಜ್‌ಮೆಂಟ್ ಕಂಪನಿ. ಇದು ಮೌಖಿಕ ಆರೋಗ್ಯಕ್ಕಾಗಿ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿರುವ ಸಂಸ್ಥೆ. ರೋಗಿಗಳು ಮತ್ತು ದಂತವೈದ್ಯರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ. ಇದು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡೆಂಟಲ್ ಕ್ಲಿನಿಕ್ ನೆಟ್‌ವರ್ಕ್. ಬೆಂಗಳೂರಿನಲ್ಲಿ 65 ಜಸ್ಟ್‌ಡೆಂಟಲ್ ಕ್ಲಿನಿಕ್‌ಗಳಿವೆ. ನಾವು ನಮ್ಮ ಜಾಲವನ್ನು ಮತ್ತಷ್ಟು ವಿಸ್ತರಿಸಿ ಭಾರತದ ಇಡೀ ಜನಸಂಖ್ಯೆಗೆ ದಂತ ಚಿಕಿತ್ಸಾ ಸೌಲಭ್ಯವು ಕೈಗೆಟುಕುವ ದರದಲ್ಲಿ ಮತ್ತು ಸುಲಭವಾಗಿ ಲಭಿಸುವಂತಾಬೇಕೆಂಬುದು ನಮ್ಮ ದೃಷ್ಟಿಕೋನ.
ಜಸ್ಟ್‌ಡೆಂಟಲ್‌ನಿಂದ ಒದಗಿಸಲಾಗುತ್ತಿರುವ ಸೇವೆಗಳ ಬಗ್ಗೆ ನಮ್ಮ ಓದುಗರಿಗೆ ತಿಳಿಸಿ.
ರೋಗಿಗಳಿಗೆ: ಇದು ರೋಗಿಗಳಿಗೆ ಹತ್ತಿರದ ಬಡಾವಣೆಯಲ್ಲಿ ಸಮೀಪದ ದಂತ ತಜ್ಞರನ್ನು ಸಂಪರ್ಕಿಸಲು ಅವಕಾಶ ನೀಡುತ್ತದೆ. ಸಂದರ್ಶನ, ಔಷಧಿಗಳ ಸಲಹೆ, ವೈದ್ಯಕೀಯ ದಾಖಲೆಗಳ ಇತ್ಯಾದಿ ನಿರ್ವಹಣೆಗಾಗಿ ಒಂದು ಮೊಬೈಲ್ ಆಪ್ ವ್ಯವಸ್ಥೆ ಇದೆ. ಹಾಗೂ 100ಕ್ಕೂ ಹೆಚ್ಚು ಪ್ರಸಿದ್ಧ ದಂತ ತಜ್ಞರನ್ನು ಸಂಪರ್ಕಿಸಲು ಸೇವೆ ಒದಗಿಸುತ್ತದೆ. ಚಿಕಿತ್ಸೆಗಾಗಿ ತನ್ನ ನ್ಯಾಯಸಮ್ಮತ ಮತ್ತು ಪಾರದರ್ಶಕ ದರಕ್ಕಾಗಿ ಇದು ಮೆಚ್ಚುಗೆ ಗಳಿಸಿದೆ. ಜಸ್ಟ್‌ಡೆಂಟಲ್, ಶಾಲಾ ಮಕ್ಕಳು ಮೊದಲಾದವರಿಗೆ ಅಗಾಗ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಹ ನಡೆಸುತ್ತದೆ.
ದಂತ ವೈದ್ಯರಿಗೆ : ದಂತ ವೈದ್ಯರು ಮತ್ತು ತಜ್ಞರಿಗೂ ಸಹ ಜಸ್ಟ್‌ಡೆಂಟಲ್ ಅಗತ್ಯವಾದ ಎಲ್ಲ ಸಹಕಾರ ಮತ್ತು ನೆರವು ನೀಡುತ್ತದೆ. ಅವರಿಗೆ ಪ್ರಾಕ್ಟಿಸ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್, ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್, ದಂತಶಾಸ್ತ್ರ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಹೊಸ ಅನ್ವೇಷಣೆಗಳೊಂದಿಗೆ ಅವರನ್ನು ಸಜ್ಜುಗೊಳಿಸುತ್ತದೆ. ಅತ್ಯುತ್ತಮ ದಂತಚಿಕಿತ್ಸಾ ಸಾಮಗ್ರಿಗಳು ಮತ್ತು ಸಾಧನ-ಸಲಕರಣೆಗಳು ಹಾಗು ಪರಿಣಾಮಕಾರಿ ದಂತ ಪ್ರಯೋಗಾಲಯ ಸೇವೆಗಳನ್ನು ಪೂರೈಸಲು ಸಹ ಜಸ್ಟ್‌ಡೆಂಟಲ್ ಸಹಾಯ ಮಾಡುತ್ತದೆ.
ಈ ಉದ್ಯಮದಲ್ಲಿ ತೊಡಗಲು ನೀವು ನಿರ್ಧರಿಸಿದ್ದು ಯಾವಾಗ?
ನಾನು ಅಕ್ಸೆಂಚರ್, ಟಿಸಿಎಸ್‌ನಂಥ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಿದ್ದೇನೆ ಮತ್ತು ಕಾರ್ಪೊರೇಟ್ ರಂಗ ನನ್ನ ಕೊನೆಯ ಉದ್ಯೋಗ. ನಾನು ಕ್ವಿಂಟಿಲೆಸ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹಿರಿಯ ನಿರ್ದೇಶಕನಾಗಿದ್ದೆ (ಅದು ಈಗ ಐಕ್ಯೂವಯಾ). ನಾನು ಭಾರತ, ದಕ್ಷಿಣ ಆಫ್ರಿಕ ಮತ್ತು ಚೀನಾಗಾಗಿ ಡೇಟಾ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ನಾನು ಅಲ್ಲಿ ಸುಮಾರು 500 ಜನರನ್ನು ನಿರ್ವಹಿಸುತ್ತಿದ್ದೆ ಮತ್ತು 20 ಅಗ್ರಮಾನ್ಯ ಔಷಧ ತಯಾರಿಕಾ ಸಂಸ್ಥೆಗಳೊಂದಿಗೆ ಕಾರ್ಯ ನಿರ್ವಹಿಸಿದ್ದೇನೆ.
ಕ್ಲಿನಿಕಲ್ ಸಂಶೋಧನೆಯಲ್ಲಿ 15 ವರ್ಷಗಳ ಅನುಭವದ ನನ್ನ ವೃತ್ತಿ ವೇಳೆ, ವಿಶ್ವದ ಅನೇಕ ವೈದ್ಯರೊಂದಿಗೆ ಕಾರ್ಯನಿರ್ವಹಿಸಿದ್ದೇನೆ. ಭಾರತದಲ್ಲಿನ ವೈದ್ಯರು ಪಾಶ್ಚಿಮಾತ್ಯ ವೈದ್ಯರೊಂದಿಗೆ ಸರಿಸಮನರಾಗಿದ್ದಾರೆ ಎಂಬ ಭಾವನೆ ನನಗೆ ಅನಿಸಿತು. ಆದರೆ ಸೂಕ್ತ ಪ್ರಾಕ್ಟಿಸ್‌ನಲ್ಲಿ ಸ್ಥಿರತೆ ಮತ್ತು ಬದ್ಧತೆ ಕೊರತೆ ಇದೆ ಎಂಬ ಅಭಿಪ್ರಾಯ ನನ್ನಲ್ಲಿ ಮೂಡಿತು. ರೋಗಿಗಳಿಗೆ ಸಾಮಾನ್ಯವಾಗಿ ಚಿಕಿತ್ಸೆ ಲಭಿಸುತ್ತದೆ. ಆದರೆ ಅವರಿಗೆ ಮಾಹಿತಿ ಮತ್ತು ಮಾರ್ಗದರ್ಶನದೊಂದಿಗೆ ಸಮರ್ಪಕ ಚಿಕಿತ್ಸೆ ಹಾಗೂ ಅವರ ಅನಾರೋಗ್ಯಕ್ಕಾಗಿ ಮಾಹಿತಿ ಲಭಿಸುವ ಅಗತ್ಯವಿದೆ ಎಂಬ ಸಂಗತಿ ನನ್ನನ್ನು ಕಾಡಲಾರಂಭಿಸಿತು. ಇದರಲ್ಲಿರುವ ದೊಡ್ಡ ಸಮಸ್ಯೆಗಳನ್ನು ನಿಭಾಯಿಸುವ ಮತ್ತು ಲಭಿಸಿದ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಲು ನಾನು ನಿರ್ಧರಿಸಿ ದಿಟ್ಟ ಹೆಜ್ಜೆಯನ್ನಿಟ್ಟೆ. ಅದರ ಫಲಶ್ರುತಿಯೇ ಜಸ್ಟ್‌ಡೆಂಟಲ್.
ಈಗ ವೈದ್ಯರನ್ನು ಹುಡುಕಲು, ಸಂಪರ್ಕಿಸಲು ಮತ್ತು ಸಲಹೆಗಳನ್ನು ಪಡೆಯಲು ಪ್ರಾಕ್ಟೋದಂಥ ಅನೇಕ ಸೌಲಭ್ಯಗಳಿವೆ. ಹೀಗಿರುವಾಗ ಜಸ್ಟ್‌ಡೆಂಟಲ್ ಹೇಗೆ ಭಿನ್ನವಾಗಿದೆ?
ಪ್ರಾಕ್ಟೋ ಮಾದರಿಯಲ್ಲೇ ನಾವು ತಂತ್ರಜ್ಞಾನವನ್ನು ಹೊಂದಿದ್ದರೂ ಸಹ, ನಾವು ಪ್ರಾಕ್ಟೋಗಿಂತ ವಿಭಿನ್ನವಾಗಿದ್ದೇವೆ. ಪ್ರಾಕ್ಟೊ ಒಂದು ರೀತಿಯ ಸರ್ಚ್ ಎಂಜಿನ್‌ನಂತೆ ಕಾರ್ಯನಿರ್ವಹಿಸುತ್ತದೆ. ಅದು ರೋಗಿಗಳು ವೈದ್ಯರನ್ನು ಪತ್ತೆ ಮಾಡಲು ನೆರವಾಗುತ್ತದೆ. ಆದರೆ ಜಸ್ಟ್‌ಡೆಂಟಲ್ ರೋಗಿಗಳು ಮತ್ತು ವೈದ್ಯರಿಗೆ ಸಮಗ್ರ ಸಹಕಾರ ಮತ್ತು ಪರಿಹಾರ ಮಾರ್ಗೋಪಾಯಗಳನ್ನು ಒದಗಿಸುತ್ತದೆ. ನಮ್ಮ ಸೇವೆಗಳು ಕೇವಲ ಡಿಜಿಟಲ್ ಉಪಸ್ಥಿತಿಯನ್ನೂ ಮಾತ್ರ ಸೃಷ್ಟಿಸುವುದಲ್ಲದೇ, ಆರೋಗ್ಯ ಆರೈಕೆ ವ್ಯವಸ್ಥೇಯನ್ನು ಸೃಷ್ಟಿಸುವುದಕ್ಕೂ ಲಭಿಸುತ್ತದೆ. ಇದು ಸಮಗ್ರ, ಪಾರದರ್ಶಕ, ಕೈಗೆಟುಕುವ ದರ ಮತ್ತು ಪ್ರಗತಿಪರ ಪರಿಕಲ್ಪನೆಯಾಗಿದೆ.
ನಿಮ್ಮ ಪ್ರಕಾರ ಈವರೆಗೆ ಜಸ್ಟ್ ಡೆಂಟರ್ ಎಷ್ಟರಮಟ್ಟಿಗೆ ಪ್ರಗತಿ ಸಾಧಿಸಿದೆ?
ಜಸ್ಟ್ ಡೆಂಟಲ್ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವ ಬಗ್ಗೆ ವಿಶ್ವಾಸವಿದೆ. ನವೋದ್ಯಮ ಭಾರತ ಉಪಕ್ರಮದ ಅಡಿ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯಿಂದ ನಮ್ಮನ್ನು ಇತ್ತೀಚೆಗಷ್ಟೇ “ಅನ್ವೇಷಣಾತ್ಮಕ ನವೋದ್ಯಮ” ಎಂದು ಗುರುತಿಸಿ ಮಾನ್ಯತೆ ನೀಡಲಾಗಿದೆ. ನಮ್ಮ ರೋಗಿಗಳು ಮತ್ತು ವೈಧ್ಯರು ಜಸ್ಟ್ ಡೆಂಟಲ್ ಬಗ್ಗೆ ತೋರುತ್ತಿರುವ ಆಸಕ್ತಿ ಮತ್ತು ಅದಕ್ಕೆ ಲಭಿಸುತ್ತಿರುವ ಸ್ಪಂದನೆಗಳು ನಮಗೆ ಅಪಾರ ಸಂತಸ ಉಂಟು ಮಾಡಿವೆ. ಕಳೆದ ಏಳು ತಿಂಗಳಲ್ಲಿ ನಾವು 1,000ಕ್ಕೂ ಹೆಚ್ಚು ಜನರ ಮುಖದಲ್ಲಿ ಮುರುಳನಗೆ ಹೊರಹೊಮ್ಮಿಸುವಲ್ಲಿ ಯಶಸ್ವಿಯಾಗಿದ್ದಾವೆ. ನಮ್ಮ ಕ್ಲಿನಿಕ್‌ಗಳ ಜಾಲವು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಪ್ರಸ್ತುತ ನಾವು ಬೆಂಗಳೂರಿನಲ್ಲಿ 32 ಕ್ಲಿನಿಕ್‌ಗಳನ್ನು ಹೊಂದಿದ್ದೇವೆ. ಮುಂದಿನ 3 ತಿಂಗಳಿನಲ್ಲಿ ನಾವು ಇನ್ನೂ 65 ಕ್ಲಿನಿಕ್‌ಗಳನ್ನು ಆರಂಭಿಸಲಿದ್ದೇವೆ.
ಮುಂದಿನ ವರ್ಷಗಳಲ್ಲಿ ನಿಮ್ಮ ಉದ್ಯಮದ ಭವಿಷ್ಯದ ಯೋಜನೆಗಳೇನು..?
ಪರಿಕಲ್ಪನೆ ಹಂತದಿಂದ ನಾವೀಗ ಅನುಷ್ಠಾನದತ್ತ ದಾಪುಗಾಲು ಹಾಕುತ್ತಿದ್ದೇವೆ. ನಮ್ಮ ಅನುಭವಗಳು ನಮಗೆ ದಾರಿದೀಪವಾಗಿವೆ. ಇನ್ನೂ 65 ಕ್ಲಿನಿಕ್‌ಗಳೊಂದಿಗೆ ಅಕ್ಟೋಬರ್ ವೇಳೆಗೆ ಬೆಂಗಳೂರು ವಿಸ್ತರಣೆಯನ್ನು ಮುಟ್ಟಿ ನಂತರ ಈ ವರ್ಷಾಂತ್ಯದ ವೇಳೆಗೆ ದೆಹಲಿ ಮತ್ತು ಚೆನ್ನೈನಗಳಲ್ಲಿ ನಮ್ಮ ಶಾಖಾ ಕಚೇರಿಗಳನ್ನು ತೆರೆಯುತ್ತೇವೆ. ಮುಂದಿನ ಕೆಲವು ವರ್ಷಗಳಲ್ಲಿ ನಾವು ಭಾರತಾದ್ಯಂತ ಸುಮಾರು 500 ಕ್ಲಿನಿಕ್‌ಗಳನ್ನು ಆರಂಭಿಸುವ ಗುರಿ ಹೊಂದಿದ್ದೇವೆ. ಬಳಿಕ ದೇಶದ ಎಲ್ಲ ಭಾಗಗಳಲ್ಲೂ ಸಾರ್ವಜನಿಕರಿಗೆ ನಮ್ಮ ಕ್ಲಿನಿಕ್ ಜಾಲ ತಲುಪುವಂತೆ ಮಾಡುವುದು ನಮ್ಮ ಹೆಗ್ಗುರಿ.