Vydyaloka

ಜಲನೇತಿ : ಕೋವಿಡ್ ಸೋಂಕಿನಿಂದ ಸಂಪೂರ್ಣ ರಕ್ಷಣೆ ವಿಧಾನ

ಜಲನೇತಿ  ಕೋವಿಡ್ ಸೋಂಕಿನಿಂದ ಸಂಪೂರ್ಣ ರಕ್ಷಣೆ ವಿಧಾನ. ಪ್ರಾಚೀನ ಮತ್ತು ಸಾರ್ವಕಾಲಿಕ ಜ್ಞಾನ “ಯೋಗ”ದ “ಷಟ್ ಕರ್ಮ”ಗಳಲ್ಲಿ “ಜಲನೇತಿ” ಒಂದು. ನಿರಂತರವಾಗಿ “ಜಲನೇತಿ” ಅಭ್ಯಾಸ ಮಾಡಿ, ಕೊರೋನಾದಿಂದ ಆರಂಭಿಕ ಹಂತದಲ್ಲೆ ಸಂಪೂರ್ಣ ರಕ್ಷಣೆ ಪಡೆಯಬಹುದು. ವೈದ್ಯ ಮತ್ತು ವೈದ್ಯಕೀಯ ಸಿಬ್ಬಂದಿಯವರಿಗೆ ವರದಾನವಿದು. 

ಪುಣೆಯ “ದೀನನಾಥ ಮಂಗೇಶ್ಕರ್ ಆಸ್ಪತ್ರೆ” ಕೆಲ ತಿಂಗಳು ಹಿಂದೆ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿತು‌. ಅಲ್ಲಿನ 600 ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ತಿಂಗಳಾನುಗಟ್ಟಲೆ ಪಿ.ಪಿ.ಈ ಕಿಟ್ ನಲ್ಲಿ ತೂರಿಕೊಂಡು ಸೇವೆ ಮಾಡಿದರೂ.. ಸೋಂಕಿತರಾದವರು ಕೇವಲ 22 ಸಿಬ್ಬಂದಿ. ಇನ್ನುಳಿದವರಿಗೆ ಸೋಂಕು ಸುಳಿಯಲೇ ಇಲ್ಲ.

ಅವರೆಲ್ಲರ “ಸೋಂಕು ರಹಿತ” ಸೇವೆಯ ಗುಟ್ಟು “ಜಲನೇತಿ”. ದಿನಕ್ಕೆರಡು ಬಾರಿ ಕೇವಲ ಉಗುರು ಬೆಚ್ಚಗಿನ ನೀರಿನಿಂದ ಜಲನೇತಿ ಮಾಡಿ ಸೋಂಕಿನಿಂದ ಪಾರಾದರು. ಸೋಂಕಿಗೆ ಒಳಗಾದವರು ಜಲನೇತಿ ಮಾಡಿಕೊಳ್ಳದೆ ಇರೋರು ಅಂತಾ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಧನಂಜಯ್ ಕೇಲ್ಕರ್ ತಿಳಿಸಿದ್ದಾರೆ.

ಹೊರಗೆ ಕೆಲಸಕ್ಕೆಂದು ಹೋದವರು ಹಲವು ಜನರ ಜೊತೆ, ಜನಸಂದಣಿ ಜೊತೆ ಒಡನಾಟ ಹೊಂದಿದಾಗ, ಯಾರಿಂದಲಾದರೂ ಸೋಂಕು ಸುಲಭವಾಗಿ ತಗುಲಬಹುದು. ಆದ್ದರಿಂದ ಹೊರಗಿನಿಂದ ಮನೆಯೊಳಗೆ ಬರುವ ಮೊದಲು ಸ್ನಾನ ಮಾಡಿ. ಕೊರೋನಾ ವೈರಸ್ ಕೈ, ಮೈಗೆ ಅಂಟಿಕೊಂಡಿದ್ದರೆ ಸೋಪಿನಿಂದ ತೊಳೆದು ಸುಲಭವಾಗಿ ಕೊಲ್ಲಬಹುದು.

ಇನ್ನೂ ನಮ್ಮ ಅಜಾಗರೂಕ ಕಾರಣದಿಂದ ಮುಖಕ್ಕೆ ಹಾಕಿದ ಮಾಸ್ಕ ಕೊಡ ವೈರಸನ್ನು ಸಂಪೂರ್ಣವಾಗಿ ತಡೆ ಹಿಡಿಯದು‌. ಏಕೇಂದರೆ ನಾವು ಜನರಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವುದಲ್ಲಿ ಸೋತಿರುತ್ತೆವೆ.

“ಜಲನೇತಿ”- ಕೋವಿಡ್ನೀಂದ ರಕ್ಷಣೆ:

ಆವಾಗಲೇ..
ಕೋವಿಡ್ ವೈರಸ್ ಮೂಗಿನ ಹೂಳ್ಳೆಯ ಮೂಲಕ, ಗಂಟಲು ದಾಟಿ, ಪುಪ್ಪುಸ ಹೊಕ್ಕು ದೇಹ ಸೇರುತ್ತೇ. ಮೊದಲ ಮೂರು ದಿನ ಮೂಗಿನ ಹೊಳ್ಳೆಯಲ್ಲಿ ವಸಾಹತು ನಿರ್ಮಿಸಿ ಇಮ್ಮಡಿಗೊಂಡು, ಮಾರಕವಾಗಿ ಪುಪ್ಪುಸವನ್ನು ಮತ್ತು ದೇಹದೊಳಗೆ ಆಕ್ರಮಣ ಮಾಡಲು ಸಜ್ಜಾಗುತ್ತೆ. ಆ ಮೂರು ದಿನಗಳಲ್ಲಿ ಮೂಗಿನ ಹೊಳ್ಳೆಗಳನ್ನ “ಜಲನೇತಿ” ಮೂಲಕ ಸ್ವಚ್ಚಗೊಳಿಸಿಕೊಳ್ಳುತ್ತಲೆ ಇದ್ದರೆ “ವೈರಸ್” ದೇಹದಿಂದ ಆದಷ್ಟು ಹೊರದೊಡಲ್ಪಟ್ಟು “ವೈರಸ್ ಲೋಡ್” ಕಡಿಮೆಯಾಗತ್ತೆ.

ದೇಹ ಸೋಂಕಿನಿಂದ ಪಾರಾಗಬಹುದು ಅಥವಾ ಅತಿ ಕಡಿಮೆ ತೊಂದರೆ ಕಾಣಿಸಿಕೊಳ್ಳಬಹುದು. ವೈರಸ್ ಕಣ್ಣಿನಲ್ಲಿ ಸೇರಿದರೂ Nasolacrimal duct (ಕಣ್ಣು-ಮೂಗಿನ ನಡುವಿನ ಸಂಚಾರ ಮಾರ್ಗ) ಮೂಲಕ ಮೂಗು ಸೇರುವುದು. ಕೈ, ಮೈಗೆ ಅಂಟಿದ್ದರೆ “ಸುಲಭವಾಗಿ ಸ್ವಚ್ಚಗೊಳಿಸಿಕೊಳ್ಳಬಹುದು, ಮೂಗಿನಿಂದ ಹೋಗಲಾಗುಡಿಸುವುದು ಜಟಿಲ ಸಮಸ್ಯೆ. ಪರಿಹಾರ ಅಂತಿರೋದು “ಜಲನೇತಿ” ಮಾತ್ರ ಒಂದೆ. ಜಲನೇತಿಯನ್ನು Nasopharyngeal wash ಎಂದು ಸಹ ಕರೆಯುವರು.

1.Department of Chest and Tuberculosis, SMS Medical College, Jaipur, Rajasthan, India
2.Department of Epidemiology, IIHMR, Jaipur, Rajasthan, India
3.Research Division, Asthma Bhawan, Jaipur, Rajasthan, India
4. Rajasthan Hospital, Jaipur, Rajasthan, India

ಸಹಯೋಗದ ರೀಸರ್ಚ್ ಮೂಲಕ ಪತ್ತೇಯಾಗಿದ್ದು ಜಲನೇತಿ” ದಿನಕ್ಕೇರಡು ಬಾರಿ ನಿಯಮಿತವಾಗಿ ರೂಢಿಸಿಕೊಂಡರೆ ಕೋವಿಡ್ನೀಂದ ಸಂಪೂರ್ಣ ರಕ್ಷಣೆ ಪಡೆಯಬಹುದು ಅಂತಾ.!!!!

ಸ್ವಲ್ಪ ದಿನ ತೆಪ್ಪಗಿದ್ದ ಕೊರೋನಾ ವೈರಸ್ ಮಾರ್ಪಾಡಾಗಿ (Mutation) ಮತ್ತೊಂದು ವೇಶ ಹೊತ್ತು, ಮಾರಣಾಂತಿಕ ಪೆಟ್ಟು ಕೊಡುವ ಗಟ್ಟಿತನ ಪಡೆದು ಮರಳಿದೆ. ಸೋಂಕು ಹರಡುವ ವೇಗ ಕಳೆದ ವರ್ಷಕ್ಕಿಂತ ಇಮ್ಮಡಿಯಾಗಿದೆ. ಗಾಳಿಯಲ್ಲಿ ಸಹ ಸೋಂಕಿರುವುದು ಕೆಲ ಅಧ್ಯಯನಗಳಿಂದ ತಿಳಿದುಬಂದಿದೆ. ಆದ್ದರಿಂದಲೆ ಸೋಂಕಿತರ ಸಂಖ್ಯೆ ಅತೀವವಾಗಿ ಏರುತ್ತಿದೆ.

ಕಾಯಿಲೆ ಲಕ್ಷಣಗಳನ್ನು ಸಂಪೂರ್ಣ ನಿರ್ಲಕ್ಷಿಸಿ, ಉಸಿರಾಟದ ತೀವ್ರ ತೊಂದರೆಯಾದಾಗ ಆಸ್ಪತ್ರೆಯತ್ತ ಓಡಿದವರಲ್ಲಿ ಬದುಕಿದವರ ಸಂಖ್ಯೆ ಕಡಿಮೆ. ಆಕ್ಸಿಜನ ಕೊರತೆ, ಔಷಧಿಗಳ ಕೊರತೆ, ಜನರ ನಿರ್ಲಕ್ಷ್ಯ ಧೋರಣೆ ಇವೆಲ್ಲ ಸಾವು ನೋವಿನ ಸಂಖ್ಯೆ ಏರಿಸುತ್ತಿವೆ. ಈಗೀಗ ಮತ್ತೇ ಸೋಂಕು ಗಗನಕ್ಕೇರುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ ನೂರ್ಮಡಿಯಾಗುತ್ತಲೇ ಇದೆ.

“ಯೋಗ”ದ “ಷಟ್ ಕರ್ಮ”ಗಳಲ್ಲಿ “ಜಲನೇತಿ” ಒಂದು:

ಪ್ರಾಚೀನ ಮತ್ತು ಸಾರ್ವಕಾಲಿಕ ಜ್ಞಾನ “ಯೋಗ”ದ “ಷಟ್ ಕರ್ಮ”ಗಳಲ್ಲಿ “ಜಲನೇತಿ” ಒಂದು. “ಹಠಯೋಗ ಪ್ರದೀಪಿಕಾ” ಗ್ರಂಥದಲ್ಲಿ ಸವಿವರವಾಗಿ ತಿಳಿಸಲಾಗಿದೆ. ಉಗುರು ಬೆಚ್ಚಗಿನ ನೀರಿಗೆ ಚೂರು ಉಪ್ಪನ್ನು ಸೇರಿಸಿ ಒಂದು ಮೂಗಿನ ಹೊಳ್ಳೆಯಿಂದ.. ಇನ್ನೊಂದು ಹೊಳ್ಳೆಯ ಮೂಲಕ ಬರುವ ಹಾಗೆ ಸುರಿದುಕೊಳ್ಳುವ ಸರಳ ಕ್ರಿಯೆ. ಈ ಹೊತ್ತಿನಲ್ಲಿ ಬಾಯಿಯಿಂದ ಜೋರಾಗಿ ಉಸಿರಾಡುತ್ತಾ, ಒಂದು ಕಡೆ ತಲೆ ವಾಲಿಸಿಕೊಂಡು ಈ ಕ್ರೀಯೆ ಮಾಡಬಹುದು. ಸಹಾಯಕ್ಕೆ ಬೇಕಾದ ಸಾಧನಗಳೇಂದರೆ ಒಂದು ಚಿಕ್ಕ ಪ್ಲಾಸ್ಟಿಕ್ ಅಥವಾ ತಾಮ್ರದ ಜಲನೇತಿ ಚೊಂಬು( Jalaneti Pot).

#ಜಲನೇತಿ_ಮಾಡುವ_ವಿಧಾನ:

ಜಲನೇತಿ ಚೊಂಬಿನಲ್ಲಿ (Jalaneti pot) ಉಗುರು ಬೆಚ್ಚಗಿನ ನೀರು ತುಂಬಿಕೊಳ್ಳಿ.

👉ನೇರವಾಗಿ ನಿಲ್ಲದೆ ಸ್ವಲ್ಪ ಮುಂದಕ್ಕೆ ಬಾಗಿರಿ. ಕುತ್ತಿಗೆಯನ್ನು ಒಂದು ಕಡೆ ವಾಲಿಸಿ.

👉 ಮೂಗಿನ ಮೇಲೆಯ ಹೊಳ್ಳೆಯಲ್ಲಿ ನಿಧಾನಕ್ಕೆ ನೀರು ಸುರಿದುಕೊಳ್ಳಿ.

👉 ಮೂಗಿನಿಂದ ಉಸಿರಾಡದೆ, ಬಾಯಿ ತೆರೆದು ಉಸಿರಾಡುತ್ತಾ ಇರಿ.

👉 ಒಂದು ಮೂಗಿನ ಹೊಳ್ಳೆ ಹೊಕ್ಕ ನೀರು ಮತ್ತೊಂದು ಹೊಳ್ಳೆಯ ಮೂಲಕ ಹೊರ ಬರುವುದು.

ಇದೇ ವಿಧಾನ ಮತ್ತೊಂದು ಕಡೆ ಕತ್ತು ವಾಲಿಸಿ, ನೀರು ಸುರಿಯಿರಿ. ಇದೇ ತರಹ ಬೆಳಿಗ್ಗೆ ಎದ್ದ ಮೇಲೆ ಮತ್ತು ಕೆಲಸದಿಂದ ಮನೆಗೆ ಬಂದಾಕ್ಷಣ ಪುನರಾವರ್ತಿಸಿ. ಜಲನೇತಿಯಿಂದ ಮೂಗಿನ ಒಳಭಾಗ, ಗಂಟಲಿನ ಮೇಲ್ಭಾಗ , ಟಾನ್ಸಿಲ್ಸ್, ಸ್ವಚ್ಛವಾಗುವವು.

[ ಸುಲಭ ವಿಧಾನವಿದು, ಯೋಗ ಟೀಚರ್ ಅಥವಾ ಆಯುಷ್ ವೈದ್ಯರಿಂದ, ಯುಟ್ಯೂಬ್ ವಿಡಿಯೋಗಳನ್ನ ನೋಡಿ ಕಲಿಯಬಹುದು. ಸುಲಭಸಾಧ್ಯ]

#ಜಲನೇತಿಯ_ಪ್ರಯೋಜನಗಳು:

ನಿರಂತರವಾಗಿ “ಜಲನೇತಿ” ಅಭ್ಯಾಸ ಮಾಡಿ, ಕೊರೋನಾದಿಂದ ಆರಂಭಿಕ ಹಂತದಲ್ಲೆ ಸಂಪೂರ್ಣ ರಕ್ಷಣೆ ಪಡೆಯಬಹುದು. ವೈದ್ಯ ಮತ್ತು ವೈದ್ಯಕೀಯ ಸಿಬ್ಬಂದಿಯವರಿಗೆ ವರದಾನವಿದು. ಅಷ್ಟೆ ಅಲ್ಲ ಹತ್ತಾರು ಇನ್ನೀತರ ಪ್ರಯೋಜನಗಳು ಇವೆ.

♥️ಸೈನುಸೈಟಿಸ್ ಮತ್ತು ಟಾನ್ಸಿಲೈಟಿಸನಿಂದ ಮುಕ್ತಿ.

♥️ಪದೇ ಪದೇ ಸೀನು, ನೆಗಡಿಯಂತ ಸಮಸ್ಯೆ ದೂರ (Allergic Rhinitis).

♥️ಕಿವಿ ಸೋಂಕು ಸುಧಾರಿಸಿ, ಕಣ್ಣಿನ ದೃಷ್ಟಿ ನಿಚ್ಚಳವಾಗುತ್ತೆ. ಕನ್ನಡಕ ಬಿಡಲು ಸುಗಮ ದಾರಿ.

♥️ಅರ್ಧ ತಲೆನೋವು ಹತೋಟಿಗೆ ಬಂದು, ವಾಸಿಯಾಗತ್ತೆ..

♥️ಕೂದಲು ಉದುರುವಿಕೆ ಮತ್ತು ಬೇಗ ಬೆಳ್ಳಗಾಗುವ ಸಮಸ್ಯೆ ಕಡಿಮೆಯಾಗುತ್ತೆ.

♥️ಮೂಗಿನ ಘ್ರಾಣ ಸಮಸ್ಯೆ ಹೋಗಲಾಡಿಸತ್ತೆ.

♥️ಮನಸ್ಸು ಶಾಂತವಾಗಿ ಏಕಾಗ್ರತೆ ಹೆಚ್ಚುತ್ತೆ.

♥️ಧೂಮಪಾನದಿಂದ ಮುಕ್ತರಾಗಲು ಅತ್ಯುತ್ತಮ ಪರಿಹಾರ

♥️ಮೇಲಿನ ಉಸಿರುನಾಳದ ಸೋಂಕುಗಳಿಗೆ (URTI) ರಾಮಬಾಣ.

ವೈದ್ಯ, ವೈದ್ಯಕೀಯ ಸಿಬ್ಬಂದಿ ಅಷ್ಟೇ ಅಲ್ಲದೆ ಜನಸಾಮಾನ್ಯರು “ಜಲನೇತಿ” ರೂಢಿಸಿಕೊಳ್ಳೊದು ಉತ್ತಮ. ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಿರಿ. ಮಾಸ್ಕ್ ಧರಿಸಿ, ಮತ್ತೊಬ್ಬರಿಂದ ಆರು ಅಡಿ ಅಂತರ ಕಾಪಾಡಿಕೊಳ್ಳಿ, ಸೋಪಿನಿಂದ ಕೈ ತೊಳೆಯುತ್ತೀರಿ, ಜನಸಂದಣಿ ಸಹವಾಸವೆ ಬೇಡವೆ ಬೇಡ.

ಕೊರೋನಾ ಭಯ ಬೇಡ, ಮುನ್ನೇಚ್ಛರಿಕೆ ಇರಲಿ.

ಡಾ.ಪ್ರಕಾಶ ಬಾರ್ಕಿ
ಕಾಗಿನೆಲೆ.

Share this: