Vydyaloka

ರೇಕಿ ಚಿಕಿತ್ಸೆ : ಪ್ರಯೋಜನಗಳೇನು-ಹೇಗೆ ಕಲಿಯುವುದು?

ರೇಕಿ-ಒತ್ತಡ ನಿವಾರಣೆ ಮತ್ತು ವಿಶ್ರಾಂತಿಗಾಗಿ ಬಳಸುವ ಜಪಾನಿನ ಒಂದು ತಂತ್ರವಾಗಿದ್ದು, ಉಪಶಮನಕ್ಕೂ ಉತ್ತೇಜನ ನೀಡುತ್ತದೆ. “ಕೈಗಳನ್ನು ಇಡುವ” ಮೂಲಕ ಈ ಚಿಕಿತ್ಸಾ ವಿಧಾನವನ್ನು ಅನುಸರಿಸಲಾಗುತ್ತದೆ. ನಾವು ಬದುಕಿರಲು ಕಾರಣವಾಗಿರುವ ನಮ್ಮ ದೇಹದ ಮೂಲಕ ಪ್ರವಹಿಸುವ ಅಗೋಚರ ‘ಜೀವನ ಸತ್ತ್ವ ಶಕ್ತಿ’ಯ ಆಲೋಚನೆ ಆಧಾರದ ಮೇಲೆ ಇದು ಅವಲಂಬಿಸಿರುತ್ತದೆ. ಒಬ್ವ ವ್ಯಕ್ತಿಯ ‘ಜೀವನ ಸತ್ತ್ವ ಶಕ್ತಿ’ಯು ಕಡಿಮೆ ಇದ್ದರೆ, ಆಗ ಆತ/ಆಕೆಯು ಅನಾರೋಗ್ಯಕ್ಕೆ ಅಥವಾ ಒತ್ತಡಕ್ಕೆ ಒಳಗಾಗುತ್ತಾರೆ, ಹಾಗೂ ಅದು ಅಧಿಕವಾಗಿದ್ದರೆ,ನಾವು ಹೆಚ್ಚು ಸಂತೋಷ ಮತ್ತು ಆರೋಗ್ಯವಾಗಿರುತ್ತೇವೆ. ರೇಕಿಯನ್ನು ಕಲಿಯಲು ಮೂರು ಮುಖ್ಯ ಹಂತಗಳಿವೆ ಹಾಗೂ ಪ್ರಾರಂಭದಿಂದ ಒಂದೊಂದೇ ಹಂತವನ್ನು ಕಲಿಯಬೇಕಾಗುತ್ತದೆ.

ಜೀವನ ಸತ್ವ ಶಕ್ತಿ
ರೇ ಅಂದರೆ “ದೇವರ ಜ್ಞಾನ ಅಥವಾ ಉನ್ನತ ಶಕ್ತಿ” ಮತ್ತು ಕೀ ಎಂದರೆ “ಜೀವನ ಸತ್ತ್ವ ಶಕ್ತಿ” ಎಂಬ ಅರ್ಥವನ್ನು ನೀಡುತ್ತದೆ. ಆದ್ದರಿಂದ ರೇಕಿ ಎಂದರೆ “ಆಧ್ಯಾತ್ಮಿಕ ಮಾರ್ಗದರ್ಶನ ಜೀವನ ಸತ್ತ್ವ ಶಕ್ತಿ” . ಈ ಚಿಕಿತ್ಸೆಯು ನಮ್ಮ ಮೂಲಕ ಮತ್ತು ಸುತ್ತು ಪ್ರವಹಿಸುವ ಒಂದು ವಿಸ್ಮಯ ಪ್ರಜ್ವಲಿಸುವ ಕಾಂತಿಯಂಥ ಅನುಭವ ನೀಡುತ್ತದೆ. ರೇಕಿ ಉಪಶಮನ ಚಿಕಿತ್ಸೆಯು ದೇಹ, ಭಾವನೆ, ಮನಸ್ಸು ಮತ್ತು ಆತ್ಮ ಸೇರಿದಂತೆ ಇಡೀ ವ್ಯಕ್ತಿಗೆ  ವಿಶ್ರಾಂತಿ, ಪ್ರಶಾಂತತೆ, ಭದ್ರತೆ ಮತ್ತು ಸೌಖ್ಯತೆ ಒಳಗೊಂಡಂತೆ ಅನೇಕ ಪ್ರಯೋಜನಕಾರಿ ಪರಿಣಾಮಗಳನ್ನು ಸೃಷ್ಟಿಸುತ್ತದೆ. ಅನೇಕರಿಗೆ ಇದರಿಂದ ವಿಸ್ಮಯಕಾರಿ ಫಲಿತಾಂಶಗಳು ಲಭಿಸಿವೆ.
ರೇಕಿ ಒಂದು ಸರಳ, ನೈಸರ್ಗಿಕ ಮತ್ತು ಆಧ್ಯಾತ್ಮಿಕ ಉಪಶಮನ ಮತ್ತು ಸ್ವಯಂ ಸುಧಾರಣೆಯ ಸುರಕ್ಷತಾ ವಿಧಾನವಾಗಿದ್ದು ಪ್ರತಿಯೊಬ್ಬರೂ ಬಳಸಬಹುದಾಗಿರುತ್ತದೆ. ಇದು ರೋಗ, ಬೇನೆ, ಮತ್ತು ವ್ಯಾಧಿಗಳ ಚಿಕಿತ್ಸೆಗೆ ಪರಿಣಾಮಕಾರಿ ನೆರವು ನೀಡಲಿದ್ದು, ಸದಾ ಪ್ರಯೋಜನಕಾರಿ ಪರಿಣಾಮವನ್ನು ಸೃಷ್ಟಿಸುತ್ತದೆ. ಅಡ್ಡ ಪರಿಣಾಮಗಳನ್ನು ಉಪಶಮನಗೊಳಿಸಲು ಹಾಗೂ ಚೇತರಿಕೆಗೆ ಉತ್ತೇಜನ ನೀಡಲು ಇತರ ಎಲ್ಲ ವೈದ್ಯಕೀಯ ಅಥವಾ ಚಿಕಿತ್ಸಕ ತಂತ್ರಗಳೊಂದಿಗೆ ಸಂಯೋಜನೆಯಲ್ಲಿ ಸಹ ಕಾರ್ಯನಿರ್ವಹಿಸುತ್ತದೆ.
ಇನ್ನೊಂದು ವಿಸ್ಮಯಕಾರಿ ಸಂಗತಿ ಎಂದರೆ ರೇಕಿಯನ್ನು ಕಲಿಯುವುದು ಸರಳವಾದ ತಂತ್ರವಾಗಿದೆ.ಒಂದು ರೇಕಿ ತರಗತಿಯ ವೇಳೆ ವಿದ್ಯಾರ್ಥಿಗೆ ಇದನ್ನು ವರ್ಗಾವಣೆ ಮಾಡಲಾಗುತ್ತದೆ. ಈ ಸಾಮಥ್ರ್ಯವು ಓರ್ವ ರೇಕಿ ಮಾಸ್ಟರ್‍ನಿಂದ ನೀಡಲಾಗುವ “ಅನುಷ್ಠಾನ”ದ ವೇಳೆ ವರ್ಗಾವಣೆಯಾಗುತ್ತದೆ. ಇದು ವ್ಯಕ್ತಿಯ ಆರೋಗ್ಯವನ್ನು ಸುಧಾರಣೆ ಮಾಡಲು ಮತ್ತು ಜೀವನದ ಗುಣಮಟ್ಟವನ್ನು ವೃದ್ಧಿಸಲು ‘ಜೀವನ ಸತ್ತ್ವ ಶಕ್ತಿ’ಯ ಅನಿಯಮಿತ ಪೂರೈಕೆಯನ್ನು ಸಂಚಯಿಸಲು ವಿದ್ಯಾರ್ಥಿಗೆ ಅವಕಾಶ ನೀಡುತ್ತದೆ.
ಇದರ ಬಳಕೆಯು ವ್ಯಕ್ತಿಯ ಬುದ್ದಿವಂತಿಕೆ ಸಾಮಥ್ರ್ಯ ಅಥವಾ ಆಧ್ಯಾತ್ಮಿಕ ಅಭಿವೃದ್ಧಿಯ ಮೇಲೆ ಅವಲಂಬಿಸಿರುವುದಿಲ್ಲ. ಆದ್ದರಿಂದ ಇದು ಪ್ರತಿಯೊಬ್ಬರಿಗೂ ಲಭಿಸುತ್ತದೆ. ಇದನ್ನು ಎಲ್ಲ ವಯೋಮಾನದವರಿಗೆ ಮತ್ತು ವಿವಿಧ ಹಿನ್ನೆಲೆಗಳಿರುವ ಸಹಸ್ರಾರು ಜನರಿಗೆ ಯಶಸ್ವಿಯಾಗಿ ಕಲಿಸಲಾಗುತ್ತದೆ. ರೇಕಿಯು ಸ್ವರೂಪದಲ್ಲಿ ಒಂದು ಆಧ್ಯಾತ್ಮಿಕವಾಗಿದ್ದರೂ, ಧಾರ್ಮಿಕವಲ್ಲ.
ರೇಕಿಯ ಪ್ರಯೋಜನಗಳು
ರೇಕಿಯಿಂದ ಆಗುವ ಪ್ರಯೋಜನಗಳು ಅನೇಕ. ಇದರಿಂದ ಸ್ಮರಣೆ ಶಕ್ತಿ, ಏಕಾಗ್ರತೆ, ಆತ್ಮವಿಶ್ವಾಸ ಮತ್ತು ವಾಕ್ಪುಟುತ್ವ ಹೆಚ್ಚಾಗುತ್ತದೆ. ವ್ಯಕ್ತಿತ್ವ ವಿಕಾಸನಗೊಳ್ಳುತ್ತದೆ.ರೋಗಗಳು ಉಪಶಮನವಾಗಿ ಶಾಂತಿ ಲಭಿಸುತ್ತದೆ. ದುರಾಭ್ಯಾಸಗಳಿಂದ ಮುಕ್ತಗೊಳಿಸಿ ಬಾಂಧವ್ಯಗಳನ್ನು ಸುಧಾರಿಸುತ್ತದೆ.

ಡಾ.ಪಾರ್ವತಿ ಭಟ್
ಯೋಗ ಪ್ರವೀಣೆ ಮತ್ತು ರೇಖಿ ಚಿಕಿತ್ಸಕರು, ಸ್ವಾಮಿ ವಿವೇಕಾನಂದ ಯೋಗ ಕೇಂದ್ರ,
1172, ಬ್ಲೂ ಹುಂಡೈ ಕಾರ್ ಶೋರೂಂ ಎದುರು, ಡಾ. ರಾಜ್‍ಕುಮಾರ್ ರಸ್ತೆ 2ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು – 560 010 ಮೊ.: 9449445892



Share this: